ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವುದು ಕೆಲವರಿಗೆ ಅಭ್ಯಾಸ. ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2023 ಸೆಪ್ಟೆಂಬರ್ 21 ) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ತುಲಾ ಮಾಸ, ಮಹಾನಕ್ಷತ್ರ: ಚಿತ್ರಾ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ಷಷ್ಠೀ, ನಿತ್ಯನಕ್ಷತ್ರ: ಮೂಲಾ, ಯೋಗ: ಶೋಭನ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 29 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:26 ರಿಂದ 01:57 ರವರೆಗೆ, ಯಮಘಂಡ ಕಾಲ ಬೆಳಿಗ್ಗೆ 07:54 ರಿಂದ 09:24ರವರೆಗೆ, ಗುಳಿಕ ಕಾಲ ಬೆಳಿಗ್ಗೆ 10:55 ರಿಂದ 12:26ರ ವರೆಗೆ.
ಮೇಷ ರಾಶಿ: ಪ್ರೇಯಸಿಯ ನೆನಪನ್ನು ನುಂಗುವುದು ಕಷ್ಟವೆನಿಸಬಹುದು. ವಾಹನ ಸಂಚಾರಕ್ಕೆ ತೊಂದರೆ ಬರಬಹುದು. ನೀವು ಅಂದುಕೊಂಡಷ್ಟು ಸರಳ ಕೆಲಸಗಳು ಇಂದು ಆಗದು. ಕೆಲವು ಸಂಗತಿಯನ್ನು ಅನುಭವಿಸದೇ ಇರಲಾಗದು. ಕಾರಣವಿಲ್ಲದೇ ಕೋಪವು ಬರುವುದು. ಶಿಕ್ಷಣಕ್ಕೆ ಸಂಬಂಧಿಸಿದಂತೆ ನಿಮಗೆ ಸಮಾರಂಭಗಳಿಗೆ ಆಹ್ವಾನವು ಬರಬಹುದು. ಬಹು ದಿನಗಳ ಅನಂತರ ಮನೆಯವರ ಜೊತೆ ಕಾಲ ಕಳೆಯುವ ಅವಕಾಶ ಸಿಗುವುದು. ದಾಂಪತ್ಯದಲ್ಲಿ ಪರಸ್ಪರ ಕಾದಾಟವು ಮಿತಿಮೀರಬಹುದು. ಸಹೋದರರಿಗೆ ಉಡುಗೊರೆಯನ್ನು ಕೊಟ್ಟು ಖುಷಿಪಡಿಸುವಿರಿ. ಗೆಳೆತನದಲ್ಲಿ ಮಿತಿ ಇರಲಿ. ವಿಜ್ಞಾನಿಗಳ ಭೇಟಿಯಾಗುವ ಸನ್ನಿವೇಶವು ಬರಲಿದೆ. ವಿದ್ಯಾರ್ಥಿಗಳಿಗೆ ಪ್ರೋತ್ಸಾಹದ ಕೊರತೆ ಕಾಣುವುದು.
