Daily horoscope: ಈ ರಾಶಿಯವರು ವಾಹನ ಖರೀದಿಗೆ ಮನಸ್ಸು ಮಾಡಲಿದ್ದಾರೆ

|

Updated on: Apr 23, 2023 | 5:15 AM

ಇಂದಿನ (2023 ಏಪ್ರಿಲ್​ 23) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

Daily horoscope: ಈ ರಾಶಿಯವರು ವಾಹನ ಖರೀದಿಗೆ ಮನಸ್ಸು ಮಾಡಲಿದ್ದಾರೆ
ಪ್ರಾತಿನಿಧಿಕ ಚಿತ್ರ
Follow us on

ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಏಪ್ರಿಲ್​ 23) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ : ಅಶ್ವಿನೀ, ಮಾಸ : ವೈಶಾಖ, ಪಕ್ಷ : ಶುಕ್ಲ, ವಾರ : ಭಾನು, ತಿಥಿ : ತೃತೀಯಾ, ನಿತ್ಯನಕ್ಷತ್ರ : ರೋಹಿಣೀ, ಯೋಗ : ಸೌಭಾಗ್ಯ, ಕರಣ : ಗರಜ, ಸೂರ್ಯೋದಯ ಬೆಳಗ್ಗೆ 06 ರಿಂದ 15 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 46 ನಿಮಿಷಕ್ಕೆ, ರಾಹು ಕಾಲ ಸಂಜೆ 05:12 ರಿಂದ 06:46ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:31 ರಿಂದ 02:05ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:38 ರಿಂದ 05:12ರ ವರೆಗೆ.

ಮೇಷ: ಉದ್ಯೋಗದ ನಿಮಿತ್ತ ಪ್ರಯಾಣವು ಅವಶ್ಯಕವಾದರೆ ಮಾತ್ರ ಮಾಡಿ.‌ ಇಲ್ಲವಾದರೆ ಬೇಡ. ನೀವು ಅಪರೂಪಕ್ಕೆ ಸಿಕ್ಕ ಸದನೇಹಿತನ ಜೊತೆ ಸಮಯವನ್ನು ಕಳೆಯುವಿರಿ. ದೇವರ ಸೇವೆ ಮಾಡುವ ಮನಸ್ಸಾಗಲಿದೆ. ಈಗಾಗಲೇ ಹೊಸ ಯೋಜನೆಯ ಕುರಿತು ಆಲೋಚಿಸಿದ್ದರೆ ಇಂದು ಅದನ್ನು ಪ್ರಾರಂಭಿಸಬಹುದು. ವೃತ್ತಿಜೀವನದಲ್ಲಿ ಒಳ್ಳೆಯ ಹಂತವನ್ನು ತಲುಪಲು ಇಂದಿನಿಂದ‌ ಶ್ರಮವಹಿಸುವುದು ಅಗತ್ಯ. ಮಂಡಿನೋವಿನಿಂದ ಇಂದು ಕಷ್ಟಪಡುವಿರಿ. ಯಾರನ್ನೂ ನಂಬುವ ಸ್ಥಿತಿಯಲ್ಲಿ ಇಂದು ನೀವಿರುವುದಿಲ್ಲ. ಅದಷ್ಟು ಕಡಿಮೆ ಮಾತನಾಡಿ.

