ವಾರ ಭವಿಷ್ಯ: ಸಿಗಬೇಕಿದ್ದ ಕೆಲಸಗಳು ಅನ್ಯರ ಪಾಲಾಗುವ ಆತಂಕ!: ಎಚ್ಚರಿಕೆಯಿಂದ ಇರಬೇಕಾದ ರಾಶಿಗಳು ಯಾವುವು?

May 24-30, 2026 Weekly Horoscope: 2026ರ ಮೇ 24-30ರ ವಾರದಲ್ಲಿ ಯೋಜನೆಗಳಲ್ಲಿ ಅಡೆತಡೆ, ಹಣಕಾಸು ಹೊಂದಾಣಿಕೆಗಳಂತಹ ಸವಾಲುಗಳಿರಬಹುದು. ಆದರೂ, ಗ್ರಹಗಳ ಶುಭ ಪ್ರಭಾವದಿಂದ ಮೇಷ, ಮಿಥುನ, ಸಿಂಹ, ಧನು ಮತ್ತು ಇತರ ರಾಶಿಗಳಿಗೆ ಧನಲಾಭ, ವೃತ್ತಿ ಪ್ರಗತಿ ಹಾಗೂ ಹೊಸ ಅವಕಾಶಗಳು ದೊರೆಯಲಿವೆ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ, ಜಾಗ್ರತೆಯಿಂದ ಮುನ್ನಡೆದರೆ ಯಶಸ್ಸು ಖಚಿತ. ನಿಮ್ಮ ಭವಿಷ್ಯದ ಸಮಗ್ರ ವಿಶ್ಲೇಷಣೆ ಇಲ್ಲಿದೆ.

ವಾರ ಭವಿಷ್ಯ: ಸಿಗಬೇಕಿದ್ದ ಕೆಲಸಗಳು ಅನ್ಯರ ಪಾಲಾಗುವ ಆತಂಕ!: ಎಚ್ಚರಿಕೆಯಿಂದ ಇರಬೇಕಾದ ರಾಶಿಗಳು ಯಾವುವು?
ವಾರ ಭವಿಷ್ಯ
Image Credit source: pinterest
Edited By:

Updated on: May 25, 2026 | 5:04 PM

2026ರ ಮೇ 24ರಿಂದ 30ರವರೆಗೆ ಕೊನೆಯ ವಾರದಲ್ಲಿ ಸಮಯದ ಕೊರತೆಯಿಂದ ಯೋಜನೆ ದಿಕ್ಕು ತಪ್ಪುವುದು, ಸಿಗಬೇಕಿದ್ದ ಕಾರ್ಯಗಳು ಅನ್ಯರ ಪಾಲಾಗುವುದು, ಹಣದ ಹೊಂದಾಣಿಕೆಗೆ ಓಡಾಟ ಇಂತಹ ನಕಾರಾತ್ಮಕ ಅಂಶಗಳು ಅಧಿಕವಾಗಿ ಈ ವಾರ ಇರಲಿದೆ. ಎಲ್ಲ ಕಡೆಯೂ ದೃಷ್ಟಿ ಇಟ್ಟು ಕಾರ್ಯ ಮಾಡಬೇಕು.

ಮೇಷ ರಾಶಿ :

​ಮಂಗಳನ ಶುಭ ಪ್ರಭಾವದಿಂದ ವಾರದ ಆರಂಭದಲ್ಲಿ ಧನಲಾಭವಾಗಲಿದೆ. ವೃತ್ತಿಕ್ಷೇತ್ರದಲ್ಲಿ ನಿಮ್ಮ ಪ್ರಭಾವ ಹೆಚ್ಚಲಿದ್ದು, ಹೊಸ ಜವಾಬ್ದಾರಿಗಳು ಸಿಗಲಿವೆ. ಕುಟುಂಬದಲ್ಲಿ ಸಂತಸದ ವಾತಾವರಣವಿರಲಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ. ಭರವಸೆಯಿಂದ ಮುನ್ನಡೆಯಿರಿ.


ವೃಷಭ ರಾಶಿ :

​ಸೂರ್ಯನ ಸ್ಥಿತಿಯಿಂದಾಗಿ ಆಸ್ತಿ ಅಥವಾ ಹಣಕಾಸಿನ ವ್ಯವಹಾರಗಳಲ್ಲಿ ಜಾಗ್ರತೆ ಅಗತ್ಯ. ದೂರದ ಪ್ರಯಾಣದಿಂದ ಲಾಭವಿದೆ. ವಾರದ ಮಧ್ಯಭಾಗದಲ್ಲಿ ಶುಭ ವಾರ್ತೆ ಕೇಳುವಿರಿ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕುವುದು ಒಳ್ಳೆಯದು. ತಾಳ್ಮೆ ಮುಖ್ಯ.