ವೃಷಭ ರಾಶಿ: ಸಂಗಾತಿಯ ಸ್ವಭಾವವನ್ನು ಹತ್ತಿರದಿಂದ ತಿಳಿಯುಲು ಪ್ರಯತ್ನಿಸುವಿರಿ. ಅತಿಯಾದ ಬಂಧನವು ನಿಮಗೆ ಕಿರಿಕಿರಿ ತರಿಸಬಹುದು. ವೃತ್ತಿಯಲ್ಲಿ ನಿಮ್ಮ ಮೇಲೆ ಅಭಿಮಾನವು ಹೆಚ್ಚಾಗಬಹುದು. ಸ್ನೇಹಿತರ ಜೊತೆ ಸಮಯವು ವ್ಯರ್ಥವಾದೀತು. ನಿಮ್ಮ ನಂಬಿಕೆಗೆ ತೊಂದರೆಯಾಗುವುದು. ಸಂಗಾತಿಯ ಕಹಿಯಾದ ಮಾತುಗಳು ನಿಮಗೆ ಜೀರ್ಣವಾಗದು. ಹಣಕಾಸಿನ ವೃದ್ಧಿಗೆ ಮಾರ್ಗೋಪಾಯ ಅಗತ್ಯ. ನೀವು ಬಯಸಿದ ವಸ್ತುವು ಯಾವುದೋ ರೂಪದಲ್ಲಿ ನಿಮ್ಮನ್ನು ಬಂದು ಸೇರಬಹುದು. ಧಾರ್ಮಿಕ ಶ್ರದ್ಧೆಯನ್ನು ಬೆಳೆಸಿಕೊಳ್ಳುವುದು ಉತ್ತಮ. ಸರ್ಕಾರದ ಕೆಲಸಕ್ಕಾಗಿ ಓಡಾಡುವುದು ನಿಮಗೆ ಬೇಸರ ತಂದೀತು. ಖುಷಿಯ ದಾರಿಯನ್ನು ಹುಡುಕುವಿರಿ.
ಮಿಥುನ ರಾಶಿ: ನಿಮ್ಮ ಪ್ರಯತ್ನಕ್ಕೆ ಬೆಲೆ ಕಟ್ಟಲಾಗದು ಎಂದು ಇತರರಿಗೆ ತಿಳಿಯುವುದು. ಮಕ್ಕಳ ಮೇಲೆ ಪ್ರೀತಿ ಅಧಿಕವಾಗುವುದು. ಬೇಕಾದುದನ್ನು ಮಾಡುವ ಆಸೆ ಇರುವುದು. ಕಾರ್ಯದ ಬಗ್ಗೆ ಕಛೇರಿಯನ್ನು ಅಧಿಕಾರಿಯ ಜೊತೆ ಚರ್ಚಿಸುವಿರಿ. ಬೇಡದ ಸಲಹೆಯನ್ನು ಕೊಡಬಹುದು. ವಿವಾಹದಲ್ಲಿ ನಿರಾಸಕ್ತಿಯು ಬರಬಹುದು. ಸ್ವತಂತ್ರವಾಗಿರುವುದು ನಿಮಗೆ ಇಷ್ಟದ ಸಂಗತಿಯಾಗಲಿದೆ. ಅತಿಥಿಗಳನ್ನು ಸತ್ಕರಿಸುವಿರಿ. ಆರ್ಥಿಕತೆಯ ಮೇಲೆ ಹೆಚ್ಚು ಒಲವು ಉಂಟಾಗುವುದು. ಸ್ತ್ರೀಯರಿಂದ ಕೆಲವು ಸಹಾಯವು ಸಿಗುವುದು. ಮಕ್ಕಳನ್ನು ಮನೆಯಿಂದ ಹೊರಗೆ ಕಳುಹಿಸಿ ಓದಿಸುವುದು ಸೂಕ್ತವಾದೀತು. ಮಾತಿನಲ್ಲಿ ನಿಖರತೆ ಇರಲಿ. ಪ್ರತಿ ಕ್ಷಣವೂ ಅಮೂಲ್ಯ ಎನ್ನಿಸುವಂತೆ ಕಾರ್ಯವಿರುವುದು. ಮನಸ್ಸಿನ ತಾಪವನ್ನು ಯಾರ ಮುಂದಾದರೂ ಹೇಳಿ ಕಡಿಮೆ ಮಾಡಿಕೊಳ್ಳುವಿರಿ.
