ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ನವೆಂಬರ್ 06) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ತುಲಾ ಮಾಸ, ಮಹಾನಕ್ಷತ್ರ: ಸ್ವಾತೀ, ಮಾಸ: ಆಶ್ವಯುಜ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ನವಮೀ, ನಿತ್ಯನಕ್ಷತ್ರ: ಆಶ್ಲೇಷಾ, ಯೋಗ: ಪ್ರೀತಿ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 30 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 01 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 07:57 ರಿಂದ 09:23 ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 10:50 ರಿಂದ ಮಧ್ಯಾಹ್ನ 12:16 ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 01:43 ರಿಂದ 03:09ರ ವರೆಗೆ.
ಮೇಷ ರಾಶಿ: ವೃತ್ತಿಯಲ್ಲಿ ಪ್ರಂಶಸೆ ಸಿಕ್ಕಿರುವುದು ನಿಮ್ಮ ಕಾರ್ಯದ ವೈಖರಿಯನ್ನು ತೋರಿಸುವುದು. ಶುಭ ಸಮಾರಂಭಕ್ಕೆ ಹೋಗುವಿರಿ. ಯಾವುದೋ ಆಲೋಚನೆಯಲ್ಲಿ ನಿಮ್ಮ ಮನಸ್ಸು ಇರುವುದು. ಹೆಚ್ಚಿನ ಸೌಕರ್ಯದಿಂದ ನೀವು ಸೋಮಾರಿಯಾಗುವಿರಿ. ಕೇಳಿದವರಿಗೆ ನಿಮ್ಮ ಸಹಾಯವು ಸಿಗಲಿದೆ. ಕೇಳಿದ್ದಕ್ಕೆ ಮಾತ್ರ ನಿಮ್ಮ ಉತ್ತರವಿರಲಿ. ಕಳೆದ ಕೆಟ್ಟ ಕಾಲವನ್ನು ನೆನಪಿಸಿಕೊಳ್ಳುವಿರಿ. ಉದ್ಯೋಗದಲ್ಲಿ ನಿಮ್ಮ ಕೇಂದ್ರವಾಗಿ ಇರಿಸಿಕೊಂಡು ಮಾತನಾಡುವರು. ಸಹೋದ್ಯೋಗಿಗಳ ಮಾತಿನ ಬಗ್ಗೆ ಅಧಿಕವಾಗಿ ಪ್ರತಿಕ್ರಿಯೆ ಬೇಡ. ನೌಕರರ ಮೇಲೆ ನಿಮ್ಮದೊಂದು ಲಕ್ಷ್ಯ ಇರಬೇಕಾಗುವುದು. ಇಂದಿನ ಕೆಲವು ಸಂದರ್ಭದಲ್ಲಿ ಮೌನವಾಗಿ ಇರುವಿರಿ. ವ್ಯಾಪಾರವು ವಿದೇಶೀಯ ಸಂಪರ್ಕದಿಂದ ಹೆಚ್ಚು ಲಾಭದಾಯಕವಾದೀತು.
ವೃಷಭ ರಾಶಿ: ಸಾಲಗಾರರಿಂದ ನಿಮ್ಮ ಮಾನಸಿಕ ಸ್ಥಿತಿಯು ಕೆಡಬಹುದು. ಯಾರದೋ ತಪ್ಪಿಗೆ ನೀವು ತಲೆಕೊಡಬೇಕಾದೀತು. ವಿವಾಹಕ್ಕೆ ಸಂಬಂಧಿಸಿದ ದೋಷಗಳನ್ನು ದೈವಜ್ಞರ ಬಳಿ ಕೇಳಿ ಸರಿಪಡಿಸಿಕೊಳ್ಳಿ. ಊಹಾಪೋಹಗಳಿಗೆ ಕಿವಿಗೊಡದೇ ನಿಮ್ಮ ಕಾರ್ಯದಲ್ಲಿ ಮುಂದುವರಿಯಿರಿ. ನೀವು ಇಂದು ಮಕ್ಕಳ ಜೊತೆ ಹೆಚ್ಚಿನ ಸಮಯವನ್ನು ಕಳೆಯುವಿರಿ. ಸಿಗಬೇಕಾದ ಲಾಭದಿಂದ ವಂಚಿತರಾಗಲಿದ್ದೀರಿ. ಅನಪೇಕ್ಷಿತ ವಿಚಾರದಲ್ಲಿ ಹೆಚ್ಚು ಮನಸ್ಸು ಇರುವುದು. ಉಸಿರಾಟ ತೊಂದರೆಯು ಸ್ವಲ್ಪ ಕಾಣಿಸಿಕೊಳ್ಳಬಹುದು. ನೆರೆಹೊರೆಯ ವಿಚಾರದಲ್ಲಿ ಅಸಮಾಧಾನ ಇರಲಿದೆ. ಸಾಮಾಜಿಕ ಕಾರ್ಯಕ್ಕೆ ಇಂದು ಸಮಯವು ಸಿಗದು. ವೈದ್ಯ ವೃತ್ತಿಯವರಿಗೆ ಅಪವಾದವು ಬರಬಹುದು.
