Mars in Capricorn: ಮಕರ ರಾಶಿಯಲ್ಲಿ ಕುಜ ಸಂಚಾರ; ಈ ನಾಲ್ಕು ರಾಶಿಗೆ ಅದೃಷ್ಟದ ಸುರಿಮಳೆ
ಮಕರ ರಾಶಿಯಲ್ಲಿ ಕುಜ ಗ್ರಹದ ಸಂಚಾರ, ವಿಶೇಷವಾಗಿ ಉತ್ತರಾಷಾಢ ನಕ್ಷತ್ರದಲ್ಲಿ, ಆಡಳಿತಾತ್ಮಕ ಮತ್ತು ರಾಜಕೀಯ ವ್ಯಕ್ತಿಗಳಿಗೆ ದೃಢ ನಿರ್ಧಾರ ಶಕ್ತಿ ನೀಡುತ್ತದೆ. ಮೇಷ, ವೃಶ್ಚಿಕ, ಕನ್ಯಾ ಮತ್ತು ಮೀನ ರಾಶಿಯವರಿಗೆ ಶುಭ ಫಲಗಳಿದ್ದರೆ, ಮಕರ ಮತ್ತು ಕರ್ಕಾಟಕ ರಾಶಿಯವರಿಗೆ ಮಿಶ್ರ ಫಲ. ಮಿಥುನ ಮತ್ತು ಧನು ರಾಶಿಗಳಿಗೆ ಅಶುಭ ಫಲಗಳ ಸಾಧ್ಯತೆಯಿದ್ದು, ಹನುಮಾನ್ ಚಾಲೀಸಾ ಪಠಣ ಅಥವಾ ಸುಬ್ರಹ್ಮಣ್ಯ ಸ್ವಾಮಿ ದರ್ಶನ ಪರಿಹಾರವಾಗಿದೆ.

ಪ್ರಾಚೀನ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಕರ ರಾಶಿಯು ಕುಜನ ಉಚ್ಚ ರಾಶಿ. ಅಂದರೆ ಇಲ್ಲಿ ಕುಜನು ಅತ್ಯಂತ ಬಲಿಷ್ಠನಾಗಿರುತ್ತಾನೆ. ಮಕರ ರಾಶಿಯ ಉತ್ತರಾಷಾಢ ನಕ್ಷತ್ರದಲ್ಲಿ ಕುಜನು ಸಂಚರಿಸುವಾಗ ಉಂಟಾಗುವ ಶುಭ-ಅಶುಭ ಫಲಗಳ ವಿವರ ಇಲ್ಲಿದೆ. ಇನ್ನು ಉತ್ತರಾಷಾಢ ನಕ್ಷತ್ರದಲ್ಲಿ ಜನವರಿ 28 ರಬರೆಗೆ ಕುಜನು ಇರಲಿದ್ದು ಇದರ ಅಧಿಪತಿ ಸೂರ್ಯ. ಕುಜ ಮತ್ತು ಸೂರ್ಯ ಮಿತ್ರ ಗ್ರಹಗಳಾದ್ದರಿಂದ, ಈ ನಕ್ಷತ್ರದಲ್ಲಿ ಕುಜನಿರುವುದು ಸಾಮಾನ್ಯವಾಗಿ ಆಡಳಿತಾತ್ಮಕ ಕೆಲಸಗಳಲ್ಲಿ ಇರುವವರಿಗೆ ಮತ್ತು ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೆ ತುಂಬಾ ಒಳ್ಳೆಯದು. ಇದು ದೃಢ ನಿರ್ಧಾರ ತೆಗೆದುಕೊಳ್ಳುವ ಶಕ್ತಿಯನ್ನು ನೀಡುತ್ತದೆ. ಶುಭ ಫಲಗಳನ್ನು ಪಡೆಯುವ ರಾಶಿಗಳು ಕುಜನು ಮಕರ ರಾಶಿಯಲ್ಲಿರುವಾಗ ಈ ಕೆಳಗಿನ ರಾಶಿಯವರಿಗೆ ಹೆಚ್ಚಿನ ಲಾಭ ಮತ್ತು ಪ್ರಗತಿ ಕಂಡುಬರುತ್ತದೆ.
ಮೇಷ ರಾಶಿ:
ನಿಮ್ಮ ರಾಶ್ಯಾಧಿಪತಿಯಾದ ಕುಜನು ದಶಮ ಸ್ಥಾನದಲ್ಲಿ ಇರುವುದರಿಂದ ವೃತ್ತಿಜೀವನದಲ್ಲಿ ದೊಡ್ಡ ಯಶಸ್ಸು ಸಿಗಲಿದೆ. ಹೊಸ ಉದ್ಯೋಗ ಅಥವಾ ಬಡ್ತಿ ಸಿಗುವ ಸಾಧ್ಯತೆ ಇದೆ.
