Horoscope 10 August: ಸಾಲಗಾರ ಕಾಟ ತಪ್ಪುವುದು, ವಿವಾಹ ಯೋಗವು ಕೂಡಿ ಬರಲಿದೆ

| Updated By: ಗಂಗಾಧರ​ ಬ. ಸಾಬೋಜಿ

Updated on: Aug 10, 2023 | 12:02 AM

ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹಾಗಾದರೆ ಇಂದಿನ (2023 ಆಗಸ್ಟ್ 10) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

Horoscope 10 August: ಸಾಲಗಾರ ಕಾಟ ತಪ್ಪುವುದು, ವಿವಾಹ ಯೋಗವು ಕೂಡಿ ಬರಲಿದೆ
ಪ್ರಾತಿನಿಧಿಕ ಚಿತ್ರ
Follow us on

ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವುದು ಕೆಲವರಿಗೆ ಅಭ್ಯಾಸ. ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2023 ಆಗಸ್ಟ್ 10) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ : ಆಶ್ಲೇಷಾ, ಮಾಸ : ಅಧಿಕ ಶ್ರಾವಣ, ಪಕ್ಷ : ಕೃಷ್ಣ, ವಾರ : ಗುರು, ತಿಥಿ : ದಶಮೀ, ನಿತ್ಯನಕ್ಷತ್ರ : ರೋಹಿಣೀ, ಯೋಗ : ವ್ಯರಿಪಾತ್​, ಕರಣ : ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 18 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 56 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02:12 ರಿಂದ 03:47ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06: 19 ರಿಂದ 07:53 ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:28 ರಿಂದ 11:03ರ ವರೆಗೆ.

ಮೇಷ ರಾಶಿ: ಸಾಮಾಜಿಕವಾಗಿ ಮನ್ನಣೆ ಸಿಕ್ಕರೂ ಅದನ್ನು ನೀವು ನಿರಾಕರಿಸುವಿರಿ. ಹೆಚ್ಚಿನ ಸಮಯವನ್ನು ಅಧ್ಯಯನದಲ್ಲಿ ಕಳೆಯುವಿರಿ. ನಿಮ್ಮ ಸಂಪತ್ತಿಗೆ ಇತರರ ದೃಷ್ಟಿಯು ಬೀಳಬಹುದು.‌ ಬರಬೇಕಾದ ಹಣವು ವಿಳಂಬವಾಗಬಹುದು.‌ ನೀವು ಇಂದು ಎಲ್ಲ ಜವಾಬ್ದಾರಿಗಳಿಂದ ಹೊರಬರುವಿರಿ. ಯಾರಿಂದಲೂ ನೀವು ಸಹಾಯವನ್ನು ಪಡೆಯಲು ಇಚ್ಛಿಸುವುದಿಲ್ಲ. ವ್ಯಾಪರವು ನಿಮಗೆ ಲಾಭದಾಯಕವಾದುದು. ಅತಿಯಾದ ನಿರೀಕ್ಷೆಯಲ್ಲಿ ನೀವು ಉಳಿದ ವಿಚಾರಗಳಲ್ಲಿ ಮೈ ಮರೆಯುವಿರಿ. ಹೆಚ್ಚಿದ ಕುಟುಂಬದ ಜವಾಬ್ದಾರಿಗಳಿಂದ ನಿಮ್ಮ ಆಸಕ್ತಿಯ ಕ್ಷೇತ್ರಗಳಲ್ಲಿ ಗಮನ ಕಡಿಮೆ ಆಗುವುದು. ಗಣಪತಿಗೆ ದೂರ್ವಾಪತ್ರೆಯನ್ನು ಸಮರ್ಪಿಸಿ. ಕಾರ್ಯಗಳಲ್ಲಿ ಯಶಸ್ಸನ್ನು ಪಡೆಯಿರಿ.

