ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ನವೆಂಬರ್ 01) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ತುಲಾ ಮಾಸ, ಮಹಾನಕ್ಷತ್ರ: ಸ್ವಾತೀ, ಮಾಸ: ಆಶ್ವಯುಜ, ಪಕ್ಷ: ಕೃಷ್ಣ, ವಾರ: ಬುಧ, ತಿಥಿ: ಚತುರ್ಥೀ, ನಿತ್ಯನಕ್ಷತ್ರ: ರೋಹಿಣೀ, ಯೋಗ: ಶುಭ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 28 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 03 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:16 ರಿಂದ 01:43 ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 07:56 ರಿಂದ 09:22 ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 10:49 ರಿಂದ 12:16ರ ವರೆಗೆ.
ಮೇಷ ರಾಶಿ : ಮಾಧ್ಯಮದಲ್ಲಿ ಇರುವವರು ಸ್ವಲ್ಪ ಎಚ್ಚರಿಕೆಯಿಂದ ಮಾತನಾಡಬೇಕಾದೀತು. ವೇಗದ ನಿಮ್ಮ ಕೆಲಸಕ್ಕೆ ಮೆಚ್ಚುಗೆ ಸಿಗಬಹುದು. ಉದ್ಯೋಗದಲ್ಲಿ ಬರುವ ಮನಸ್ತಾಪವನ್ನು ನಿಮ್ಮೊಳಗೇ ಇಟ್ಟುಕೊಂಡು ಮುಂದುವರಿಯುವಿರಿ. ಅನಾಯಾಸವಾಗಿ ಸಿಕ್ಕ ಅವಕಾಶದಿಂದ ಗೊಂದಲ ಬರಬಹುದು. ಯಾರ ಪ್ರಭಾವವನ್ನೂ ನೀವು ಉಪಯೋಗಿಸಿಕೊಳ್ಳಲು ಇಷ್ಟಪಡುವುದಿಲ್ಲ. ನಿಮ್ಮ ಕಾರ್ಯದ ಮೇಲೆ ಕಾರಣಾಂತರಗಳಿಂದ ಗಮನವು ಕಡಿಮೆ ಆಗಬಹುದು. ನಿಮ್ಮ ವಿರುದ್ಧದ ಮಾತುಗಳಿಗೆ ನೀವು ಸಿಟ್ಟಾಗುವಿರಿ. ನಿಮ್ಮ ಉತ್ಸಾಹದಲ್ಲಿ ಮಿತಿ ಮೀರುವುದು ಬೇಡ. ಕಳೆದುಕೊಂಡಿದ್ದನ್ನು ಪುನಃ ಪಡೆದುಕೊಳ್ಳಲು ಸಮಯ ಬೇಕಾಗುವುದು. ಎಲ್ಲರ ಪ್ರಶ್ನೆಗೂ ಉತ್ತರವನ್ನೇ ಕೊಡಬೇಕಿಂದಲ್ಲ. ಕಾರ್ಯವನ್ನೂ ಮಾಡಿ ತೋರಿಸಬಹುದು.
