Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಈ ಜನ್ಮಸಂಖ್ಯೆಗೆ ಇಂದು ಲಾಭವೋ ಲಾಭ
ಜನವರಿ 6 ರ ಮಂಗಳವಾರದ ಜನ್ಮಸಂಖ್ಯೆ 1, 2, 3 ರ ದಿನಭವಿಷ್ಯ ಇಲ್ಲಿದೆ. ಜನ್ಮಸಂಖ್ಯೆ 1 ರವರಿಗೆ ಹೊಸ ಉದ್ಯೋಗ, ರಿಯಲ್ ಎಸ್ಟೇಟ್ ಲಾಭ. ಜನ್ಮಸಂಖ್ಯೆ 2 ರವರಿಗೆ ಆರೋಗ್ಯಕ್ಕೆ ಆದ್ಯತೆ, ಅವಕಾಶಗಳ ಬಳಕೆ, ಏಕಾಗ್ರತೆ ಮುಖ್ಯ. ಜನ್ಮಸಂಖ್ಯೆ 3 ರವರಿಗೆ ಸಂಬಂಧಿಕರ ಭೇಟಿ, ಹೂಡಿಕೆಯಿಂದ ಲಾಭ, ಆಭರಣ ವ್ಯಾಪಾರಕ್ಕೆ ಶುಭದಿನ. ನಿಮ್ಮ ಜನ್ಮಸಂಖ್ಯೆ ಆಧಾರಿತ ಇಂದಿನ ಭವಿಷ್ಯವನ್ನು ತಿಳಿಯಿರಿ.

ಜನ್ಮಸಂಖ್ಯೆಗೆ 1, 2, 3ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಜನವರಿ 6ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1) ಒತ್ತಡ ತಂದು ನಿಮ್ಮಿಂದ ಕೆಲಸ ಮಾಡಿಸಿಕೊಳ್ಳಬಹುದು ಅಂದುಕೊಂಡವರಿಗೆ ಅಚ್ಚರಿ ಎದುರಾಗಲಿದೆ. ನೇರವಾಗಿ ಉತ್ತರ ನೀಡಿ, ಬಾಯಿ ಮುಚ್ಚಿಸುತ್ತೀರಿ. ರಿಯಲ್ ಎಸ್ಟೇಟ್ ವ್ಯವಹಾರ ಕೈ ಹಿಡಿಯಲಿದೆ. ಉದ್ಯೋಗವೋ- ವ್ಯವಹಾರವೋ ಕುಟುಂಬದ ವಿಚಾರವೋ ಒಟ್ಟಿನಲ್ಲಿ ನಿಮ್ಮ ತನಕ ಬಂದ ದೂರನ್ನು ಗಂಭೀರವಾಗಿಯೇ ತೆಗೆದುಕೊಳ್ಳಿ. ಮಕ್ಕಳ ವರ್ತನೆಯಲ್ಲಿ ಆಗುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸುವುದು ಮುಖ್ಯ. ಆದಾಯ ಮೂಲ ತೆರೆದುಕೊಳ್ಳಲಿದೆ. ನಿಮಗೆ ಹೊಸ ಉದ್ಯೋಗದ ಆಫರ್ ವೊಂದು ಸ್ನೇಹಿತರ ಮೂಲಕ ಬರಲಿದೆ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2) ಹೆಲ್ತ್ ಚೆಕಪ್ ಮಾಡಿಸಿಕೊಳ್ಳಲು ಆದ್ಯತೆ ನೀಡುತ್ತೀರಿ. ಭುಜ- ಬೆನ್ನಿನ ನೋವಿನ ಸಮಸ್ಯೆ ಇರುವವರಿಗೆ ಸೂಕ್ತವಾದ ವೈದ್ಯೋಪಚಾರ ಸಿಗುತ್ತದೆ. ಬೆಟ್ಟಿಂಗ್ ನಿಂದ ದೂರ ಇರುವುದು ಒಳ್ಳೆಯದು. ಆಕಸ್ಮಿಕವಾಗಿ ಸಿಗುವಂಥ ಅವಕಾಶಗಳನ್ನು ಚೆನ್ನಾಗಿ ಬಳಸಿಕೊಳ್ಳುತ್ತೀರಿ. ಉತ್ಸಾಹದ ಪರಿಸರದಲ್ಲಿ ಸಂತೋಷದ ಕ್ಷಣಗಳನ್ನು ಕಳೆಯಲಿದ್ದೀರಿ. ಬಾಯಿಯ ಮೇಲೆ ನಿಯಂತ್ರಣ ಇರಿಸಿಕೊಳ್ಳುವುದು ಮುಖ್ಯ. ಅದು ಮಾತಿಗೆ ಸಂಬಂಧಿಸಿದಂತೆಯೇ ಇರಲಿ, ರುಚಿಯ ಖಾದ್ಯವೇ ಇರಲಿ ಹತೋಟಿಯಲ್ಲಿ ಇರಿ. ಏಕಾಗ್ರತೆ ಈ ದಿನದ ನಿಮ್ಮ ಯಶಸ್ಸಿಗೆ ಸೂತ್ರ ಆಗಲಿದೆ.
ಇದನ್ನೂ ಓದಿ : ಜನವರಿ 04ರಿಂದ 10ರ ವರೆಗಿನ ವಾರದ ಪ್ರೇಮ – ಪ್ರೀತಿ ಭವಿಷ್ಯ ತಿಳಿಯಿರಿ
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3) ಸಂಬಂಧಿಗಳು ಮನೆಗೆ ಬರುವಂಥ ಸಾರ್ಥಕ ಅನಿಸುವ ರೀತಿಯ ಕೆಲವು ಕೆಲಸಗಳು ನಿಮ್ಮಿಂದ ಆಗಲಿವೆ. ಸ್ನೇಹಿತರು- ಸಂಬಂಧಿಗಳಿಗೆ ಹಲವು ಬಗೆಯಲ್ಲಿ ನಿಮ್ಮ ಸಹಕಾರ- ನೆರವು ದೊರೆಯಲಿದೆ. ನೀವು ಈಗಾಗಲೇ ಮಾಡಿದಂಥ ಹೂಡಿಕೆ ಹಿಂಪಡೆಯುವುದರಿಂದ ಲಾಭದಲ್ಲಿ ಇರುತ್ತೀರಿ. ದೂರ ಪ್ರದೇಶದಲ್ಲಿ ವಾಸ ಇರುವವರು ಪ್ರಾಣಿಗಳ ಕಡಿತದಿಂದ ತೊಂದರೆ ಅನುಭವಿಸುವಂತೆ ಆಗಬಹುದು. ಸಾಮಾನ್ಯ ದಿನಗಳಿಗಿಂತ ಹೆಚ್ಚು ಎಚ್ಚರ ವಹಿಸಿ. ಜ್ಯುವೆಲ್ಲರಿ ಮಳಿಗೆ ನಡೆಸುತ್ತಾ ಇರುವವರಿಗೆ ಉತ್ತಮವಾದ ದಿನ ಇದು.
ಲೇಖನ- ಎನ್.ಕೆ.ಸ್ವಾತಿ
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
