
ಪರ್ಯಾಯ ಮಾರ್ಗ ಆಲೋಚಿಸುವುದು ಬಹಳ ಮುಖ್ಯ ಎಂದೆನಿಸುತ್ತದೆ. ನಿಮಗಿರುವ ಹೆಸರು, ಗೊತ್ತಿರುವ ಕೆಲಸದಲ್ಲಿ ಇರುವಂಥ ಕಾಂಟ್ಯಾಕ್ಟ್, ಪ್ರಭಾವಿಗಳ ಸಂಪರ್ಕ ಈ ಎಲ್ಲವನ್ನೂ ಬಳಸಿಕೊಂಡು, ದೊಡ್ಡ ಮಟ್ಟದಲ್ಲಿ ಆದಾಯ ತರುವಂಥ ಕೆಲಸ- ಕಾರ್ಯಗಳನ್ನು ಮಾಡುವುದಕ್ಕೆ ಮುಂದಾಗಲಿದ್ದೀರಿ. ಗ್ರಂಥಿಗೆ ಮಳಿಗೆ ನಡೆಸುತ್ತಾ ಇರುವವರಿಗೆ ಹೊಸ ಹೊಸ ವಸ್ತುಗಳ ಮಾರಾಟದ ಅವಕಾಶ ತೆರೆದುಕೊಳ್ಳಲಿದೆ. ನಿಮ್ಮಲ್ಲಿ ಕೆಲವರಿಗೆ ಹೂಡಿಕೆಯಲ್ಲಿ ಅದೃಷ್ಟದ ಬೆಂಬಲ ದೊರೆಯಲಿದೆ.
ಕೆಲವು ವ್ಯಕ್ತಿಗಳನ್ನು ನೀವಾಗಿಯೇ ದೂರ ಇಡುವ ನಿರ್ಧಾರ ಮಾಡಲಿದ್ದೀರಿ. ನಂಬಿಕೆ, ಪ್ರೀತಿ- ವಿಶ್ವಾಸಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿಲ್ಲ ಎಂಬುದು ಆಕ್ಷೇಪದ ಕಾರಣ ಆಗಿರಬಹುದು. ಯಾವುದು ಚಿಕ್ಕ- ಪುಟ್ಟ ಸಂಗತಿಗಳು ಎಂದು ಇಷ್ಟು ಸಮಯ ಭಾವಿಸಿರುತ್ತೀರೋ ಅಂಥವುಗಳಿಗೆ ಸಿಕ್ಕಾಪಟ್ಟೆ ಪ್ರಾಮುಖ್ಯ ಸಿಗಲಿದೆ. ಹಣಕಾಸಿನ ವಿಚಾರದಲ್ಲಿ ಈ ಹಿಂದೆ ನೀವು ತೆಗೆದುಕೊಂಡ ನಿರ್ಧಾರಗಳು ಸರಿಯಾಗಲಿಲ್ಲ ಎಂದು ನಿಮಗೇ ಅನಿಸುತ್ತದೆ. ಜೀರ್ಣಕ್ಕೆ ಸುಲಭವಾಗಿ ಬರುವಂಥ ಆಹಾರ ಪದಾರ್ಥಗಳ ಸೇವನೆಗೆ ನಿಮ್ಮ ಆದ್ಯತೆ ಇರಲಿ.
ಎಲ್ಲ ಸಮಯವೂ ಒಂದೇ ರೀತಿಯ ಪ್ರತಿಸ್ಪಂದನೆ ಸರಿಹೋಗುವುದಿಲ್ಲ ಎಂದು ಬಲವಾಗಿ ಅನಿಸಲಿದೆ. ಆರೋಗ್ಯ ವಿಚಾರಕ್ಕೆ ಆದ್ಯತೆ ನೀಡುತ್ತೀರಿ. ಸ್ವ ಉದ್ಯೋಗಿಗಳಿಗೆ ಆದಾಯದಲ್ಲಿ ಗಣನೀಯ ಇಳಿಕೆ ಅನುಭವ ಆಗಲಿದೆ. ಅಥವಾ ಅಂದುಕೊಂಡ ಸಮಯಕ್ಕೆ ಹಣ ಕೈ ಸೇರದ ಕಾರಣದಿಂದ ಬೇಸರ ಆಗಲಿದೆ. ಇತರರ ಆರ್ಥಿಕ ವಿಚಾರಗಳ ಬಗ್ಗೆ ವಿಪರೀತ ಆಸಕ್ತಿ ತೋರಿಸುವುದಕ್ಕೆ ಹೋಗಬೇಡಿ. ಬ್ಯಾಂಕ್ ನಲ್ಲಿ ಪರ್ಸನಲ್ ಲೋನ್ ಅಥವಾ ಗೋಲ್ಡ್ ಲೋನ್ ತೆಗೆದುಕೊಂಡವರು ಅದರ ಮರುಪಾವತಿಗೆ ಆಲೋಚಿಸಿ.
ಲೇಖನ- ಎನ್.ಕೆ.ಸ್ವಾತಿ