AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope Today: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಫಲ, ಭವಿಷ್ಯ ಹೀಗಿದೆ

ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿವರೇ? ಹಾಗಿದ್ದರೆ ಇಂದಿನ (2023 ಮಾರ್ಚ್ 22) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope Today: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಫಲ, ಭವಿಷ್ಯ ಹೀಗಿದೆ
ಇಂದಿನ ರಾಶಿ ಭವಿಷ್ಯImage Credit source: freepik
Rakesh Nayak Manchi
|

Updated on: Mar 22, 2023 | 5:20 AM

Share

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಮಾರ್ಚ್ 22 ಬುಧವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ : ಉತ್ತರಾಭಾದ್ರ, ಮಾಸ : ಚೈತ್ರ, ಪಕ್ಷ : ಶುಕ್ಲ, ವಾರ : ಬುಧ, ತಿಥಿ : ಪ್ರತಿಪತ್, ನಿತ್ಯನಕ್ಷತ್ರ : ಉತ್ತರಾಭಾದ್ರ, ಯೋಗ : ಶುಕ್ಲ, ಕರಣ : ಕಿಂಸ್ತುಘ್ನ, ಸೂರ್ಯೋದಯ ಬೆಳಗ್ಗೆ 06 ಗಂಟೆ 37 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 42 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:40 ರಿಂದ 02:10ರವರೆಗೆ, ಯಮಘಂಡ ಕಾಲ ಬೆಳಗ್ಗೆ 08:08 ರಿಂದ 09:38ರ ವರೆಗೆ, ಗುಳಿಕ ಕಾಲ ಬೆಳಗ್ಗೆ 11:09 ರಿಂದ ಮಧ್ಯಾಹ್ನ 12:40ರ ವರೆಗೆ.

ಶೋಭಕೃತ್ ಸಂವತ್ಸರವು ಎಲ್ಲ ರಾಶಿಯವರಿಗೂ ಶುಭವನ್ನು ತರಲಿ. ಇಷ್ಟಾರ್ಥಗಳು ಸಿದ್ಧಿಸಲಿ. ಅಮಂಗಲವು ದೂರವಾಗಿ, ಮಂಗಲಮಯ ವಾತಾವರಣ ಇಡೀ ವರ್ಷ ತುಂಬಿರಲಿ. ಹೊಸತನವು ಬರಲಿ, ಹೊಸ ಮನವು ಇರಲಿ, ಎಲ್ಲರಿಗೂ ನೂತನ‌ಸಂವತ್ಸರಕ್ಕೆ ಶುಭಾಶಯ.

ಮೇಷ: ಇಂದು ನೀವು ಅಕಾರಣವಾಗಿ ಸಂಕಟ ಪಡುವಿರಿ. ಸಣ್ಣದನ್ನು ದೊಡ್ಡದಾಗಿ ಮಾಡಿಕೊಳ್ಳಲು ಹೋಗದೇ ಅಲ್ಲಿಯೇ ಮುಗಿಸಿ. ಭವಿಷ್ಯದ ತುಂಬಾ ಆಲೋಚನೆಗಳನ್ನು ಮಾಡುವಿರಿ. ಎಲ್ಲವನ್ನೂ ತಿಳಿದಿದ್ದರೂ ವಾದದಲ್ಲಿ ಸೋಲಬೇಕಾದ ಸ್ಥಿತಿ ಇದೆ. ವಿವಾದವನ್ನು ಕಡಿಮೆ ಮಾಡಿಕೊಳ್ಳಿ. ನಿಮ್ಮ ಗುರಿಯ ಸಾಧನೆಯವರೆಗೆ ಮೌನವಿದ್ದಷ್ಟೂ ಒಳ್ಳೆಯದೇ. ವಿವಾಹದ ಸಂಭ್ರಮ ಮನೆಯಲ್ಲಿ ಇರುವುದು. ದೀರ್ಘಕಾಲದ ಅನಂತರದ ಭೇಟಿ ನಿಮಗೆ ಸಂತಸ ಕೊಡಲಿದೆ. ಗೌರವವನ್ನು ನಿರೀಕ್ಷಿಸದಿದ್ದರೂ ನಿಮಗೆ ಇಂದು ಲಭ್ಯವಾಗಲಿದೆ. ತಂದೆ-ತಾಯಿಯರ ಆಶೀರ್ವಾದ ಪಡೆಯಿರಿ.

