Horoscope: ದಾಂಪತ್ಯದಲ್ಲಿ ಸಾಮರಸ್ಯದ ಕೊರತೆ: ಪರಸ್ಪರ ಬೇಸರ, ಕುಟುಂಬಸ್ಥರ ಜೊತೆ ಚರ್ಚಿಸಿ
ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಆಗಸ್ಟ್10) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಆಗಸ್ಟ್ 10 ಗುರುವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ : ಆಶ್ಲೇಷಾ, ಮಾಸ : ಅಧಿಕ ಶ್ರಾವಣ, ಪಕ್ಷ : ಕೃಷ್ಣ, ವಾರ : ಗುರು, ತಿಥಿ : ದಶಮೀ, ನಿತ್ಯನಕ್ಷತ್ರ : ರೋಹಿಣೀ, ಯೋಗ : ವ್ಯರಿಪಾತ್, ಕರಣ : ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 18 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 56 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02:12 ರಿಂದ 03:47ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06: 19 ರಿಂದ 07:53 ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:28 ರಿಂದ 11:03ರ ವರೆಗೆ.
ಮೇಷ ರಾಶಿ: ಸಾಮಾಜಿಕವಾಗಿ ಮನ್ನಣೆ ಸಿಕ್ಕರೂ ಅದನ್ನು ನೀವು ನಿರಾಕರಿಸುವಿರಿ. ಹೆಚ್ಚಿನ ಸಮಯವನ್ನು ಅಧ್ಯಯನದಲ್ಲಿ ಕಳೆಯುವಿರಿ. ನಿಮ್ಮ ಸಂಪತ್ತಿಗೆ ಇತರರ ದೃಷ್ಟಿಯು ಬೀಳಬಹುದು. ಬರಬೇಕಾದ ಹಣವು ವಿಳಂಬವಾಗಬಹುದು. ನೀವು ಇಂದು ಎಲ್ಲ ಜವಾಬ್ದಾರಿಗಳಿಂದ ಹೊರಬರುವಿರಿ. ಯಾರಿಂದಲೂ ನೀವು ಸಹಾಯವನ್ನು ಪಡೆಯಲು ಇಚ್ಛಿಸುವುದಿಲ್ಲ. ವ್ಯಾಪರವು ನಿಮಗೆ ಲಾಭದಾಯಕವಾದುದು. ಅತಿಯಾದ ನಿರೀಕ್ಷೆಯಲ್ಲಿ ನೀವು ಉಳಿದ ವಿಚಾರಗಳಲ್ಲಿ ಮೈ ಮರೆಯುವಿರಿ. ಹೆಚ್ಚಿದ ಕುಟುಂಬದ ಜವಾಬ್ದಾರಿಗಳಿಂದ ನಿಮ್ಮ ಆಸಕ್ತಿಯ ಕ್ಷೇತ್ರಗಳಲ್ಲಿ ಗಮನ ಕಡಿಮೆ ಆಗುವುದು. ಗಣಪತಿಗೆ ದೂರ್ವಾಪತ್ರೆಯನ್ನು ಸಮರ್ಪಿಸಿ. ಕಾರ್ಯಗಳಲ್ಲಿ ಯಶಸ್ಸನ್ನು ಪಡೆಯಿರಿ.
ವೃಷಭ ರಾಶಿ: ಧಾರ್ಮಿಕ ಆಚರಣೆಯಲ್ಲಿ ಆಸಕ್ತಿಯು ಹೆಚ್ಚು ಇರಲಿದೆ. ಕೆಲಸಕ್ಕೆ ಸಂಬಂಧಿಸಿದಂತೆ ಗೊಂದಲವು ಇರಬಹುದು. ಹೆಚ್ಚು ಒತ್ತಡುವು ನಿಮ್ಮ ಆರೋಗ್ಯವನ್ನು ಕೆಡಿಸಬಹುದು. ನಿಮ್ಮ ಕಾರ್ಮಿಕರ ಜೊತೆ ವಾಗ್ವಾದವನ್ನು ಮಾಡುವಿರಿ. ನಿಮ್ಮ ಸಂತೋಷವನ್ನು ಕಂಡು ಕರುಬುವವರಿಗೆ ನೀವು ಯಾವ ಪ್ರತಿಕ್ರಿಯೆಯನ್ನು ನೀಡಬೇಕಾಗಿಲ್ಲ. ಅನಗತ್ಯ ವಿಚಾರಗಳ ನಡುವೆ ಪ್ರವೇಶವನ್ನು ಪಡೆಯುವುದು ಬೇಡ. ಹೊಸ ಉದ್ಯಮವನ್ನು ಅರಸುವವರು ಹೆಚ್ಚು ಅನ್ವೇಷಣೆಯನ್ನು ಮಾಡಬೇಕಾದೀತು. ಸಿಕ್ಕರೂ ನಿಮಗೆ ಅನುಕೂಲಕರವಾಗಿರದು. ಗುರುಗುಹನನ್ನು ಆರಾಧಿಸಿ.