ವೃಷಭ ರಾಶಿ : ಬಹಳ ಕೆಲಸಗಳಿದ್ದರೂ ಎಲ್ಲವನ್ನೂ ನೀವು ಮರೆತಿರುವಿರಿ. ವಿದ್ಯೆಯು ಬೇಕಾದ ಸಮಯಕ್ಕೆ ಕೆಲಸಕ್ಕೆ ಬಾರದೇಹೋಗಬಹುದು. ಸಂಗಾತಿಯನ್ನು ಕೆಲವು ವಿಷಯಕ್ಕೆ ದ್ವೇಷಿಸಬಹುದು. ಹಳೆಯ ವಿಚಾರವನ್ನು ಮತ್ತೆ ಕೆದಕುವಿರಿ. ನಿಮ್ಮ ಸ್ಥಿತಿಯನ್ನು ಕೆಲವರು ಆಡಿಕೊಂಡಾರು. ಅಮೂಲ್ಯ ವಸ್ತುವನ್ನು ಖರೀದಿಸುವುದಕ್ಕಿಂತ ಅದನ್ನು ಕಾಪಾಡಿಕೊಳ್ಳುವುದು ಬಹುಮುಖ್ಯ. ದೇವತಾಕಾರ್ಯದಲ್ಲಿ ಆಸಕ್ತಿ ಕಡಿಮೆ ಇರುವುದು. ಆರ್ಥಿಕತೆಯ ಬಗ್ಗೆ ನಿಮ್ಮನ್ನು ಬಂಧುಗಳು ಪ್ರಶ್ನಿಸಬಹುದು. ನಿಮ್ಮ ನಮಗೆ ಗೊತ್ತಿರಲಿ. ಕುರುಡನಂತೆ ಹೋಗುವುದು ಬೇಡ. ಸ್ನೇಹಿತರ ಬೆಂಬಲವನ್ನು ನೀವು ನಿರಾಕರಿಸಬಹುದು. ಸಮಯವನ್ನು ಸುಮ್ಮನೇ ವ್ಯರ್ಥವಾಗಿ ಕಳೆಯುವಿರಿ. ಆಲಸ್ಯದಿಂದ ಏನನ್ನೂ ಮಾಡಲಾಗದು.
ಮಿಥುನ ರಾಶಿ : ಹೊಸ ಮನೆಯ ಖರೀದಿಗೆ ಆಪ್ತರಿಂದ ಹಣವನ್ನು ಪಡೆಯಬೇಕಾಗಬಹುದು. ಹಿತಶತ್ರುಗಳು ನಿಮ್ಮ ಅವನತಿಯನ್ನು ನಿರೀಕ್ಷಿಸಬಹುದು. ಮಾತನ್ನು ಸರಿಯಾಗಿ, ಸರಿಯಾದ ಸ್ಥಳದಲ್ಲಿ ಆಡಿ. ಊಹಿಸದ ಕೆಲವು ಸಂದರ್ಭಗಳು ಇಂದು ಬರಬಹುದು. ಗಣ್ಯರ ಭೇಟಿಯನ್ನು ಮಾಡುವಿರಿ. ಉದ್ಯೋಗಕ್ಕೆ ಸಂಬಂಧಿಸಿದ ಕಾನೂನಿನ ವಿಚಾರವನ್ನು ತಿಳಿದುಕೊಳ್ಳಿ. ವಿದ್ಯಾಭ್ಯಾಸಕ್ಕಾಗಿ ಮನೆಯನ್ನು ಬಿಟ್ಟು ಇರುವುದು ಕಷ್ಟವಾಗುವುದು. ಭವಿಷ್ಯವನ್ನು ನಿಮ್ಮ ತಲೆಯಲ್ಲಿ ಇಟ್ಟುಕೊಂಡು ಮುಂದುವರಿಯಿರಿ. ಇಂದು ನಿಮ್ಮ ರೂಪಕ್ಕೆ ಆಕರ್ಷಣೆ ಇರಲಿದೆ. ಎಲ್ಲರೂ ಪ್ರಶಂಸಿಸಬಹುದು. ವಾಹನದಲ್ಲಿ ಓಡಾಟವನ್ನು ನೀವು ನಿಲ್ಲಿಸಬೇಕಾಗಬಹುದು. ಆಹಾರದ ಸ್ವೀಕಾರದ ಸಮಯವು ವಿಳಂಬ ಮಾಡಿಕೊಳ್ಳುವಿರಿ. ನೆರೆಹೊರೆಯ ಜೊತೆ ವಾಗ್ವಾದ ನಡೆಸಬೇಡಿ.