ಮಿಥುನ ರಾಶಿ: ಉಸಿರಾಟದ ತೊಂದರೆಯು ಕಾಣಿಸಿಕೊಳ್ಳುವುದು. ಪ್ರಾಣಾಯಾಮವು ನಿಮಗೆ ಹಿತಕಾರಿಯಾದೀತು. ಹಣವು ವ್ಯಯವಾಗಬಹುದು. ಕಳ್ಳರ ಭೀತಿಯು ಇರಲಿದೆ. ಒತ್ತಡದಿಂದ ನಿಮ್ಮ ಕಾರ್ಯವು ಮಂದಗತಿಯಲ್ಲಿ ಸಾಗುವುದು. ಯಂತ್ರಜ್ಞರು ಇಂದು ಬಹಳ ಒತ್ತಡದಿಂದ ಇರುವರು. ಸ್ವಲ್ಪ ಮಾನಸಿಕ ಆಲಸ್ಯವು ಇರುವುದು. ಗೊಂದಲವನ್ನು ಇನ್ನೊಬ್ಬರ ಬಳಿ ಹೇಳಿ. ಪರಿಹಾರವನ್ನು ಕಂಡುಕೊಳ್ಳಬಹುದು. ನಿಮ್ಮ ಜಾಣ್ಮೆಯಿಂದ ನಿಮ್ಮ ಸಂಸ್ಥೆಯು ಹೆಚ್ಚಿನ ಯಶಸ್ಸನ್ನು ಗಳಿಸಬಹುದು. ನಿಮ್ಮ ಆಲೋಚನೆಗಳೇ ನಿಮ್ಮನ್ನು ನಿರೂಪಿಸುತ್ತವೆ. ಇಂದು ಸಂಗಾತಿಯ ನಡುವೆ ಭಿನ್ನಾಭಿಪ್ರಾಯಗಳು ಕಲಹವಾಗಿ ಪರಿಣಮಿಸೀತು. ಒಬ್ಬರಾದರೂ ತಟಸ್ಥರಾಗಿರುವುದು ವಿವಾದವು ಆಗದಂತೆ ನೋಡಿಕಳ್ಳಬಹುದು. ಮಹಾವಿಷ್ಣುವಿನ ಆರಾಧನೆಯು ಸಂಕಷ್ಟವನ್ನು ಸಹಿಸುವ ಶಕ್ತಿಯನ್ನು ಕೊಡುವುದು.
