
ಮಾನಸಿಕವಾಗಿ ನಿಮಗೆ ಎಷ್ಟೇ ಉತ್ಸಾಹ ಇದ್ದರೂ ಕೆಲಸ- ಕಾರ್ಯಗಳಲ್ಲಿ ತೊಡಗುವ ಮುನ್ನ ದೈಹಿಕವಾದ ಸಾಮರ್ಥ್ಯ ಪರೀಕ್ಷಿಸಿಕೊಳ್ಳುವುದು ಒಳ್ಳೆಯದು. ಈ ದಿನ ನೀವು ವಿಶ್ರಾಂತಿಗೆ ಆದ್ಯತೆ ನೀಡುವುದು ಒಳ್ಳೆಯದು. ಮಾನಸಿಕವಾಗಿಯೂ ದಿನದ ಎರಡನೇ ಭಾಗದಲ್ಲಿ ಸ್ವಲ್ಪ ಗೊಂದಲವಿರಬಹುದು, ನಿರ್ಧಾರಗಳನ್ನು ಮುಂದೂಡಿ. ದೇವತಾ ಕಾರ್ಯಗಳಲ್ಲಿ ಪಾಲ್ಗೊಳ್ಳುವಿಕೆ ನೆಮ್ಮದಿ ತರಲಿದೆ. ಪ್ರೀತಿ-ಪ್ರೇಮದ ವಿಚಾರದಲ್ಲಿ ಸ್ವಲ್ಪ ಭಿನ್ನಾಭಿಪ್ರಾಯ ಮೂಡಬಹುದು. ಭೂಮಿಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ಲಾಭದ ನಿರೀಕ್ಷೆ ಇರಲಿದೆ.
ಷೇರು, ಮಲ್ಟಿ ಕಮಾಡಿಟಿಗಳಲ್ಲಿ ಹಣ ತೊಡಗಿಸಿದವರಿಗೆ, ಲೇವಾ ದೇವಿ ವ್ಯವಹಾರ ಮಾಡುವಂಥವರಿಗೆ ಇಂದು ಆಕಸ್ಮಿಕ ಧನ ಲಾಭದ ಯೋಗವಿದೆ. ಆದರೆ ಹತ್ತಿರದವರೇ ನಿಮ್ಮ ಕಾಲೆಳೆಯುವ ಸಾಧ್ಯತೆ ಇರುವುದರಿಂದ ಅಂತರಂಗದ- ವ್ಯವಹಾರದ ಒಳ ಗುಟ್ಟುಗಳನ್ನು ಬಿಟ್ಟುಕೊಡಬೇಡಿ. ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಾ ಇರುವವರಿಗೆ ಸವಾಲಿನ ದಿನ. ಸಣ್ಣ ಪ್ರವಾಸಕ್ಕೆ ಯೋಜನೆ ರೂಪಿಸುವಿರಿ. ಕಣ್ಣಿನ ಆರೋಗ್ಯದ ಬಗ್ಗೆ ಸ್ವಲ್ಪ ಎಚ್ಚರಿಕೆ ವಹಿಸಿ. ಶಾರ್ಟ್‌ಕಟ್ ಮೂಲಕ ನಿಮಗೆ ಹಣ ಗಳಿಸುವ ಅವಕಾಶ ಸಿಕ್ಕರೂ ಅತ್ತ ಸುಳಿಯಬೇಡಿ.
ಮಹಿಳೆಯರಿಗೆ ಸ್ವಲ್ಪ ಮಟ್ಟಿಗೆ ಸವಾಲಿನ ದಿನ ಇದಾಗಿರಲಿದೆ. ಮನೆಯ- ಕುಟುಂಬದ ಜವಾಬ್ದಾರಿಗಳು ಇಂದು ಹೆಚ್ಚಾಗಲಿವೆ. ಕಚೇರಿಯಲ್ಲಿ ಬಾಕಿ ಉಳಿದಿದ್ದ ಕೆಲಸಗಳನ್ನು ಪೂರ್ಣಗೊಳಿಸಲು ಹೆಚ್ಚಿನ ಶ್ರಮ ಬೇಕಾಗಬಹುದು. ಈ ಹಿಂದೆ ನೀಡಿದ್ದ ಗಡುವಿಗಿಂತ ಮುಂಚಿತವಾಗಿ ಕೆಲಸ ಮುಗಿಸುವಂತೆ ಹೇಳಬಹುದು. ನೆರೆಹೊರೆಯವರ ಜೊತೆ ವಾಗ್ವಾದಕ್ಕೆ ಇಳಿಯಬೇಡಿ. ಆರ್ಥಿಕ ಲಾಭಕ್ಕಿಂತ ಖರ್ಚು ಅಧಿಕವಾಗಿರಲಿದೆ. ಹಳೆ ಬಾಕಿ ಪಾವತಿಸಲು ಅನುಕೂಲಕರ ಸಮಯವಿದು. ಸಂಗಾತಿಯ ಬೆಂಬಲ ನಿಮಗಿರಲಿದೆ.
ಲೇಖನ- ಎನ್.ಕೆ.ಸ್ವಾತಿ