
ಬಾಯಿ ಬಿಟ್ಟು ನಿಮ್ಮ ಮನಸ್ಸಲ್ಲಿ ಇರುವುದನ್ನು ಹೇಳದೆ ಇದ್ದಲ್ಲಿ ನಿಮ್ಮ ನಿರೀಕ್ಷೆ ಏನು ಎಂಬುದು ಇತರರಿಗೆ ತಿಳಿಯುವುದಾದರೂ ಹೇಗೆ? ಇವೆಲ್ಲ ಅರ್ಥ ಆಗಬೇಕಲ್ಲವಾ ಎಂದು ಅಂದುಕೊಳ್ಳುವ ಬದಲು ನಿಮ್ಮ ಅಪೇಕ್ಷೆ ಏನು ಅನ್ನುವುದನ್ನು ಹೇಳಿಬಿಡಿ. ವಿವಾಹಿತರಿಗೆ ಸಂಗಾತಿಯ ಜತೆಗೆ ಉತ್ತಮ ಸಮಯ ಕಳೆಯುವ ಯೋಗ ಇದೆ. ಕಾರು ಖರೀದಿ, ಮನೆ ನಿರ್ಮಾಣ, ಸೈಟು ಖರೀದಿ ಇಂಥ ವಿಷಯಗಳ ಬಗ್ಗೆ ಚರ್ಚೆ ಮಾಡುವುದಕ್ಕೆ ಒಂದೊಳ್ಳೆ ಸಮಯ ದೊರೆಯಲಿದೆ.
ಕುಟುಂಬದಲ್ಲಿ ಸಾಮರಸ್ಯ ಇರುತ್ತದೆ. ನಿಮ್ಮ ನಿರೀಕ್ಷೆಗೆ ತಕ್ಕಂತೆಯೇ ಇತರ ಸದಸ್ಯರು ಸಕಾರಾತ್ಮಕವಾಗಿ ಸ್ಪಂದಿಸಲಿದ್ದಾರೆ. ವ್ಯಾಪಾರ- ವ್ಯವಹಾರದಲ್ಲಿನ ಹೂಡಿಕೆ ವಿಚಾರಗಳಿಗೆ ಪ್ಲಾನಿಂಗ್, ಬಜೆಟ್ ಮಾಡಿಕೊಳ್ಳಲಿದ್ದೀರಿ. ಯಾರು ಉದ್ಯೋಗದಲ್ಲಿ ದೀರ್ಘ ಕಾಲದ ಅಂತರ ಬಂದು, ಈಗ ಕೆಲಸಕ್ಕೆ ಪ್ರಯತ್ನ ಮಾಡುತ್ತಾ ಇದ್ದೀರಿ ಅಂತಾದಲ್ಲಿ ಪ್ರತಿಷ್ಠಿತ ಸಂಸ್ಥೆಯೊಂದರಿಂದ ಆಫರ್ ಬರುವಂಥ ಸೂಚನೆ ಇದೆ. ಅದರಲ್ಲಿಯೂ ನಿಮಗೆ ಅನುಕೂಲ ಆಗುವಂಥ ಪಾಳಿಯಲ್ಲಿಯೇ ಅಥವಾ ಶಾಶ್ವತವಾಗಿ ವರ್ಕ್ ಫ್ರಮ್ ಹೋಮ್ ದೊರೆಯುವಂಥ ಕೆಲಸ ಅದಾಗಿರುವ ಸಾಧ್ಯತೆ ಹೆಚ್ಚಿದೆ.
ಉದ್ಯೋಗ ಅಥವಾ ವ್ಯಾಸಂಗದ ಸಲುವಾಗಿ ವಿದೇಶದಲ್ಲಿ ವಾಸ ಆಗಿದ್ದೀರಿ ಅಂತಾದಲ್ಲಿ ಖರ್ಚು- ವೆಚ್ಚವನ್ನು ನಿಭಾಯಿಸುವುದು ಕಷ್ಟವಾಗಲಿದೆ. ಇಷ್ಟು ಸಮಯ ನಿಮಗೆ ನೆರವಾಗುತ್ತಿದ್ದ ಕೆಲವು ಪರಿಸ್ಥಿತಿ ಇನ್ನು ಮುಂದೆ ಹಾಗಿರುವುದಿಲ್ಲ ಎಂಬುದು ಗಮನಕ್ಕೆ ಬರಲಿದೆ. ಸ್ಥಳ ಬದಲಾವಣೆ ಅಥವಾ ನಿಮ್ಮ ನಿರ್ಧಾರದಲ್ಲಿಯೇ ಬದಲಾವಣೆ ಮಾಡಿಕೊಂಡು ಬಿಡುವ ಸಾಧ್ಯತೆ ಇದೆ. ಯಾವುದಾದರೂ ವಿಷಯ ಪೋಷಕರಿಂದ ಮುಚ್ಚಿಟ್ಟಿದ್ದೀರಿ ಅಂದರೆ ಅದನ್ನು ಹೇಳಿಕೊಂಡು ಬಿಡುವುದು ಒಳ್ಳೆಯದು.
ಲೇಖನ- ಸ್ವಾತಿ ಎನ್.ಕೆ.