ಕಟಕ ರಾಶಿ: ಉದ್ಯೋಗದ ಸ್ಥಳದಲ್ಲಿ ನಿಮಗೆ ಮುಜುಗರದ ಸಂದರ್ಭವು ಬರಬಹುದು. ಶುಭ ಕಾರ್ಯದಲ್ಲಿ ನೀವು ಭಾಗವಹಿಸುವಿರಿ. ಕಳೆದುಕೊಂಡ ಸಂಪತ್ತು ಮತ್ತಾವುದೋ ರೀತಿಯಲ್ಲಿ ಬರಬಹುದು. ವ್ಯಸಣ್ಣ ಮಕ್ಕಳಿಂದ ನೆಮ್ಮದಿಯು ಸಿಗಲಿದೆ. ನಿಮ್ಮ ಯಶಸ್ಸನ್ನು ಮನೆಯವರು ಸಂಭ್ರಮಿಸಬಹುದು. ರಾಜಕಾರಣದತ್ತ ನಿಮ್ಮ ಒಲವು ಹೆಚ್ಚಾಗುವುದು. ಪ್ರಭಾವಿ ವ್ಯಕ್ತಿಗಳು ನಿಮ್ಮನ್ನು ಪರಿವರ್ತಿಸುವರು. ಆದಾಯದ ಮೂಲವು ಸರಿಯಾಗಿ ಇರಲಿದೆ. ನಿಮ್ಮ ಸಹೋದರನ ಆರೋಗ್ಯದಲ್ಲಿ ವ್ಯತ್ಯಾಸವು ಕಾಣಿಸಬಹುದು. ಹೂಡಯಲ್ಲಿ ನಿಮಗೆ ಆಸಕ್ತಿಯು ಇಂದು ಕಡಿಮೆ ಇರಲಿದೆ. ದೇವರ ಕಾರ್ಯದಲ್ಲಿ ಪಾಲ್ಗೊಳ್ಳುವಿರಿ. ಮಹಾಗೌರಿಯು ನಿಮ್ಮ ಇಷ್ಟಾರ್ಥವನ್ನು ಪೂರ್ಣಗೊಳಿಸುವಳು.
ಸಿಂಹ ರಾಶಿ: ಬಹಳ ದಿನಗಳ ಅನಂತರ ಕುಟುಂಬದವರನ್ನು ಭೇಟಿಯಾಗುತ್ತಿರುವುದು ನಿಮ್ಮ ಮುಖದಲ್ಲಿ ಹರುಷ ಕಾಣುವುದು. ವಿದ್ಯಾರ್ಥಿಗಳು ಅಹಂಕಾರದ ವರ್ತನೆಯನ್ನು ತೋರಿಸಬಹುದು. ತಿಳಿವಳಿಕೆಯನ್ನು ಹೇಳಬೇಕಾದೀತು. ಎಲ್ಲವನ್ನೂ ನಂಬಿಕೆಯ ಆಧಾರದ ಮೇಲೆ ಸ್ವೀಕರಿಸಬೇಕಿಲ್ಲ. ಸರ್ಕಾರಿ ಉದ್ಯೋಗಿಗಳಿಗೆ ನಿಮ್ಮ ಚಾತುರ್ಯದ ಕಾರಣದಿಂದ ಹೆಚ್ಚಿನ ಅಧಿಕಾರವು ಪ್ರಾಪ್ತವಾಗುವುದು. ಧೈರ್ಯದಿಂದ ಮುನ್ನಡೆದರೆ ಯಾವ ತೊಂದರೆಯೂ ತೊಂದರೆಯಾಗಿ ಉಳಿಯದು. ಪ್ರಯಾಣದಲ್ಲಿ ಯಾವುದೇ ತೊಂದರೆಯು ಬಾರದಂತೆ ದೈವವನ್ನು ಪ್ರಾರ್ಥಿಸಿ. ದಾಂಪತ್ಯದಲ್ಲಿ ಉಂಟಾದ ಕಲಹವನ್ನು ನೀವೇ ಸರಿ ಮಾಡಿಕೊಳ್ಳಿ. ನಿಮ್ಮನ್ನೇ ನೀವು ವಂಚಿಸಿಕೊಳ್ಳುವಿರಿ. ಕಲಾವಿದರಿಗೆ ಸಿಕ್ಕ ಅವಕಾಶಗಳು ತಪ್ಪಿಹೋಗಬಹುದು. ಆಸ್ತಿಯ ವಿಚಾರದಲ್ಲಿ ದುಡುಕುವುದು ಬೇಡ, ಎಲ್ಲವೂ ಶಾಂತವಾಗುವ ತನಕ ಕಾಯಬೇಕಾಗುವುದು.
