Daily Horoscope: ಇಂದಿನ ರಾಶಿ ಭವಿಷ್ಯ, ಸಂಗಾತಿಯ ಒರಟುತನ ಈ ರಾಶಿಯವರಿಗೆ ಹಿಂಸೆ ಉಂಟುಮಾಡೀತು

|

Updated on: May 22, 2023 | 5:00 AM

ಇಂದಿನ (2023 ಮೇ​ 22) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

Daily Horoscope: ಇಂದಿನ ರಾಶಿ ಭವಿಷ್ಯ, ಸಂಗಾತಿಯ ಒರಟುತನ ಈ ರಾಶಿಯವರಿಗೆ ಹಿಂಸೆ ಉಂಟುಮಾಡೀತು
ಇಂದಿನ ರಾಶಿ ಭವಿಷ್ಯ
Image Credit source: freepik
Follow us on

ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದರೆ ಇಂದಿನ (2023 ಮೇ​ 22) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ಜ್ಯೇಷ್ಠ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ತೃತೀಯಾ, ನಿತ್ಯನಕ್ಷತ್ರ: ಮೃಗಾಶಿರಾ, ಯೋಗ: ಸುಕರ್ಮಾ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 04 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 53 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 07:41 ರಿಂದ 09:17ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 10:53 ರಿಂದ ಮಧ್ಯಾಹ್ನ 12:29ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:05 ರಿಂದ 03:41ರ ವರೆಗೆ.

ಮೇಷ: ನಿಮ್ಮನ್ನು ಅಳೆಯಲು ಆರಂಭಿಸುವರು. ಸುತ್ತಲೂ ನಿಮ್ಮ‌ ಕಣ್ಣಿರಲಿ. ಅಧ್ಯಾತ್ಮದ ಕಡೆ ಹೆಚ್ಚು ಒಲವು ಇರಲಿದೆ. ಹಣಕಾಸಿನ ಸಮಸ್ಯೆಯನ್ನು ಅತಿಯಾಗಿ‌ ಮನಸ್ಸಿಗೆ ಹಚ್ಚಿಕೊಳ್ಳುವುದು ಬೇಡ. ಭಿನ್ನಾಭಿಪ್ರಾಯಗಳಿಂದ ಉದ್ವೇಗಕ್ಕೆ ಒಳಗಾಗಬಹುದು. ಸೋಲನ್ನು ಸವಾಲಾಗಿ ಸ್ವೀಕರಿಸುವ ಮನಃಸ್ಥಿತಿ ಉಂಟಾಗಬಹುದು. ಕಂಡಿದ್ದನ್ನು ಕಂಡಂತೆ ಹೇಳಲು ಹೋಗುವುದಿಲ್ಲ. ನಿಮ್ಮದನ್ನೂ ಸ್ವಲ್ಪ ಸೇರಿಸುವಿರಿ. ವಿಷಯದ ಮೇಲೆ ಆಸಕ್ತಿ ಹೆಚ್ಚಾದೀತು. ಸಂಬಂಧಗಳು ದುರ್ಬಲವಾದೀತು.

ವೃಷಭ: ನೆಮ್ಮದಿಯಿಂದ ಇರಲು ಬೇಕಾದ ಮಾರ್ಗವನ್ನು ಹುಡುಕುವಿರಿ. ನಿಮ್ಮ ಆಲೋಚನಾಲಹರಿಯಲ್ಲಿ ಆನಂದದಿಂದ ಇರುವಿರಿ. ದ್ವೇಷಿಸುವ ನಿಮ್ಮ ಸ್ವಭಾವವನ್ನು ಬಸಲಿಸಿಕೊಳ್ಳುವುದು ಉತ್ತಮ. ಉಚಿತವಾದುದನ್ನು ಪಡೆಯಲು ಪರಿಶ್ರಮಪಡುವಿರಿ. ಕುಂಟುತ್ತಿರುವ ಬದುಕಿಗೆ ವೇಗವು ಬೇಕೆನಿಸಬಹುದು. ಸಂಗಾತಿಯ ಒರಟುತನ ನಿಮಗೆ ಹಿಂಸೆಯನ್ನು ಉಂಟುಮಾಡೀತು. ಕುಟುಂಬದ ಜೊತೆ ಸಮಾಧಾನದ ಮನಸ್ಸಿಂದ ಮಾತನಾಡಿ. ಮನಸ್ಸೂ ಹಗಯರಾದೀತು. ವಿದ್ಯಾಭ್ಯಾಸದಲ್ಲಿ ಚುರುಕುತನ ಅಗತ್ಯ.

