Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಐದು ರಾಶಿಯವರು ವಾಹನ ಚಲಾಯಿಸುವಾಗ ಅಪಘಾತ ಸಾಧ್ಯತೆ ಹೆಚ್ಚು; ಇಲ್ಲಿದೆ ಕಾರಣ ಸಹಿತ ವಿವರಣೆ

ಜ್ಯೋತಿಷ್ಯದ ಪ್ರಕಾರ ಈ ಐದು ರಾಶಿಯವರು ವಾಹನ ಚಾಲನೆ ಮಾಡುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಇನ್ನೂ ಸ್ಪಷ್ಟವಾಗಿ ಹೇಳಬೇಕು ಅಂದರೆ ಇವರಿಗೆ ಅಪಘಾತದ ಸಾಧ್ಯತೆಗಳು ಹೆಚ್ಚಿರುತ್ತವೆ.

ಈ ಐದು ರಾಶಿಯವರು ವಾಹನ ಚಲಾಯಿಸುವಾಗ ಅಪಘಾತ ಸಾಧ್ಯತೆ ಹೆಚ್ಚು; ಇಲ್ಲಿದೆ ಕಾರಣ ಸಹಿತ ವಿವರಣೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ನಯನಾ ಎಸ್​ಪಿ

Updated on:Aug 09, 2023 | 6:22 PM

ಜ್ಯೋತಿಷ್ಯದ (Horoscope) ಪ್ರಕಾರ ಈ ಐದು ರಾಶಿಯವರು (Zodiac Signs) ವಾಹನ ಚಾಲನೆ ಮಾಡುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಇನ್ನೂ ಸ್ಪಷ್ಟವಾಗಿ ಹೇಳಬೇಕು ಅಂದರೆ ಇವರಿಗೆ ಅಪಘಾತದ ಸಾಧ್ಯತೆಗಳು ಹೆಚ್ಚಿರುತ್ತವೆ. ಯಾರಿಗೆ ಅಪಘಾತ ಆಗಲ್ಲ ಹೇಳಿ ಎಂದು ಕೆಲವರು ಅಂದುಕೊಳ್ಳುತ್ತಿರಬಹುದು; ಆದರೆ ನೆನಪಿನಲ್ಲಿರಲಿ, ಈ ಲೇಖನದಲ್ಲಿ ಪ್ರಸ್ತಾವ ಮಾಡುತ್ತಿರುವ ಈ ಐದು ರಾಶಿಯವರಿಗೆ ತಮ್ಮ ಜೀವನದಲ್ಲಿ ಹಲವು ಸಲ ಅಪಘಾತದ ಅಪಾಯಗಳು ಇರುತ್ತವೆ. ಮತ್ತು ಇವರಿಗೆ ಅಪಾಯದ ಸಂಭವ ಸಹ ಹೆಚ್ಚಿರುತ್ತದೆ. ಅದಕ್ಕೆ ಏನು ಮಾಡಬೇಕು ಅಂದರೆ, ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಯಾವ ಕಾರಣದಿಂದ ಅಪಘಾತದ ಸಾಧ್ಯತೆ ಹೆಚ್ಚು ಅನ್ನಲಾಗುತ್ತಿದೆಯೋ ಅಂಥವುಗಳಿಂದ ಹುಷಾರಾಗಿ ಇರಬೇಕು. ಯಾವ ರಾಶಿಯವರಿಗೆ ಅಪಘಾತದಿಂದ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚು ಎಂಬುದನ್ನು ಇನ್ನು ತಡ ಮಾಡದೆ ನೋಡೋಣ.