ವೃಶ್ಚಿಕ ರಾಶಿ:
ತೃತೀಯ ಸ್ಥಾನದಲ್ಲಿ ಕುಜನಿರುವುದರಿಂದ ನಿಮ್ಮ ಧೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಕೈಗೊಂಡ ಕಾರ್ಯಗಳಲ್ಲಿ ವಿಜಯ ಲಭಿಸುತ್ತದೆ. ಸಣ್ಣ ಪ್ರಯಾಣಗಳಿಂದ ಲಾಭವಾಗಲಿದೆ.
ಕನ್ಯಾ ರಾಶಿ:
ಪಂಚಮ ಸ್ಥಾನದಲ್ಲಿ ಕುಜನಿರುವುದು ಆರ್ಥಿಕವಾಗಿ ಲಾಭದಾಯಕ. ಹಳೆಯ ಹೂಡಿಕೆಗಳಿಂದ ಆದಾಯ ಬರಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಿಗುತ್ತದೆ.
ಮೀನ ರಾಶಿ:
ಲಾಭ ಸ್ಥಾನದಲ್ಲಿ ಕುಜನಿರುವುದರಿಂದ ಹಣಕಾಸಿನ ಹರಿವು ಉತ್ತಮವಾಗಿರುತ್ತದೆ. ಸ್ನೇಹಿತರಿಂದ ಮತ್ತು ಹಿರಿಯ ಸಹೋದರರಿಂದ ಬೆಂಬಲ ಸಿಗಲಿದೆ.
ಮಿಶ್ರ ಫಲ:
ಮಕರ ರಾಶಿ:
ಕುಜನು ನಿಮ್ಮದೇ ರಾಶಿಯಲ್ಲಿದ್ದಾಗ ಅಧಿಕಾರ ಮತ್ತು ಶಕ್ತಿ ನೀಡುತ್ತಾನೆ, ಆದರೆ ಅತಿಯಾದ ಆತುರ ಮತ್ತು ಕೋಪ ಉಂಟಾಗಬಹುದು. ರಕ್ತದೊತ್ತಡ ಅಥವಾ ಸಣ್ಣಪುಟ್ಟ ಗಾಯಗಳ ಬಗ್ಗೆ ಎಚ್ಚರವಿರಲಿ.
ಕರ್ಕಾಟಕ ರಾಶಿ:
ಏಳನೇ ಮನೆಯಲ್ಲಿ ಕುಜನಿರುವುದರಿಂದ ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯ ಮೂಡಬಹುದು. ಪಾಲುದಾರಿಕೆ ವ್ಯವಹಾರದಲ್ಲಿ ಜಾಗರೂಕತೆ ಅಗತ್ಯ.
ಅಶುಭ ಫಲ:
ಮಿಥುನ ರಾಶಿ:
ಎಂಟನೇ ಮನೆಯಲ್ಲಿ ಕುಜನಿರುವುದು ಅನಿರೀಕ್ಷಿತ ಅಡೆತಡೆಗಳನ್ನು ತರಬಹುದು. ಆರೋಗ್ಯದ ಕಡೆ ಗಮನವಿರಲಿ ಮತ್ತು ವಾಹನ ಚಾಲನೆ ಮಾಡುವಾಗ ಜಾಗ್ರತೆ ವಹಿಸಿ.
ಧನು ರಾಶಿ:
ಎರಡನೇ ಮನೆಯಲ್ಲಿ ಕುಜನಿರುವುದರಿಂದ ಮಾತಿನಲ್ಲಿ ಕಠೋರತೆ ಬರಬಹುದು. ಇದು ಕುಟುಂಬದಲ್ಲಿ ಕಲಹಕ್ಕೆ ಕಾರಣವಾಗಬಹುದು. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ.
ಕುಜನ ಪ್ರಭಾವದಿಂದ ತೊಂದರೆ ಆಗುತ್ತಿದ್ದರೆ ಪ್ರತಿದಿನ ಹನುಮಾನ್ ಚಾಲೀಸಾ ಪಠಿಸುವುದು ಅಥವಾ ಮಂಗಳವಾರ ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಮಾಡುವುದು ಉತ್ತಮ.
– ಲೋಹಿತ ಹೆಬ್ಬಾರ್
