ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವುದು ಕೆಲವರಿಗೆ ಅಭ್ಯಾಸ. ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2023 ಜುಲೈ 22) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಅಧಿಕ ಶ್ರಾವಣ ಮಾಸ, ಮಹಾನಕ್ಷತ್ರ: ಪುಷ್ಯಾ, ಮಾಸ: ಅಧಿಕ ಶ್ರಾವಣ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ಪಂಚಮೀ, ನಿತ್ಯನಕ್ಷತ್ರ: ಉತ್ತರಾಫಲ್ಗುಣೀ, ಯೋಗ: ವರಿಯಾನ್, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 14 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 03 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:27 ರಿಂದ 11:03ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:15 ರಿಂದ 03:51ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:14 ರಿಂದ 07:50ರ ವರೆಗೆ.
ಮೇಷ: ಮದುವೆ ಮೊದಲಾದ ಶುಭಸಮಾರಂಭಗಳಿಗೆ ಭೇಟಿಕೊಡುವಿರಿ. ಶಾಂತ ಚಿತ್ತದಿಂದ
ಎದುರಿಸಿದರೆ ಒಳ್ಳೆಯ ಫಲ ದೊರಕಲಿದೆ. ಆಸ್ತಿ ಖರೀದಿ ವಿಚಾರದಲ್ಲಿ ಎಚ್ಚರಿಕೆ ವಹಿಸಿ ಆತುರದಲ್ಲಿ ನಿರ್ಧಾರವನ್ನು ಮಾಡಬೇಡಿ. ಮಕ್ಕಳ ಬಗ್ಗೆ ಹೆಚ್ಚು ಅನುಮಾನ ಬೇಡ. ವಿದ್ಯಾರ್ಥಿಗಳು ಓದಿನಿಂದ ಶ್ರೇಯಸ್ಸನ್ನು ಪಡೆಯುವರು. ಅಂದುಕೊಂಡಿದ್ದರ ಕಡೆಗೆ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ನಿಮ್ಮ ಆಪ್ತೆರ ಜೊತೆ ಮೃದುವಾಗಿ ವರ್ತಿಸಿ. ಮಾಡುವ ಕೆಲಸದಲ್ಲಿ ಶ್ರದ್ಧೆ ಅವಶ್ಯವಾಗಿರಲಿ. ವಿವಾಹದ ವಿಚಾರದಲ್ಲಿ ಒಳ್ಳೆಯದಾಗಲಿದೆ. ಹಿತೈಷಿಗಳ ಮಾತಿನ ಮೇಲೆ ನಂಬಿಕೆ ಇರಲಿ. ನಿಮ್ಮನ್ನು ಹೊಗಳಿ ಶೂಲಕ್ಕೆ ಏರಿಸಬಹುದು. ನಿಮ್ಮ ಬಗ್ಗೆ ನಿಮಗೆ ಅರಿವಿರಲಿ.
ವೃಷಭ: ಅನಿರೀಕ್ಷಿತ ಘಟನೆಗಳಿಂದ ನೀವು ಬೆಚ್ಚಿಬೀಳುವಿರಿ. ಹೊಸ ವ್ಯಕ್ತಿಯ ಪರಿಚಯದಿಂದ ಸಂತಸವಾಗಲಿದೆ. ಹಳೆಯ ಸಾಲಗಳಿಂದ ಮುಕ್ತಿ ಸಿಗುವುದು. ಉದ್ಯೋಗಸ್ಥರಿಗೆ ಆದಾಯದಲ್ಲಿ ಅಲ್ಪ ಏರಿಕೆ ಇರಲಿದೆ. ಒತ್ತಡದಲ್ಲಿ ಕೆಲಸಚನ್ನು ನಿರ್ವಹಿಸಬೇಕಾದ ಅನಿವಾರ್ಯತೆ ಎದುರಾಗಬಹುದು. ಪಾಲುದಾರಿಕೆಯಲ್ಲಿ ತಾಳ್ಮೆ ಅಗತ್ಯ. ಅವಿವಾಹಿತರಿಗೆ ವಿವಾಹಯೋಗವು ಇರಲಿದೆ. ಯಾರನ್ನೋ ದ್ವೇಷಿಸುವ ಸ್ವಭಾವವು ಬದಲಾಗಲಿ. ಉಚಿತವಾದುದನ್ನು ಪಡೆಯಲು ಶ್ರಮಿಸುವಿರಿ. ಎಲ್ಲರೊಂದಿಗೂ ಅತಿಯಾದ ಸಲುಗೆ ಬೇಡ. ದೂರದ ಪ್ರಯಾಣದಿಂದ ಮನಸ್ಸಿಗೆ ನೆಮ್ಮದಿ ದೊರೆಯಲಿದೆ.