ವೃಷಭ: ನೀವು ವಿವಾಹ ಸಮಾರಂಭದಲ್ಲಿ ಭಾಗವಹಿಸುವಿರಿ. ನಿಮ್ಮ ಮಕ್ಕಳ ವೃತ್ತಿಜೀವನದ ಬಗ್ಗೆ ನೀವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಿದೆ. ವೈಯಕ್ತಿಕ ಸಂಬಂಧದಲ್ಲಿ ಅನ್ನೋನ್ಯತೆ ಹೆಚ್ಚಾಗುವ ಸಾಧ್ಯತೆ ಇದೆ‌. ಪುಣ್ಯಕ್ಷೇತ್ರಗಳಿಗೆ ಪ್ರವಾಸ ಹೋಗುವಿರಿ. ವೃತ್ತಿಯಲ್ಲಿ ಗೊಂದಲವಿರಲಿದೆ‌. ಅಲ್ಪಾವಧಿಯ ವೃತ್ತಿಗೆ ಸೇರಿಕೊಳ್ಳುವುದು ಉತ್ತಮ. ಯಾರ ಮೇಲೋ ಸಿಟ್ಟುಗೊಂಡು ಇನ್ಯಾರಮೇಲೋ ತೀರಿಸಿಕೊಳ್ಳುವುದು ಬೇಡ. ದೂರದ ಊರಿಗೆ ಹೋದಾಗ ಉತ್ತಮ ವ್ಯವಸ್ಥೆ ಆಗಲಿದೆ. ಶಿಕ್ಷಕರು ಆದಷ್ಟು ಜಾಗರೂಕರಗಿ ವರ್ತಿಸಿ. ನಿಮ್ಮನ್ನು ಮಕ್ಕಳು ನೋಡುವರು. ಆಹಾರದಲ್ಲಿ ಮಿತಿ ಇರಲಿ.

ಮಿಥುನ: ಹೊಸ ಆದಾಯ ಮೂಲವನ್ನು ಸೃಷ್ಟಿಮಾಡಿಕೊಳ್ಳುವಿರಿ. ನಿಮ್ಮ ಸೌಮ್ಯಸ್ವಭಾವ ಮತ್ತು ಅತ್ಯುತ್ತಮ ಸಂವಹನ ಕೌಶಲ್ಯಕ್ಕಾಗಿ ನೀಮ್ಮನ್ನು ಪ್ರಶಂಸೆ ಸಿಗಬಹುದು. ಸಾಲಗಾರರಿಂದ ನೀವು ಬಾಕಿ ಹಣವನ್ನು ಮರಳಿ ಬರಲಿದೆ. ಮಾತನ್ನು ಸ್ವಲ್ಪ ಕಡಿತಗೊಳಿಸಿದರೆ ಸುಖ. ಕೆಲಸದ ಸ್ಥಳದಲ್ಲಿ ನಿಮ್ಮ ಕಾರ್ಯಕ್ಷಮತೆಯನ್ನು ಪ್ರಶಂಸಿಸಲಾಗುತ್ತದೆ. ನಿಮ್ಮದಲ್ಲದ ವಿಚಾರಕ್ಕೆ ನೀವು ಮೂಗು ತೂರಿಸಬೇಡಿ. ಪ್ರೇಮದ ವಿಚಾರದಲ್ಲಿ ಅನುಮಾನ ಬರಬಹುದು.‌ ಗುಟ್ಟಾಗಿ ವಿಚಾರವನ್ನು ತಿಳಿದುಕೊಳ್ಳುವಿರಿ. ಆಡಿದ ಮಾತಿನ ತಪ್ಪಿಗೆ ಕ್ಷಮೆ ಕೇಳುವರು.

