AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Budhaditya Yoga 2026: ಜನವರಿ 17ರಿಂದ ಬುಧಾದಿತ್ಯ ರಾಜಯೋಗ; ಈ ರಾಶಿಗೆ ಅಪಾರ ಧನ ಲಾಭ!

ಇದೇ ಜನವರಿ 17ರಂದು ಬುಧ ಮತ್ತು ಸೂರ್ಯ ಮಕರ ರಾಶಿಯಲ್ಲಿ ಸಂಯೋಗಗೊಂಡು ಪ್ರಬಲ ಬುಧಾದಿತ್ಯ ಯೋಗ ಸೃಷ್ಟಿಯಾಗಲಿದೆ. ಇದು ಜ್ಯೋತಿಷ್ಯದಲ್ಲಿ ಅತ್ಯುತ್ತಮ ಯೋಗವೆಂದು ಪರಿಗಣಿಸಲ್ಪಟ್ಟಿದೆ. ಈ ಯೋಗವು ಮೇಷದಿಂದ ಮೀನದವರೆಗೆ ಎಲ್ಲಾ 12 ರಾಶಿಗಳ ಮೇಲೆ ವಿಭಿನ್ನ ಪರಿಣಾಮ ಬೀರಿ, ಅನೇಕರಿಗೆ ಅದೃಷ್ಟ, ಯಶಸ್ಸು ಹಾಗೂ ಧನಲಾಭ ತರಲಿದೆ. ನಿಮ್ಮ ರಾಶಿಗೆ ಈ ಯೋಗ ಹೇಗೆ ಪ್ರಭಾವ ಬೀರಲಿದೆ ಎಂದು ತಿಳಿಯಿರಿ.

Budhaditya Yoga 2026: ಜನವರಿ 17ರಿಂದ ಬುಧಾದಿತ್ಯ ರಾಜಯೋಗ; ಈ ರಾಶಿಗೆ ಅಪಾರ ಧನ ಲಾಭ!
ಬುಧಾದಿತ್ಯ ರಾಜಯೋಗ
ಸ್ವಾತಿ ಎನ್​ಕೆ
| Edited By: |

Updated on:Jan 06, 2026 | 4:10 PM

Share

ಇದೇ ಜನವರಿ 17ರಂದು ಬುದ್ಧಿವಂತಿಕೆಯ ಕಾರಕತ್ವ ಇರುವಂಥ ಬುಧ ಮತ್ತು ಆತ್ಮಕಾರಕನಾದ ಸೂರ್ಯ ಮಕರ ರಾಶಿಯಲ್ಲಿ ಯುತಿ ಆಗುತ್ತಿದ್ದಾರೆ. ಅಂದರೆ ಅದೇ ರಾಶಿಯಲ್ಲಿ ಇರುತ್ತಾರೆ. ಈ ಸಂಯೋಗದಿಂದ ಅತ್ಯಂತ ಪ್ರಭಾವಶಾಲಿ ‘ಬುಧಾದಿತ್ಯ ಯೋಗ’ ಸೃಷ್ಟಿ ಆಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಬುಧಾದಿತ್ಯ ಯೋಗವನ್ನು ಅತ್ಯುತ್ತಮ ಯೋಗ ಎಂದು ಪರಿಗಣಿಸಲಾಗುತ್ತದೆ.

ಮೇಷದಿಂದ ಮೀನದ ತನಕ ಪ್ರಭಾವ ಹೀಗಿದೆ:

ಮೇಷ ರಾಶಿ:

ಈ ಯೋಗವು ನಿಮ್ಮ ಕರ್ಮ ಸ್ಥಾನ- ಉದ್ಯೋಗ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ತರಲಿದೆ. ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆ ದೊರೆಯುತ್ತದೆ, ಜತೆಗೆ ಹೊಸ ಜವಾಬ್ದಾರಿಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ.

ವೃಷಭ ರಾಶಿ:

ಭಾಗ್ಯ ಸ್ಥಾನದಲ್ಲಿ ಈ ಯೋಗವು ಸೃಷ್ಟಿ ಆಗುವುದರಿಂದ ನಿಂತುಹೋದ ಕೆಲಸಗಳು ಪುನಾರಂಭಗೊಳ್ಳಲಿವೆ. ದೂರದ ಪ್ರಯಾಣ ಅಥವಾ ವಿದೇಶಿ ಶಿಕ್ಷಣದ ಹಾದಿ ಸುಗಮವಾಗಲಿದ್ದು, ಆಧ್ಯಾತ್ಮಿಕ ಚಿಂತನೆ ಹೆಚ್ಚಲಿದೆ.

ಮಿಥುನ ರಾಶಿ:

ಹಠಾತ್ ಧನಲಾಭ ಉಂಟಾಗುವ ಸಾಧ್ಯತೆ ಇದ್ದರೂ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸುವುದು ಅಗತ್ಯ. ವಾಹನ ಚಾಲನೆ ವೇಳೆ ಎಚ್ಚರಿಕೆ ಮುಖ್ಯ. ಗುಪ್ತ ವಿದ್ಯೆಗಳ ಕಲಿಕೆಯಲ್ಲಿ ಆಸಕ್ತಿ ಮೂಡಲಿದೆ ಮತ್ತು ವಿಮಾ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಅನುಕೂಲವಾಗಲಿದೆ.

ಕರ್ಕಾಟಕ ರಾಶಿ:

ಪಾಲುದಾರಿಕೆ ವ್ಯವಹಾರದಲ್ಲಿ ಉತ್ತಮ ಲಾಭವನ್ನು ನಿರೀಕ್ಷಿಸಬಹುದು. ದಾಂಪತ್ಯದಲ್ಲಿ ಇದ್ದ ಅಸಮಾಧಾನಗಳು ದೂರವಾಗಿ ಸಂಗಾತಿಯೊಂದಿಗೆ ಸುಂದರ ಕ್ಷಣಗಳನ್ನು ಕಳೆಯುವಿರಿ. ಆದರೆ ನಿಮ್ಮ ಎದುರಿಗೆ ಇರುವ ವ್ಯಕ್ತಿಗಳು ಹೇಳುವ ಮಾತುಗಳನ್ನು ಕೇಳಿಸಿಕೊಳ್ಳಿ.

ಸಿಂಹ ರಾಶಿ:

ಕಚೇರಿಯಲ್ಲಿ ಸಹೋದ್ಯೋಗಿಗಳ ಬೆಂಬಲ ದೊರೆತು ಶತ್ರುಗಳ ಮೇಲೆ ಜಯ ಸಾಧಿಸುವಿರಿ. ಹಳೆಯ ಸಾಲಗಳಿಂದ ಮುಕ್ತಿ ಪಡೆಯಲು ಇದು ಸಕಾಲವಾಗಿದ್ದು, ಕೋರ್ಟ್ ಕಚೇರಿ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ.

ಕನ್ಯಾ ರಾಶಿ:

ಈ ಸಮಯವು ವಿದ್ಯಾರ್ಥಿಗಳಿಗೆ ಬಹಳ ಶುಭದಾಯಕವಾಗಿದ್ದು, ಸೃಜನಾತ್ಮಕ ಕೆಲಸಗಳಲ್ಲಿ ಪ್ರಗತಿ ಕಾಣುವಿರಿ. ಪ್ರೇಮ ಜೀವನದಲ್ಲಿ ಹೊಸ ತಿರುವು ಸಿಗಲಿದ್ದು, ಮಕ್ಕಳ ಪ್ರಗತಿಯಿಂದ ಸಂತಸ ಉಂಟಾಗಲಿದೆ.

ತುಲಾ ರಾಶಿ:

ಕುಟುಂಬದ ಸದಸ್ಯರ ನಡುವೆ ಬಾಂಧವ್ಯ ವೃದ್ಧಿ ಆಗಲಿದ್ದು, ಹೊಸ ಆಸ್ತಿ ಅಥವಾ ವಾಹನ ಖರೀದಿಗೆ ಯೋಗವಿದೆ. ತಾಯಿಯ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದ್ದು, ಮನೆಯಲ್ಲಿ ಸುಖ-ಶಾಂತಿ ನೆಲೆಸಲಿದೆ.