ಮೇಷ

ಈ ರಾಶಿಯವರು ತಮ್ಮ ಆತುರದ ಸ್ವಭಾವದಿಂದ ಸಮಸ್ಯೆಗಳನ್ನು ಮೈ ಮೇಲೆ ಹಾಕಿಕೊಳ್ಳುತ್ತಾರೆ. ಬೇಡ ಅಂದಿದ್ದನ್ನೇ ಮಾಡುವೆ ಎಂದು ಹೊರಡುವ ಹುಂಬ ಸ್ವಭಾವದ ಜನ ಇವರು. ಸಾಮಾನ್ಯವಾಗಿ ತಮ್ಮ ಸ್ನೇಹ ವಲಯದಲ್ಲಿ ಇರುವವರ ಜತೆಗೆ ಪಂಥ ಕಟ್ಟಿಯೋ ಅಥವಾ ರಸ್ತೆಯಲ್ಲಿ ಯಾರ ಜತೆಗಾದರೂ ಸ್ಪರ್ಧೆಗೆ ಇಳಿದೋ ಅಪಘಾತ ಮಾಡಿಕೊಳ್ಳುವಂಥ ಇವರು ಇತರರು ರೊಚ್ಚಿಗೆಬ್ಬಿಸಿದಾಗ ಸಮಾಧಾನವಾಗಿ ಇರುವುದನ್ನು ರೂಢಿಸಿಕೊಳ್ಳಬೇಕು. ಇನ್ನು ತಾವಾಗಿಯೇ ಇತರರ ಮೇಲೆ ಚಾಲೆಂಜ್ ಮಾಡುವ ಸ್ವಭಾವವನ್ನು ಬಿಟ್ಟರೆ ಉತ್ತಮ. ಇಲ್ಲದಿದ್ದರೆ ದೊಡ್ಡ ಅಪಾಯವನ್ನು ಮೈ ಮೇಲೆ ಎಳೆದುಕೊಳ್ಳುತ್ತಾರೆ.

ಕರ್ಕಾಟಕ

ಈ ರಾಶಿಯವರು ಗ್ಯಾನ ಬಂದ ಗಿರಾಕಿಗಳು. ಏನನ್ನೋ ಯೋಚಿಸಿಕೊಂಡು ವಾಹನ ಚಲಾಯಿಸುತ್ತಾರೆ. ತಲೆಯಲ್ಲಿ ಎಂಥದೋ ಆಲೋಚನೆ- ಯೋಚನೆ ಓಡುತ್ತಾ ಇರುತ್ತದೆ. ಭಾವನಾತ್ಮಕವಾಗಿಯೇ ಎಲ್ಲ ಸಂಗತಿಗಳನ್ನು ನೋಡುವ ಇವರು, ಮನೆಯಲ್ಲಿಯೋ ಕಚೇರಿಯಲ್ಲಿಯೋ ಅಥವಾ ಯಾವುದೋ ಸ್ಥಳದಲ್ಲಿ ಇನ್ಯಾರೊಂದಿಗೋ ವಾಗ್ವಾದಗಳನ್ನು ಮಾಡಿಕೊಂಡು, ಮನಸ್ಸು ಹಾಳು ಮಾಡಿಕೊಂಡಿದ್ದರ ಪರಿಣಾಮವಾಗಿ ಅಪಘಾತಕ್ಕೆ ಈಡಾಗಬೇಕಾಗುತ್ತದೆ. ತುಂಬ ಸಂತೋಷವಾಗಿದ್ದರೂ ಸರಿ ಅಥವಾ ಯಾವುದೋ ಕಾರಣಕ್ಕೆ ಬೇಸರ- ದುಃಖದಿಂದ ಇದ್ದರೂ ಸರಿ, ಅಂಥ ಸನ್ನುವೇಶದಲ್ಲಿ ವಾಹನ ಚಾಲನೆ ಮಾಡದಿರುವುದು ಕ್ಷೇಮ. ಏಕಾಗ್ರತೆ ಜಾಸ್ತಿ ಮಾಡಿಕೊಳ್ಳುವಂತಹ ಯೋಗ- ಪ್ರಾಣಾಯಾಮ ಇಂಥದ್ದನ್ನು ರೂಢಿ ಮಾಡಿಕೊಳ್ಳುವುದು ಒಳ್ಳೆಯದು.