ಕರ್ಕ: ನಿವೃತ್ತಿಯ ಜೀವನ ಬೇಸರ ತರಿಸುವುದು.‌ ಕುಳಿತಲ್ಲೇ ಕುಳಿತ ನಿಮಗೆ ಕೆಲಸವನ್ನು ಮಾಡುವ ಅಪೇಕ್ಷೆ ಉಂಟಾಗುವುದು. ನಿಮ್ಮ ಗುರಿಯ ಮೇಲೆ ನಿಮ್ಮ ಗಮನವಿರಲಿ. ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಹೋಗುವ ಆಸಕ್ತಿಯನ್ನು ಹೊಂದುವರಿ. ಅನಾರೋಗ್ಯ ಕಾಣಿಸಿಕೊಳ್ಳಬಹುದು. ಶೀಘ್ರವಾಗಿ ಮದ್ದು ಮಾಡಿ. ಕೆಲಸದಲ್ಲಿ ನೀವು ಕಡಿಮೆ ಪ್ರಯತ್ನದಿಂದ ಉತ್ತಮ ಫಲಿತಾಂಶಗಳನ್ನು ಪಡೆಯಬಹುದಾಗಿದೆ. ಆದರೆ ನಿಮ್ಮ ಬುದ್ಧಿಯನ್ನು ಬಳಸಿಕೊಳ್ಳಬೇಕಿದೆ. ವೈವಾಹಿಕ ಜೀವನವು ತುಂಬಾ ಸರಸಮಯವಾಗಿರುವಿದು. ಕಾರ್ಯ ಸ್ಥಳದಲ್ಲಿ ನಿಮ್ಮ ವ್ಯವಸ್ಥಾಪಕರೊಂದಿಗೆ ನೀವು ಉತ್ತಮ ಬಾಂಧವ್ಯವನ್ನು ಹೊಂದುವಿರಿ.

ಸಿಂಹ: ನಿಮ್ಮವರ ಬಗ್ಗೆ ನೀವೆಲ್ಲೇ ಇದ್ದರೂ ಸಂತೋಷದ ಸುದ್ದಿಯು ಬರಲಿದೆ. ಯಾರ ಬಗ್ಗೆಯೂ ಅಸೂಯೆಪಡಬೇಕಾದ ಅವಶ್ಯಕತೆ ಇಲ್ಲ. ನಿಮ್ಮ ಕೆಲಸದ ವಿಧಾನವನ್ನು ಬದಲಾಯಿಸಿಕೊಳ್ಳಿ. ವಿದೇಶಕ್ಕೆ ಹೋಗಲು ಉದ್ಯೋಗದ ಸ್ಥಳದಿಂದ ಕರೆ ಬರಬಹುದು. ವ್ಯಾಪಾರದಲ್ಲಿ ನಿಮ್ಮದೇ ವಿಧಾನವನ್ನು ರೂಪಿಸಿಕೊಳ್ಳಿ. ಹೆಚ್ಚು ಆದಾಯ ಗಳಿಸಿ. ಮಕ್ಕಳ ಯಶಸ್ಸಿನಿಂದ ನೀವು ನಿಮ್ಮಲ್ಲಿ ಉತ್ಸಾಹವು ಅಧಿಕವಾಗುವುದು. ಹೊಸ ಯೋಜನೆಗಳು ನಿಮ್ಮನರಿಸಿ ಬರಲಿವೆ. ದಾಂಪತ್ಯದಲ್ಲಿ ಕಿರಿಕಿರಿಯ ಅನುಭವವಾದರೆ ತಟಸ್ಥರಾಗಿ. ಎಲ್ಲವೂ ತಾನಾಗಿಯೇ ತಿಳಿದು ಬರುತ್ತದೆ. ಪೂರ್ವಾಪರ ಯೋಚನೆ ಇಲ್ಲದೇ ಮಾತನಾಡಿ ಸಂಬಂಧವನ್ನು ಹಾಳುಮಾಡಿಕೊಳ್ಳಬೇಡಿ.

