AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಈ ಜನ್ಮಸಂಖ್ಯೆಯವರು ಇಂದು ದೊಡ್ಡ ಮಟ್ಟದಲ್ಲಿ ಆದಾಯ ತರುವಂಥ ಕೆಲಸಕ್ಕೆ ಮುಂದಾಗುವರು

ಜನವರಿ 7ರ ಬುಧವಾರದಂದು ಜನ್ಮಸಂಖ್ಯೆ 7, 8, 9ರ ದಿನಭವಿಷ್ಯ ಇಲ್ಲಿದೆ. ಜನ್ಮಸಂಖ್ಯೆ 7ರವರಿಗೆ ಹೊಸ ಆದಾಯ ಮೂಲಗಳು, ಹೂಡಿಕೆಯಲ್ಲಿ ಲಾಭ. ಜನ್ಮಸಂಖ್ಯೆ 8ರವರು ಸಂಬಂಧಗಳಲ್ಲಿ ಎಚ್ಚರ, ಹಣಕಾಸಿನ ಹಿಂದಿನ ನಿರ್ಧಾರಗಳ ಬಗ್ಗೆ ಅಸಮಾಧಾನ. ಜನ್ಮಸಂಖ್ಯೆ 9ರವರು ಆರೋಗ್ಯಕ್ಕೆ ಆದ್ಯತೆ, ಸ್ವಉದ್ಯೋಗಿಗಳಿಗೆ ಆದಾಯ ಕುಸಿತದ ಸಾಧ್ಯತೆ. ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಂದಿನ ದಿನ ಭವಿಷ್ಯ ತಿಳಿಯಿರಿ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಈ ಜನ್ಮಸಂಖ್ಯೆಯವರು ಇಂದು ದೊಡ್ಡ ಮಟ್ಟದಲ್ಲಿ ಆದಾಯ ತರುವಂಥ ಕೆಲಸಕ್ಕೆ ಮುಂದಾಗುವರು
ದಿನ ಭವಿಷ್ಯ
ಸ್ವಾತಿ ಎನ್​ಕೆ
| Edited By: |

Updated on: Jan 07, 2026 | 12:55 AM

Share

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ಪರ್ಯಾಯ ಮಾರ್ಗ ಆಲೋಚಿಸುವುದು ಬಹಳ ಮುಖ್ಯ ಎಂದೆನಿಸುತ್ತದೆ. ನಿಮಗಿರುವ ಹೆಸರು, ಗೊತ್ತಿರುವ ಕೆಲಸದಲ್ಲಿ ಇರುವಂಥ ಕಾಂಟ್ಯಾಕ್ಟ್, ಪ್ರಭಾವಿಗಳ ಸಂಪರ್ಕ ಈ ಎಲ್ಲವನ್ನೂ ಬಳಸಿಕೊಂಡು, ದೊಡ್ಡ ಮಟ್ಟದಲ್ಲಿ ಆದಾಯ ತರುವಂಥ ಕೆಲಸ- ಕಾರ್ಯಗಳನ್ನು ಮಾಡುವುದಕ್ಕೆ ಮುಂದಾಗಲಿದ್ದೀರಿ. ಗ್ರಂಥಿಗೆ ಮಳಿಗೆ ನಡೆಸುತ್ತಾ ಇರುವವರಿಗೆ ಹೊಸ ಹೊಸ ವಸ್ತುಗಳ ಮಾರಾಟದ ಅವಕಾಶ ತೆರೆದುಕೊಳ್ಳಲಿದೆ. ನಿಮ್ಮಲ್ಲಿ ಕೆಲವರಿಗೆ ಹೂಡಿಕೆಯಲ್ಲಿ ಅದೃಷ್ಟದ ಬೆಂಬಲ ದೊರೆಯಲಿದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ಕೆಲವು ವ್ಯಕ್ತಿಗಳನ್ನು ನೀವಾಗಿಯೇ ದೂರ ಇಡುವ ನಿರ್ಧಾರ ಮಾಡಲಿದ್ದೀರಿ. ನಂಬಿಕೆ, ಪ್ರೀತಿ- ವಿಶ್ವಾಸಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿಲ್ಲ ಎಂಬುದು ಆಕ್ಷೇಪದ ಕಾರಣ ಆಗಿರಬಹುದು. ಯಾವುದು ಚಿಕ್ಕ- ಪುಟ್ಟ ಸಂಗತಿಗಳು ಎಂದು ಇಷ್ಟು ಸಮಯ ಭಾವಿಸಿರುತ್ತೀರೋ ಅಂಥವುಗಳಿಗೆ ಸಿಕ್ಕಾಪಟ್ಟೆ ಪ್ರಾಮುಖ್ಯ ಸಿಗಲಿದೆ. ಹಣಕಾಸಿನ ವಿಚಾರದಲ್ಲಿ ಈ ಹಿಂದೆ ನೀವು ತೆಗೆದುಕೊಂಡ ನಿರ್ಧಾರಗಳು ಸರಿಯಾಗಲಿಲ್ಲ ಎಂದು ನಿಮಗೇ ಅನಿಸುತ್ತದೆ. ಜೀರ್ಣಕ್ಕೆ ಸುಲಭವಾಗಿ ಬರುವಂಥ ಆಹಾರ ಪದಾರ್ಥಗಳ ಸೇವನೆಗೆ ನಿಮ್ಮ ಆದ್ಯತೆ ಇರಲಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ಎಲ್ಲ ಸಮಯವೂ ಒಂದೇ ರೀತಿಯ ಪ್ರತಿಸ್ಪಂದನೆ ಸರಿಹೋಗುವುದಿಲ್ಲ ಎಂದು ಬಲವಾಗಿ ಅನಿಸಲಿದೆ. ಆರೋಗ್ಯ ವಿಚಾರಕ್ಕೆ ಆದ್ಯತೆ ನೀಡುತ್ತೀರಿ. ಸ್ವ ಉದ್ಯೋಗಿಗಳಿಗೆ ಆದಾಯದಲ್ಲಿ ಗಣನೀಯ ಇಳಿಕೆ ಅನುಭವ ಆಗಲಿದೆ. ಅಥವಾ ಅಂದುಕೊಂಡ ಸಮಯಕ್ಕೆ ಹಣ ಕೈ ಸೇರದ ಕಾರಣದಿಂದ ಬೇಸರ ಆಗಲಿದೆ. ಇತರರ ಆರ್ಥಿಕ ವಿಚಾರಗಳ ಬಗ್ಗೆ ವಿಪರೀತ ಆಸಕ್ತಿ ತೋರಿಸುವುದಕ್ಕೆ ಹೋಗಬೇಡಿ. ಬ್ಯಾಂಕ್ ನಲ್ಲಿ ಪರ್ಸನಲ್ ಲೋನ್ ಅಥವಾ ಗೋಲ್ಡ್ ಲೋನ್ ತೆಗೆದುಕೊಂಡವರು ಅದರ ಮರುಪಾವತಿಗೆ ಆಲೋಚಿಸಿ.

ಲೇಖನ- ಎನ್‌.ಕೆ.ಸ್ವಾತಿ