ಕನ್ಯಾ ರಾಶಿ: ಅಕಾರಣವಾಗಿ ನಿಮ್ಮ ಮೇಲೆ ಆರೋಪಗಳು ಬರುವುದು. ಸಹನೆಯಿಂದ ಅದನ್ನು ಎದುರಿಸಬೇಕಾಗುವುದು. ದುಡುಕಿ ಏನನ್ನಾದರೂ ಮಾಡಿಕೊಳ್ಳುವುದು ಬೇಡ. ನ್ಯಾಯಾಲಯದ ವಿಚಾರದಲ್ಲಿ ನಿಮಗೆ ಹಿನ್ನಡೆಯ ಸಾಧ್ಯತೆ ಇದೆ. ನಿಮಗೆ ಬರಬೇಕಾದ ಹಣದ ವಿಚಾರದಲ್ಲಿಯೂ ನಿಮಗೆ ಸೋಲಾಗುವುದು. ಮನೆಯಲ್ಲಿಯೂ ನಿಮ್ಮ ಮಾತಿಗೆ ಸರಿಯಾದ ಬೆಲೆಯೂ ಸಿಗದು. ಕಛೇರಿಯಲ್ಲಿ ಇಂದು ನಿಮ್ಮಿಂದ ತಪ್ಪಾಗಿದ್ದು ಅದನ್ನು ನೀವು ಒಪ್ಪಿಕೊಳ್ಳಲಾರಿರಿ. ದುರ್ವ್ಯಸನದಿಂದ ಸಂಪತ್ತನ್ನು ನಷ್ಟ ಮಾಡಿಕೊಳ್ಳುವಿರಿ. ನಿಮ್ಮ ತಪ್ಪಿಗೆ ಪಶ್ಚಾತ್ತಾಪವಾದರೂ ಕೊನೆಯ ಹಂತವಾಗಿ ಇರಲಿ. ಕುಟಂಬದವರು ಸೇರಿಸಿಕೊಂಡು ಧಾರ್ಮಿಕ ಕಾರ್ಯಗಳನ್ನು ಮಾಡುವಿರು. ಏಕಾಂಗಿಯಾಗಿ ಇರುವುದು ಹಿತವೆನಿಸಬಹುದು.
ತುಲಾ ರಾಶಿ: ಸತ್ಪಾತ್ರರಿಗೆ ದಾನವನ್ನು ಕೊಟ್ಟಿದ್ದು ನಿಮಗೆ ಖುಷಿಯಾಗಲಿದೆ. ವ್ಯಾಪಾರದಲ್ಲಿ ಹಿತಶತ್ರುಗಳ ಕಾಟದಿಂದ ನಿಮಗೆ ತೊಂದರೆಗಳು ಆಡಬಹುದು. ಇದರಿಂದ ನಿಮ್ಮ ನೆಮ್ಮದಿಯೂ ದೂರವಾದೀತು. ವಿದ್ಯಾಭ್ಯಾಸದಲ್ಲಿ ಯಶಸ್ಸನ್ನು ಸಾಧಿಸಲು ಅನೇಕ ಮಾರ್ಗಗಳು ಇರಲಿದೆ. ನಿಮ್ಮನ್ನು ಬಳಸಿಕೊಳ್ಳಬಹುದು, ಯಾರನ್ನೂ ಅತಿಯಾಗಿ ನಂಬಿ ನೀವು ಮೋಸಹೋಗಬಹುದು. ವಿವಾಹಕ್ಕೆ ಸಂಬಂಧಿಸಿದಂತೆ ತುರ್ತಾಗಿ ತೀರ್ಮಾನವನ್ನು ತೆಗೆದುಕೊಳ್ಳುವುದು ಸೂಕ್ತ. ನಿಮ್ಮವರ ತಪ್ಪುಗಳನ್ನು ತಿದ್ದಿಕೊಳ್ಳಲು ಸಮಯವನ್ನು ಕೊಡಿ. ಭೂಮಿಯ ವ್ಯವಹಾರದಿಂದ ಅಲ್ಪ ಅಭಿವೃದ್ಧಿಯು ಆಗಲಿದೆ. ಆರ್ಥಿಕ ಒತ್ತಡದಿಂದ ಮನೆಯ ನೆಮ್ಮದಿಯು ಕದಡಬಹುದು. ತಜ್ಞರ ಜೊತೆ ಇಂದಿನ ಸಮಯವನ್ನು ಕಳೆಯುವಿರಿ. ತ್ರಿಪುರಸುಂದರಿಯನ್ನು ಆರಾಧಿಸಿರಿ.