ಮಿಥುನ: ಹಳೆಯ ಘಟನೆಗಳು ನಿಮ್ಮನ್ನು ಕಾಡಬಹುದು. ಮನಸ್ಸಿಗೆ ಏನೋ ಒಂದು ಹೊಸತು ಬೇಕು ಅನ್ನಿಸಬಹುದು. ಸಂಗಾತಿಯ ವರ್ತನೆಯನ್ನು ನಕಾರಾತ್ಮಕವಾಗಿ ಅರ್ಥಸಿಕೊಳ್ಳಬಹುದು. ನಿಮ್ಮ ವೃತ್ತಿಯನ್ನು ಹೊಸ ರೀತಿಯಲ್ಲಿ ನೋಡಬೇಕು ಎಂದು ಅನ್ನಿಸಬಹುದು. ಸತ್ಯವನ್ನು ಮುಚ್ಚಿಡುವುದು ನಿಮ್ಮ ಮಾತಿನಲ್ಲಿ ಗೊತ್ತಾಗಬಹುದು. ಸಾಮಜಿಕ ಜೀವನವು ಬಹಳ ಸುಂದರ ಎನಿಸಬಹುದು. ಆರ್ಥಿಕವಾಗಿ ನೀವು ಬಲವಾಗಿದ್ದರೂ ಇನ್ನಷ್ಟು ಸಂಪಾದಿಸುವ ತವಕ ಇರಲಿದೆ. ಖರೀದಿಸಿದ ವಸ್ತುವಿನ ಮೇಲೆ ಅತಿಯಾದ ಮೋಹ ಬೇಡ.

ಕಟಕ: ಇಂದು ನೀವು ಒತ್ತಡದಲ್ಲಿಯೇ ಇಂದಿನ ಕೆಲಸವನ್ನು ಮಾಡುವಿರಿ. ಸಂಗಾತಿಯ ಜೊತೆ ಸಣ್ಣ ಕಲಹವೂ ಆಗಬಹುದು. ತೊಂದರೆಗಳನ್ನು ದೊಡ್ಡ ಮಾಡಿಕೊಳ್ಳುವುದು ಬೇಡ. ಕಛೇರಿಯಲ್ಲಿ ಸಹೋದ್ಯೋಗಿಗಳ ಸಹಾಯದಿಂದ ನಿಮ್ಮ ಒತ್ತಡವು ಕಡಿಮೆ ಆಗಬಹುದು. ನೂತನ ಗೃಹ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಿಮಗೆ ಗೊಂದಲಗಳು ಬರಬಹುದು. ಸಂಪತ್ತು ಇದೆ ಎಂದು ದುಂದುವೆಚ್ಚವನ್ನು ಕಡಿಮೆ ಮಾಡಿ. ಹೊರಗಡೆಯ ಆಹಾರವನ್ನು ಬಿಡುವುದು ಒಳ್ಳೆಯದು. ಆರೋಗ್ಯದ ಬಗ್ಗೆ ಗಮನವಿರಿಸಿ.

ಸಿಂಹ: ಹಣವನ್ನು ಸಂಪಾದಿಸುವ ಛಲವಿದ್ದರೂ ಮಾರ್ಗವು ಶುದ್ಧವಾಗಿರಲಿ. ಅನ್ಯ ಮಾರ್ಗವನ್ನು ಅನುಸರಿಸುವುದು ಬೇಡ. ಮಕ್ಕಳ ಜೊತೆ ಕಳೆಯುವ ಸಮಯವು ನಿಮಗೆ ಸಂತೋಷವನ್ನು ಕೊಡುವುದು. ನೀವು ದುರಭ್ಯಾಸವನ್ನು ರೂಢಿಸಿಕೊಳ್ಳಬಹುದು, ನಿಮ್ಮ ನಡೆಯ ಮೇಲೆ ಗಮನವಿರಲಿ. ಅನಾರೋಗ್ಯವು ನಿಮ್ಮನ್ನು ಹಿಮ್ಮೆಟ್ಟಿಸೀತು. ಇಂದು ನೀವಂದುಕೊಂಡ ದೂರವನ್ನು ಕ್ರಮಿಸಲಾಗದಿದ್ದರೂ ಸ್ವಲ್ಪ ಭಾಗವನ್ನು ತಲುಪಿದ್ದೀರಿ ಎಂಬ ಸಂತೋಷ ನಿಮಗಿರುವುದು. ಸರ್ಕಾರದ ಕಾರ್ಯಗಳು ವೇಗವನ್ನು ಪಡೆದು ಒಂದು ಹಂತಕ್ಕೆ ಬಂದು ನಿಲ್ಲುವುದು. ಸ್ನೇಹಿತರನ್ನು ಮನೆಗೆ ಕರೆದುಕೊಂಡು ಬಂದು ಅವರ ಜೊತೆ ಕಾಲ ಕಳೆಯುವಿರಿ.