ಕಟಕ ರಾಶಿ: ನಿಮ್ಮ ಕೆಲಸಕ್ಕೆ ಹಣ ದೊರಕುವುದು ಎಂಬ ನಿರೀಕ್ಷೆಯು ಇರುವುದು. ತಾಯಿಯ ಅನಾರೋಗ್ಯಕ್ಕೆ ಚಿಕಿತ್ಸೆ ಕೊಡಲು ಓಡಾಡಬೇಕಾಗಬಹುದು. ಯಾರದೋ ಮಾತಿನಿಂದ ಮನೆಯಲ್ಲಿ ಅಸಮಾಧಾನದ ವಾತಾವರಣವು ಇರುವುದು. ನಿಮ್ಮ ಸ್ವಭಾವಗಳು ನಿಮ್ಮವರಿಗೆ ಇಷ್ಟವಾಗದೇ ಹೋಗುವುದು. ನಿಮ್ಮ ಮಾತುಗಳಿಗೆ ನೌಕರರು ಬೆಲೆಕೊಡದೇ ಹೋಗಬಹುದು. ಸಂಬಂಧವನ್ನು ಆತ್ಮೀಯಗೊಳಿಸಲು ಪ್ರಯತ್ನಪಡುವಿರಿ. ಉದ್ಯೋಗದ ಸ್ಥಳದಲ್ಲಿ ಭಡ್ತಿಯ ನಿರೀಕ್ಷೆ ಇರುವುದು. ಮಾತನ್ನು ಅಪಾರ್ಥ ಮಾಡಿಕೊಳ್ಳುವ ಸಾಧ್ಯತೆ ಇದೆ. ನಿಮಗೆ ಸಿಗುವ ಗೌರವದಲ್ಲಿ ವ್ಯತ್ಯಾಸವಾಗಿ ಸಿಟ್ಟು ಬರಬಹುದು. ದಾಂಪತ್ಯದಲ್ಲಿ ಉಂಟಾದ ಬಿರುಕನ್ನು ಮಾತಿನಿಂದಲೇ ಸರಿಮಾಡಿಕೊಳ್ಳಿ. ಮಕ್ಕಳ ವಿವಾಹದ ಚಿಂತೆಯು ಕಾಡಲಿದೆ.
ಸಿಂಹ ರಾಶಿ: ನಿಮ್ಮ ಸ್ವಂತಿಕೆಯನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಇರಲಿದೆ. ದೂರದ ಬಂಧುಗಳ ಆಗಮನವು ಆಗಲಿದೆ. ಹಳೆಯ ಘಟನೆಗಳು ವಿಸ್ಮರಣೆಯಾಗಬಹುದು. ನಿಮ್ಮ ಆರ್ಥಿಕ ದೌರ್ಬಲ್ಯವನ್ನು ಆಡುಕೊಳ್ಳಬಹುದು. ನಿಮಗೆ ಗೊತ್ತಿಲ್ಲದೇ ಚರಾಸ್ತಿಯು ಇಲ್ಲವಾಗಬಹುದು. ಸಕಾಲಕ್ಕೆ ಯಾವದೂ ಆಗದೇ ಎಲ್ಲವೂ ಅಸ್ತವ್ಯಸ್ತವಾಗಲಿದೆ. ಉದ್ವಿಗ್ನತೆಗೆ ದಾರಿ ಮಾಡಿಕೊಡದೇ ಸಮಚಿತ್ತದಲ್ಲಿ ಇರುವಂತೆ ನೋಡಿಕೊಳ್ಳಿ. ನಿಮ್ಮ ಇರುವಿಕೆಯನ್ನು ತೋರಿಸುವ ಪ್ರಯತ್ನ ಮಾಡುವಿರಿ. ನೌಕರರ ವಿಷಯದಲ್ಲಿ ಕೋಪಗೊಳ್ಳುವ ಸನ್ನಿವೇಶ ಬರಬಹುದು. ನಿಮ್ಮ ಕೈಲಾಗದು ಎಂದು ಕೈಕಟ್ಟಿ ಕುಳಿತುಕೊಳ್ಳುವುದು ಬೇಡ. ಪ್ರಯತ್ನವಿರಲಿ. ನಿಮ್ಮನ್ನು ಯಾರಾದರೂ ಆಕರ್ಷಿಸಿಯಾರು. ನಿಮ್ಮ ಸಮಯೋಚಿತ ಉತ್ತರಗಳು ಧನಾತ್ಮಕ ಅಂಶಗಳನ್ನು ತಂದುಕೊಡುವುದು. ನಿಮ್ಮ ವರ್ತನೆಗಳು ಇತರರಿಗೆ ಇಷ್ಟವಾದೀತು.