ಮಿಥುನ ರಾಶಿ: ಕಛೇರಿಯಲ್ಲಿ ಒತ್ತಡವು ಇದ್ದರೂ ಅದೆನ್ನೆಲ್ಲ ಮರೆತು ಆರಾಮಾಗಿ ಇರುವಿರಿ. ನಿಮ್ಮ ಮಾತು ಎಲ್ಲರಿಗೂ ಇಷ್ಟವಾದೀತು. ಸಮಯವನ್ನು ಕಳೆಯಲು ಸ್ನೇಹಿತರ ಜೊತೆ ವಿಹಾರಕ್ಕೆ ಹೋಗಬಹುದು. ಸಹೋದರರು ನಿಮ್ಮ ಸಹಾಯವನ್ನು ಕೇಳುವರು. ಇನ್ನೊಬ್ಬರನ್ನು ನಿಂದಿಸುವುದು ನಿಮಗೆ ಶೋಭೆ ತರದು. ಮನೆಯ ನಿರ್ಮಾಣಕ್ಕೆ ಕುಟುಂಬದ ಜೊತೆ ಚರ್ಚಿಸುವಿರಿ. ಯಾರ ಮಾತನ್ನೋ ಅನುಸರಿಸಿ ನೀವು ಕಾರ್ಯ ಪ್ರವೃತ್ತರಾಗುವುದು ಬೇಡ. ಇಂದು ನಿಮ್ಮ ಮೇಲೆ ಬರುವ ಯಾವ ಅಪವಾದವನ್ನೂ ಮನಸ್ಸಿಗೆ ತೆಗೆದುಕೊಳ್ಳದೇ ನೆಮ್ಮದಿಯಿಂದ ಇರುವಿರಿ. ಇಂದು ಹೆಚ್ಚು ಆಲಸ್ಯದ ಮನೋಭಾವವು ಇರುವುದು.
ಕರ್ಕ ರಾಶಿ: ದಾಂಪತ್ಯದಲ್ಲಿ ಸಾಮರಸ್ಯದ ಕೊರತೆಯು ಎದ್ದು ತೋರುವುದು. ಸಂಪಾದನೆಗಾಗಿ ಇಬ್ಬರೂ ಪ್ರಯತ್ನಿಸಬೇಕಾಗಬಹುದು. ಯಾರದೋ ಮೇಲಿನ ಬೇಸರವನ್ನು ಮತ್ಯಾರದೋ ಮೇಲೆ ಸಿಟ್ಟಾಗಿ ವ್ಯಕ್ತೊಡಿಸುವಿರಿ. ದ್ವೇಷವನ್ನು ನೀವು ಬೆಳೆಸಿಕೊಳ್ಳುವುದು ನಿಮ್ಮ ಮಾನಸಿಕ ಸ್ಥಿತಿಯನ್ನು ಕೆಡಿಸಬಹುದು. ಸಾಲದ ವಿಚಾರವು ಮನೆಯಲ್ಲಿ ಕಲಹವಾಗುವಂತೆ ಮಾಡಬಹುದು. ಹಳೆಯ ಘಟನೆಗಳು ನಿಮಗೆ ಸಂತೋಷವನ್ನು ಕೊಡುವುದು. ಧಾರ್ಮಿಕ ಕಾರ್ಯಗಳಲ್ಲಿ ಇಂದು ನೀವು ತೊಡಗಿಕೊಳ್ಳುವಿರಿ. ಮಾನಸಿಕ ಒತ್ತಡದಿಂದ ನೀವು ಬೇಗ ವಿಶ್ರಾಂತಿಗೆ ತೆರಳಬಹುದು. ಕುಲದೇವರ ಸ್ಮರಣೆಯನ್ನು ಮಾಡಿ.