ವೃಶ್ಚಿಕ ರಾಶಿ: ನ್ಯಾಯಾಲಯದ ವಿಚಾರವನ್ನು ಯಾರ ಬಳಿಯೂ ಹೇಳಲು ಇಚ್ಛಿಸುವುದಿಲ್ಲ. ಕುಟುಂಬದಲ್ಲಿ ಎಲ್ಲರೂ ಸುಖದಿಂದ ಜೀವಿಸುವ ಕಾರಣ ನಿಮ್ಮಲ್ಲಿಯೂ ನೆಮ್ಮದಿಯು ಕಾಣಿಸುವುದು. ದಾಂಪತ್ಯದಲ್ಲಿ ಪರಸ್ಪರ ನೋವು ಹಂಚಿಕೊಂಡು ಸಮಾಧಾನವಾಗುವಿರಿ. ನಿಮ್ಮ ನಡವಳಿಕೆಗೆ ಬಂಧುಗಳಿಂದ ಪ್ರಶಂಸೆಯು ಸಿಗಲಿದೆ. ಅಂದುಕೊಂಡಂತೆ ಕಾರ್ಯವು ಸಾಗದು ಎಂಬ ಕೊರಗು ಇರುವುದು. ನಿಮ್ಮ ಬಲದ ಮೇಲೇ ಕೆಲಸವನ್ನು ಪ್ರಾರಂಭಿಸಿ. ಇನ್ನೊಬ್ಬರ ಗೊತ್ತಿಲ್ಲದ ವಿಚಾರವನ್ನು ಹೇಳುವುದು ಬೇಡ. ಅನೇಕ ದಿನಗಳಿಂದ ಉದ್ಯೋಗ ನಿರ್ವಹಣೆಯಲ್ಲಿ ಬೇಸರ ಉಂಟಾಗಿದ್ದು ಹೊರಗೆ ಸುತ್ತಾಡುವ, ವಿರಾಮವನ್ನು ಪಡೆಯುವ ಮನಸ್ಸು ಇರಲಿದೆ. ನಿಮ್ಮ ಮಾತಿಗೆ ಬೆಲೆ ಇಲ್ಲವಾದೀತು. ದೇವಸೇನಾಪತಿಯಾದ ಸುಬ್ರಹ್ಮಣ್ಯನು ನಿಮಗೆ ಮಾನಸಿಕ ಹಾಗೂ ದೈಹಿಕ ಬಲವನ್ನು ಕೊಡುವನು.
ಧನು ರಾಶಿ: ಎಂದೋ ಮಾಡಿದ ಕೆಲಸವು ಇಂದು ನಿಮ್ಮ ಕಾಲಿಗೆ ಸುತ್ತಿಕೊಳ್ಳುವುದು. ಇನ್ನೊಬ್ಬರ ಅನುಭವವು ನಿಮಗೆ ಪಾಠವಾಗಬಹುದು. ಭೂಮಿಯ ಲಾಭದ ವಿಚಾರದಲ್ಲಿ ಸರಿಯಾದ ಮಾತುಕತೆಗಳು ಆಗಲಿ. ಆರೋಪ ಪ್ರತ್ಯಾರೋಪಗಳಿಂದ ಪರಸ್ಪರ ಕಲಹವೂ ಆಗುವುದು. ದುಸ್ಸಾಧ್ಯ ಎನಿಸಿದ ಕಾರ್ಯವನ್ನು ಮಾಡಲು ಪ್ರಯತ್ನಿಸುವುದು ಬೇಡ. ಸ್ಥಿರಾಸ್ತಿಯನ್ನು ಮಾರಾಟ ಮಾಡುವ ಪ್ರಯತ್ನದಲ್ಲಿ ಇರುವಿರಿ. ಇಂದಿನ ಮನೆಯ ಕೆಲಸದಿಂದ ನಿಮಗೆ ಶ್ರಮವಾಗುವುದು. ಹಳೆಯ ಆಸೆಯನ್ನು ನೀವು ತೀರಿಸಿಕೊಳ್ಳುವ ಅವಕಾಶವಿರಲಿದೆ. ಇಂದು ನಿಮ್ಮ ಅನಗತ್ಯ ಮಾತುಗಳು ಕಲಹಕ್ಕೆ ಕಾರಣವಾಗಬಹುದು. ನಿಮ್ಮ ನಂಬಿಕೆಗೆ ಘಾಸಿಯಾಗಬಹುದು. ಇನ್ನೊಬ್ಬರ ವಸ್ತುಗಳನ್ನು ನೀವು ಹಾಳು ಮಾಡುವಿರಿ. ಕಳ್ಳತನದ ಅಪವಾದವು ಬರಬಹುದು. ಮಹಾಲಕ್ಷ್ಮಿಯ ಉಪಾಸನೆಯನ್ನು ಮಾಡಿ.