ಕನ್ಯಾ ರಾಶಿ: ಶತ್ರುಗಳ ಹುಡುಕಾಟದಲ್ಲಿ ಸಫಲರಾಗುವುದಿಲ್ಲ. ಕೆತ್ತನೆಯ ಕಲಾವಿದರಿಗೆ ಹೆಚ್ಚು ಬೇಡಿಕೆ ಬರಬಹುದು. ಪಕ್ಷಪಾತದಿಂದ ಕಲಹವಾಗುವುದು. ನೌಕರರ ವಿಚಾರದಲ್ಲಿ ನಿಮ್ಮ ವರ್ತನೆಯು ಸರಿಯಾಗಿರಲಿ. ಬೌದ್ಧಿಕ ಕಸರತ್ತನ್ನು ಪ್ರದರ್ಶಿಸುವಿರಿ. ಒಂದೇ ರೀತಿಯಲ್ಲಿ ಜೀವನ ಸಾಗುವುದು ನಿಮಗೆ ಇಷ್ಟವಾಗದು. ಯಾವುದಕ್ಕೆ ಎಷ್ಟು ಸಮಯವನ್ನು ಕೊಡಬೇಕು ಎನ್ನುವುದನ್ನು ಪರೀಕ್ಷೆಯ ವಿದ್ಯಾರ್ಥಿಗಳು ನಿರ್ಧರಿಸಿ. ಭೂಮಿಯ ವ್ಯವಹಾರವು ಗೊಂದಲಮಯ ಆಗಬಹುದು. ಪ್ರೀತಿಯನ್ನು ದೂರಮಾಡಿಕೊಳ್ಳಲಿದ್ದೀರಿ. ನಿಮ್ಮ ಮೇಲೆ ಅಸಂಬದ್ಧ ಮಾತುಗಳು ಕೇಳಿಬರುವುದು. ನೀವು ಅತಂತ್ರ ಸ್ಥಿತಿಯಲ್ಲಿ ಸಿಕ್ಕಿಕೊಳ್ಳುವ ಹಾಗೆ ಆಗಬಹುದು. ವಿದೇಶದಲ್ಲಿ ಇದ್ದವರಿಗೆ ಕಾನೂನು ಸಂಘರ್ಷವು ಬರಬಹುದು. ಇಂದಿನ ವಾತಾವರಣದಿಂದ ನಿಮ್ಮ ಮನಸ್ಸು ಹಾಳಾಗುವುದು.
ತುಲಾ ರಾಶಿ: ನಿಮ್ಮ ಬಗ್ಗೆ ಯಾರಾದರೂ ಅಂದುಕೊಂಡಾರು ಎನ್ನುವ ಹಿಂಜರಿಕೆಯು ಇರಲಿದೆ. ಉನ್ನತಮಟ್ಟದ ಅಧ್ಯಯನವು ಮುಗಿಯುತ್ತಿರುವುದು ನಿಮಗೆ ಹೆಮ್ಮೆ ಎನಿಸುವುದು. ಸಂಗಾತಿಯ ಮಾತಿನಿಂದ ಬೇಸರವಾಗಲಿದೆ. ಸಮಯಪಾಲನೆಯಿಂದ ನಿಮ್ಮ ಕೆಲಸಗಳು ಸರಿಯಾಗುವುದು. ನೀರಿನಿಂದ ಭೀತಿಯು ಉಂಟಾಗುವುದು. ನಿಮ್ಮ ಮಾತುಗಳಲ್ಲಿ ನಂಬಿಕೆ ಇಲ್ಲವಾದೀತು. ವೃತ್ತಿಯನ್ನು ಉತ್ಸಾಹದಿಂದ ಮಾಡುವಿರಿ. ಸಂಗಾತಿಯು ನಿಮಗೆ ಕೆಲವು ಉಪಯುಕ್ತ ಮಾತುಗಳನ್ನು ಹೇಳಬಹುದು. ಒತ್ತಡವನ್ನು ನಿವಾರಿಸಿಕೊಳ್ಳಲು ಕೆಲವು ವಿಧಾನಗಳು ಇರಲಿದೆ. ಹಳೆಯ ವಾಹನವನ್ನು ಮಾರಾಟ ಮಾಡುವಿರಿ. ಸಂಬಂಧವು ಇಂದು ಉಪಯೋಗಕ್ಕೆ ಬರುವುದು.