ಕಟಕ ರಾಶಿ : ಯಾರ ಜೊತೆ ಸ್ಪರ್ಧಿಸಲೂ ನೀವು ತಯಾರಿರುವಿರಿ. ಗಂಭೀರವಾದ ಸಣ್ಣ ವಿಚಾರವೂ ಮುಂದೆ ದೊಡ್ಡದಾಗಬಹುದು. ನಿಂತಲ್ಲಿ ನಿಲ್ಲುವುದು ಕಷ್ಟವಾಗಿ ಸುಮ್ಮನೇ ಅಡ್ಡಾಡುವಿರಿ. ಸಂಗಾತಿಯ ವಿರುದ್ಧ ಸಿಟ್ಟಾಗಬಹುದು. ಮಹಿಳೆಯರಿಗೆ ನಿಮ್ಮಿಂದ ಹೆಚ್ಚಿನ ಸಹಕಾರವು ಸಿಕ್ಕಬಹುದು. ಉನ್ನತ ಅಧಿಕಾರದ ಆಸೆಯನ್ನು ಸಹೋದ್ಯೋಗಿಗಳು ನಿಮಗೆ ತಿಳಿಸಬಹುದು. ಅನಪೇಕ್ಷಿತ ಮಾತುಗಳಿಂದ ನಿಮ್ಮ ಸಮಯವು ವ್ಯರ್ಥವಾಗುವುದು. ವಿವಾಹಕ್ಕೆ ಅಪರಿಚಿತರಿಂದ ತಡೆ ಬರಬಹುದು. ನಿಮ್ಮ ಕನಸುಗಳಿಗೆ ನೀರೆರೆಯುವ ಅವಶ್ಯಕತೆ ಇದೆ. ನಿದ್ರಾಭಂಗದಿಂದ ಮನಸ್ಸು ಸರಿಯಾಗಿರದು. ಮಕ್ಕಳ ಪ್ರತಿಭೆಯಿಂದ ನಿಮಗೆ ಹೆಮ್ಮೆ ಎನಿಸಬಹುದು.
ಸಿಂಹ ರಾಶಿ : ಮೇಲಧಿಕಾರಿಗಳ ಮಾತುಗಳಿಂದ ನಿಮಗೆ ಅವಮಾನವಾಗಿದ್ದು ಮುಂದೇನು ಎಂಬುದರ ಬಗ್ಗೆ ನಿಮಗೆ ಚಿಂತೆ ಬರಬಹುದು. ಅಧಿಕ ಲಾಭದ ನಿರೀಕ್ಷೆಯಲ್ಲಿ ಹೊರಟ ನಿಮಗೆ ಅಲ್ಪ ಲಾಭವಾಗಬಹುದು. ಜಾಣ್ಮೆಯಿಂದ ಸರ್ಕಾರದ ಕಾರ್ಯವನ್ನು ಮಾಡಿಸಿಕೊಳ್ಳುವಿರಿ. ಸ್ವಂತ ವಾಹನದ ದುರಸ್ತಿಗೆ ಖರ್ಚಾಗಬಹುದು. ಇಂದು ಸ್ಥೈರ್ಯವನ್ನು ಕಳೆದುಕೊಳ್ಳುವಿರಿ. ನಿಮ್ಮಲ್ಲಿ ವಿದ್ಯೆ ಇರುವ ಕಾರಣ ಯಾವ ಸಂದರ್ಭಕ್ಕೂ ಹೆದರುವುದಿಲ್ಲ. ನಿಮ್ಮನ್ನು ಅತಿಥಿಗಳಾಗಿ ಆಹ್ವಾನಿಸಬಹುದು. ನಿಮ್ಮ ಪ್ರೇಮಸಂಬಂಧವು ಸಡಿಲಾಗಬಹುದು. ಬೆನ್ನು ನೋವಿಗೆ ಸರಿಯಾದ ಚಿಕಿತ್ಸೆಯನ್ನು ಮಾಡಿಕೊಳ್ಳುವುದು ಉಚಿತವೆನಿಸೀತು. ಅರಿವಿಲ್ಲದೇ ಎಲ್ಲರೆದುರು ಅಸಭ್ಯ ವರ್ತನೆಯನ್ನು ನೀವು ತೋರಿಸುವಿರಿ.
