
ಪ್ಲಾನ್ ಬಿ ಮಾಡಿಕೊಳ್ಳುವ ವಿಧಾನದಿಂದ ಅನುಕೂಲ ಆಗಲಿದೆ. ಕಠಿಣವಾದ ವಿಷಯಗಳನ್ನು ಸಹ ಸಲೀಸಾಗಿ ಅರ್ಥ ಮಾಡಿಕೊಳ್ಳುವ ರೀತಿಯಿಂದಾಗಿಯೇ ಇತರರು ನಿಮ್ಮ ಕಡೆಗೆ ಬೆರಗಿನಿಂದ ನೋಡುತ್ತಾರೆ. ದೊಡ್ಡ ಮಟ್ಟದ ಖರ್ಚು ಬರಬಹುದು ಎಂದು ಅಂದಾಜು ಮಾಡಿಕೊಂಡಿದ್ದು, ತುಂಬ ಕಡಿಮೆ ಮೊತ್ತದಲ್ಲಿ ಅಂದುಕೊಂಡ ರೀತಿಯಲ್ಲಿಯೇ ಕೆಲಸ ಮುಗಿಯುತ್ತದೆ. ಉದ್ಯೋಗ ಬಿಟ್ಟು ಹೊಸ ವ್ಯವಹಾರ- ವ್ಯಾಪಾರ ಆರಂಭಿಸುವ ನಿರ್ಧಾರದ ಬಗ್ಗೆ ನಿಮ್ಮಲ್ಲಿ ಕೆಲವರು ಸ್ನೇಹಿತರ ಜೊತೆಗೆ ಚರ್ಚೆ ಮಾಡಲಿದ್ದೀರಿ.
ಕೆಲವು ಬದಲಾವಣೆಗೆ ಸಂಬಂಧಿಸಿದಂತೆ ನಿಮ್ಮನ್ನು ಒಪ್ಪಿಸುವುದಕ್ಕೆ ಸಹೋದ್ಯೋಗಿಗಳು ಪ್ರಯತ್ನ ಮಾಡಲಿದ್ದಾರೆ. ಎಲ್ಲಿಯೂ ಹೇಳಿಕೊಳ್ಳದ ಸಂಗತಿಗಳನ್ನು ಬಾಯಿ ಬಿಟ್ಟು ಹೇಳಿಕೊಳ್ಳುವಂತೆ ಆಗಲಿದೆ. ನಿಮ್ಮ ಸಾಮರ್ಥ್ಯ, ಬದ್ಧತೆ, ಅದರಿಂದ ಆಗಿರುವ ಅನುಕೂಲಗಳ ಬಗ್ಗೆ ಮಾತನಾಡುತ್ತೀರಿ. ಇದರ ಆಚೆಗೆ ಆಗುವ ಯಾವುದೇ ಬದಲಾವಣೆಗೆ ಒಪ್ಪಿಕೊಳ್ಳುವುದಕ್ಕೆ ಸಿದ್ಧರಿಲ್ಲ ಎಂಬುದನ್ನು ಸಹ ಹೇಳಲಿದ್ದೀರಿ. ಯಾವುದಾದರೂ ನಿರ್ದಿಷ್ಟ ಕಾಯಿಲೆ ಆಗಿದೆಯಾ ಎಂಬ ಬಗ್ಗೆ ವೈದ್ಯಕೀಯ ಪರೀಕ್ಷೆ ಏನಾದರೂ ಸೂಚಿಸಿದ್ದಲ್ಲಿ ಗಂಭೀರ ಸಮಸ್ಯೆ ಇಲ್ಲ ಎಂಬುದು ತಿಳಿದುಬರಲಿದೆ.
ನಿಮ್ಮ ಹತ್ತಿರ ಏನಿದೆಯೋ ಅದು ಮಾತ್ರ ನಿಮ್ಮದು. ನೀವು ಬೇರೆಯವರಿಗೆ ಕೊಟ್ಟಂಥ ಸಾಲ, ಈಗಾಗಲೇ ಕೆಲಸ ಮಾಡಿಯಾಗಿದೆ ಅದರ ಹಣ ಬರಬೇಕಿದೆ, ಸ್ನೇಹಿತರು- ಸಂಬಂಧಿಕರು ಸಹಾಯ ಮಾಡುವುದಾಗಿ ಕೊಟ್ಟಂಥ ಮಾತು ಇದ್ಯಾವುದನ್ನೂ ನೆಚ್ಚಿಕೊಂಡು ದೊಡ್ಡ ಪ್ರಾಜೆಕ್ಟ್ ಗಳಿಗೆ ಕೈ ಹಾಕುವುದಕ್ಕೆ ಹೋಗಬೇಡಿ. ಹೋಟೆಲ್ ನಡೆಸುತ್ತಾ ಇರುವವರಿಗೆ ಆದಾಯದಲ್ಲಿ ಏರಿಕೆ ಆಗಲಿದೆ. ಪ್ರೀತಿಯಲ್ಲಿ ಇರುವವರು ಜೊತೆಯಾಗಿ ಸಮಯವನ್ನು ಕಳೆಯುವಂಥ ಯೋಗ ಇದೆ.
ಲೇಖನ- ಸ್ವಾತಿ ಎನ್.ಕೆ.