ಕನ್ಯಾ: ಹೊರಗೆ ಸುತ್ತಟ ಮಾಡಿ ದೇಹ ಹಾಗೂ ಮನಸ್ಸನ್ನು ಹಗುರ ಮಾಡಿಕೊಳ್ಳುವಿರಿ. ಸಂಗಾತಿಯ ಚಿಂತನೆಗಳನ್ನು ನೀವು ಗೌರವಿಸುವಿರಿ. ಜೀವನವನ್ನು ರೂಪಿಸಿಕೊಳ್ಳಲು ಬಹಳ ಪ್ರಯತ್ನವನ್ನು ಮಾಡಬಹುದು. ಗೌರವ ಸಿಗದ ಸ್ಥಾನದಿಂದ ನೀವು ದೂರ ಉಳಿಯುವಿರಿ. ನಿಮ್ಮ ನಿರಂತರ ಉತ್ಸಾಹವು ನಿಮಗೆ ಧನಾತ್ಮಕ ಅಂಶಗಳನ್ನು ತರುವುದು. ನಿಮ್ಮ ಕನಸನ್ನು ನನಸು ಮಾಡಿಕೊಳ್ಳಲು ಸಮಯವು ಹಿಡಿದೀತು. ತಾಳ್ಮೆ ಬೇಕಷ್ಟೇ. ನಿಮ್ಮ ಕಾರ್ಯದಲ್ಲಿ ನೀವು ತನ್ಮಯರಾಗುವಿರಿ. ಮೌನವು ನಿಮ್ಮ ಬಲವಾಗಿದೆ. ಅದೇ ನಿಮಗೆ ಉತ್ಸಾಹವನ್ನು ಕೊಡುತ್ತದೆ.

ತುಲಾ: ನಿಮ್ಮ ಬೌದ್ಧಿಕ ಸಾಮರ್ಥ್ಯದ ಬಗ್ಗೆ ನಿಮಗೇ ಆಶ್ಚರ್ಯವಾಗಬಹುದು. ನಿಮ್ಮ ಹಣದ ಕೊರತೆಯನ್ನು ಯಾರ ಬಳಿಯೂ ಪ್ರಕಟಿಸಬೇಡಿ. ನಿಮ್ಮನ್ನು ನೋಡುವ ದೃಷ್ಟಿ ಬದಲಾದೀತು. ಹಿರಿಯರ ಮಾರ್ಗದರ್ಶನವನ್ನು ಪಡೆದು ಮುನ್ನಡೆಯಿರಿ. ಆಸ್ತಿಗೆ ಸಂಬಂಧಿಸಿದಂತೆ ಸರಿಯಾದ ವ್ಯವಹಾರವನ್ನು ಮಾಡಿ. ಮೋಸ ಆಗುವ ಸಾಧ್ಯತೆ ಇದೆ. ಭವಿಷ್ಯದ ಬಗ್ಗೆ ನೀವು ಅನೂಹ್ಯ ಕಲ್ಪನೆಗಳನ್ನು ಇಟ್ಟುಕೊಂಡಿದ್ದೀರಿ. ವಾಸ್ತವದಲ್ಲಿ ಇದ್ದರೆ ಎಲ್ಲವೂ ಚೆನ್ನ. ನಿಮಗೆ ತಮ್ಮವರೆನ್ನುವ ಮಮಕಾರ ಅತಿಯಾಗಬಹುದು. ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸುವ ಯೋಚನೆ ಬರಬಹುದು. ಕಷ್ಟವಾದರೂ ಅಭ್ಯಾಸ ಮಾಡುವುದು ಒಳ್ಳೆಯದು.