ಕನ್ಯಾ ರಾಶಿ : ನಿಮ್ಮ ಜಾಣ್ಮೆಯಿಂದ ಭೂಮಿಯ ಕಲಹವನ್ನು ಸರಿಮಾಡಿಕೊಳ್ಳುವಿರಿ. ಮಿತ್ರನ ಬಗ್ಗೆ ಯಾರಾದರೂ ಸಲ್ಲದ ಮಾತನಾಡಬಹುದು. ಕಾರ್ಯದ ವಿಳಂಬದಿಂದ ಮನೆಗೆ ಬರುವುದು ವಿಳಂಬವಾಗುವುದು. ಲೆಕ್ಕ ಪರಿಶೋಧಕರು ಒತ್ತಡದಲ್ಲಿ ಇರುವರು. ನಾಜೂಕಿನಿಂದ ಇಂದಿನ ಕಾರ್ಯವನ್ನು ಮಾಡಿಕೊಳ್ಳುವಿರಿ. ವಿದ್ಯಾರ್ಥಿಗಳು ವಿಶೇಷ ತರಬೇತಿಯನ್ನು ಪಡೆಯಬೇಕಾಗಬಹುದು. ಮನೆಯಿಂದ ದೂರದಲ್ಲಿ ನಿಮ್ಮ ಹೊಸ ಜೀವನವನ್ನು ನಡೆಸಬಹುದು. ಇಂದು ಅಧಿಕ ಮಾತನ್ನು ಆಡುವುದು ಬೇಡ. ಕಲಾವಿದು ಕೆಲವು ಅವಕಾಶದಿಂದ ವಂಚಿತರಾಗಬಹುದು. ಖರ್ಚಿನ ಬಗ್ಗೆ ಅಂದಾಜಿರಲಿ. ನಿಮ್ಮ ವಸ್ತುಗಳು ಕಾಣಿದಸದೇ ನೀವು ಆತಂಕಗೊಳ್ಳಬೇಕಾಗಬಹುದು. ಸಿಕ್ಕ ಅವಕಾಶವನ್ನು ನೀವೇ ಬಿಟ್ಟುಕೊಂಡು ನಿಮ್ಮನ್ನೇ ಹಳಿದುಕೊಳ್ಳುವಿರಿ.
ತುಲಾ ರಾಶಿ : ಬೆಳಗಿನಿಂದಲೇ ಮನಸ್ಸು ಸರಿ ಇಲ್ಲದ ಕಾರಣ ಎಲ್ಲದಕ್ಕೂ ಸಿಟ್ಟು ಮಾಡುವಿರಿ. ಇಲ್ಲವೇ ಸುಮ್ಮನೆ ಇರುವಿರಿ. ಅಮೂಲ್ಯ ವಸ್ತುಗಳನ್ನು ಪಡೆದುಕೊಳ್ಳುವ ಹಂಬಲವಿರುವುದು. ಮಕ್ಕಳಿಗಾಗಿ ಹಣವನ್ನು ಇಡುವಿರಿ. ಸ್ನೇಹಿತರ ಸಹವಾಸದಿಂದ ದುರಭ್ಯಾಸವು ರೂಢಿಯಾಗಬಹುದು. ಆಲಸ್ಯದಿಂದ ಸಮಯವನ್ನು ಹಾಳುಮಾಡಿಕೊಳ್ಳುವಿರಿ. ಮಿತ್ರರಿಂದ ಧನದ ವಿಚಾರದಲ್ಲಿ ಮೋಸವಾಗಬಹುದು. ಧಾರ್ಮಿಕ ವಿಚಾರದಲ್ಲಿ ಆಸಕ್ತಿ ಬರಲಿದ್ದು ಹಿರಿಯರಿಂದ ಕೇಳಿಪಡೆಯುವಿರಿ. ವೃತ್ತಿಯಲ್ಲಿ ಒಂದಿಲ್ಲೊಂದು ಕಾರಣಕ್ಕೆ ಕಲಹವಾಗುವ ಕಾರಣ ಸ್ಥಾನವು ಬದಲಾಗಬಹುದು. ಹಲವು ವರ್ಷಗಳಿಂದ ಬಳಸದೇ ಇದ್ದ ಸ್ಥಿರಾಸ್ತಿಗೆ ಸರ್ಕಾರದಿಂದ ಪತ್ರಬರಬಹುದು. ಅನೇಕ ವಿಚಾರಕ್ಕೆ ತಲೆ ಹಾಕುವುದು ಅಸಾಧ್ಯ ಎನಿಸಬಹುದು.
ವೃಶ್ಚಿಕ ರಾಶಿ : ವೃತ್ತಿಯಲ್ಲಿ ಒಂದೇ ಕೆಲಸವನ್ನು ಇಬ್ಬರು ಮಾಡಲು ಹೋಗಿ ವೈಮನಸ್ಯ ಉಂಟಾಗುವುದು. ಹೊಂದಾಣಿಕೆಯಿಂದ ಇರುವುದು ಒಳ್ಳೆಯದು. ಉದ್ಯೋಗದಲ್ಲಿ ನಿರಂತರ ಯಾವುದಾದರೂ ಸಮಸ್ಯೆಯು ಬಾಧಿಸುತ್ತಿದ್ದು ದೈವಜ್ಞರಿಂದ ಸೂಕ್ತ ಪರಿಹಾರವನ್ನು ಕಂಡುಕೊಳ್ಳಬೇಕಾಗಬಹುದು. ಸಂಗಾತಿಯ ಮಾತುಗಳು ನಿಮ್ಮ ಅಭಿಮಾನಕ್ಕೆ ತೊಂದರೆ ಕೊಡಬಹುದು. ನೀವು ಅಪಮಾನವನ್ನೂ ನುಂಗಿಕೊಂಡು ಕಾರ್ಯದಲ್ಲಿ ಮಗ್ನರಾಗುವಿರಿ. ನಿಮ್ಮ ಉದ್ಯಮವನ್ನು ವಿಸ್ತಾರಗೊಳಿಸುವ ಆಲೋಚನೆಯು ಬೇರೆಯವರಿಂದ ಸಿಗಬಹುದು. ನಿಮ್ಮ ಶ್ರೇಯಸ್ಸಿನಲ್ಲಿ ಬಂಧುಗಳ ಪಾತ್ರವು ಇರುವುದು. ಮನೆಯಲ್ಲಿ ಹರ್ಷದ ವಾತಾವರಣ ಇರಲಿದೆ. ಸಾಮಾಜಿಕ ತಾಣದಲ್ಲಿ ಸಮಯವನ್ನು ಕಳೆಯುವಿರಿ.
ಧನು ರಾಶಿ : ಹಿರಿಯರ ಸಮ್ಮುಖದಲ್ಲಿ ನೂತನ ಗೃಹನಿರ್ಮಾಣವನ್ನು ಮಾಡುವಿರಿ. ಅಧಿಕಾರಿಗಳ ನಡವೆ ಕಲಹವಾಗಬಹುದು. ಉದ್ವೇಗದಿಂದ ಏನನ್ನಾದರೂ ಅನೀತಿ ಮಾರ್ಗದಲ್ಲಿ ಹೋಬೇಕಾದೀತು. ಸಂಗಾತಿಯ ಆಗಮನವನ್ನು ನಿರೀಕ್ಷಿಸುವಿರಿ. ಬಂಧುಗಳ ಆಸ್ತಿಯ ನಿಮಗೆ ಸಿಗಬಹುದು. ಆರಂಭಿಸಿದ ಕಾರ್ಯವು ಪೂರ್ಣ ಸಫಲವಾಗುವವರೆಗೂ ನೀವು ನಿಲ್ಲಿಸುವುದಿಲ್ಲ. ಒತ್ತಡಕ್ಕೆ ಮಣಿದು ಇಷ್ಟವಿಲ್ಲದ ಕೆಲಸವನ್ನು ಮಾಡಬೇಕಾಗುವುದು. ನೀವು ನಿಮ್ಮ ಪರಿಸ್ಥಿತಿಯನ್ನು ಇತರರಿಗೆ ತಿಳಿಸುವುದು ಕಷ್ಟವಾಗುವುದು. ಸಂತಾನದ ಖುಷಿಯು ಇರಲಿದೆ. ಸಹೋದರರ ಬಗ್ಗೆ ನಿಮ್ಮಲ್ಲಿ ನಕಾರಾತ್ಮಕ ಗುಣಗಳು ಕಾಣಿಸಿಕೊಳ್ಳಬಹುದು. ಪುಣ್ಯಸ್ಥಳಗಳಿಗೆ ಹೋಗುವ ಮನಸ್ಸು ಬರುವುದು. ಮನೆಯ ವಿಚಾರಕ್ಕೆ ಸಂಬಂಧಿಸಿದಂತೆ ದಂಡವನ್ನು ತುಂಬಬೇಕಾದೀತು.