ವೃಷಭ ರಾಶಿ: ಧಾರ್ಮಿಕ ಆಚರಣೆಯಲ್ಲಿ ಆಸಕ್ತಿಯು ಹೆಚ್ಚು ಇರಲಿದೆ. ಕೆಲಸಕ್ಕೆ ಸಂಬಂಧಿಸಿದಂತೆ ಗೊಂದಲವು ಇರಬಹುದು. ಹೆಚ್ಚು ಒತ್ತಡುವು ನಿಮ್ಮ ಆರೋಗ್ಯವನ್ನು ಕೆಡಿಸಬಹುದು. ನಿಮ್ಮ ಕಾರ್ಮಿಕರ ಜೊತೆ ವಾಗ್ವಾದವನ್ನು ಮಾಡುವಿರಿ. ನಿಮ್ಮ ಸಂತೋಷವನ್ನು ಕಂಡು ಕರುಬುವವರಿಗೆ ನೀವು ಯಾವ ಪ್ರತಿಕ್ರಿಯೆಯನ್ನು ನೀಡಬೇಕಾಗಿಲ್ಲ. ಅನಗತ್ಯ ವಿಚಾರಗಳ ನಡುವೆ ಪ್ರವೇಶವನ್ನು ಪಡೆಯುವುದು ಬೇಡ. ಹೊಸ ಉದ್ಯಮವನ್ನು ಅರಸುವವರು ಹೆಚ್ಚು ಅನ್ವೇಷಣೆಯನ್ನು ಮಾಡಬೇಕಾದೀತು. ಸಿಕ್ಕರೂ ನಿಮಗೆ ಅನುಕೂಲಕರವಾಗಿರದು. ಗುರುಗುಹನನ್ನು ಆರಾಧಿಸಿ.

ಮಿಥುನ ರಾಶಿ: ಕಛೇರಿಯಲ್ಲಿ ಒತ್ತಡವು ಇದ್ದರೂ ಅದೆನ್ನೆಲ್ಲ ಮರೆತು ಆರಾಮಾಗಿ ಇರುವಿರಿ. ನಿಮ್ಮ ಮಾತು ಎಲ್ಲರಿಗೂ ಇಷ್ಟವಾದೀತು. ಸಮಯವನ್ನು ಕಳೆಯಲು ಸ್ನೇಹಿತರ ಜೊತೆ ವಿಹಾರಕ್ಕೆ ಹೋಗಬಹುದು. ಸಹೋದರರು ನಿಮ್ಮ ಸಹಾಯವನ್ನು ಕೇಳುವರು. ಇನ್ನೊಬ್ಬರನ್ನು ನಿಂದಿಸುವುದು ನಿಮಗೆ ಶೋಭೆ ತರದು. ಮನೆಯ ನಿರ್ಮಾಣಕ್ಕೆ ಕುಟುಂಬದ ಜೊತೆ ಚರ್ಚಿಸುವಿರಿ. ಯಾರ ಮಾತನ್ನೋ ಅನುಸರಿಸಿ ನೀವು ಕಾರ್ಯ ಪ್ರವೃತ್ತರಾಗುವುದು ಬೇಡ. ಇಂದು ನಿಮ್ಮ ಮೇಲೆ ಬರುವ ಯಾವ ಅಪವಾದವನ್ನೂ ಮನಸ್ಸಿಗೆ ತೆಗೆದುಕೊಳ್ಳದೇ ನೆಮ್ಮದಿಯಿಂದ ಇರುವಿರಿ. ಇಂದು ಹೆಚ್ಚು ಆಲಸ್ಯದ ಮನೋಭಾವವು ಇರುವುದು.

ಕರ್ಕ ರಾಶಿ: ದಾಂಪತ್ಯದಲ್ಲಿ ಸಾಮರಸ್ಯದ ಕೊರತೆಯು ಎದ್ದು ತೋರುವುದು.‌ ಸಂಪಾದನೆಗಾಗಿ ಇಬ್ಬರೂ ಪ್ರಯತ್ನಿಸಬೇಕಾಗಬಹುದು. ಯಾರದೋ ಮೇಲಿನ ಬೇಸರವನ್ನು ಮತ್ಯಾರದೋ ಮೇಲೆ ಸಿಟ್ಟಾಗಿ ವ್ಯಕ್ತೊಡಿಸುವಿರಿ. ದ್ವೇಷವನ್ನು ನೀವು ಬೆಳೆಸಿಕೊಳ್ಳುವುದು ನಿಮ್ಮ ಮಾನಸಿಕ ಸ್ಥಿತಿಯನ್ನು ಕೆಡಿಸಬಹುದು. ಸಾಲದ ವಿಚಾರವು ಮನೆಯಲ್ಲಿ ಕಲಹವಾಗುವಂತೆ ಮಾಡಬಹುದು. ಹಳೆಯ ಘಟನೆಗಳು ನಿಮಗೆ ಸಂತೋಷವನ್ನು ಕೊಡುವುದು. ಧಾರ್ಮಿಕ ಕಾರ್ಯಗಳಲ್ಲಿ ಇಂದು ನೀವು ತೊಡಗಿಕೊಳ್ಳುವಿರಿ. ಮಾನಸಿಕ ಒತ್ತಡದಿಂದ ನೀವು ಬೇಗ ವಿಶ್ರಾಂತಿಗೆ ತೆರಳಬಹುದು. ಕುಲದೇವರ ಸ್ಮರಣೆಯನ್ನು ಮಾಡಿ.