ಕನ್ಯಾ: ಸಂಪತ್ತನ್ನು ಇಂದು ಕಳೆದುಕೊಳ್ಳುವಿರಿ. ಇಷ್ಟು ದಿನ‌ ಆಗಮನ ಮಾತ್ರ ಆಗಿತ್ತು.‌ ಇನ್ನು ಧನಗಮನವೇ ಹೆಚ್ಚಾಗುವುದು. ನಿಮ್ಮ ಮುಂದೆ ನೀವೇ ಹಾಕಿಕೊಂಡ ಯೋಜನೆಗಳು ಇರಲಿದ್ದು ಅವಗಳಿಗೆಂದೇ ಕೂಡಿಟ್ಟ ಹಣವು ನಷ್ಟವಾಗುವುದು. ಮೊದಲೇ ಕೂಡಿಟ್ಟ ಹಣವು ತೆಗೆಯಲು ಬಾರದೇ ಉಳಿದುಕೊಳ್ಳುತ್ತದೆ. ವ್ಯಾಪಾರಸ್ಥರಾಗಿದ್ದರೆ ಇಂದು ಕಲಹವೂ ಆಗಬಹುದು. ಇಷ್ಟು ದಿನವಿದ್ದ ಗೌರವ, ವಿಶ್ವಾಸವು ಹಾದಿತಪ್ಪಲಿದೆ. ಏನಾಗುತ್ತಿದೆ ಎಂಬ ಯಾವ ಸೂಚನೆಯೂ ನಿಮಗೆ ಸಿಗದಾಗುವುದು. ವ್ಯಾಪಾರವನ್ನು ಮುಚ್ಚಬೇಕು ಎನ್ನುವ ಸ್ಥಿತಿಯವರೆಗೆ ಹೋಗಬಹುದು. ಆಪ್ತರಾದ ಮಾತ್ರಕ್ಕೆ ಎಲ್ಲವನ್ನೂ ಸರಿಯಾಗಿ ಹೇಳುತ್ತಾರೆ ಎಂದಿಲ್ಲ. ಕುಲದೇವರ ಪ್ರಾರ್ಥಿಸಿ ಮುನ್ನಡೆಯಿರಿ.

ತುಲಾ: ಉದ್ಯೋಗವು ಸಾಕೆನಸುವಷ್ಟು ಕಳೆಗುಂದಿದೆ. ಒಂದೇ ರೀತಿಯ ಕೆಲಸಕ್ಕೆ ತನಗೆ ಇಷ್ಟವಾದುದಲ್ಲ ಎಂದು ಅನ್ನಿಸಬಹುದು. ಆದರೆ ಅನಿವಾರ್ಯವಾಗಿ ಮಾಡಬೇಕಾಗಬಹುದು.‌ ನೀವು ನಿಮ್ಮ ಸ್ನೇಹಿತರ ಮೇಲೆ ಹೆಚ್ಚು ಅವಲಂಬಿತರಾಗಿರಲಿದ್ದೀರಿ. ನಿಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಸತತ ಪ್ರಯತ್ನವಂತೂ ಅವಶ್ಯಕ. ಕಛೇರಿಯಲ್ಲಿ ನಿಮ್ಮ ನಾಯಕನ ಜೊತೆಗೆ ನೀವು ಉತ್ತಮ ಬಾಂಧವ್ಯವನ್ನು ಹೊಂದಿರುತ್ತೀರಿ. ಮಹಿಳಾ ಸ್ನೇಹಿತರು ನಿಮಗೆ ಬೇಕಾದ ಸಹಾಯವನ್ನು ಮಾಡುವರು. ನಿಮ್ಮ ಆದಾಯವನ್ನು ಹೇಳಿಕೊಳ್ಳಲು ಹೋಗಬೇಡಿ. ನಿಮಗೇ ತೊಂದರೆಯಾದೀತು.