ವೃಶ್ಚಿಕ ರಾಶಿ:

ನಿಮ್ಮ ಧೈರ್ಯ ಮತ್ತು ಪರಾಕ್ರಮ ಹೆಚ್ಚಾಗಲಿದ್ದು, ಕಠಿಣ ಸವಾಲುಗಳನ್ನು ಸಮರ್ಥವಾಗಿ ಎದುರಿಸುವಿರಿ. ಸಣ್ಣ ಪ್ರಯಾಣಗಳಿಂದ ಲಾಭವಾಗುವುದೇ ಅಲ್ಲದೆ, ಸಹೋದರ-ಸಹೋದರಿಯರೊಂದಿಗೆ ಸೌಹಾರ್ದತೆ ಹೆಚ್ಚಲಿದೆ.

ಇದನ್ನೂ ಓದಿ: ಮನೆಯಲ್ಲಿ ತಪ್ಪಿಯೂ ಈ ಜಾಗದಲ್ಲಿ ಹಣ ಇಡಬೇಡಿ, ಸಾಲ ಹೆಚ್ಚಾಗಬಹುದು

ಧನು ರಾಶಿ:

ಆರ್ಥಿಕ ಪರಿಸ್ಥಿತಿ ಗಮನಾರ್ಹವಾಗಿ ಸುಧಾರಿಸಲಿದ್ದು, ಬಾಕಿ ಉಳಿದಿದ್ದ ಹಣ ನಿಮ್ಮ ಕೈ ಸೇರಲಿದೆ. ಮಾತು ಮಧುರವಾಗುವುದರಿಂದ ಸಾಮಾಜಿಕವಾಗಿ ನಿಮ್ಮ ಗೌರವ ಪ್ರತಿಷ್ಠೆಗಳು ಹೆಚ್ಚಲಿವೆ. ಆದರೆ ಮಾತಿನ ಮೇಲೆ ನಿಗಾ ಇರಿಸಿಕೊಳ್ಳಬೇಕು. ಪದ ಬಳಕೆಯಲ್ಲಿ ಜಾಗ್ರತೆ.

ಮಕರ ರಾಶಿ:

ನಿಮ್ಮದೇ ರಾಶಿಯಲ್ಲಿ ಬುಧಾದಿತ್ಯ ಯೋಗವು ಸಂಭವಿಸುತ್ತಿರುವುದರಿಂದ ಆತ್ಮವಿಶ್ವಾಸ ದುಪ್ಪಟ್ಟಾಗಲಿದೆ. ಸಮಾಜದಲ್ಲಿ ಗೌರವಯುತ ಸ್ಥಾನಮಾನ ಲಭಿಸುವುದಲ್ಲದೆ, ವೈಯಕ್ತಿಕ ಬೆಳವಣಿಗೆಗೆ ಹೊಸ ದಾರಿಗಳು ಗೋಚರಿಸಲಿವೆ.

ಕುಂಭ ರಾಶಿ:

ವಿದೇಶ ವ್ಯವಹಾರಗಳಲ್ಲಿ ಉತ್ತಮ ಪ್ರಗತಿ ಕಂಡುಬರಲಿದ್ದು, ಖರ್ಚುಗಳ ಮೇಲೆ ಹಿಡಿತ ಸಾಧಿಸುವುದು ಒಳ್ಳೆಯದು. ಹೂಡಿಕೆ ಮಾಡುವ ಮುನ್ನ ಅನುಭವಸ್ಥರ ಸಲಹೆ ಪಡೆಯುವುದು ಉತ್ತಮ. ಅತಿಯಾದ ಆತ್ಮವಿಶ್ವಾಸ ಸಮಸ್ಯೆಗೆ ಕಾರಣ ಆಗಬಹುದು, ಎಚ್ಚರ.

ಮೀನ ರಾಶಿ:

ಆದಾಯದ ಮೂಲಗಳು ಹೆಚ್ಚಾಗಲಿದ್ದು, ಬಹುಕಾಲದ ಆಸೆಗಳು ಈ ಸಮಯದಲ್ಲಿ ಈಡೇರಲಿವೆ. ದೊಡ್ಡ ವ್ಯಕ್ತಿಗಳ ಪರಿಚಯದಿಂದ ಭವಿಷ್ಯದ ಯೋಜನೆಗಳಿಗೆ ಸಹಕಾರ ಸಿಗಲಿದೆ ಮತ್ತು ಸಮಾಜದಲ್ಲಿ ನಿಮ್ಮ ಪ್ರಭಾವ ವೃದ್ಧಿಸಲಿದೆ.

Published On - 12:34 pm, Tue, 6 January 26