ವೃಶ್ಚಿಕ: ಸುಮ್ಮನೇ ಯಾರನ್ನೂ ಎದುರುಹಾಕಿಕೊಳ್ಳುವುದು ಬೇಡ. ಮನಸ್ಸನ್ನು ಯಾವುದೋ ಬೇಡದ ವಿಷಯಗಳ ಆಲೋಚನೆಗೆ ಬಿಡುವಿರಿ. ಸ್ನೇಹಿತರ ನಿಮ್ಮನ್ನು ದೂರವಿಡಲು ಯೋಚಿಸುವರು. ನೀವು ನಿಮ್ಮ ಕೆಲಸದಲ್ಲಿ ಸಕ್ರಿಯರಾಗಿ. ನೂತನ ಸಿದ್ಧಾಂತಗಳಿಗೆ ಜೋತು ಬೀಳುವ ಸಾಹಸಕ್ಕೆ ಹೋಗುವುದು ಉತ್ತಮವಲ್ಲ. ಹತ್ತಿರ ಬಂಧುಗಳನ್ನು ಕಳೆದುಕೊಳ್ಳಲಿದ್ದೀರಿ. ಸ್ವಾದಿಷ್ಟವಾದ ಭೋಜನವನ್ನು ಮಾಡಲು ಉತ್ಸಾಹದಿಂದ ಇರುವಿರಿ. ಅನಗತ್ಯ ಖರ್ಚಿಗೆ ತಡೆ ಹಾಕಿಕೊಳ್ಳಿ. ಪ್ರೀತಿಯನ್ನು ಸರಿಯಾಗಿ ಅರ್ಥಮಾಡಿಕೊಂಡು ಮುಂದುವರಿಯಿರಿ.

ಧನುಸ್ಸು: ಆರೋಗ್ಯವನ್ನು ಕಾಪಾಡಿಕೊಳ್ಳಲು ಬಹಳ ಪ್ರಯತ್ನಿಸಿದರೂ ಸುಧಾರಣೆ ಕಷ್ಡವಾದೀತು‌. ರಾಜಕೀಯ ವ್ಯಕ್ತಿಗಳಿಗೆ ಹೆಚ್ಚು ಪ್ರಶಂಸೆ ಸಿಗುವುದು. ವಾಹನದಿಂದ ನಿಮಗೆ ತೊಂದರೆಗಳು ಆಗಬಹುದು‌. ಸ್ತ್ರೀಯರಿಗೆ ಹೆಚ್ಚು ಅನುಕೂಲಕರವಾಗಲಿದೆ‌. ಸಮಾರಂಭಗಳಲ್ಲಿ ಆಪ್ತರ ಭೇಟಿಯಾಗಲಿದೆ. ಕೊಡಬೇಕಾದವರಿಗೆ ಹಣವನ್ನು ಕೊಡುವಿರಿ. ನಿಮ್ಮ ಸ್ನೇಹಿತರ ಬಗ್ಗೆ ದೂರ ಕೊಡುವರು. ಹೊಸ ಆದಾಯವನ್ನು ಹುಡುಕಿಕೊಳ್ಳುವಿರಿ. ಎಲ್ಲ ವಿಷಯವನ್ನು ಆಮೂಲಾಗ್ರವಾಗಿ ತಿಳಿದು ಮಾತನಾಡಿ. ನಿಮ್ಮವರನ್ನು ನೀವು ದೂರಮಾಡಿಕೊಳ್ಳಲಿದ್ದೀರಿ. ಒತ್ತಾಯದಿಂದ ಇರಿಕೊಂಡರೂ ಪ್ರಯೋಜನವಾಗದು.

ಮಕರ: ಅಧಿಕಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ನಡುವೆ ಭಿನ್ನಾಭಿಪ್ರಾಯಗಳು ಬರಬಹುದು. ಯಾರನ್ನೋ ಬೊಟ್ಟು ಮಾಡಿ ತೋರಿಸುವ ಬದಲು ನಿಮ್ಮ ತಪ್ಪುಗಳನ್ನು ತಿದ್ದಿಕೊಳ್ಳುವುದು ಉತ್ತಮ. ಅಹಂಕಾರವನ್ನು ತೋರಿಸಿದರೆ ನಿಮ್ಮನ್ನು ತಾತ್ಸಾರ ಮಾಡಬಹುದು. ನಿಮ್ಮ ವಿದ್ಯಾಭ್ಯಾಸವು ಅರ್ಧಕ್ಕೆ ನಿಲ್ಲಬಹುದು. ನಿಮ್ಮ ಸ್ವಭಾವಗಳನ್ನು ಬದಲಿಸಲು ಸಲಹೆಗಳು ಬರಬಹುದು. ಯಾರದರೂ ನಿಮ್ಮ ಬಳಿ ಹಣದ ಸಹಾಯವನ್ನು ಮಾಡಲು ಕೇಳಬಹುದು. ಯೋಚಿಸಿ ಸಹಾಯ ಮಾಡಿ. ಪುನಃ ವಾರದೆಯೂ ಇರಬಹುದು. ನಿಮ್ಮ ಬಗ್ಗೆ ಅತಿಯಾದ ನಂಬಿಕೆಯನ್ನು ಇಟ್ಟುಕೊಳ್ಳುವುದು ಒಳ್ಳೆಯದಲ್ಲ.