ಮಕರ ರಾಶಿ : ಮನಸ್ತಾಪವನ್ನು ಹೇಗಾದರೂ ಮಾಡಿ ಹೊರಹಾಕಬೇಕು ಎಂದುಕೊಂಡಿರುವಿರಿ. ಅನ್ಯರ ಕುರಿತಾಗಿ ಸಂತಾಪವನ್ನು ವ್ಯಕ್ತಪಡಿಸುವುದು ವ್ಯರ್ಥವಾಗಬಹುದು. ಅಪರಿಚಿತರ ಬಂಧನದಿಂದ ನೀವು ಮುಕ್ತಾರಾಗಲು ಕಷ್ಟವಾಗಬಹುದು. ವಿದ್ಯಾಭ್ಯಾಸದಲ್ಲಿ ಸಾಮಾನ್ಯ ಪ್ರಗತಿಯನ್ನು ಕಾಣಬಹುದು. ತುರ್ತಾಗಿ ಹಣದ ಹೊಂದಾಣಿಕೆಯು ಕಷ್ಟವಾಗಬಹುದು. ವ್ಯಾವಹಾರಿಕ ವಿಭಾಗದಲ್ಲಿ ನಿಮಗೆ ಹಿನ್ನಡೆಯಾಗಲಿದೆ. ಮಕ್ಕಳ ಯಶಸ್ಸು ನೀವು ನಿರೀಕ್ಷಿಸಿದಂತೆ ಆಗುವುದು ಕಷ್ಟ. ಕೃಷಿಗೆ ಚಟುವಟಿಕೆಗಲ್ಲಿ ಆಸಕ್ತಿ ಹೆಚ್ಚಿರುವುದು. ನಿಮಗೆ ಸಂಬಂಧಿಸಿದ ಕಾರ್ಯವನ್ನು ಮಾತ್ರ ಮಾಡಿ. ಇನ್ನೊಬ್ಬರ ಕಾರ್ಯದ ಮಧ್ಯದಲ್ಲಿ ಪ್ರವೇಶ ಮಾಡುವುದು ಬೇಡ. ಮಕ್ಕಳ ಮೇಲೆ ಕೋಪಗೊಂಡು ಸಮಾಧಾನಪಡುವಿರಿ.