ವೃಶ್ಚಿಕ ರಾಶಿ: ಮಹಿಳೆಯ ಕಾರಣದಿಂದ ನಿಮಗೆ ಧನನಷ್ಟವು ಆಗಬಹುದು. ಭೂಮಿಯನ್ನು ನಿಮ್ಮದಾಗಿಸಿಕೊಳ್ಳುವ ಪ್ರಯತ್ನವು ಸಫಲವಾಗುವುದು. ನಿಮಗೆ ಬರುವ ಪ್ರಶಂಸೆಯ ಮಾತನ್ನು ಅಲ್ಲಗಳೆಯುವಿರಿ. ಉದ್ಯೋಗದ ಒತ್ತಡದಿಂದ ನಿಮಗೆ ಅನಾರೋಗ್ಯದಿಂದ ಬಳಲುವಿರಿ. ಬರಬೇಕಾದ ಹಣವನ್ನು ಪಡೆದರೂ ಖರ್ಚಿಗೆ ದಾರಿ ತೆರೆದುಕೊಂಡು ಇರುವುದು. ಆಸ್ತಿಯ ಕಲಹವನ್ನು ಮನೆಯಲ್ಲಿಯೇ ಇತ್ಯರ್ಥ ಮಾಡಿಕೊಳ್ಳಿ. ಕಲಾವಿದರಿಗೆ ಅವಕಾಶವು ಬರುವುದು. ವಿದೇಶದ ವ್ಯವಹಾರಕ್ಕೆ ಮತ್ತಷ್ಟು ಬಲ ಬರಬಹುದು. ಗೃಹನಿರ್ಮಾಣದ ರೂಪವನ್ನು ನಿರ್ಧರಿಸಿಕೊಳ್ಳುವಿರಿ. ಸಮಯೋಚಿತ ಪ್ರಜ್ಞೆಯಿಂದ ಆಪತ್ತಿನ್ನು ದೂರಮಾಡಿಕೊಳ್ಳುವಿರಿ. ಆರೋಗ್ಯಕ್ಕೆ ತಜ್ಞರ ಸಲಹೆಯನ್ನು ಪಡೆದು ಮುಂದುವರಿಸಿರಿ. ಪ್ರಯಾಣಕ್ಕೆ ಮನಸ್ಸು ಇರದು.