ಸಿಂಹ ರಾಶಿ: ಉದ್ಯೋಗದಲ್ಲಿ ಹೆಚ್ಚಿದ ಜವಾಬ್ದಾರಿಯಿಂದ ನೀವು ಕುಟುಂಬಕ್ಕೆ ಸಮಯವನ್ನು ಕೊಡುವುದು ಕಷ್ಟವಾದೀತು. ಕೆಲವು ವಿಚಾರಗಳು ನಿಮಗೆ ಅನಗತ್ಯ ತಲೆಬಿಸಿಯನ್ನು ತರಬಹುದು. ಸ್ವಾವಲಂಬಿಯಾಗಿ ಇರಲು ಪ್ರಯತ್ನಿಸುವಿರಿ. ಅಂದುಕೊಂಡ ಸಮಯಕ್ಕೆ ನಿಮ್ಮ ಕೆಲಸಗಳು ಮುಕ್ತಾಯ ಆಗದೇ ಹೋಗಬಹುದು. ಬಂಧುಗಳಿಗೆ ನಿಮ್ಮ ಕಡೆಯಿಂದ ಸಹಾಯವು ಸಿಗಲಿದೆ. ಅಧಿಕಾರವನ್ನು ನೀವು ಸ್ವಂತ ಕೆಲಸಗಳಿಗೆ ಬಳಸಿಕೊಳ್ಳುವಿರಿ. ಹಣ ಸಂಪಾದನೆಯು ನಿಮಗೆ ಅನಿವಾರ್ಯ ಆಗಬಹುದು. ಸಂಶೋಧಕರು ಹೆಚ್ಚು ಶ್ರಮವಹಿಸಿದರೆ ಯಶಸ್ಸನ್ನು ಪಡೆಯಬಹುದು. ರಕ್ಷಣಾ ವ್ಯವಸ್ಥೆಯಲ್ಲಿ ಇರುವವರಿಗೆ ತೊಂದರೆಗಳು ಆಗಬಹುದು. ನಿಯಮವನ್ನು ಮೀರಿ ವರ್ತಿಸುವುದು ಬೇಡ.

ಕನ್ಯಾ ರಾಶಿ: ಇಷ್ಟ ವಸ್ತುಗಳನ್ನು ಖರೀದಿಸುವ ಸುದಿನ ಇಂದು. ವಿದ್ಯಾರ್ಥಿಗಳು ಅಭ್ಯಾಸದಿಂದ ವಿಮುಖರಾಗುವಿರಿ. ಸಹನೆಯ ಮಿತಿಯು ಬೀರಬಹುದು. ವಿದೇಶ ಪ್ರಯಾಣವು ಮುಂದೆ ಹೋಗಬಹುದು. ಬೇಕಾದ ವಿಷಯದಲ್ಲಿ ಆಸಕ್ತಿಯು ಕಡಿಮೆ ಆಗಬಹುದು. ನಿಮ್ಮ ಹಠದ ಸ್ವಭಾವವು ಇತರರಿಗೆ ಕಷ್ಟವಾದೀತು. ಅಗೌರವ ಸಿಗುವ ಕಡೆ ನೀವು ಹೋಗಲಾರಿರಿ. ನಿಮ್ಮ ಅಹಮ್ಮನ್ನು ಕಡಿಮೆ ಮಾಡಿಕೊಳ್ಳದೇ ಯಾವ ಸಹಕಾರವನ್ನೂ ಪಡೆಯುವುದು ಕಷ್ಟವಾದೀತು‌. ದಾನವನ್ನು ಹೆಚ್ಚು ನಿಮ್ಮ‌ ನಿಯಮಗಳನ್ನು ಬಿಟ್ಟು ನೀವು ಹೋಗಲಾರಿರಿ. ದೇವರನ್ನೇ ಸಂಪೂರ್ಣವಾಗಿ ನಂಬಿ ನಿಮ್ಮ ಕೆಲಸವನ್ನು ಮಾಡಿ.‌ ಬಂಧುಗಳನ್ನು ನೀವು ಕಳೆದುಕೊಳ್ಳುವ ಸಾಧ್ಯತೆ ಇದೆ. ನೀವು ಹಣ ಸಂಪಾದನೆಗೆ ಆರಿಸಿಕೊಂಡ‌ ಮಾರ್ಗವು ಸರಿಯೆನಿಸದೇ ಇರಬಹುದು. ಅಪಮಾನವನ್ನು ಸಹಿಸಿಕೊಳ್ಳಲು ನಿಮಗೆ ಕಷ್ಟವಾದೀತು.

