Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಜನವರಿ 22ರ ದಿನಭವಿಷ್ಯ

ಜನ್ಮಸಂಖ್ಯೆ 4, 5, 6ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಜನವರಿ 22ರ ಗುರುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ನಿಮ್ಮ ಜನ್ಮಸಂಖ್ಯೆ ಆಧಾರಿತ ಈ ಭವಿಷ್ಯವು ದಿನದ ಸವಾಲುಗಳು ಮತ್ತು ಅವಕಾಶಗಳನ್ನು ಎದುರಿಸಲು ನಿಮಗೆ ಸಹಾಯಕವಾಗಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಜನವರಿ 22ರ ದಿನಭವಿಷ್ಯ
ದಿನ ಭವಿಷ್ಯ
Edited By:

Updated on: Jan 22, 2026 | 12:20 AM

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ನನ್ನ ಕೆಲಸ ಎಷ್ಟೋ ಅಷ್ಟರ ಬಗ್ಗೆ ಮಾತ್ರ ಗಮನ ಹರಿಸುತ್ತೇನೆ ಎಂಬ ಮನಸ್ಥಿತಿಯಲ್ಲಿ ನೀವು ಇರುತ್ತೀರಿ. ಅರ್ಥಾತ್ ಎಷ್ಟು ಹಣ ಬರುತ್ತದೋ ಅದಕ್ಕೆ ತಕ್ಕಂತೆ ಕೆಲಸ ಎಂಬುದನ್ನು ಗಟ್ಟಿ ಮಾಡಿಕೊಂಡು, ಬದ್ಧರಾಗಿ ನಿಲ್ಲಲಿದ್ದೀರಿ. ದೇವಸ್ಥಾನಕ್ಕೆ ಅಥವಾ ನಿಮ್ಮ ಧಾರ್ಮಿಕ ನಂಬಿಕೆಗೆ ಅನುಸಾರವಾಗಿ ಸ್ವಲ್ಪ ಸಮಯ ಪ್ರಶಾಂತತೆ, ನೆಮ್ಮದಿ ನೀಡುವಂಥ ಸ್ಥಳಕ್ಕೆ ತೆರಳುವುದರಿಂದ ಸಮಾಧಾನದಿಂದ ಇರಲು ಸಾಧ್ಯವಾಗುತ್ತದೆ. ಅಡುಗೆ ಕಾಂಟ್ರಾಕ್ಟ್ ತೆಗೆದುಕೊಳ್ಳುವಂಥವರಿಗೆ ದೀರ್ಘಾವಧಿಗೆ ಆರ್ಡರ್ ದೊರೆಯಲಿದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ಯಾರಿಗೋ ಬಯ್ಯುವುದಕ್ಕೆ ಹೋಗಿ ಇನ್ಯಾರ ಜತೆಗೋ ಮನಸ್ತಾಪ ಮಾಡಿಕೊಳ್ಳಲಿದ್ದೀರಿ. ಸಿಟ್ಟು- ಕೋಪ- ಆಕ್ಷೇಪವನ್ನು ಹೊರಹಾಕುವುದಕ್ಕೆ ಸರಿಯಾದ ಮಾರ್ಗವನ್ನು ಹುಡುಕಿಕೊಳ್ಳುವುದು ಬಹಳ ಮುಖ್ಯ. ವ್ಯಾಪಾರ- ವ್ಯವಹಾರಗಳಲ್ಲಿ ಇರುವವರು ಮುಖ ಹರಿದುಕೊಳ್ಳುವಂತೆ ನಿರ್ದಾಕ್ಷಿಣ್ಯವಾಗಿ ಮಾತನಾಡುವುದಕ್ಕೆ ಹೋಗಬೇಡಿ. ಹೀಗೆ ಮಾಡುವುದರಿಂದ ದೀರ್ಘ ಅವಧಿಗೆ ನಿಮಗೆ ಆಗಬಹುದಾದ ಲಾಭವನ್ನು ಕಳೆದುಕೊಳ್ಳುವಂತೆ ಆಗಲಿದೆ. ನೀವು ಹುಡುಕುತ್ತಿದ್ದ ಮುಖ್ಯ ದಾಖಲೆಗಳು ಸಿಗಲಿದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ನಿಮ್ಮ ಆಲೋಚನೆಗೆ ಹೊಂದುವಂಥ, ನಿಮ್ಮ ಉದ್ದೇಶಕ್ಕೆ ತಕ್ಕಂತೆ ಕೆಲಸ ಮಾಡುವಂಥ ಜನರು ಇಲ್ಲವಲ್ಲ ಎಂಬುದು ಚಿಂತೆಗೆ ಕಾರಣ ಆಗಲಿದೆ. ಒಂದು ವಿಷಯವನ್ನು ಹತ್ತು ಸಲ ಹೇಳಿದ ನಂತರವೂ ಅದೇ ತಪ್ಪು ಪುನರಾವರ್ತನೆ ಆಗುತ್ತಾ ಇದೆ ಎಂಬುದು ನಿಮ್ಮ ಸಿಟ್ಟಿನ ಮೂಲ ಆಗಲಿದೆ. ಸ್ನೇಹಿತರು ಕೂಡ ನಿಮ್ಮ ಜೊತೆಗೆ ಮಾತನಾಡುವಾಗ ಅನ್ಯಮನಸ್ಕರಾಗಿ ಇರಲಿದ್ದಾರೆ. ಮೊದಲಿನ ಆಸಕ್ತಿ- ಉತ್ಸಾಹದಿಂದ ನಿಮ್ಮನ್ನು ಕೇಳಿಸಿಕೊಳ್ಳುತ್ತಿಲ್ಲ ಎಂದು ಪದೇಪದೇ ಅನಿಸಲಿದೆ. ನೀವು ಬಂದೇ ಬರುತ್ತದೆ ಎಂದುಕೊಂಡಿದ್ದ ಹಣವೊಂದು ಬಾರದೆ ಗೊಂದಲಕ್ಕೆ ಕಾರಣ ಆಗಲಿದೆ.

ಲೇಖನ- ಸ್ವಾತಿ ಎನ್.ಕೆ.