ಮಕರ ರಾಶಿ: ಇಂದು ನಿಮಗೆ ಮಹಿಳೆಯರಿಂದು ಅವಮಾನವು ಆಗಬಹುದು. ಆಪ್ತರಿಗಾಗಿ ಕೊಟ್ಟ ಸಮಯವೂ ವ್ಯರ್ಥವಾದೀತು. ಸ್ಥಿರಾಸ್ತಿಗಾಗಿ ಹೆಚ್ಚು ಓಡಾಡುವಿರಿ. ವಿದೇಶ ಪ್ರಯಾಣವು ನಿಮಗೆ ಇಷ್ಟವಿಲ್ಲದಿದ್ದರೂ ಮಾಡುವುದು ಅನಿವಾರ್ಯವಾದೀತು. ಉದ್ಯಮವು ಬೆಳೆಯುತ್ತಿರುವುದು ಸಂತೋಷ ಕೊಡುವುದು. ಚಾಲಕರಿಗೆ ಕರ್ತವ್ಯಕ್ಕೆ ಪ್ರಶಂಸೆ ಸಿಗುವುದು. ಅಪರಿಚಿತರಿಗೆ ನೀವು ಹಣವನ್ನು ಕೊಡುವಿರಿ. ಅರಿವಿಲ್ಲದೆ ಇಂದಿನ ತುರ್ತು ಕಾರ್ಯವನ್ನು ಮರೆಯುವಿರಿ. ಅಸಹಜ ವರ್ತನೆಯಿಂದ ಸಂಗಾತಿಗೆ ಅನುಮಾನ ಬರುವುದು. ಮನೆಯ ಹಿರಿಯರನ್ನು ಅನಾದರದಿಂದ ನೋಡುವುದು ಯೋಗ್ಯವಾಗದು. ಅಧಿಕಾರದಿಂದ ಅಹಂಕಾರವು ಹೆಚ್ಚಾದೀತು. ನಿಮ್ಮ ಕಛೇರಿಯಲ್ಲಿ ಉಂಟಾದ ಅಸಮಾಧಾನವನ್ನು ಆಪ್ತರ ಜೊತೆ ಹಂಚಿಕೊಳ್ಳಿ. ಮೇಲಧಿಕಾರಿಗಳು ನಿಮ್ಮನ್ನು ಹಿಂಸಿಸಬಹುದು. ರಘುನಾಥನ ಸ್ತುತಿಯನ್ನು ಮಾಡಿ.