ವೃಷಭ: ನಿಮ್ಮ ಸಮಸ್ಯೆಗಳನ್ನು ತಾಳ್ಮೆಯಿಂದ ಪರಿಹರಿಸಿಕೊಳ್ಳಿ. ಕೆಟ್ಟ ಸಮಯವು ಬರಬಾರದೆಂದು ಇಷ್ಟದೇವರನ್ನು ಪಾರ್ಥಿಸಿ. ನೂತನ ಗೃಹಾರಂಭದ ಕನಸು‌ ಕಾಣಲಿದ್ದೀರಿ. ನಿಮ್ಮ ಮನಃಸ್ಥಿತಿಯಲ್ಲಿ ಬದಲಾವಣೆ ಇರಲಿದೆ. ಇಂದು ಉತ್ಸಾಹದಿಂದ ನೀವು ಕೆಲಸವನ್ನು ಮಾಡಲು ಬಯಸುವುದಿಲ್ಲ. ಪ್ರೇಮಕ್ಕೆ ಸಂಬಂಧಿಸದಂತೆ ಉತ್ತಮವಾಗಿರಲಿದೆ. ನೀವು ಹೊಸ ಸಂಬಂಧವನ್ನು ಪ್ರಾರಂಭಿಸಲು ಹೋದರೆ ಅದರಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ಬೇರೆಯವರ‌‌ ನಕಾರಾತ್ಮಕ ಮಾತುಗಳಿಗೆ ಕಿವಿಗೊಡದೇ ನಿಮ್ಮ ಯೋಚನೆ ತಕ್ಕಂತೆ ಹೆಜ್ಜೆ ಹಾಕಿ. ಆರಂಭವು ಸ್ವಲ್ಪ ಕಷ್ಟವೆನಿಸುವುದು.

ಮಿಥುನ: ನಿಮ್ಮವರನ್ನು ಹಾಸ್ಯ ಮಾಡಲು ಹೋಗಿ ಅವರಿಗೆ ನೋವನ್ನುಂಟು‌ಮಾಡುವಿರಿ. ಬಹಳ ಒತ್ತಡದಲ್ಲಿ ಕೆಲಸವನ್ನು ಮಾಡಿ ಮುಗಿಸಲಿದ್ದೀರಿ. ದೇಹವು ಹೆಚ್ಚು ವಿಶ್ರಾಂತಿಯನ್ನು ಕೇಳಬಹುದು. ಪ್ರವಾಸವನ್ನು ಮಾಡಿ ಆನಂದಿಸುವಿರಿ. ವಿದ್ಯಾರ್ಥಿಗಳು ಅಧ್ಯಯನ ಪರರಾಗಿ ಇರುವವರು. ಪರೀಕ್ಷೆಯ ಭಯವೂ ಇರಲಿದೆ. ಉದ್ಯೋಗಕ್ಕೆ ಸಂಬಂಧಿಸದಂತೆ ಸಂದರ್ಶನವಾಗಿ ಕೈತಪ್ಪುವ ಸಾಧ್ಯತೆ ಇದೆ. ಪ್ರೇಮದಲ್ಲಿ ಸಿಲುಕಿ ಒದ್ದಾಡಲಿದ್ದೀರಿ. ನೀವು ಅನ್ಯ ಆದಾಯದ ಮಾರ್ಗಗಳನ್ನು ಹೊಂದಿದ್ದರೆ, ಕಷ್ಟವಾದೀತು. ಸಮೀಪದಲ್ಲಿರುವ ಕುಮಾರಸ್ವಾಮಿಯ ದೇಗುಲಕ್ಕೆ ಹೋಗಿ ಪೂಜೆ ಮಾಡಿಸಿ.

ಕಟಕ: ಇಂದು ನೀವು ನಿಮ್ಮ ಮನಸ್ಸನ್ನು ನಿಯಂತ್ರಿಸಬೇಕಾಗಿದೆ. ಅಧಿಕ ಕೋಪದಿಂದ ಮಿತ್ರರನ್ನು ಕಳೆದುಕೊಳ್ಳಬೇಕಾಗಬಹುದು. ಇಂದು ನೀವು ಮೋಜಿನಿಂದ ಸಮಯವನ್ನು ಕಳೆಯಲು ಬಯಸುವಿರೊ. ಹಣದ ವಿಷಯದಲ್ಲಿ ನಷ್ಟವು ಆಗಬಹುದು. ಏರಿಳಿತಗಳಿರಬಹುದು. ನಿಮ್ಮ ಮತ್ತು ಸಂಗಾತಿಯ ನಡುವೆ ಅಹಂ ನ ಘರ್ಷಣೆ ಉಂಟಾಗಲಿದೆ. ನಿಮ್ಮ ಹೆತ್ತವರ ಮಾತಿಗೆ ಬೆಲೆ ಕೊಡದೇ ಕಷ್ಟಪಡಬೇಕಾಗಬಹುದು. ವಿದ್ಯಾರ್ಥಿಗಳು ಪರೀಕ್ಷೆಯ ಗೊಂದಲದಲ್ಲಿ ಸಿಕ್ಕಿಹಾಕಿಕೊಳ್ಳುವಿರಿ. ಮಕ್ಕಳು ನಿಮ್ಮ ಪರವಾಗಿ ಇರಲಿದ್ದಾರೆ. ಕುಲದೇವರಿಗೆ ದೀಪ ಬೆಳಗಿ.

-ಲೋಹಿತಶರ್ಮಾ ಇಡುವಾಣಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