ತುಲಾ ರಾಶಿ: ಸಾಲಗಾರ ಬಾಧೆಯು ಕಡಿಮೆ ಇರುವುದರಿಂದ ಕೊಡಬೇಕಾದ ಹಣವನ್ನು ಯಾವುದಾರೂ ಮೂಲದಿಂದ ಸಂಗ್ರಹಿಸಿಕೊಳ್ಳಿ. ಮನೆಯಿಂದ ಇಂದಯ ದೂರವಿರಬೇಕಾಗುವುದು. ಮನೋರಂಜನೆಗೆ ಅವಕಾಶಗಳಿದ್ದರೂ ಯಾವದೋ ಆಲೋಚನೆಯನ್ನು ಮಾಡುತ್ತ ಇರುವಿರಿ. ನಿಮ್ಮ ಸಾಮರ್ಥ್ಯವನ್ನು ಪ್ರಕಟಿಸಲು ಸೂಕ್ತ ವೇದಿಕೆಯು ನಿಮಗೆ ಲಭ್ಯವಾಗಬಹುದು. ವಿವಾಹಯೋಗವು ಬಂದಿರುವುದರಿಂದ ಇನ್ನು ಹಿಂಜರಿಕೆ ಬೇಡ. ಕೃಷಿಯಲ್ಲಿ ಇಂದು ತೊಡಗಿಕೊಳ್ಳುವಿರಿ. ಧಾರ್ಮಿಕ ಆಚರಣೆಗಳಲ್ಲಿ ಆಸಕ್ತಿಯು ಹೆಚ್ಚು ಇರುವುದು. ಕಲಾವಿದರು ಯಶಸ್ಸನ್ನು ಪಡೆಯುವರು. ದುರ್ಗಾ ಮಾತೆಯನ್ನು ಆರಾಧಿಸಿ. ಆಕೆಯ ಅನುಗ್ರಹವು ನಿಮ್ಮನ್ನು ಇನ್ನಷ್ಟು ಎತ್ತರಕ್ಕೆ ಏರಿಸುವುದು.

ವೃಶ್ಚಿಕ ರಾಶಿ: ಪ್ರಾಣಿಗಳಿಂದ ನಿಮಗೆ ಭಯವಾಗಲಿದೆ. ನಿಮ್ಮ ಮೇಲಿನ ನಂಬಿಕೆಯು ನಷ್ಟವಾಗಬಹುದು. ಆಕಸ್ಮಿಕ ಸುದ್ದಿಯು ನಿಮ್ಮನ್ನು ವಿಚಲಿತ ಗೊಳಿಸಬಹುದು. ಕಾರ್ಮಿಕರಿಂದ ವೇತನ ಅಧಿಕ ಮಾಡಲು ಒತ್ತಡವು ಬರಬಹುದು. ಸುಲಭವಾಗಿ ಮಾಡುವ ಕೆಲಸವನ್ನು ನೀವು ಕ್ಲಿಷ್ಟಕರ ಮಾಡಿಕೊಳ್ಳುವಿರಿ. ನಿಮ್ಮ ಪೂರ್ವನಿರ್ಧಾರನ್ನು ಬದಲಿಸಿಕೊಳ್ಳಲು ನೀವು ಒಪ್ಪುವುದಿಲ್ಲ. ವಿವಾಹವನ್ನು ಆಗದೇ ಇರಲು ನಿಮಗೆ ಹತ್ತಾರು ಕಾರಣಗಳು ಇರಲಿದೆ. ಕೆಲಸಗಳನ್ನು ಮುಂದೂಡುವುದು ನಿರಾಸಕ್ತಿಯನ್ನು ತೋರಿಸುವುದು. ಉತ್ತಮ‌ವಾದ ಭೂಮಿಯನ್ನು ನೀವು ಖರೀದಿಸಲು ಮುಂದಾಗುವಿರಿ. ಮನೋರಂಜನೆ ಕಡೆ ಹೆಚ್ಚು‌ಗಮನವು ಇರಬಹುದು. ಸುಬ್ರಹ್ಮಣ್ಯನ ಆರಾಧನೆಯನ್ನು ಮಾಡಿ.