ವೃಶ್ಚಿಕ

ಇವರು ತಮ್ಮ ವಾಹನವನ್ನು ಸುಸ್ಥಿತಿಯಲ್ಲಿ ಇರಿಸಿಕೊಳ್ಳುವುದು ಬಹಳ ಮುಖ್ಯ. ಈ ವಿಚಾರದಲ್ಲಿ ಇವರಿಗೆ ಒಂದಿಷ್ಟು ನಿರ್ಲಕ್ಷ್ಯ ಇರುತ್ತದೆ. ಇನ್ನು ವಾಹನ ಚಾಲನೆ ವಿಷಯದಲ್ಲಿ ಅತಿಯಾದ ಆತ್ಮವಿಶ್ವಾಸ ಇರುತ್ತದೆ. ಎಲ್ಲವನ್ನೂ ತಮ್ಮ ಮೂಗಿನ ನೇರಕ್ಕೆ ಯೋಚನೆ ಮಾಡುವ ಜನ ಇವರು. ಏನೇ ಕೇಳಿದರೂ ಅಥವಾ ಹೇಳಿದರೂ ಇವರ ಬಳಿ ತರ್ಕವಂತೂ ಸಿದ್ಧವಾಗಿರುತ್ತದೆ. ಆ ಕಾರಣದಿಂದಾಗಿಯೇ ಅಪಘಾತಗಳನ್ನು ಮಾಡಿಕೊಳ್ಳುತ್ತಾರೆ. ಇನ್ನು ಇವರು ವಾಹನ ಚಲಾಯಿಸುವಾಗ ಜತೆಗಿರುವವರು ಏನಾದರೂ ಟಿಪ್ಸ್ ಕೊಟ್ಟರೂ ಅದನ್ನು ತೆಗೆದುಕೊಳ್ಳಲು ಸುತಾರಾಂ ಸಿದ್ಧರಿರುವುದಿಲ್ಲ. ಆ ಕಾರಣದಿಂದಾಗಿಯೇ ಅಪಾಯವನ್ನೇ ಮೈ ಮೇಲೆ ಎಳೆದುಕೊಳ್ಳುತ್ತಾರೆ.

ಕನ್ಯಾ

ಈ ರಾಶಿಯವರಿಗೆ ತಮ್ಮ ವಾಹನದಲ್ಲಿ ಇರುವ ಎಲ್ಲ ಫೀಚರ್, ಸಾಧ್ಯತೆಗಳನ್ನು ಪರೀಕ್ಷೆ ಮಾಡುವಂಥ ಉತ್ಸಾಹ. ಆ ವಾಹನದಲ್ಲಿ ಎಷ್ಟು ಗರಿಷ್ಠ ವೇಗದಲ್ಲಿ ಹೋಗಬಹುದು, ಎಷ್ಟು ಕಡಿಮೆ ಪೆಟ್ರೋಲ್ ಇದ್ದು, ಎಷ್ಟು ದೂರಕ್ಕೆ ಹೋಗಬಹುದು, ಸಮಸ್ಯೆಗಳು ಅಂತಾದರೆ ಏನು ಬಂದೀತು ಹೀಗೆ ಎಲ್ಲದರ ಮೇಲೂ ಪ್ರಯೋಗ ಹಾಗೂ ಪರೀಕ್ಷೆ ಮಾಡಿ ನೋಡುವಂಥ ಪ್ರಯತ್ನದಲ್ಲಿ ಅಪಘಾತಗಳು, ಅವಘಡಗಳನ್ನು ಮಾಡಿಕೊಳ್ಳುತ್ತಾರೆ. ಹಾಗಂತ ಇವರನ್ನು ಮಾತನಾಡಿಸಿ ನೋಡಿ, ಅಪಘಾತದ ಕಾರಣಗಳು ಸಂಪೂರ್ಣವಾಗಿ ಇತರರದು, ರಸ್ತೆಯದು ಅಥವಾ ಇನ್ಯಾವುದೋ ಎಂಬ ಕಾರಣಗಳ ಪಟ್ಟಿಯನ್ನೇ ನೀಡುತ್ತಾರೆ. ಇವರು ತಮ್ಮ ತಪ್ಪು ತಿಳಿದುಕೊಳ್ಳುವಂತೆ ಮಾಡುತ್ತೇನೆ ಎಂದುಕೊಂಡರೆ ಹಾಗೆ ಅಂದುಕೊಳ್ಳುವವರು ಬದಲಾಗುತ್ತಾರೆ, ಅಷ್ಟೇ.

