Numerology Prediction: ಈ ಜನ್ಮಸಂಖ್ಯೆಯವರಿಗೆ ಪ್ರೀತಿ- ಪ್ರೇಮದಲ್ಲಿ ಲಾಭ ಖಂಡಿತ
ಜನ್ಮಸಂಖ್ಯೆ 7, 8, 9 ರ ದಿನಭವಿಷ್ಯ: ಸಂಖ್ಯೆ 7 ರವರಿಗೆ ಅತಿಯಾದ ಚಿಂತೆಯು ಕೆಲಸಗಳಿಗೆ ಅಡ್ಡಿಯಾಗಬಹುದು. ಗಡುವಿನೊಳಗೇ ಜವಾಬ್ದಾರಿಗಳನ್ನು ಪೂರೈಸಲು ಶ್ರಮಿಸಿ. ಸಂಖ್ಯೆ 8 ರ ರೈತರಿಗೆ ಉತ್ತಮ ದಿನ. ರಫ್ತು ವ್ಯವಹಾರದಲ್ಲಿ ಲಾಭ. ಧೈರ್ಯದ ನಿರ್ಧಾರಗಳಿಂದ ಯಶಸ್ಸು. ಸಂಖ್ಯೆ 9 ರವರಿಗೆ ಪ್ರೇಮದಲ್ಲಿ ಯಶಸ್ಸು, ವ್ಯಾಪಾರದಲ್ಲಿ ಲಾಭ. ಉದ್ಯೋಗದಲ್ಲಿ ಸೌಜನ್ಯದಿಂದ ವರ್ತಿಸಿ.

ಜನ್ಮಸಂಖ್ಯೆಗೆ 7, 8, 9ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಜನವರಿ 6ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ಅತಿಯಾದ ಚಿಂತೆ ನಿಮಗೆ ಸುಸ್ತು ಮಾಡಲಿದೆ. ಭವಿಷ್ಯದ ಬಗ್ಗೆ ಆಲೋಚಿಸುವುದು ತಪ್ಪಲ್ಲ, ಆದರೆ ಅದರ ಬಗ್ಗೆಯೇ ಯೋಚಿಸುತ್ತಾ ನಿಮ್ಮ ದೈನಂದಿನ ಕೆಲಸ-ಕಾರ್ಯಗಳು ದಾರಿ ತಪ್ಪದಿರುವಂತೆ ನೋಡಿಕೊಳ್ಳಿ. ನೀವು ವಹಿಸಿಕೊಂಡ ಪ್ರಾಜೆಕ್ಟ್, ಜವಾಬ್ದಾರಿಗಳನ್ನು ಗಡುವಿನೊಳಗೆ ಮುಗಿಸುವುದಕ್ಕೆ ಎಲ್ಲ ಶಕ್ತಿಯನ್ನು ಒಟ್ಟುಗೂಡಿಸಿ ಹಾಕಲಿದ್ದೀರಿ. ನಿಮ್ಮದೇ ಕೆಲಸ ಎಂಬಷ್ಟು ಶ್ರದ್ಧೆಯಿಂದ ಸ್ನೇಹಿತರಿಗೆ ಕೆಲಸ ಮಾಡಿಕೊಟ್ಟ ನಂತರವೂ ಕೆಲವು ಆಕ್ಷೇಪದ ಮಾತುಗಳನ್ನು ಕೇಳಿಸಿಕೊಳ್ಳುವಂತೆ ಆಗಲಿದೆ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ರೈತರಿಗೆ ಬಹಳ ಉತ್ತಮವಾದ ದಿನ ಇದಾಗಿರುತ್ತದೆ. ಕೃಷಿ ಉತ್ಪನ್ನಗಳ ರಫ್ತು ವ್ಯವಹಾರದಲ್ಲಿ ತೊಡಗಿದವರಿಗೆ ಹೊಸ- ದೊಡ್ಡ ಪ್ರಮಾಣದ ಆರ್ಡರ್ ಹುಡುಕಿಕೊಂಡು ಬರಲಿದೆ. ಅಚಾನಕ್ ಆಗಿ ಪ್ರಯಾಣ ಮಾಡಬೇಕಾಗುತ್ತದೆ. ಆಲೋಚಿಸಿಯೇ ತೀರ್ಮಾನ ಮಾಡಬೇಕು ಎಂಬ ಸನ್ನಿವೇಶದಲ್ಲಿ ನಿಮ್ಮ ಧೈರ್ಯದ ಹೆಜ್ಜೆಯಿಂದ ಲಾಭ ಮಾಡಿಕೊಳ್ಳುವಿರಿ. ನಿಮ್ಮ ಬಳಿ ಸಹಾಯ ಕೇಳಿಕೊಂಡು ಬಂದವರ ಬಳಿ ಸಂಪೂರ್ಣವಾದ ವಿಚಾರ ತಿಳಿದುಕೊಳ್ಳದೆ, ಮಾತು ನೀಡುವುದಕ್ಕೆ ಹೋಗಬೇಡಿ. ಸಿಹಿ ಪದಾರ್ಥಗಳ ಸೇವನೆ ಕಡಿಮೆ ಮಾಡಿ.
ಇದನ್ನೂ ಓದಿ: ನಿಮ್ಮ ರಾಶಿಗನುಗುಣವಾಗಿ ಜನವರಿ ತಿಂಗಳ ಮೊದಲ ವಾರದ ಭವಿಷ್ಯ ತಿಳಿಯಿರಿ
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ಪ್ರೀತಿ- ಪ್ರೇಮದಲ್ಲಿ ಇರುವವರಿಗೆ ಉತ್ತಮವಾದ ದಿನ ಇದಾಗಿರುತ್ತದೆ. ನಿಮ್ಮ ಆಪ್ತರು ಉಡುಗೊರೆಗಳನ್ನು ನೀಡುವ ಸಾಧ್ಯತೆ ಇದೆ. ಹೋಲ್- ಸೇಲ್ ವ್ಯಾಪಾರಿಗಳು, ವಿತರಕರಾಗಿ ಕಾರ್ಯ ನಿರ್ವಹಿಸುವವರಿಗೆ ಲಾಭದ ಪ್ರಮಾಣದಲ್ಲಿ ಏರಿಕೆ ಆಗಲಿದೆ. ಸರ್ಕಾರದ ಕೆಲಸವೊಂದಕ್ಕೆ ಕನ್ಸಲ್ಟೇಷನ್ ಆಧಾರದಲ್ಲಿ ಬರುವಂತೆ ನಿಮ್ಮನ್ನು ಕೇಳುವಂಥ ಸಾಧ್ಯತೆ ಇದೆ. ಇನ್ನು ಉದ್ಯೋಗ ಸ್ಥಳದಲ್ಲಿ ನಿಮ್ಮ ನಿರ್ಧಾರ ಏನೇ ಆಗಿರಲಿ, ಅದನ್ನು ಎದುರಿಗೆ ಇರುವವರಿಗೆ ಬೇಸರ ಆಗದ ಧ್ವನಿಯಲ್ಲಿ ಹೇಳುವುದಕ್ಕೆ ಪ್ರಯತ್ನಿಸಿ.
ಲೇಖನ- ಎನ್.ಕೆ.ಸ್ವಾತಿ
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
