Nitya Bhavishya: ಇಂದಿನ ರಾಶಿಭವಿಷ್ಯ, ಈ ರಾಶಿಯವರು ಎಚ್ಚರವಾಗಿರಿ, ಮೋಸ ಆಗುವ ಸಾಧ್ಯತೆ ಇದೆ

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಮೇ 22) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Nitya Bhavishya: ಇಂದಿನ ರಾಶಿಭವಿಷ್ಯ, ಈ ರಾಶಿಯವರು ಎಚ್ಚರವಾಗಿರಿ, ಮೋಸ ಆಗುವ ಸಾಧ್ಯತೆ ಇದೆ
ಇಂದಿನ ರಾಶಿ ಭವಿಷ್ಯImage Credit source: freepik
Follow us
Rakesh Nayak Manchi
|

Updated on: May 22, 2023 | 6:00 AM

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಮೇ 22 ಸೋಮವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ಜ್ಯೇಷ್ಠ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ತೃತೀಯಾ, ನಿತ್ಯನಕ್ಷತ್ರ: ಮೃಗಾಶಿರಾ, ಯೋಗ: ಸುಕರ್ಮಾ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 04 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 53 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 07:41 ರಿಂದ 09:17ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 10:53 ರಿಂದ ಮಧ್ಯಾಹ್ನ 12:29ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:05 ರಿಂದ 03:41ರ ವರೆಗೆ.

ಸಿಂಹ: ಹಣವನ್ನು ಸಂಪಾದಿಸುವ ಛಲವಿದ್ದರೂ ಮಾರ್ಗವು ಶುದ್ಧವಾಗಿರಲಿ. ಅನ್ಯ ಮಾರ್ಗವನ್ನು ಅನುಸರಿಸುವುದು ಬೇಡ. ಮಕ್ಕಳ ಜೊತೆ ಕಳೆಯುವ ಸಮಯವು ನಿಮಗೆ ಸಂತೋಷವನ್ನು ಕೊಡುವುದು. ನೀವು ದುರಭ್ಯಾಸವನ್ನು ರೂಢಿಸಿಕೊಳ್ಳಬಹುದು, ನಿಮ್ಮ ನಡೆಯ ಮೇಲೆ ಗಮನವಿರಲಿ. ಅನಾರೋಗ್ಯವು ನಿಮ್ಮನ್ನು ಹಿಮ್ಮೆಟ್ಟಿಸೀತು. ಇಂದು ನೀವಂದುಕೊಂಡ ದೂರವನ್ನು ಕ್ರಮಿಸಲಾಗದಿದ್ದರೂ ಸ್ವಲ್ಪ ಭಾಗವನ್ನು ತಲುಪಿದ್ದೀರಿ ಎಂಬ ಸಂತೋಷ ನಿಮಗಿರುವುದು. ಸರ್ಕಾರದ ಕಾರ್ಯಗಳು ವೇಗವನ್ನು ಪಡೆದು ಒಂದು ಹಂತಕ್ಕೆ ಬಂದು ನಿಲ್ಲುವುದು. ಸ್ನೇಹಿತರನ್ನು ಮನೆಗೆ ಕರೆದುಕೊಂಡು ಬಂದು ಅವರ ಜೊತೆ ಕಾಲ ಕಳೆಯುವಿರಿ.

ಕನ್ಯಾ: ಹೊರಗೆ ಸುತ್ತಟ ಮಾಡಿ ದೇಹ ಹಾಗೂ ಮನಸ್ಸನ್ನು ಹಗುರ ಮಾಡಿಕೊಳ್ಳುವಿರಿ. ಸಂಗಾತಿಯ ಚಿಂತನೆಗಳನ್ನು ನೀವು ಗೌರವಿಸುವಿರಿ. ಜೀವನವನ್ನು ರೂಪಿಸಿಕೊಳ್ಳಲು ಬಹಳ ಪ್ರಯತ್ನವನ್ನು ಮಾಡಬಹುದು. ಗೌರವ ಸಿಗದ ಸ್ಥಾನದಿಂದ ನೀವು ದೂರ ಉಳಿಯುವಿರಿ. ನಿಮ್ಮ ನಿರಂತರ ಉತ್ಸಾಹವು ನಿಮಗೆ ಧನಾತ್ಮಕ ಅಂಶಗಳನ್ನು ತರುವುದು. ನಿಮ್ಮ ಕನಸನ್ನು ನನಸು ಮಾಡಿಕೊಳ್ಳಲು ಸಮಯವು ಹಿಡಿದೀತು. ತಾಳ್ಮೆ ಬೇಕಷ್ಟೇ. ನಿಮ್ಮ ಕಾರ್ಯದಲ್ಲಿ ನೀವು ತನ್ಮಯರಾಗುವಿರಿ. ಮೌನವು ನಿಮ್ಮ ಬಲವಾಗಿದೆ. ಅದೇ ನಿಮಗೆ ಉತ್ಸಾಹವನ್ನು ಕೊಡುತ್ತದೆ.

ತುಲಾ: ನಿಮ್ಮ ಬೌದ್ಧಿಕ ಸಾಮರ್ಥ್ಯದ ಬಗ್ಗೆ ನಿಮಗೇ ಆಶ್ಚರ್ಯವಾಗಬಹುದು. ನಿಮ್ಮ ಹಣದ ಕೊರತೆಯನ್ನು ಯಾರ ಬಳಿಯೂ ಪ್ರಕಟಿಸಬೇಡಿ. ನಿಮ್ಮನ್ನು ನೋಡುವ ದೃಷ್ಟಿ ಬದಲಾದೀತು. ಹಿರಿಯರ ಮಾರ್ಗದರ್ಶನವನ್ನು ಪಡೆದು ಮುನ್ನಡೆಯಿರಿ. ಆಸ್ತಿಗೆ ಸಂಬಂಧಿಸಿದಂತೆ ಸರಿಯಾದ ವ್ಯವಹಾರವನ್ನು ಮಾಡಿ. ಮೋಸ ಆಗುವ ಸಾಧ್ಯತೆ ಇದೆ. ಭವಿಷ್ಯದ ಬಗ್ಗೆ ನೀವು ಅನೂಹ್ಯ ಕಲ್ಪನೆಗಳನ್ನು ಇಟ್ಟುಕೊಂಡಿದ್ದೀರಿ. ವಾಸ್ತವದಲ್ಲಿ ಇದ್ದರೆ ಎಲ್ಲವೂ ಚೆನ್ನ. ನಿಮಗೆ ತಮ್ಮವರೆನ್ನುವ ಮಮಕಾರ ಅತಿಯಾಗಬಹುದು. ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸುವ ಯೋಚನೆ ಬರಬಹುದು. ಕಷ್ಟವಾದರೂ ಅಭ್ಯಾಸ ಮಾಡುವುದು ಒಳ್ಳೆಯದು.

ವೃಶ್ಚಿಕ: ಸುಮ್ಮನೇ ಯಾರನ್ನೂ ಎದುರುಹಾಕಿಕೊಳ್ಳುವುದು ಬೇಡ. ಮನಸ್ಸನ್ನು ಯಾವುದೋ ಬೇಡದ ವಿಷಯಗಳ ಆಲೋಚನೆಗೆ ಬಿಡುವಿರಿ. ಸ್ನೇಹಿತರ ನಿಮ್ಮನ್ನು ದೂರವಿಡಲು ಯೋಚಿಸುವರು. ನೀವು ನಿಮ್ಮ ಕೆಲಸದಲ್ಲಿ ಸಕ್ರಿಯರಾಗಿ. ನೂತನ ಸಿದ್ಧಾಂತಗಳಿಗೆ ಜೋತು ಬೀಳುವ ಸಾಹಸಕ್ಕೆ ಹೋಗುವುದು ಉತ್ತಮವಲ್ಲ. ಹತ್ತಿರ ಬಂಧುಗಳನ್ನು ಕಳೆದುಕೊಳ್ಳಲಿದ್ದೀರಿ. ಸ್ವಾದಿಷ್ಟವಾದ ಭೋಜನವನ್ನು ಮಾಡಲು ಉತ್ಸಾಹದಿಂದ ಇರುವಿರಿ. ಅನಗತ್ಯ ಖರ್ಚಿಗೆ ತಡೆ ಹಾಕಿಕೊಳ್ಳಿ. ಪ್ರೀತಿಯನ್ನು ಸರಿಯಾಗಿ ಅರ್ಥಮಾಡಿಕೊಂಡು ಮುಂದುವರಿಯಿರಿ.

-ಲೋಹಿತಶರ್ಮಾ ಇಡವಾಣಿ

ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