ಮಿಥುನ ರಾಶಿ :

​ತ್ರಿಗ್ರಹ ಕೂಟದಿಂದ ಈ ವಾರ ನಿಮಗೆ ಅತ್ಯಂತ ಅದೃಷ್ಟ ತರಲಿದೆ. ಬಾಕಿ ಉಳಿದಿದ್ದ ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳಲಿವೆ. ವಿದ್ಯಾರ್ಥಿಗಳಿಗೆ ಹಾಗೂ ಉದ್ಯೋಗಿಗಳಿಗೆ ಅಪೇಕ್ಷಿತ ಯಶಸ್ಸು ಸಿಗಲಿದೆ. ಆರ್ಥಿಕ ಸ್ಥಿತಿ ಭದ್ರವಾಗಲಿದೆ.

 

​ಕರ್ಕಾಟಕ ರಾಶಿ :

​ಚಂದ್ರನ ಸಂಚಾರದಿಂದ ವಾರದ ಆರಂಭದಲ್ಲಿ ಸ್ವಲ್ಪ ಮಾನಸಿಕ ಗೊಂದಲವಿರಬಹುದು. ಆದರೆ ದ್ವಿತೀಯಾರ್ಧದಲ್ಲಿ ಪರಿಸ್ಥಿತಿ ಸುಧಾರಿಸಲಿದೆ. ಹಿರಿಯರ ಆರೋಗ್ಯದ ಕಡೆ ಗಮನವಿರಲಿ. ಕಠಿಣ ಶ್ರಮಕ್ಕೆ ತಕ್ಕಂತೆ ವೃತ್ತಿಯಲ್ಲಿ ಉತ್ತಮ ಗೌರವ, ಧನಲಾಭ ದೊರೆಯಲಿದೆ.


ಸಿಂಹ ರಾಶಿ :

​ಲಾಭಸ್ಥಾನದ ಪ್ರಭಾವದಿಂದ ಈ ವಾರ ಆದಾಯದ ಮೂಲಗಳು ಹೆಚ್ಚಲಿವೆ. ನಿಮ್ಮ ನಾಯಕತ್ವ ಗುಣಕ್ಕೆ ಮನ್ನಣೆ ಸಿಗಲಿದೆ. ಪ್ರಭಾವಿ ವ್ಯಕ್ತಿಗಳ ಭೇಟಿಯಿಂದ ವ್ಯವಹಾರದಲ್ಲಿ ಪ್ರಗತಿಯಾಗಲಿದೆ. ಕುಟುಂಬದವರೊಂದಿಗೆ ಪ್ರವಾಸ ಕೈಗೊಳ್ಳುವ ಯೋಗವಿದೆ.


ಕನ್ಯಾ ರಾಶಿ :

​ಶನಿಯ ಶುಭ ಸ್ಥಿತಿಯಿಂದಾಗಿ ಕೋರ್ಟ್ ಕಚೇರಿ ಕೆಲಸಗಳು ಮತ್ತು ಸ್ಪರ್ಧೆಗಳಲ್ಲಿ ವಿಜಯ ನಿಮ್ಮದಾಗಲಿದೆ. ಉದ್ಯೋಗದಲ್ಲಿ ಸಹೋದ್ಯೋಗಿಗಳ ಬೆಂಬಲ ಸಿಗಲಿದೆ. ಆರೋಗ್ಯದ ಸಣ್ಣಪುಟ್ಟ ಏರುಪೇರುಗಳು ಸರಿಯಾಗಲಿವೆ. ನಿರೀಕ್ಷಿತ ಆರ್ಥಿಕ ಸಹಾಯ ಹಸ್ತ ದೊರೆಯಲಿದೆ.


ತುಲಾ ರಾಶಿ :

​ಇದು ಲಗ್ನ ರಾಶಿಯಾಗಿದ್ದು, ಮನಸ್ಸಿನಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ಆಲೋಚನೆಗಳು ಹೆಚ್ಚಲಿವೆ. ಹೊಸ ಹೂಡಿಕೆಗೆ ವಾರ ಪೂರಕವಾಗಿದೆ. ಸೃಜನಶೀಲ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ದಾಂಪತ್ಯ ಜೀವನದಲ್ಲಿ ಸಾಮರಸ್ಯ ಮತ್ತು ಸಂತೋಷ ನೆಲೆಸಲಿದೆ.