ಮಿಥುನ: ನೀವು ನಿಮ್ಮ ಆಸಕ್ತಿಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಅತ್ತ ಕಡೆ ಹೆಚ್ಚು ಪ್ರಯತ್ನವನ್ನು ಇಟ್ಟಕೊಳ್ಳುವಿರಿ. ಹಿಂದೆ ಮಾಡಿದ ಕಾರ್ಯಕ್ಕಾಗಿ ಇಂದು ಒಳ್ಳೆಯ ಫಲವು ದೊರೆಕಿದೆ. ಮನೆಯವರನ್ನು ಕರೆದುಕೊಂಡು ದೂರದ ಪ್ರಯಾಣವನ್ನು ಮಾಡುವಿರಿ. ಆಸ್ತಿಗಾಗಿ ದಾಖಲೆಗಳನ್ನು ಬದಲಿಸುವ ಯೋಚನೆ ಮಾಡುವಿರಿ. ಸರ್ಕಾರಿ ಕೆಲಸದಲ್ಲಿರುವವರಿಗೆ ಹೆಚ್ಚಿನ ಸ್ಥಾನವನ್ನು ನಿರೀಕ್ಷಿಸಬಹುದು. ಸಂಗಾತಿಯ ಆದಾಯವನ್ನು ಬಳಸಿಕೊಳ್ಳುವಿರಿ. ನೀವು ವೃತ್ತಿಯನ್ನು ಹೊಸ ರೀತಿಯಲ್ಲಿ ನೋಡುವಿರಿ. ಸತ್ಯವನ್ನು ಮುಚ್ಚಿಡುವುದು ನಿಮ್ಮ ಮಾತಿನಲ್ಲಿ ಗೊತ್ತಾಗಲಿದೆ.
ಕಟಕ: ಒಳ್ಳೆಯ ಚಿಂತನೆಗಳು ಹೆಚ್ಚಾಗಲಿವೆ. ಮನೆಯಲ್ಲಿ ಧಾರ್ಮಿಕ ಚಟುವಟಿಕೆಗಳಿಂದ ಶಾಂತಿ ಇರುವುದು. ಮಕ್ಕಳ ಬಗ್ಗೆ ಅನಾವಶ್ಯಕ ಅನುಮಾನ ಬೇಡ. ಓದುವ ಹವ್ಯಾಸವನ್ನು ಹೆಚ್ಚಿಸಿ. ಅಗತ್ಯದ ಖರ್ಚುಗಳಿಗೆ ಮಾತ್ರ ಪ್ರಾಧಾನ್ಯ ನೀಡಿ. ಹಣದ ಹರಿವು ಇಂದು ಮಂದಗತಿಯಲ್ಲಿ ಇರುತ್ತದೆ. ವ್ಯರ್ಥ ಓಡಾಟದಿಂದ ತೊಂದರೆಯಾಗಲಿದೆ. ಎಷ್ಟೇ ಸಮಾಧನಾ ಇದ್ದರೂ ಒತ್ತಡವೂ ನಿಮಗೆ ಗೊತ್ತಿಲ್ಲದೇ ಇರಲಿದೆ. ಸಣ್ಣ ವಿಷಯವನ್ನು ದೊಡ್ಡ ಮಾಡಿಕೊಳ್ಳುವುದು ಉಚಿತವಲ್ಲ. ಕಛೇರಿಯಲ್ಲಿ ಸಹೋದ್ಯೋಗಿಗಳ ಸಹಾಯವು ಸಿಗಲಿದೆ. ಹೆಚ್ಚು ವೃತ್ತಿಗಳಲ್ಲಿ ನಿಮಗೆ ಆಯ್ಕೆಗೆ ಗೊಂದಲವಾಗಬಹುದು.
