Weekly Love Horoscope: ಈ ರಾಶಿಯವರ ಪ್ರೀತಿಗೆ ಮನೆಯವರಿಂದ ಸಮ್ಮತಿ

ಜನವರಿ 25ರಿಂದ ಜನವರಿ 31ರ ವರೆಗೆ ಜನವರಿಯ ನಾಲ್ಕನೇ ವಾರವಾಗಿದ್ದು ಸಂವಹನಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿ. ಹಠ ಮಾಡುವುದಕ್ಕಿಂತ ಹೊಂದಾಣಿಕೆಯಿಂದ ನಡೆಯುವುದು ನಿಮ್ಮ ಸಂಬಂಧವನ್ನು ಗಟ್ಟಿಗೊಳಿಸುತ್ತದೆ. ಭಾವನೆಯನ್ನು ವ್ಯಕ್ತಪಡಿಸುವ ಮೊದಲು ಬುದ್ಧಿಯ ಜರಡಿಯಲ್ಲಿ ಒಮ್ಮೆ ಹಾಕಿ. ನಿಷ್ಕಲ್ಮಶ ಪ್ರೇಮ ಗೆಲ್ಲಲಿ. ಪ್ರೀತಿಯ ವಿಷಯದಲ್ಲಿ ಹೊಸ ಆಯಾಮಗಳು ತೆರೆದುಕೊಳ್ಳುತ್ತವೆ. ನಿಮ್ಮ ಸಂಗಾತಿಯೊಂದಿಗೆ ಗುಣಮಟ್ಟದ ಸಮಯ ಕಳೆಯಲು ಇದು ಸಕಾಲ.

Weekly Love Horoscope: ಈ ರಾಶಿಯವರ ಪ್ರೀತಿಗೆ ಮನೆಯವರಿಂದ ಸಮ್ಮತಿ
ವಾರದ ಪ್ರೇಮ - ಪ್ರೀತಿ

Updated on: Jan 23, 2026 | 2:27 PM

ಮೇಷ ರಾಶಿ :

ಈ ವಾರ ಪ್ರೇಮಿಗಳಿಗೆ ಅತ್ಯಂತ ಶುಭದಾಯಕವಾಗಿದೆ. ನಿಮ್ಮ ಪ್ರೀತಿಗೆ ಮನೆಯಲ್ಲಿ ಹಿರಿಯರ ಒಪ್ಪಿಗೆ ಸಿಗುವ ಸಾಧ್ಯತೆಯಿದೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿಬರಲಿದೆ.

ವೃಷಭ ರಾಶಿ :

ಸಂಬಂಧಗಳಲ್ಲಿ ತಾಳ್ಮೆ ಬಹಳ ಮುಖ್ಯ. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಬಂದರೂ ಪ್ರೀತಿಯಿಂದ ಬಗೆಹರಿಸಿಕೊಳ್ಳಿ. ಪ್ರಣಯ ಜೀವನದಲ್ಲಿ ಹೊಸ ಚೈತನ್ಯ ಬರಲಿದೆ.

ಮಿಥುನ ರಾಶಿ :

ಸಂಗಾತಿಯೊಂದಿಗೆ ಸಣ್ಣ ಪ್ರವಾಸಕ್ಕೆ ಹೋಗುವ ಯೋಗವಿದೆ. ನಿಮ್ಮ ಕ್ರಿಯಾಶೀಲತೆಯು ಪ್ರೇಮ ಜೀವನವನ್ನು ಇನ್ನಷ್ಟು ರೋಮಾಂಚನಗೊಳಿಸುತ್ತದೆ.

ಕರ್ಕಾಟಕ ರಾಶಿ :

ನಿಮ್ಮ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಇದು ಸೂಕ್ತ ಸಮಯ. ಸಂಗಾತಿಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆಯ ಮಾತುಗಳನ್ನು ಹೇಳುವಿರಿ.

​ಸಿಂಹ ರಾಶಿ :

ಸಂಬಂಧಗಳಲ್ಲಿನ ಗೊಂದಲಗಳು ದೂರವಾಗುತ್ತವೆ. ನಿಮ್ಮ ಆಕರ್ಷಕ ಮಾತಿನಿಂದ ಸಂಗಾತಿಯ ಮನ ಗೆಲ್ಲುವಿರಿ. ಆದರೆ ಹಳೆಯ ವಿಷಯಗಳನ್ನು ಕೆದಕಬೇಡಿ.