ಇದನ್ನೂ ಓದಿ: ಈ ರಾಶಿಯವರು ತಮ್ಮ ಪಾರ್ಟ್ನರ್ ಹೊಟ್ಟೆಕಿಚ್ಚು ಪಡುವುದನ್ನು ನೋಡಿ ಖುಷಿಪಡುತ್ತಾರೆ

ಸಿಂಹ

ಈ ರಾಶಿಯವರದು ಇನ್ನೊಂದು ಬಗೆಯ ವಿಚಿತ್ರ ಹಾಗೂ ವೈಶಿಷ್ಟ್ಯ. ಇವರು ವಾಹನ ಚಲಾಯಿಸುವಾಗ ತುಂಬ ಹತ್ತಿರದಲ್ಲಿ ಬೇರೆ ವಾಹನದವರು ಇದ್ದರೆ ಅವರಿಗೆ ತಲೆ ಕೆಟ್ಟು ಹೋಗುತ್ತದೆ. ಅದಕ್ಕೆ ಕಾರಣ ಏನು ಅಂದರೆ, ವಾಹನ ಚಲಾಯಿಸುವಾಗ ಇವರದೇ ನೀತಿ- ನಿಯಮ, ಲೆಕ್ಕಾಚಾರ ತಲೆಯಲ್ಲಿ ಇರುತ್ತದೆ. ಬಹುತೇಕ ಸಂದರ್ಭದಲ್ಲಿ ಅದು ಸಿಂಹ ರಾಶಿಯವರು ಆ ಕ್ಷಣದ ಮೂಡ್ ಗೆ ತಕ್ಕಂತೆ ಇರುತ್ತದೆ. ಅದೇ ರೀತಿ ಇಡೀ ರಸ್ತೆಯಲ್ಲಿ ತಮ್ಮದೊಬ್ಬರದೇ ವಾಹನವೇನೋ ಎಂಬಂಥ ಧೋರಣೆ ಸಹ ಇರುತ್ತದೆ. ಹಿಂದೆಯೋ ಅಕ್ಕ-ಪಕ್ಕ ಬರುತ್ತಿರುವವರು ಒಂದು ವೇಳೆ ಜಗಳ ತೆಗೆದುಬಿಟ್ಟರೆ ಅಥವಾ ಬಯ್ದರೆ ಸಿಂಹ ರಾಶಿಯವರಿಗೆ ತಾನು ಏನು ಮಾಡುತ್ತಿದ್ದೀನಿ ಎಂಬ ಪರಿವೆಯೇ ಇರುವುದಿಲ್ಲ. ಹೀಗೆ ಮಾಡಿಯೇ ಅಪಘಾತಗಳನ್ನು ಮಾಡಿಕೊಳ್ಳುತ್ತಾರೆ.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:20 pm, Wed, 9 August 23

