Daily Horoscope: ಇಂದಿನ ರಾಶಿ ಭವಿಷ್ಯ, ಈ ರಾಶಿಯವರಿಗೆ ಸಂಗಾತಿಯ ಜೊತೆ ಸಣ್ಣ ಕಲಹ ಆಗಬಹುದು

ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಮೇ​ 22) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Daily Horoscope: ಇಂದಿನ ರಾಶಿ ಭವಿಷ್ಯ, ಈ ರಾಶಿಯವರಿಗೆ ಸಂಗಾತಿಯ ಜೊತೆ ಸಣ್ಣ ಕಲಹ ಆಗಬಹುದು
ಇಂದಿನ ರಾಶಿ ಭವಿಷ್ಯImage Credit source: freepik
Follow us
Rakesh Nayak Manchi
|

Updated on: May 22, 2023 | 5:30 AM

ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದರೆ ಇಂದಿನ (2023 ಮೇ​ 22) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ಜ್ಯೇಷ್ಠ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ತೃತೀಯಾ, ನಿತ್ಯನಕ್ಷತ್ರ: ಮೃಗಾಶಿರಾ, ಯೋಗ: ಸುಕರ್ಮಾ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 04 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 53 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 07:41 ರಿಂದ 09:17ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 10:53 ರಿಂದ ಮಧ್ಯಾಹ್ನ 12:29ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:05 ರಿಂದ 03:41ರ ವರೆಗೆ.

ಮೇಷ: ನಿಮ್ಮನ್ನು ಅಳೆಯಲು ಆರಂಭಿಸುವರು. ಸುತ್ತಲೂ ನಿಮ್ಮ‌ ಕಣ್ಣಿರಲಿ. ಅಧ್ಯಾತ್ಮದ ಕಡೆ ಹೆಚ್ಚು ಒಲವು ಇರಲಿದೆ. ಹಣಕಾಸಿನ ಸಮಸ್ಯೆಯನ್ನು ಅತಿಯಾಗಿ‌ ಮನಸ್ಸಿಗೆ ಹಚ್ಚಿಕೊಳ್ಳುವುದು ಬೇಡ. ಭಿನ್ನಾಭಿಪ್ರಾಯಗಳಿಂದ ಉದ್ವೇಗಕ್ಕೆ ಒಳಗಾಗಬಹುದು. ಸೋಲನ್ನು ಸವಾಲಾಗಿ ಸ್ವೀಕರಿಸುವ ಮನಸ್ಥಿತಿ ಉಂಟಾಗಬಹುದು. ಕಂಡಿದ್ದನ್ನು ಕಂಡಂತೆ ಹೇಳಲು ಹೋಗುವುದಿಲ್ಲ. ನಿಮ್ಮದನ್ನೂ ಸ್ವಲ್ಪ ಸೇರಿಸುವಿರಿ. ವಿಷಯದ ಮೇಲೆ ಆಸಕ್ತಿ ಹೆಚ್ಚಾದೀತು. ಸಂಬಂಧಗಳು ದುರ್ಬಲವಾದೀತು.

ವೃಷಭ: ನೆಮ್ಮದಿಯಿಂದ ಇರಲು ಬೇಕಾದ ಮಾರ್ಗವನ್ನು ಹುಡುಕುವಿರಿ. ನಿಮ್ಮ ಆಲೋಚನಾಲಹರಿಯಲ್ಲಿ ಆನಂದದಿಂದ ಇರುವಿರಿ. ದ್ವೇಷಿಸುವ ನಿಮ್ಮ ಸ್ವಭಾವವನ್ನು ಬಸಲಿಸಿಕೊಳ್ಳುವುದು ಉತ್ತಮ. ಉಚಿತವಾದುದನ್ನು ಪಡೆಯಲು ಪರಿಶ್ರಮಪಡುವಿರಿ. ಕುಂಟುತ್ತಿರುವ ಬದುಕಿಗೆ ವೇಗವು ಬೇಕೆನಿಸಬಹುದು. ಸಂಗಾತಿಯ ಒರತಟುತನ ನಿಮಗೆ ಹಿಂಸೆಯನ್ನು ಉಂಟುಮಾಡೀತು. ಕುಟುಂಬದ ಜೊತೆ ಸಮಾಧಾನದ ಮನಸ್ಸಿಂದ ಮಾತನಾಡಿ. ಮನಸ್ಸೂ ಹಗಯರಾದೀತು. ವಿದ್ಯಾಭ್ಯಾಸದಲ್ಲಿ ಚುರುಕುತನ ಅಗತ್ಯ.

ಮಿಥುನ: ಹಳೆಯ ಘಟನೆಗಳು ನಿಮ್ಮನ್ನು ಕಾಡಬಹುದು. ಮನಸ್ಸಿಗೆ ಏನೋ ಒಂದು ಹೊಸತು ಬೇಕು ಅನ್ನಿಸಬಹುದು. ಸಂಗಾತಿಯ ವರ್ತನೆಯನ್ನು ನಕಾರಾತ್ಮಕವಾಗಿ ಅರ್ಥಸಿಕೊಳ್ಳಬಹುದು. ನಿಮ್ಮ ವೃತ್ತಿಯನ್ನು ಹೊಸ ರೀತಿಯಲ್ಲಿ ನೋಡಬೇಕು ಎಂದು ಅನ್ನಿಸಬಹುದು. ಸತ್ಯವನ್ನು ಮುಚ್ಚಿಡುವುದು ನಿಮ್ಮ ಮಾತಿನಲ್ಲಿ ಗೊತ್ತಾಗಬಹುದು. ಸಾಮಜಿಕ ಜೀವನವು ಬಹಳ ಸುಂದರ ಎನಿಸಬಹುದು. ಆರ್ಥಿಕವಾಗಿ ನೀವು ಬಲವಾಗಿದ್ದರೂ ಇನ್ನಷ್ಟು ಸಂಪಾದಿಸುವ ತವಕ ಇರಲಿದೆ. ಖರೀದಿಸಿದ ವಸ್ತುವಿನ ಮೇಲೆ ಅತಿಯಾದ ಮೋಹ ಬೇಡ.

ಕಟಕ: ಇಂದು ನೀವು ಒತ್ತಡದಲ್ಲಿಯೇ ಇಂದಿನ ಕೆಲಸವನ್ನು ಮಾಡುವಿರಿ. ಸಂಗಾತಿಯ ಜೊತೆ ಸಣ್ಣ ಕಲಹವೂ ಆಗಬಹುದು. ತೊಂದರೆಗಳನ್ನು ದೊಡ್ಡ ಮಾಡಿಕೊಳ್ಳುವುದು ಬೇಡ. ಕಛೇರಿಯಲ್ಲಿ ಸಹೋದ್ಯೋಗಿಗಳ ಸಹಾಯದಿಂದ ನಿಮ್ಮ ಒತ್ತಡವು ಕಡಿಮೆ ಆಗಬಹುದು. ನೂತನ ಗೃಹ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಿಮಗೆ ಗೊಂದಲಗಳು ಬರಬಹುದು. ಸಂಪತ್ತು ಇದೆ ಎಂದು ದುಂದುವೆಚ್ಚವನ್ನು ಕಡಿಮೆ ಮಾಡಿ. ಹೊರಗಡೆಯ ಆಹಾರವನ್ನು ಬಿಡುವುದು ಒಳ್ಳೆಯದು. ಆರೋಗ್ಯದ ಬಗ್ಗೆ ಗಮನವಿರಿಸಿ.

-ಲೋಹಿತಶರ್ಮಾ ಇಡವಾಣಿ

ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