ಧನು ರಾಶಿ: ನೀರಿನಿಂದ ನಿಮಗೆ ಆಪತ್ತು ಬರಬಹುದು. ಆಧಿಕ ತಿರುಗಾಟವು ನಿಮ್ಮ ಉತ್ಸಾಹವನ್ನು ಕಡಿಮೆ ಮಾಡುವುದು. ಉದ್ಯೋಗದ ಸ್ಥಳದಲ್ಲಿ ಇಂದು ನಿಮ್ಮನ್ನೇ ಹೆಚ್ಚು ಗಮನಿಸಬಹುದು. ಹಿತಶತ್ರುಗಳಿಂದ ಹೆಚ್ಚು ವಿಘ್ನಗಳು ಬಂದರೂ ನಿಮಗೆ ಅದು ಗೊತ್ತಾಗದೇ ಇರಬಹುದು. ಉದ್ಯಮವು ಸ್ವಲ್ಪ ಹಿನ್ನಡೆಯನ್ನು ಪಡೆಯಬಹುದು. ಪುಣ್ಯಕ್ಷೇತ್ರಗಳಿಗೆ ನೀವು ಕುಟುಂಬ ಸಹಿತವಾಗಿ ಹೋಗುವಿರಿ. ಯಂತ್ರೋಪಕರಣಕ್ಕೆ ನೀವು ಬೆಲೆ ತೆರಬೇಕಾದೀತು. ನಿಮ್ಮ ದುಃಖವನ್ನು ಇತರರ ಜೊತೆ ಹಂಚಿಕೊಳ್ಳಿ. ದೂರ ಬಂಧುಗಳ‌ ಭೇಟಿಯಾಗುವುದು. ಕಲಹವಾಗುವ ಸಂದರ್ಭದಲ್ಲಿ ನೀವು ಜಾಣ್ಮೆಯನ್ನು ವಹಿಸಿ ಸುಮ್ಮನಿರುವಿರಿ. ಹಣದ ಹರಿವು ಇದ್ದರೂ ಖರ್ಚಿನ ದಾರಿಯೂ ತೆರೆದಿರುತ್ತದೆ.

ಮಕರ ರಾಶಿ: ಸ್ತ್ರೀಯರು ಖರೀದಿಯಲ್ಲಿ ಸಮಯವನ್ನು ಕಳೆಯುವರು. ಭೋಗವಸ್ತುಗಳಿಂದ ಧನನಷ್ಟವು ಆಗುವುದು. ಪ್ರಯಾಣದಿಂದ ನಿಮಗೆ ಆಯಾಸವಾಗಬಹುದು. ವಿವಾಹಕ್ಕೆ ಸಂಬಂಧಿಸಿದಂತೆ ಬಂಧುಗಳಿಂದ ತೊಂದರೆ ಬತಬಹುದು. ಹೊಸತನ್ನು ಮಾಡಲು ನಿಮಗೆ ಇಚ್ಛಾಶಕ್ತಿಯ ಕೊರತೆ ಇರಲಿ. ನಿಮಗೆ ಪ್ರೋತ್ಸಾಹದ ಕೊರತೆಯಿಂದ ಹಿಂದುಳಿಯಬೇಕಾಗುವುದು. ಸಹಾಯವನ್ನು ಕೇಳಿ ಬಂದರೆ ಇಲ್ಲ ಎನದೇ ಇರುವುದನ್ನು ಕೊಡಿ. ಸಾಮಾಜಿಕ ಕೆಲಸವು ನಿಮಗೆ ಸಾಕೆನಿಸಬಹುದು. ವಿವಾಹಕ್ಕೆ ಸಂಬಂಧಿಸಿದಂತೆ ತಾಯಿಯ ಜೊತೆ ಕಲಹವಾಗುವುದು. ಸಮಯವನ್ನು ಸದುಪಯೋಗ ಮಾಡಿಕೊಳ್ಳಲು ಯೋಜನೆಯನ್ನು ರೂಪಿಸಿಕೊಳ್ಳುವಿರಿ.