ಧನು ರಾಶಿ: ಸ್ವಂತ ಉದ್ಯಮದ ನಿಮಿತ್ತ ಹೊರಗೆ ಹೋಗಬೇಕಾದೀತು. ಸರ್ಕಾರಕ್ಕೆ ಕೊಡಬೇಕಾದ ಹಣವನ್ನು ಇಂದು ಕೊಡಲಿದ್ದೀರಿ. ಪ್ರಭಾವೀ ವ್ಯಕ್ತಿಗಳನ್ನು ಎದುರು ಹಾಕಿಕೊಳ್ಳುವ ಸಂದರ್ಭವು ಬರಬಹುದು. ನೂತನ ಅಧಿಕಾರವು ಪ್ರಾಪ್ತವಾಗಲಿದೆ. ಮೇಲಧಿಕಾರಿಹಳ ಜೊತೆ ಯೋಜನೆಯ ಕುರಿತು ಚರ್ಚೆ ನಡೆಸುವಿರಿ. ಯಂತ್ರಗಳ ಮಾರಾಟ ಮಾಡುವವರಿಗೆ ಉತ್ತಮ ಲಾಭವಿರಲಿದೆ. ಕೆಲಸದಲ್ಲಿ ಆಸಕ್ತಿ ಇದ್ದರೂ ನಿಮ್ಮನ್ನು ಟೀಕಿಸಿದ ಕಾರಣ ಹಿಂದೇಟು ಹಾಕುವಿರಿ. ಆಹಾರಕ್ಕೋಸ್ಕರ ಅಧಿಕ ವೆಚ್ಚವನ್ನು ನೀವು ಮಾಡುವಿರಿ. ನಟರ ನಿರೀಕ್ಷೆಯು ಸತ್ಯವಾಗುವುದು. ಸಂಬಂಧಗಳ ನಡುವೆ ಪರಸ್ಪರ ಸೌಹಾರ್ದವು ಇರಲಿದೆ. ಸಾಹಸಕ್ಕೆ ಕಾರ್ಯಕ್ಕೆ ಹೋದಾಗ ನಿಮ್ಮ ಬಗ್ಗೆ ನಿಮಗೆ ಗೊತ್ತಿರಲಿ. ದುರಾಲೋಚನೆಯು ನಿಮ್ಮ ಮಾರ್ಗವನ್ನು ಬದಲಾಯಿಸುವುದು.
ಮಕರ ರಾಶಿ: ಧನವು ನಷ್ಟವಾದ ಕಾರಣ ಹತಾಶೆಯು ನಿಮ್ಮಲ್ಲಿ ಬರಬಹುದು. ತಂದೆಯ ಜೊತೆ ವಾಗ್ವಾದ ಮಾಡುವ ಸ್ಥಿತಿಯನ್ನು ತಂದುಕೊಳ್ಳುವಿರಿ. ವ್ಯವಹಾರದಲ್ಲಿ ಪಾರದರ್ಶಕತೆ ಕಾಣಿಸುವುದು. ಸಹೋದರಿಗೆ ಉಡುಗೊರೆ ನೀಡಿ ಖುಷಿಪಡಿಸುವಿರಿ. ಹಿತಶತ್ರುಗಳು ನಿಮ್ಮ ಸ್ಥಿತಿಯನ್ನು ಕಂಡು ಒಳಗೊಳಗೇ ಸಂತೋಷಪಡುವರು. ಸ್ಥಿರಾಸ್ತಿಯ ವಿಚಾರದಲ್ಲಿ ಗೊಂದಲು ಇರಲಿದೆ. ಇಂದು ಎಲ್ಲರಿಂದ ಪ್ರತ್ಯೇಕವಾಗಿ ಇರಲು ಇಷ್ಟಪಡುವಿರಿ. ನಿಮ್ಮ ಸಾಮರ್ಥ್ಯದ ಬಗ್ಗೆ ಇತರರಿಂದ ತಿಳಿದು ಖುಷಿಯಾಗುವುದು. ರಾಜಕೀಯದಲ್ಲಿ ಮುಂದುವರಿಯುವುದು ಕಷ್ಟವೆನಿಸಬಹುದು. ಪ್ರಯಾಣದಲ್ಲಿ ನೀವು ಸುರಕ್ಷತೆಗೆ ಮಹತ್ತ್ವ ಕೊಡಿ. ನಿಮ್ಮಿಂದ ಆಗುವ ಕೆಲಸವನ್ನು ಬೆಂಬಿಡದೇ ಮಾಡಿಸಿಕೊಳ್ಳುವರು.