ಕನ್ಯಾ ರಾಶಿ :

ನಿಮ್ಮ ಸಂಗಾತಿಯ ಭಾವನೆಗಳಿಗೆ ಗೌರವ ನೀಡಿ. ನೀವು ಒಬ್ಬಂಟಿಯಾಗಿದ್ದರೆ, ಹಳೆಯ ಸ್ನೇಹಿತರ ಮೂಲಕ ಹೊಸ ಪ್ರೇಮ ಸಂಬಂಧಗಳು ಅಚಾನಕ್ಕಾಗಿ ಬೆಳೆಯಬಹುದು.

ತುಲಾ ರಾಶಿ :

ಮನಸ್ಸಿನ ಗೊಂದಲಗಳನ್ನು ಬಿಟ್ಟು ನೇರವಾಗಿ ಮಾತನಾಡಿ. ಈ ವಾರ ನಿಮ್ಮ ಸಂಗಾತಿಯಿಂದ ಅನಿರೀಕ್ಷಿತ ಉಡುಗೊರೆ ಅಥವಾ ಸರ್‌ಪ್ರೈಸ್ ನಿರೀಕ್ಷಿಸಬಹುದು.

ವೃಶ್ಚಿಕ ರಾಶಿ :

ತೀವ್ರವಾದ ಭಾವನೆಗಳು ನಿಮ್ಮನ್ನು ಕಾಡಬಹುದು. ಯಾರೋ ಒಬ್ಬರ ಮೇಲೆ ವಿಶೇಷ ಆಕರ್ಷಣೆ ಉಂಟಾಗಲಿದೆ. ಸತ್ಯಕ್ಕೆ ಮತ್ತು ನೈಜತೆಗೆ ಆದ್ಯತೆ ನೀಡಿ.

​ಧನು ರಾಶಿ :

ಪ್ರೀತಿಯ ವಿಷಯದಲ್ಲಿ ಹೊಸ ಆಯಾಮಗಳು ತೆರೆದುಕೊಳ್ಳುತ್ತವೆ. ನಿಮ್ಮ ಸಂಗಾತಿಯೊಂದಿಗೆ ಗುಣಮಟ್ಟದ ಸಮಯ ಕಳೆಯಲು ಇದು ಸಕಾಲ.

ಮಕರ ರಾಶಿ :

ಪ್ರೀತಿಯ ವಿಷಯದಲ್ಲಿ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ಉತ್ತಮ ವಾರ. ಸಂಬಂಧಗಳಲ್ಲಿ ಪ್ರಾಮಾಣಿಕತೆ ಮತ್ತು ನಿಷ್ಠೆ ನಿಮ್ಮನ್ನು ಹತ್ತಿರವಾಗಿಸುತ್ತದೆ.

​ಕುಂಭ ರಾಶಿ :

ಈ ವಾರ ದ್ವಾದಶ ರಾಶಿಯಲ್ಲಿ ಶುಕ್ರನ ಸಂಚಾರವಿರುವುದರಿಂದ, ನೀವು ಹೆಚ್ಚು ಆಕರ್ಷಕವಾಗಿ ಕಂಡರೂ ಪ್ರಯೋಜನವಾಗದು. ಹೊಸ ಪರಿಚಯಗಳು ಪ್ರೇಮವಾಗಿ ಬದಲಾಗಿ, ವಿಘ್ನವುಂಟಾಗುವುದು.

​ಮೀನ ರಾಶಿ :

ಪ್ರೀತಿ ನಿಮ್ಮ ಆಪ್ತ ವಲಯದಲ್ಲಿಯೇ ಇರಬಹುದು. ಸ್ನೇಹಿತರ ಸಹಾಯದಿಂದ ಪ್ರೇಮ ಸಂಬಂಧಗಳು ಸುಧಾರಿಸುತ್ತವೆ. ದಾಂಪತ್ಯ ಜೀವನದಲ್ಲಿ ಮಧುರತೆ ಇರುತ್ತದೆ.

-ಲೋಹಿತ ಹೆಬ್ಬಾರ್ – 8762924271 (what’s app only)

Published On - 2:26 pm, Fri, 23 January 26