ಕುಂಭ ರಾಶಿ: ಸಮಾರಂಭಗಳಿಗೆ ಆಹ್ವಾನವು ಬರಬಹುದು. ಸಮಯ ಪಾಲನೆಯಲ್ಲಿ ನೀವು ಬಹಳ ನಿಷ್ಠುರರಾಗುವಿರಿ. ಕೆಲಸದಲ್ಲಿ ನಿಮಗೆ ತೊಡಕುಗಳು ಬಂದರೆ ಸಹೋದ್ಯೋಗಿಗಳ ಸಹಾಯವನ್ನು ಪಡೆಯಿರಿ. ಮನಸ್ಸು ಒತ್ತಡದಿಂದ ಆಚೆ ಬಂದಿದ್ದು ನಿಮಗೆ ನಿರಾಳ ಎನಿಸುವುದು. ನಿಮ್ಮವರಿಂದ ನಿಮಗೆ ಕಿರಿಕಿರಿ‌ ಉಂಟಾಗಬಹುದು. ಹಳೆಯ ನೆನಪುಗಳು ನಿಮ್ಮನ್ನು ಕಾಡಬಹುದು. ಮನೆಗೆ ಬೇಕಾದ ವಸ್ತುಗಳನ್ನು ಇಂದು ನೀವು ಖರೀದಿಸುವಿರಿ. ಕುಟುಂಬದಲ್ಲಿ ಸಂತೋಷದ ವಾತಾವರಣವು ಇರಲಿದೆ. ನಿಮಗೆ ಸಮ್ಮಾನಗಳನ್ನು ಪಡೆದುಕೊಳ್ಳಲು ಆಸೆಯಾಗುವುದು. ವೃತ್ತಿಯ ಸ್ಥಳದಲ್ಲಿ ನೀವು ಉತ್ತಮ ಪ್ರದರ್ಶನ ನೀಡುವಿರಿ.

ಮೀನ ರಾಶಿ: ವಿರೋಧಿಗಳು ನಿಮ್ಮ ಬೆನ್ನು ಬಿಡದೇ ಪೀಡಿಸಬಹುದು. ಯಾವುದಕ್ಕೂ ಉಪಯೋಗವಾಗದೇ ಹಣವು ವ್ಯರ್ಥವಾಗಬಹುದು. ಸಾಲದ ಹೊರೆಯು ನಿಮಗೆ ದುಃಸ್ವಪ್ನದಂತೆ ಕಾಡಬಹುದು. ವಿದೇಶದಲ್ಲಿ ಕೆಲಸ ಮಾಡುವ ಬಗ್ಗೆ ಮೋಹ ಉಂಟಾಗುವುದು. ನ್ಯಾಯಾಲಯದ ತೀರ್ಪು ನಿಮಗೆ ಪೂರ್ಣ ಸಮಾಧಾನವನ್ನು ನೀಡದು. ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೆ ಗೊಂದಲವಿರಬಹುದು. ಉದ್ಯೋಗದಲ್ಲಿ ಬದಲಾವಣೆಯನ್ನು ಬಯಸುವಿರಿ. ಸಾಹಿತ್ಯಾಸಕ್ತರು ಪ್ರಸಿದ್ಧಿಯನ್ನು ಹೆಚ್ಚು ಬಯಸುವರು. ಅಧ್ಯಾತ್ಮದ ಕಡೆ ಮನಸ್ಸು ಇದ್ದರೂ ಕುಟುಂಬವನ್ನು ನೆನಪಿಸಿಕೊಂಡು ಸುಮನಿರುವಿರಿ. ಜೀವನ ಸಂಗಾತಿಯ ಅನ್ವೇಷಣೆಯಲ್ಲಿ ನೀವು ಸೋಲಬಹುದು.

ಲೋಹಿತಶರ್ಮಾ – 8762924271 (what’s app only)