Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಈ ಜನ್ಮಸಂಖ್ಯೆಗೆ ಇಂದು ವ್ಯಾಪಾರವೋ ವ್ಯವಹಾರವೋ ದೊಡ್ಡದಾಗಿ ಬೆಳೆಯುವ ಸೂಚನೆ ಸಿಗಲಿದೆ
ಜನ್ಮಸಂಖ್ಯೆಗೆ 1, 2, 3ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಜನವರಿ 7ರ ಬುಧವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಜನ್ಮಸಂಖ್ಯೆ 1ರವರಿಗೆ ಸಕಾರಾತ್ಮಕ ವಾತಾವರಣ, 2ರವರಿಗೆ ದಾಖಲೆಗಳಿಂದ ಸಹಾಯ, 3ರವರಿಗೆ ಮರೆವು ಸಮಸ್ಯೆ ಇರಲಿದೆ. ಈ ಭವಿಷ್ಯವು ನಿಮ್ಮ ದಿನವನ್ನು ಯೋಜಿಸಲು ಸಹಕಾರಿಯಾಗಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):
ನೀವು ಇರುವಂಥ ಸ್ಥಳದಲ್ಲಿ ಸಕಾರಾತ್ಮಕ ವಾತಾವರಣ ಇರಲಿದೆ. ಆಲೋಚನೆಗಳಲ್ಲೂ ಸ್ಪಷ್ಟ ಚಿಂತನೆ, ಸರಿಯಾದ ಮಾರ್ಗದಲ್ಲಿ ನಡೆಯುವುದು ಇತ್ಯಾದಿ ಶುಭ ವಿಚಾರಗಳು ಅನುಭವಕ್ಕೆ ಬರಲಿದೆ. ಲಾಭ ಬರುತ್ತದೆ ಎಂಬ ಕಾರಣಕ್ಕೆ ಈಗಾಗಲೇ ತೆಗೆದುಕೊಂಡಂಥ ನಿರ್ಧಾರವನ್ನು ಬದಲಾಯಿಸುವುದಕ್ಕೆ ಹೋಗಬೇಡಿ. ಸ್ನೇಹಿತರ ಬಳಿ ನೀವೇನಾದರು ಸಹಾಯ ಕೇಳಿದ್ದಲ್ಲಿ ಅದು ದೊರೆಯುವ ಎಲ್ಲ ಸಾಧ್ಯತೆ ಇದೆ. ದೀರ್ಘ ಕಾಲದ ಹೂಡಿಕೆಗೆ ಸಂಬಂಧಿಸಿದಂತೆ ಮಹತ್ತರ ಎನಿಸಿದ ಯೋಜನೆ ರೂಪಿಸಲಿದ್ದೀರಿ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):
ಯಾವುದಕ್ಕೂ ಇರಲಿ ಅಂತ ಮುಂಜಾಗ್ರತೆಯಿಂದ ನೀವು ಸಂಗ್ರಹಿಸಿಟ್ಟು ಕೊಂಡಿದ್ದ ದಾಖಲೆಗಳು ಈ ದಿನ ನಿಮ್ಮ ಸಹಾಯಕ್ಕೆ ಬರಲಿವೆ. ಆರ್ಥಿಕವಾಗಿ ಕೂಡ ಸಕಾರಾತ್ಮಕ ಬೆಳವಣಿಗೆ ಆಗುವ ಸುಳಿವು ಸಿಗಲಿದೆ. ಊಟ- ತಿಂಡಿ ವಿಚಾರದಲ್ಲಿ ಸ್ವಲ್ಪ ಮಟ್ಟಿಗೆ ಶಿಸ್ತಿನಿಂದ ನಡೆದುಕೊಳ್ಳಿ. ಒಂದು ವೇಳೆ ಈಗಾಗಲೇ ವೈದ್ಯರು ಆಹಾರ ಪಥ್ಯವನ್ನು ಸೂಚಿಸಿದ್ದಲ್ಲಿ ಕಡ್ಡಾಯವಾಗಿ ಪಾಲಿಸಿ. ಆಯುರ್ವೇದ ಅಥವಾ ಜ್ಯೋತಿಷ್ಯ ರೀತಿಯಾಗಿ ಅನುಕೂಲ ತರುವಂಥ ಕೆಲವು ವಸ್ತುಗಳನ್ನು ಮನೆಗೆ ತರುವ ಯೋಗ ಈ ದಿನ ಇದೆ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):
ಮರೆವು ಈ ದಿನ ನಿಮಗೆ ಸಮಸ್ಯೆ ತರಬಹುದು. ಮುಖ್ಯವಾದ ಕೆಲಸಗಳನ್ನು ಒಪ್ಪಿಕೊಂಡಿದ್ದಲ್ಲಿ ಅದನ್ನು ನೆನಪಿಸುವ ರೀತಿಯಲ್ಲಿ ಮೊಬೈಲ್ ಫೋನ್ ನಲ್ಲಿ ರಿಮೈಂಡರ್ ಹಾಕಿಟ್ಟುಕೊಂಡು, ಅಥವಾ ಒಂದು ಪುಸ್ತಕದಲ್ಲಿ ಬರೆದಿಡುವುದೋ ಮಾಡಿ. ಸಣ್ಣ ಮಟ್ಟದಲ್ಲಿ ಶುರು ಮಾಡಿದ್ದ ವ್ಯಾಪಾರವೋ ವ್ಯವಹಾರವೋ ದೊಡ್ಡದಾಗಿ ಬೆಳೆಯುವ ಸೂಚನೆಯನ್ನು ನೀಡಲಿದೆ. ಭವಿಷ್ಯದಲ್ಲಿ ನಿಮಗೆ ಸಹಾಯ ಆಗಲಿರುವ ಪ್ರಭಾವಿ ವ್ಯಕ್ತಿಯೊಬ್ಬರ ಪರಿಚಯದಿಂದ ಆತ್ಮವಿಶ್ವಾಸ ಜಾಸ್ತಿ ಆಗಲಿದೆ.