ಮದ್ಯವ್ಯಸನಿ ಮಗನಿಗೆ ಬೈಕ್ ಕೊಡಿಸಿದರೆ ಅಪಾಯ ತಪ್ಪಲ್ಲ ಅಂದುಕೊಂಡಿದ್ದ ತಂದೆ
ಮದ್ಯವ್ಯಸನಿ ಮಗನಿಗೆ ಬೈಕ್ ಕೊಡಿಸಿದರೆ ಅಪಾಯ ತಪ್ಪಲ್ಲ ಅಂದುಕೊಂಡಿದ್ದ ತಂದೆ
ಸೋಪು-ಶಾಂಪೂ ಬಳಸಬಾರದೆಂಬ ನಿಯಮದ ಯಥೇಚ್ಛ ಉಲ್ಲಂಘನೆ
ಸೋಪು-ಶಾಂಪೂ ಬಳಸಬಾರದೆಂಬ ನಿಯಮದ ಯಥೇಚ್ಛ ಉಲ್ಲಂಘನೆ
ಮಾರಿಷಸ್​​ನಲ್ಲಿ ಭೋಜ್​ಪುರಿ ಹಾಡಿನ ಸ್ವಾಗತಕ್ಕೆ ಪ್ರಧಾನಿ ಮೋದಿ ಫಿದಾ!
ಮಾರಿಷಸ್​​ನಲ್ಲಿ ಭೋಜ್​ಪುರಿ ಹಾಡಿನ ಸ್ವಾಗತಕ್ಕೆ ಪ್ರಧಾನಿ ಮೋದಿ ಫಿದಾ!
ಹೋರಾಟಕ್ಕೆ ತಾರ್ಕಿಕ ಅಂತ್ಯ ಕಾಣಿಸದ ಹೊರತು ವಿಶ್ರಮಿಸುವುದಿಲ್ಲ: ಕರವೇ
ಹೋರಾಟಕ್ಕೆ ತಾರ್ಕಿಕ ಅಂತ್ಯ ಕಾಣಿಸದ ಹೊರತು ವಿಶ್ರಮಿಸುವುದಿಲ್ಲ: ಕರವೇ
ಮಾರಿಷಸ್ ತಲುಪಿದ ಪ್ರಧಾನಿ ಮೋದಿ: ಪ್ರಮುಖ ಒಪ್ಪಂದಗಳಿಗೆ ಸಹಿ ನಿರೀಕ್ಷೆ
ಮಾರಿಷಸ್ ತಲುಪಿದ ಪ್ರಧಾನಿ ಮೋದಿ: ಪ್ರಮುಖ ಒಪ್ಪಂದಗಳಿಗೆ ಸಹಿ ನಿರೀಕ್ಷೆ
‘ಅಪ್ಪು’ ಚಿತ್ರಕ್ಕೆ ರಮ್ಯಾ ನಾಯಕಿ ಆಗಬೇಕಿತ್ತು; ಅಚ್ಚರಿಯ ಮಾಹಿತಿ ರಿವೀಲ್
‘ಅಪ್ಪು’ ಚಿತ್ರಕ್ಕೆ ರಮ್ಯಾ ನಾಯಕಿ ಆಗಬೇಕಿತ್ತು; ಅಚ್ಚರಿಯ ಮಾಹಿತಿ ರಿವೀಲ್
ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿನ ನೀರಿನ ಸಮಸ್ಯೆಗೆ ಬಿತ್ತು ಬ್ರೇಕ್​
ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿನ ನೀರಿನ ಸಮಸ್ಯೆಗೆ ಬಿತ್ತು ಬ್ರೇಕ್​
15 ಭರ್ಜರಿ ಸಿಕ್ಸ್​: ವಿಶ್ವ ದಾಖಲೆಯ ಸೆಂಚುರಿ ಸಿಡಿಸಿದ ಎಬಿ ಡಿವಿಲಿಯರ್ಸ್
15 ಭರ್ಜರಿ ಸಿಕ್ಸ್​: ವಿಶ್ವ ದಾಖಲೆಯ ಸೆಂಚುರಿ ಸಿಡಿಸಿದ ಎಬಿ ಡಿವಿಲಿಯರ್ಸ್
ವಿದ್ಯಾರ್ಥಿಗಳು ತಾಂಬೂಲ ಚವಣ ಮಾಡುವುದ್ದು ನಿಷಿದ್ಧ ಯಾಕೆ ? ವಿಡಿಯೋ ನೋಡಿ
ವಿದ್ಯಾರ್ಥಿಗಳು ತಾಂಬೂಲ ಚವಣ ಮಾಡುವುದ್ದು ನಿಷಿದ್ಧ ಯಾಕೆ ? ವಿಡಿಯೋ ನೋಡಿ
ಡಿಆರ್​ಐ ಅಧಿಕಾರಿಗಳ ಕಸ್ಟಡಿ ಅಂತ್ಯ: ರನ್ಯಾ ರಾವ್ ಮತ್ತೆ ಜೈಲಿಗೆ
ಡಿಆರ್​ಐ ಅಧಿಕಾರಿಗಳ ಕಸ್ಟಡಿ ಅಂತ್ಯ: ರನ್ಯಾ ರಾವ್ ಮತ್ತೆ ಜೈಲಿಗೆ