ವೃಶ್ಚಿಕ: ನಿಮ್ಮ ಮಕ್ಕಳಿಗೆ ಹಿತೋಪದೇಶವನ್ನು ಮಾಡಲಿದ್ದೀರಿ. ಭವಿಷ್ಯದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುವಿರಿ. ಆಸ್ತಿಯನ್ನು ಮಾರುವ ಆಲೋಚನೆ ಬರಲಿದೆ. ಕಛೇರಿಯಲ್ಲಿ ಎಲ್ಲ ಕೆಲಸವನ್ನೂ ನೀವೊಬ್ಬರೇ ಮಾಡಲಾಗದು. ಯಾರದ್ದಾದರೂ ಸಹಾಯವನ್ನು ಪಡೆಯಿರಿ. ಹಣವು ಬೇಕಾದಷ್ಟು ಇದ್ದರೂ ಇನ್ನೂ ಬೇಕೆನ್ನುವ ಆಸೆ ಇರಲಿದೆ. ಕುಟುಂಬದ ಮದುವೆಗೆ ಸಿದ್ಧತೆಗಳನ್ನು ಪ್ರಾರಂಭಿಸುವಿರಿ. ನಿಮ್ಮ ಜೀವನಸಂಗಾತಿಗಾಗಿ ನೀವು ಸೌಮ್ಯಸ್ವಭಾವದವರು ಆಗಬೇಕಾಗಿಬರಬಹುದು. ಗೆಳೆಯರಿಗೆ ಅನೇಕ ದಿನಗಳ ಅನಂತರ ಸಮಯವನ್ನು ಕೊಡುವಿರಿ. ಕಲಹಕ್ಕೆ ಮಹತ್ತ್ವವನ್ನು ಕೊಡಬೇಡಿ. ಇರುವುದನ್ನು ಪ್ರೀತಿಯಿಂದ ಕೊಡಿ.

ಧನುಸ್ಸು: ಇಂದು ದೈಹಿಕವಾಗಿ ಹಾಗೂ ಮಾನಸಿಕವಾಗಿ ನೋವನ್ನು ಅನುಭವಿಸುವಿರಿ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಸಂಪೂರ್ಣ ಗಮನವಿರಬೇಕಾದೀತು. ಅವರಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸುವುದು ಒಳ್ಳೆಯದು. ಸರ್ಕಾರಿ ಅಧಿಕಾರಿಗಳಿಂದ ಕಾನೂನು ರೀತಿಯ ತೊಡಕುಗಳು ಎದುರಾಗಬಹುದು. ಕೃಷಿಕರು ಬೆಳೆಗಳಿಗೆ ಉತ್ತಮ ಬೆಲೆ ದೊರೆತ ಕಾರಣ ಸಂತೋಷಪಡಬಹುದು. ಇಂದು ನೆಮ್ಮದಿಯಿಂದ ಮನೆಯಲ್ಲಿಯೇ ಇದ್ದು ಕಾಲಕಳೆಯುವಿರಿ. ನಿರಂತರ ಸುತ್ತಾಟದಿಂದ ಬೇಸತ್ತ ನಿಮಗೆ ಇಂದು ಹಾಯೆನಿಸಬಹುದು. ನಿಮ್ಮ ಗುಪ್ತ ಆಲೋಚನೆಗಳು ಬಯಲಾಗಬಹುದು.

ಮಕರ: ಇಂದು ನೀವು ಅನಗತ್ಯ ವಿಷಯಗಳ ಬಗ್ಗೆ ಚರ್ಚೆ ಮಾಡಬೇಡಿ. ಸುಮ್ಮನೇ ಕಾಲಹರಣ ಮಾಡುವ ಬದಲು ಉಪಯುಕ್ತ ಕೆಲಸವನ್ನು ಮಾಡಲು ಆಲೋಚಿಸಿ.‌ ಮಕ್ಕಳು ದುರಭ್ಯಾಸಗಳಿಗೆ ಬಲಿಯಾಗಬಹುದು. ಪೋಷಕರು ಇವರ ನಡತೆಯನ್ನು ಗಮನಿಸುವುದು ಒಳ್ಳೆಯದು. ಮಹಿಳೆಯರಿಗೆ ಆಸೆಗಳನ್ನು ಪೂರೈಸಿಕೊಳ್ಳುವ ಸುದಿನ ಇದು. ಜಮೀನು ಮತ್ತು ಆಸ್ತಿಗೆ ಸಂಬಂಧಪಟ್ಟ ನೊಂದಣಿ ಕಾರ್ಯಗಳು ಪೂರ್ಣಗೊಳ್ಳದೇ ಮುಂದೆ ಹೋಗುವುದು ನಿಮಗೆ ಬೇಸರ ತರಿಸದಬಹುದು. ನಿಮಗೆ ