Nithya Bhavishya: ಧನು, ಮಕರ, ಕುಂಭ, ಮೀನಾ ರಾಶಿಯವರ ಇಂದಿನ ಭವಿಷ್ಯ ಹೀಗಿದೆ

|

Updated on: Mar 22, 2023 | 5:50 AM

ನೀವು ಧನು, ಮಕರ, ಕುಂಭ, ಮೀನಾ ರಾಶಿಯವರೇ? ಹಾಗಿದ್ದರೆ ಇಂದಿನ (2023 ಮಾರ್ಚ್ 22) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Nithya Bhavishya: ಧನು, ಮಕರ, ಕುಂಭ, ಮೀನಾ ರಾಶಿಯವರ ಇಂದಿನ ಭವಿಷ್ಯ ಹೀಗಿದೆ
ಇಂದಿನ ರಾಶಿ ಭವಿಷ್ಯ
Image Credit source: freepik
Follow us on

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಮಾರ್ಚ್ 22 ಬುಧವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ಶೋಭಕೃತ್ ಸಂವತ್ಸರವು ಎಲ್ಲ ರಾಶಿಯವರಿಗೂ ಶುಭವನ್ನು ತರಲಿ. ಇಷ್ಟಾರ್ಥಗಳು ಸಿದ್ಧಿಸಲಿ. ಅಮಂಗಲವು ದೂರವಾಗಿ, ಮಂಗಲಮಯ ವಾತಾವರಣ ಇಡೀ ವರ್ಷ ತುಂಬಿರಲಿ. ಹೊಸತನವು ಬರಲಿ, ಹೊಸ ಮನವು ಇರಲಿ, ಎಲ್ಲರಿಗೂ ನೂತನ‌ಸಂವತ್ಸರಕ್ಕೆ ಶುಭಾಶಯ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ : ಉತ್ತರಾಭಾದ್ರ, ಮಾಸ : ಚೈತ್ರ, ಪಕ್ಷ : ಶುಕ್ಲ, ವಾರ : ಬುಧ, ತಿಥಿ : ಪ್ರತಿಪತ್, ನಿತ್ಯನಕ್ಷತ್ರ : ಉತ್ತರಾಭಾದ್ರ, ಯೋಗ : ಶುಕ್ಲ, ಕರಣ : ಕಿಂಸ್ತುಘ್ನ, ಸೂರ್ಯೋದಯ ಬೆಳಗ್ಗೆ 06 ಗಂಟೆ 37 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 42 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:40 ರಿಂದ 02:10ರವರೆಗೆ, ಯಮಘಂಡ ಕಾಲ ಬೆಳಗ್ಗೆ 08:08 ರಿಂದ 09:38ರ ವರೆಗೆ, ಗುಳಿಕ ಕಾಲ ಬೆಳಗ್ಗೆ 11:09 ರಿಂದ ಮಧ್ಯಾಹ್ನ 12:40ರ ವರೆಗೆ.

ಧನುಸ್ಸು: ಕುಟುಂಬ ಹಿರಿಯರ ಜೊತೆ ಕಲಹವಾಗುವ ಸಾಧ್ಯತೆ ಇದೆ. ನಿಮ್ಮ ಕೋಪವನ್ನು ಕಡಿಮೆ ಮಾಡಿಕೊಳ್ಳಲು ಪ್ರಾಣಾಯಾಮ ಅಥವಾ ಧ್ಯಾನವನ್ನು ಮಾಡಿ. ನಿಮಗೆ ಪ್ರಿಯವಾದದ್ದನ್ನು ಪಡೆದುಕೊಳ್ಳಲಿದ್ದೀರಿ. ಬಹಳ ಕಾಲದಿಂದ ಮಾಡುತ್ತಿರುವ ಕೆಲಸಕ್ಕೆ ಉತ್ತಮ ಫಲಿತಾಂಶ ದೊರೆಯಲಿದೆ. ಪ್ರೀತಿಯನ್ನು ಮನೆಯಲ್ಲಿ ಒಪ್ಪಿಕೊಳ್ಳದೇ ಸಮಸ್ಯೆ ಆದೀತು. ವಿದೇಶದ ಜೊತೆ ವ್ಯವಹಾರವನ್ನು ಇಟ್ಟುಕೊಂಡಿದ್ದರೆ ಕಷ್ಟಪಡಬೇಕಾಗಿ ಬರಬಹುದು. ಆಪ್ತರ ಮಾತನ್ನು ಕೇಳಬೇಕೆಂದು ಅನ್ನಿಸಬಹುದು. ಸ್ವಾತಂತ್ರ್ಯವನ್ನು ಬಯಸುವಿರಿ. ನಾಗಾರಾಧ‌ನೆಯನ್ನು ಮಾಡಿ.

ಮಕರ: ನಿಮ್ಮ ಸ್ನೇಹಿತರಿಗೆ ನಿಮ್ಮಿಂದ ಹೆಚ್ಚಿನ ಸಲಹೆ ಬೇಕಾಗಬಹುದು, ಕೊಡಿ. ಅದು ಅವರ ಸಾಮರ್ಥ್ಯಕ್ಕೆ ಸರಿಯಾಗಿರಲಿ. ನಿಮಗೆ ಅತೃಪ್ತಿಯ ಭಾವವು ಕಾಡಲಿದೆ. ಪಕ್ಕದರ ಪರಿಚಯವು ಸ್ನೇಹವಾಲಿದೆ. ಇಂದೇ ಶುಭದಿನವೆಂದು ನಿಮ್ಮ ದಿನಚರಿಯನ್ನು ಬದಲಾಯಿಸಿಕೊಳ್ಳುವಿರಿ. ವಸ್ತ್ರಗಳನ್ನು ಖರೀದಿ ಮಾಡುವ ಸಂಭ್ರಮದಲ್ಲಿ ಇರುವಿರಿ. ಅಲಂಕಾರಕ್ಕೆ ಹೆಚ್ಚಿನ ಸಮಯವು ಹೋಗಲಿದೆ. ಕಛೇರಿಯಲ್ಲಿ ಸಂತೋಷದ ವಾತಾವರಣ ಇರಲಿದೆ. ಇಷ್ಟು ದಿನ ಮಾತಮಾಡದೇ ಇರುವವರು ಇಂದು ಮಾತನಾಡುವರು. ಲಕ್ಷ್ಮೀಸಹಿತನಾದ ನಾರಾಯಣನಿಗೆ ಪಾಯಸ ನೈವೇದ್ಯ ಮಾಡಿ.