ಸಿಂಹ: ಅಧಿಕಾರದಲ್ಲಿರುವವರು ಒತ್ತಡಕ್ಕೆ ಸಿಲುಕಿರುವರು. ಗೆಳೆಯರ ಮಾತಿಗೆ ಹೆಚ್ಚು ಬೆಲೆ ಆದರವನ್ನು ತೋರುವಿರಿ. ಆರೋಗ್ಯದ ಕಡೆ ಹೆಚ್ಚು ಗಮನವಿರಲಿ. ಬಂಧುಗಳು ಆರ್ಥಿಕ ಸಹಾಯವನ್ನು ಕೇಳಿಕೊಂಡು ಬರುವರು. ಎಲ್ಲದಕ್ಕೂ ಕೋಪ ಮಾಡಿಕೊಳ್ಳುವುದು ಸರಿಕಾಣಿಸದು. ಸರ್ಕಾರಿ ನೌಕರಿ ಸಿಕ್ಕುವ ಅವಕಾಶಗಳು ಕಡಿಮೆ ಇರಲಿದೆ. ಮಾತಮಾಡುವಾಗ ತಿಳಿದು ಮಾತನಾಡಿ. ಹಣವನ್ನು ಸಂಪಾದಿಸುವ ಛಲವಿದ್ದು ಸರಿಯಾದ ಮಾರ್ಗದಲ್ಲಿ ಮುಂದುವರಿಯಿರಿ. ಇನ್ನೊಬ್ಬರನ್ನು ಅನುಕರಿಸಿ ನಡೆಯುವುದು ಬೇಡ. ನಿಮಗೆ ಗೊತ್ತಿಲ್ಲದೇ ನಿಮ್ಮ ಬಗ್ಗೆ ಕೆಲವು ಮಾತುಗಳು ಇರಲಿವೆ. ಸೋಲನ್ನು ಒಪ್ಪಿಕೊಂಡು ಸಂತೋಷದಿಂದ ಮುನ್ನಡೆಯುವಿರಿ.
ಕನ್ಯಾ: ನೆಮ್ಮದಿಗಾಗಿ ಬಹಳ ಹುಡುಕಾಟ ಮಾಡುವಿರಿ. ಒತ್ತಡದಿಂದ ಹೊರಗೆ ಬರುವ ಮಾರ್ಗವನ್ನು ಕಂಡುಕೊಳ್ಳುವಿರಿ. ಉಳಿತಾಯಕ್ಕೆ ಹೆಚ್ಚಿನ ಆದ್ಯತೆ ನೀಡಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಉಂಟಾದ ಪ್ರಗತಿಯಿಂದ ಸಂತೋಷವಾಗಲಿದೆ. ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಿ. ಅಪರಿಚಿತ ವ್ಯಕ್ತಿಗಳ ಬಗ್ಗೆ ಎಚ್ಚರಿಕೆ ಇಂದ ಇರುವುದು ಮುಖ್ಯ. ಹೊರಗೆ ಸುತ್ತಾಟ ಮಾಡಿ ಮನಸ್ಸನ್ನು ಹಗುರಾಗಲಿದೆ. ಬಂಧುಗಳ ಮನೆಗೆ ಹೋಗಲಿದ್ದೀರಿ. ಗೌರವವಿಲ್ಲದ ಸ್ಥಳದಿಂದ ನೀವು ದೂರ ಸರಿಯುವಿರಿ. ಮಕ್ಕಳ ಜೊತೆ ಅಧಿಕ ಸಮಯವನ್ನು ಕಳೆಯುವಿರಿ.
ತುಲಾ: ಹಣಕಾಸಿನ ಕೊರತೆಯು ಸಲ್ಲದ ಕೆಲಸಕ್ಕೆ ನಿಮ್ಮನ್ನು ಜೋಡಿಸುವ ಸಾಧ್ಯತೆ ಇದೆ. ಪರೋಕ್ಷವಾಗಿ ನಿಮ್ಮ ನಿಮ್ಮವರನ್ನು ದ್ವೇಷಿಸುವಿರಿ. ಮಕ್ಕಳ ಮೇಲೆ ನಿಮ್ಮ ಕಾಳಜಿಯು ಅತಿಯಾಗಿರಲಿದೆ. ಅಸಾಧಾರ ಕೆಲಸವನ್ನು ಮಾಡಲು ಉತ್ಸಾಹಶೀಲರಾಗಿರುವಿರಿ. ನಿಮ್ಮ ಹಣದ ಅಭಾವವನ್ನು ಗೌಪ್ಯವಾಗಿ ಇಟ್ಟುಕೊಳ್ಳಿ. ದೂರದೃಷ್ಟಿಯನ್ನು ಇಟ್ಟುಕೊಂಡು ಕೆಲಸವನ್ನು ಮಾಡಿ. ಮನೆಯ ಕೆಲಸವನ್ನು ಹೆಚ್ಚು ಆನಂದದಿಂದ ಮಾಡುವಿರಿ. ಆಸ್ತಿಯ ಹಂಚಿಕೆಯಲ್ಲಿ ನಿಮ್ಮ ವಿರುದ್ಧ ಮಾತುಗಳು ಕೇಳಿಬರಬಹುದು.