ಕುಂಭ ರಾಶಿ: ಬೇರೆಯವರ ಮನಸ್ತಾಪವನ್ನು ಸರಿ ಮಾಡಲು ನಿಮಗೆ ಉತ್ಸಾಹವು ಇರಲಿದೆ. ಬಾಡಿಗೆ ಮನೆಯಲ್ಲಿ ಇರುವವರು ಬದಲಾವಣೆ ಮಾಡಬೇಕಾದ ಸ್ಥಿತಿಯು ಬರಬಹುದು. ಸರ್ಕಾರದ ನಿಮ್ಮ ಕೆಲಸವು ಬೇಗನೆ ಮುಗಿದುಹೋಗುವುದು. ಮಿತ್ರರ ಕಾರಣದಿಂದ ವೃಥಾ ಕಾಲಹರಣವಾಗಲಿದ್ದು ಕಛೇರಿಯ ಕೆಲಸದ ಬಗ್ಗೆಯೇ ಚಿಂತೆ ಇರುವುದು. ಮಾರಾಟದ ವಿಚಾರವಾಗಿ ನೀವು ಬೇರೆ ಊರಿಗೆ ಹೋಗಬೇಕಾಗಬಹುದು. ಅವಿವಾಹಿತರಾಗಿರುವವರಿಗೆ ಕೊರಗು ಕಾಣಿಸವಹುದು. ನಿಮ್ಮ ಸ್ವಭಾವಕ್ಕೆ ಹೊಂದಿಕೊಳ್ಳುವ ಸಂಗಾತಿಯು ಸಿಗುವುದು ಕಷ್ಟವಾದೀತು. ಇಂದು ಮಾಡುವ ಪ್ರಯಾಣದಲ್ಲಿ ಅಪರಿಚಿತರ ಗೆಳೆತನವಾಗಬಹುದು. ನಿಮ್ಮ ಎಲ್ಲ ವಿವರಗಳನ್ನು ಇನ್ನೊಬ್ಬರ ಜೊತೆ ಹೇಳಿಕೊಳ್ಳುವುದು ಬೇಡ. ಶರೀರಕ್ಕೆ ಅಕಸ್ಮಾತ್ ಆಗಿ ಘಾಸಿಗಳಾಗಬಹುದು.
ಮೀನ ರಾಶಿ: ವಿದ್ಯಾರ್ಥಿಗಳ ಅಭ್ಯಾಸವನ್ನು ನೀವು ಗಮನಿಸಬೇಕಾಗುವುದು. ಸಹವಾಸದಿಂದ ದಾರಿಯು ಬದಲಾಗುವುದು ಸಾಧ್ಯತೆ ಇದೆ. ಆಪ್ತರ ಜೊತೆಗಿನ ಮಾತುಕತೆಯು ನಿಮಗೆ ಆಹ್ಲಾದವನ್ನು ಉಂಟುಮಾಡುವುದು. ಭೂಮಿಯ ಮೇಲೆ ಸಾಲವನ್ನು ಮಾಡಬೇಕಾದೀತು. ಹಳೆಯ ಕೆಲಸದಲ್ಲಿ ಮಂದಗತಿ ಇರಲಿದೆ. ಇತರರಿಂದ ಗೌರವ ಪ್ರಾಪ್ತವಾಗಬಹುದು. ವ್ಯಾಪಾರದಲ್ಲಿ ಅಲ್ಪ ಲಾಭವೇ ಆದರೂ ನೆಮ್ಮದಿ ಇರಲಿದೆ. ಯಾರಿಗೋ ಸಹಾಯ ಮಾಡಲು ಹೋಗಿ ಆಪತ್ತಿನಲ್ಲಿ ಸಿಕ್ಕಿಕೊಳ್ಳಬಹುದು. ಸ್ನೇಹಿತರ ಜೊತೆ ನೋವನ್ನು ಹಂಚಿಕೊಂಡು ಸಮಾಧಾನ ತಂದುಕಳ್ಳುವಿರಿ. ತಂದೆಯ ಜೊತೆ ಅಪರೂಪದ ಸಮಾರಂಭಕ್ಕೆ ಹೋಗುವಿರಿ. ಖರೀದಿಯಲ್ಲಿ ನೀವು ಸ್ಥೂಲವಾಗಿ ಖರ್ಚನ್ನು ಅಂದಾಜಿಸಿಕೊಳ್ಳಿ. ಮಕ್ಕಳು ನಿಮ್ಮ ಬಳಿ ಹೊಸತನ್ನು ತಿಳಿದುಕೊಳ್ಳಲು ಬಯಸುವರು. ಆರ್ಥಿಕ ಸಂಕಷ್ಟವು ನಿಮ್ಮ ಮಾನಸಿಕ ಸ್ಥಿತಿಯನ್ನು ಹಾಳುಮಾಡುವುದು. ಕುಲದೇವರ ಆರಾಧನೆಯನ್ನು ಮಾಡುವುದು ಒಳ್ಳೆಯದು.
ಲೋಹಿತಶರ್ಮಾ 8762924271 (what’s app only)