ಕುಂಭ: ನೂತನ ವಸ್ತುಗಳನ್ನು ಖರೀದಿಸುವ ಸಾಧ್ಯತೆ ಇದೆ. ನಿಮ್ಮವರಿಗೆ ಅನಿರೀಕ್ಷಿತವಾಗಿ ಅಮೂಲ್ಯವಾದ ಉಡುಗೊರೆಯೊಂದನ್ನು ಕೊಡುವಿರಿ. ಆರೋಗ್ಯಕ್ಕೆ ಸಂಬಂಧಿಸಿದಂತೆ ವೈದ್ಯರ ಸಲಹೆಯನ್ನು ಪಡೆಯುವಿರಿ. ನಿಮ್ಮ ಮಾತುಗಳು ಇತರರಿಗೆ ಬೇಸರವನ್ನು ತರಿಸಬಹುದು. ದೇವತಾರಾಧನೆಯನ್ನು ಮಾಡಲು ಹೆಚ್ಚು ಇಷ್ಟ ಪಡುವಿರಿ. ಮನಸ್ಸು ಚಂಚಲವಾಗಿದ್ದು ಏಕಾಗ್ರವಾಗಿಸಲು ಕಷ್ಟಪಡಬೇಕಾದೀತು. ಕುಟುಂಬದ ಕಲಹವನ್ನು ಶಾಂತಗೊಳಿಸಲು ಪ್ರಯತ್ನಿಸುವಿರಿ. ಸಂಗಾತಿಯ ಜೊತೆ ಹೊಂದಾಣಿಕೆಯನ್ನು ಮಾಡಿಕೊಳ್ಳಲು ನಿಮಗೆ ಕಷ್ಟವಾದೀತು.

ಮೀನ: ನಿಮಗೆ ಇಂದು ಕುಟುಂಬಕ್ಕಿಂತಲೂ ಕಾರ್ಯವೇ ಮುಖ್ಯವಾಗಲಿದೆ. ಉದ್ಯೋಗದಲ್ಲಿ ನಿಷ್ಠೆ ಇರಲಿದೆ‌. ವಿರೋಧಿಗಳ ಬಗ್ಗೆ ಎಚ್ಚರಿಕೆ ಅಗತ್ಯ. ನಿಮ್ಮ ಬಗ್ಗೆ ಸಲ್ಲದ ವಾರ್ತೆಗಳನ್ನು ಹಬ್ಬಿಸಿಯಾರು. ಪ್ರಯತ್ನಕ್ಕೆ ಇಂದೇ ಫಲವು ಸಿಗುತ್ತದೆ ಎಂಬುದು ಬೇಡ. ನ್ಯಾಯಾಲಯದಲ್ಲಿ ದೂರುಗಳು ಇರಬಹುದು. ಹಣಕಾಸಿನ ವಿಚಾರದಲ್ಲಿ ಬಂಧುಗಳ ಜೊತೆ ಕಲಹವನ್ನು ಮಾಡಿಕೊಳ್ಳಬಹುದು. ಸಂಸಾರಕ್ಕೆ ಸಂಬಂಧಿಸಿದಂತೆ ಕಿವಿಮಾತುಗಳನ್ನು ಹಿರಿಯರು ಹೇಳಿಯಾರು. ಕೇಳಿ ಬಂದವರಿಗೆ ನಿಮ್ಮ ಕೈಯಲ್ಲಾಗುವ ಸಹಾಯವನ್ನು ಮಾಡುವಿರಿ.

-ಲೋಹಿತಶರ್ಮಾ ಇಡವಾಣಿ (ವಾಟ್ಸ್​ಆ್ಯಪ್-8762924271)