ಕುಂಭ ರಾಶಿ: ಅಪರೂಪದ ವ್ಯಕ್ತಿಗಳನ್ನು ಭೇಟಿ ಮಾಡುವ ಸಂದರ್ಭವು ಬರಬಹುದು. ಉಪಕಾರದ ಸ್ಮರಣೆಯನ್ನು ನೀವು ಮಾಡಿಕೊಳ್ಳುವಿರಿ. ಇಂದು ದುಡಿಮೆಯು ಕಷ್ಟವೆನಿಸಬಹುದು. ವಿದ್ಯಾರ್ಥಿಗಳು ಪರೀಕ್ಷೆಯತ್ತ ಗಮನ ಕೊಡಬೇಕಾಗುವುದು. ಬಂಧುಗಳ ಮಾತು ನಿಮಗೆ ಕಿರಿಕಿರಿ ತರಿಸಬಹುದು. ಪುಣ್ಯಸ್ಥಳಗಳ ಭೇಟಿ ಮಾಡವಿರಿ. ನಿಮ್ಮ ಸೌಂದರ್ಯಕ್ಕೆ ಹೆಚ್ಚು ಮಹತ್ವವನ್ನು ಕೊಡುವಿರಿ. ಕುಟುಂಬದ ಜವಾಬ್ದಾರಿಯು ನಿಮಗೆ ಸಿಗಬಹುದು. ಚಂಚಲವಾದ ಮನಸ್ಸನ್ನು ನಿಶ್ಚಲಗೊಳಿಸಲು ಪ್ರಯತ್ನಿಸುವಿರಿ. ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ನಿಮಗೆ ಕೆಲವು ತಂತ್ರಗಳನ್ನು ಕೇಳಿ ಪಡೆಯುವಿರಿ. ಆಪ್ತರನ್ನು ಕಳೆದುಕೊಳ್ಳಲು ಕಷ್ಟವಾದೀತು. ಆಸ್ತಿಯನ್ನು ಮಾರಾಟ ಮಾಡಲು ಇಚ್ಛೆ ಇರುವುದು.
ಮೀನ ರಾಶಿ: ಆಸೆಯನ್ನು ಈಡೇರಿಸಿಕೊಂಡು ಸಂತೋಷಪಡುವಿರಿ. ದಾನದಲ್ಲಿ ಹೆಚ್ಚಿನ ಶ್ರದ್ಧೆಯನ್ನು ತೋರುವಿರಿ. ನಿಮ್ಮ ಬಗ್ಗೆ ಒಳ್ಳೆಯ ಭಾವವು ಬರಬಹುದು. ಸಂಗಾತಿಯ ಇಂದಿನ ಮಾತುಕತೆಗಳು ವಾಗ್ವಾದಕ್ಕೆ ತಿರುಗಬಹುದು. ವಿದ್ಯುತ್ ಉಪಕರಣಗಳ ಉದ್ಯಮದಿಂದ ಲಾಭವಾಗಲಿದೆ. ಉದ್ಯೋಗದ ಸ್ಥಳದಲ್ಲಿ ಒತ್ತಡ ಅನಿರೀಕ್ಷಿತವಾಗಿ ಹೆಚ್ಚುವುದು. ಗೊಂದಲದ ತೀರ್ಮಾನವು ಬೇಡ. ಎಲ್ಲವೂ ಅಂದುಕೊಂಡಂತೆ ಆಗದು ಎಂಬುದು ನಿಮ್ಮ ವಿಚಾರದಲ್ಲಿ ಸತ್ಯವಾಗುವುದು. ನಿಮ್ಮ ಆರಂಭವೇ ಸರಿಯಾಗದೇ ಇರುವುದರಿಂದ ಗುರಿಯೂ ತಪ್ಪಬಹುದು. ಇಂದು ಪ್ರವಾಸ ಮಾಡುವುದು ನಿಮಗೆ ಇಷ್ಟವಾಗದು. ಭವಿಷ್ಯದ ಬಗ್ಗೆ ನಿಮಗೆ ಭೀತಿ ಇರುವುದು.
ಲೋಹಿತಶರ್ಮಾ – 8762924271 (what’s app only)