ಕುಂಭ: ಬಂದ ಸಮಸ್ಯೆಗಳನ್ನು ಜಾಣ್ಮೆಯಿಂದ ಬಗೆ ಹರಿಸಿ. ನಿಮ್ಮ ಗುರಿಯನ್ನು ಸಾಧಿಸುವ ಆತ್ಮವಿಶ್ವಾಸವಿರಲಿ. ದುರಭ್ಯಾಸವನ್ನು ಬಿಡುವ ಆಲೋಚನೆ ಮಾಡುವಿರಿ. ಉನ್ನತ ಅಧಿಕಾರಿಗಳು ನಿಮಗೆ ಆಗಬೇಕಾದ ಕೆಲಸದಲ್ಲಿ ಸಹಾಯ ಮಾಡುವರು. ಭಿನ್ನಾಭಿಪ್ರಾಯಗಳನ್ನು ಮರೆತು ನಿಮ್ಮ ಸಂಬಂಧವನ್ನು ಕಾಪಾಡಿಕೊಳ್ಳುವುದು ಉತ್ತಮ‌ ಇಲ್ಲವಾದರೆ ಪರಿಸ್ಥಿತಿಯು ಅಂತ್ಯದಲ್ಲಿದೆ ಎಂದು ನೀವು ಕಂಡುಕೊಳ್ಳುತ್ತೀರಿ. ನೀವು ಮನೆ ಖರೀದಿಸಲು ನಿರ್ಧರಿಸಬಹುದು. ಪ್ರಸ್ತುತ ಕೆಲಸದಲ್ಲಿ ನೀವು ಪ್ರಗತಿಯತ್ತ ನೋಡುತ್ತಿದ್ದರೆ ನಿಮ್ಮ ಆಸೆ ಈಡೇರಬಹುದು. ಕಚೇರಿಯಲ್ಲಿನ ಸೂಕ್ಷ್ಮ ಸಮಸ್ಯೆಗಳನ್ನು ಪರಿಹರಿಸಲು ನಿಮ್ಮ ಚಾತುರ್ಯ ಮತ್ತು ತಿಳುವಳಿಕೆಯನ್ನು ಬಳಸಿ. ಶಿವನಿಗೆ ರುದ್ರಾಭಿಷೇಕವನ್ನು ಮಾಡಿಸಿ.

ಮೀನ: ಇಂದಿನ ಎಲ್ಲ ವಿಚಾರದಲ್ಲಿಯೂ ಸಮಯ ಮೀರುವ ಅನುಭವವಾಗಲಿದೆ‌. ಅಷ್ಟಾದರೂ ನಿಮ್ಮ ಪಾಲಿನದ್ದು ಸಿಕ್ಕೆ ಸಿಗುವುದು. ಸ್ನೇಹಿತರಿಂದ ಸಹಾಯವನ್ನು ಪಡೆವ ಸಾಧ್ಯತೆಯಿದೆ. ಕಛೇರಿಯಲ್ಲಿ ಸವಾಲಿನ ಪರಿಸ್ಥಿತಿ ಬರಬಹುದು, ಭಯ ಬೇಡ. ನೀವು ಅನಾಯಾಸವಾಗಿ ಎದುರಿಸುವಿರಿ. ದೈವಾನುಕೂಲದ ಬಗ್ಗೆ ಖುಷಿಯಾಗುವುದು. ನಿಮ್ಮ ಕಠಿಣ ಪರಿಶ್ರಮಕ್ಕೆ ಮನ್ನಣೆ ಮತ್ತು ಮೆಚ್ಚುಗೆ ಸಿಗಲಿದೆ. ನಿಮ್ಮ ಕುಟುಂಬದ ಉಳಿದ ಸದಸ್ಯರೊಂದಿಗೆ ನೀವು ಉತ್ತಮ ಸಂಬಂಧವನ್ನು ಹೊಂದಿರುತ್ತೀರಿ. ಅವರ ಸಂಪೂರ್ಣ ಬೆಂಬಲವೂ ಸಿಗಲಿದೆ. ನಿಮ್ಮ ಪ್ರೀತಿಯನ್ನು ಉಳಿಸಿಕೊಳ್ಳುವ ಪ್ರಯತ್ನಗಳು ಯಶಸ್ವಿಯಾಗುತ್ತವೆ. ಶನಿಯು ನಿಮಗೆ ಕಿರಿಕಿರಿ ಕೊಟ್ಟಾನು. ದುಃಖಬೇಡ. ದುಃಖವನ್ನು ಕಡಿಮೆ ಮಾಡಿಕೊಳ್ಳುವ ವಿಧಾನವನ್ನು ಅನುಸರಿಸಿ.

-ಲೋಹಿತಶರ್ಮಾ ಇಡುವಾಣಿ