ವೃಶ್ಚಿಕ: ಭೂಮಿಯ ವ್ಯವಹಾರದಲ್ಲಿ ಮಾತುಕತೆಗಳು ಯಥೇಚ್ಛವಾಗಿ ಆದರೂ ಲಾಭವು ಬಹಳ ಕಡಿಮೆ ಇರಲಿದೆ. ಓಡಾಟದಲ್ಲಿ ನಿಮ್ಮ ವಸ್ತವು ಕಳೆದುಹೋಗಬಹುದು. ಅಪರಿಚಿತರು ನಿಮ್ಮಿಂದ ಏನನ್ನಾದರೂ ಬಯಸಿಯಾರು. ಮನೆಗೆ ಬಂದ ಅತಿಥಿಯನ್ನು ಸತ್ಕಾರದಿಂದ ಸಂತೋಷಪಡಿಸುವಿರಿ. ವಾಹನದಿಂದ ಬಿದ್ದು ಗಾಯವನ್ನು ಮಾಡಿಕೊಳ್ಳುವಿರಿ. ಸಹೋದರಿಯ ವಿಚಾರದಲ್ಲಿ ನಿಮಗೆ ಅಸಮಾಧಾನ ಇರಲಿದೆ. ಸಂಗಾತಿಯ ಜೊತೆ ಪರಸ್ಥಳಗಳಿಗೆ ಹೋಗುವಿರಿ. ಕೆಲವು ಮಾತಗಳು ಪ್ರಶಾಂತವಾದ ಮನಸ್ಸನ್ನು ಹಾಳುಮಾಡುವುದು. ಉಸಿರಾಟದ ತೊಂದರೆಯಾಗುವ ಸಾಧ್ಯತೆ ಇದೆ.
ಧನುಸ್ಸು: ನಿಮ್ಮ ಗೌರವಕ್ಕೆ ತೊಂದರೆಯಾಗಲಿದೆ. ನೀವು ಸಮಯವನ್ನು ಹೊಂದಿಸಿಕೊಳ್ಳಲು ಕಷ್ಟಪಡುವಿರಿ. ವಾಯುವಿಹಾರದಿಂದ ಆರೋಗ್ಯದ ಮೇಲೆ ತೊಂದರೆಯಾಗಲಿದೆ. ರಾಜಕೀಯವಾಗಿ ಬೆಳೆಯಲು ತಂತ್ರಗಳನ್ನು ನೀವು ರೂಪಿಸುವಿರಿ. ಕಛೇರಿಯಲ್ಲಿ ಸ್ತ್ರೀಯರ ಸಹಾಯವನ್ನು ಪಡೆದು ಕೆಲಸವನ್ನು ಮುಗಿಸಿಸುವಿರಿ. ಸಂಗಾತಿಯ ವಿಚಾರದಲ್ಲಿ ನೀವು ತಿಳಿದುಕೊಳ್ಳಬೇಕಾದ ವಿಷಯವು ಬಹಳಷ್ಟು ಇರಲಿದೆ. ಆಗಾಗ ಆರೋಗ್ಯದಲ್ಲಿ ಪರಿವರ್ತನೆಯು ಕಾಣುತ್ತಿದ್ದು ವೈದ್ಯರ ಸಲಹೆಯನ್ನೂ ದೈವಜ್ಞರಿಂದ ಪರಿಹಾರವನ್ನೂ ತಿಳಿದುಕೊಳ್ಳಿ. ಇಷ್ಟದವರಿಗೆ ಏನನ್ನಾದರೂ ಕೊಡಲು ಇಷ್ಟಪಡುವಿರಿ.