ಕುಂಭ ರಾಶಿ : ನಿಮ್ಮದಾದ ಕಾರ್ಯಗಳೇ ಬಹಳ ಇರುವಾಗ ಬೇರೆಯ ಕಡೆ ನಿಮ್ಮ ಗಮನ ಹೋಗದು. ಕೋಪವನ್ನು ಕಡಿಮೆ ಮಾಡಿಕೊಳ್ಳಲು ನಿಮ್ಮ ಸತತ ಪ್ರಯತ್ನವು ಫಲಿಸೀತು. ಉದ್ಯೋಗದಲ್ಲಿ ನಿರೀಕ್ಷಿತ ಪ್ರಗತಿಯನ್ನು ಕಾಣಲು ಸಾಧ್ಯ. ನಿಮ್ಮಿಂದ ಆಗದ ಕೆಲಸಕ್ಕೆ ಸಮಯವನ್ನು ಕೊಡುವುದು ಬೇಡ. ಸಹೋದರರ ಶೀತಲ ಸಮರವು ತಿಳಿಯಾಗಬಹುದು ವ್ಯಾಪಾರದ ನಿರ್ಲಕ್ಷ್ಯದಿಂದ ಅಲ್ಪ ನಷ್ಟವು ಸಂಭವಿಸಬಹುದು. ಇಂದು ಬಂಧುಗಳ ಮನೆಯಲ್ಲಿ ವಾಸಮಾಡಬೇಕಾಗಬಹುದು. ಉತ್ಸಾಹದ ಭರದಲ್ಲಿ ಏನ್ನಾದರೂ ಮಾಡಿಕೊಂಡೀರ. ದಾಂಪತ್ಯದಲ್ಲಿ ಪರಸ್ಪರ ಅನುರಾಗದ ಕೊರತೆ ಕಾಣಿಸಬಹುದು. ನಿಮ್ಮ ಕ್ಷಮಾಗುಣವು ಇಂದು ನಿಮ್ಮನ್ನು ದೊಡ್ಡವರನ್ನಾಗಿ ಮಾಡುವುದು. ಓದಿನ ವಿಚಾರವನ್ನು ಗಂಭೀರವಾಗಿ ಪರಿಗಣಿಸುವಿರಿ.
ಮೀನ ರಾಶಿ : ಆಹಾರ ಉದ್ಯಮದಲ್ಲಿ ಇರುವವರಿಗೆ ತೊಂದರೆ ಬರುವ ಸಾಧ್ಯತೆ ಇದೆ. ದೂರದ ಮಿತ್ರರ ಸಂಪರ್ಕದಿಂದ ಕೆಲವು ಸಮಸ್ಯೆಗಳು ಬಗೆಹರಿಯಬಹುದು. ಮಾಧ್ಯಮದಲ್ಲಿ ಕೆಲಸ ಮಾಡುವವರು ಸ್ವಲ್ಪ ಜಾಗರೂಕತೆಯಿಂದ ವ್ಯವಹರಿಸಿ. ತೆರೆದ ಮನಸ್ಸಿನಿಂದ ನೀವು ಯಾವ ಕಾರ್ಯವನ್ನೂ ಮಾಡುವುದೂ ಕಷ್ಟವಾದೀತು. ನಿಮ್ಮೊಳಗೆ ಹೇಳಿಕೊಳ್ಳಲಾಗದ ಭಯವು ಕಾಣಿಸುವುದು. ಅತಿಯಾದ ಸುಖದಿಂದ ನಿಮ್ಮ ಕ್ರಿಯಾಶೀಲತೆ ನಿಂತುಹೋಗುವುದು. ದುಷ್ಟಶಕ್ತಿಯ ಬಗ್ಗೆ ನಮಗೆ ಸಂದೇಹ ಬರಬಹುದು. ಉಪಕಾರಕ್ಕೆ ಕೃತಜ್ಞತೆಯಾದರೂ ಇರಲಿ. ವಾಹನ ಖರೀದಿಯಲ್ಲಿ ಗೊಂದಲ ಉಂಟಾಗಬಹುದು. ತಾಯಿಯ ಜೊತೆ ಜಗಳ ಮಾಡಿಕೊಂಡು ಬೇಸರಗೊಳ್ಳುವಿರಿ. ಮನೆಗೆ ಅತಿಥಿಗಳ ಆಗಮನವಾಗುವುದರಿಂದ ಉತ್ಸಾಹದಲ್ಲಿ ನೀವು ಇರುವಿರಿ.
-ಲೋಹಿತಶರ್ಮಾ 8762924271 (what’s app only)
Published On - 12:00 am, Wed, 1 November 23