ವೃಶ್ಚಿಕ ರಾಶಿ :

​ವಾರದ ಆರಂಭದಲ್ಲಿ ಚಂದ್ರನ ಪ್ರಭಾವದಿಂದ ಖರ್ಚುಗಳು ಹೆಚ್ಚಾಗಬಹುದು, ನಿಧಾನ ನಡೆ ಅಗತ್ಯ. ಆದರೆ ವಾರಾಂತ್ಯದ ವೇಳೆಗೆ ಮಂಗಳನ ಬಲದಿಂದ ಆಸ್ತಿ ಒಡಂಬಡಿಕೆಗಳು ಯಶಸ್ವಿಯಾಗಲಿವೆ. ವ್ಯಾಪಾರದಲ್ಲಿ ಲಾಭಾಂಶ ಹೆಚ್ಚಲಿದ್ದು, ಉತ್ಸಾಹ ಮೂಡಲಿದೆ.


ಧನು ರಾಶಿ :

​ಗುರುವಿನ ಕೃಪೆಯಿಂದ ಸಮಾಜದಲ್ಲಿ ಗೌರವ, ಕೀರ್ತಿ ಹೆಚ್ಚಾಗಲಿದೆ. ಆರ್ಥಿಕ ಮುಗ್ಗಟ್ಟುಗಳು ನಿವಾರಣೆಯಾಗಿ ಧನಹರಿವು ಸುಲಭವಾಗಲಿದೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿಬರಲಿದೆ. ಸ್ನೇಹಿತರಿಂದ ನಿರೀಕ್ಷಿತ ಸಹಾಯ ಮತ್ತು ಮಾರ್ಗದರ್ಶನ ದೊರೆಯಲಿದೆ.

 

​ಮಕರ ರಾಶಿ :

​ವೃತ್ತಿ ರಂಗದಲ್ಲಿ ಮೇಲಾಧಿಕಾರಿಗಳಿಂದ ಮೆಚ್ಚುಗೆ ಸಿಗಲಿದೆ. ಶನಿಯ ಬಲದಿಂದ ಕಠಿಣ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸುವಿರಿ. ಆರೋಗ್ಯ ಉತ್ತಮವಾಗಿರುತ್ತದೆ. ನೂತನ ಗೃಹೋಪಯೋಗಿ ವಸ್ತುಗಳ ಖರೀದಿ ಅಥವಾ ಆಸ್ತಿ ವೃದ್ಧಿಯಾಗುವ ಶುಭ ಯೋಗವಿದೆ.

 

​ಕುಂಭ ರಾಶಿ :

​ಭಾಗ್ಯೋದಯದ ವಾರವಿದು. ಸುದೀರ್ಘ ಕಾಲದ ಯೋಜನೆಗಳು ಕಾರ್ಯರೂಪಕ್ಕೆ ಬರಲಿವೆ. ಉನ್ನತ ಶಿಕ್ಷಣದ ಪ್ರಯತ್ನಗಳಿಗೆ ವೇಗ ಸಿಗಲಿದೆ. ಆಕಸ್ಮಿಕ ಧನಲಾಭದ ಸಾಧ್ಯತೆ ಇದೆ. ಮಕ್ಕಳ ಕಡೆಯಿಂದ ನೆಮ್ಮದಿ ಮತ್ತು ಹೆಮ್ಮೆಯ ವಾರ್ತೆಗಳನ್ನು ಕೇಳುವಿರಿ.

ಇದನ್ನೂ ಓದಿ: ಕುಂಭ ರಾಶಿಯಲ್ಲಿ ರಾಹುವಿನ ಉಲ್ಟಾ ನಡೆ!: ಈ 3 ರಾಶಿಗಳಿಗೆ 18 ವರ್ಷಗಳ ಕಾಲ ಲಾಟರಿ ಹೊಡೆಯೋದು ಗ್ಯಾರಂಟಿ

​ಮೀನ ರಾಶಿ :

​ಕೆಲಸದ ಒತ್ತಡ ಹೆಚ್ಚಿದ್ದರೂ, ವಾರಾಂತ್ಯದಲ್ಲಿ ನಿಶ್ಚಿಂತೆ ಮೂಡಲಿದೆ. ಹಿರಿಯ ಅಧಿಕಾರಿಗಳ ಪ್ರೋತ್ಸಾಹದಿಂದ ಕಷ್ಟದ ಕೆಲಸಗಳು ನಿವಾರಣೆಯಾಗಲಿವೆ. ವಾಹನ ಚಾಲನೆಯಲ್ಲಿ ಜಾಗ್ರತೆ ಇರಲಿ. ಕುಟುಂಬ ಸದಸ್ಯರ ಸಲಹೆಗಳು ವೃತ್ತಿ ಬೆಳವಣಿಗೆಗೆ ಸಹಕಾರಿಯಾಗಲಿವೆ.

– ಲೋಹಿತ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:03 pm, Mon, 25 May 26

Lohitha Hebbar

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More
Follow Us