ಮಕರ: ಸ್ವಂತ ಉದ್ಯಮದಲ್ಲಿ ನೀವು ನಷ್ಟವನ್ನು ಅನುಭವಿಸುವಿರಿ. ಉದ್ಯೋಗಕ್ಕೆ ಸಮಯವನ್ನು ಕೊಡಲಾಗದು. ಒತ್ತಡವು ಅಧಿಕವಿರಿಲಿ. ಹತ್ತಾರು ಜವಾಬ್ದಾರಿಗಳನ್ನು ವಹಿಸಿಕೊಳ್ಳುವಿರಿ. ಬೇರೆಯವರ ತಪ್ಪುಗಳನ್ನು ಹುಡುಕಿ ಹೇಳುವುದನ್ನು ಕಡಿಮೆ ಮಾಡಿಕೊಳ್ಳಿ. ಯಾರ ಮೇಲೂ ಉದ್ಧಟತನದ ಮಾತುಗಳನ್ನು ಆಡುವುದು ಉಚಿತವಲ್ಲ. ವಿದ್ಯಾಭ್ಯಾಸವು ಕಾರಣಾಂತರಗಳಿಂದ ನಿಲ್ಲಬಹುದು. ನಿಮಗೆ ಭರವಸೆಯನ್ನು ತುಂಬುವವರು ಬೇಕಾಗಿದ್ದಾರೆ. ಮನಸ್ಸು ಬಹಳ ದುರ್ಬಲಗೊಂಡು ನಕಾರಾತ್ಮಕ ಆಲೋಚನೆಗಳತ್ತ ಹೊರಳುವುದು. ನಿಮ್ಮದಲ್ಲದ ವಸ್ತುವನ್ನು ಇಟ್ಟುಕೊಳ್ಳುವುದು ಬೇಡ.
ಕುಂಭ: ನಿಮ್ಮ ಮೇಲೆ ಜವಾಬ್ದಾರಿಗಳು ಅಧಿಕವಾಗಲಿವೆ. ನಿಮ್ಮ ಮೇಲೆ ಕಟ್ಟ ದೃಷ್ಟಿಯು ಬೀಳುವ ಸಾಧ್ಯತೆ ಇದೆ. ಉದ್ಯೋಗವನ್ನು ಬಿಟ್ಟು ನಿಮ್ಮ ಉದ್ಯಮವನ್ನು ಮಾಡಲಿದ್ದೀರಿ. ಆಸ್ತಿಯ ಖರೀದಿಯ ಬಗ್ಗೆ ಖಚಿತ ನಿರ್ಧಾರವನ್ನು ಮಾಡಿಕೊಳ್ಳಿ. ಅನಿರೀಕ್ಷಿತವಾಗಿ ಅಮೂಲ್ಯ ಉಡುಗೊರೆಯನ್ನು ನಿಮ್ಮ ಆಪ್ತರಿಗೆ ಕೊಡುವಿರಿ. ನಿಮ್ಮ ಮೇಲಿನ ವಿಶ್ವಾಸವು ಕಡಿಮೆಯಾಗಲಿದೆ. ಇಷ್ಟಪಟ್ಟವರನ್ನು ಸೇರಿ ಸಂತೋಷಪಡುವಿರಿ. ಮಕ್ಕಳ ವಿಚಾರದಲ್ಲಿ ಹೆಚ್ಚಿನ ಜವಾಬ್ದಾರಿ ಇರಲಿದೆ. ನಿಮ್ಮ ಸ್ವಭಾವವನ್ನು ಬದಲಿಸಿಕೊಳ್ಳಬೇಕಾಗಬಹುದು. ಪ್ರಸಿದ್ಧ ನಟರನ್ನು ಭೇಟಿಯಾಗುವಿರಿ.
ಮೀನ: ವಾಹನದಿಂದ ಉದ್ಯೋಗವನ್ನು ಮಾಡುತ್ತಿದ್ದರೆ ಲಾಭವಿರಲಿದೆ. ವೃತ್ತಿಯಲ್ಲಿ ನಿಮಗೆ ಅಸಹಕಾರವನ್ನು ತೋರಿಸುವರು. ನೀವು ಯಾವುದರಲ್ಲಿಯೂ ಸ್ಥಿರವಾಗಿ ಇರದೇ ಮನಸ್ಸು ಪರಿವರ್ತನೆಯಾಗುತ್ತ ಇರುವುದು. ಸ್ನೇಹಿತರ ಜೊತೆ ವಿನಾಕಾರಣ ವಾಗ್ವಾದ ಮಾಡುವಿರಿ. ನಿಮಗೆ ವಿರೋಧಿಗಳ ಭಯವು ಕಾಡಬಹುದು. ಸಾಮಾಜಿಕ ಕೆಲಸಗಳನ್ನು ಮಾಡಲು ನೀವು ಹಿಂಜರಿಯುವಿರಿ. ನ್ಯಾಯಾಲಯದಲ್ಲಿ ನಿಮ್ಮ ಬಗ್ಗೆ ವಿರೋಧಿಗಳು ದೂರನ್ನು ಸಲ್ಲಿಸಬಹುದು. ಕುಟುಂಬಕ್ಕೆ ನಿಮ್ಮ ಸಹಕಾರವು ಅಲಭ್ಯವಾಗುವುದು.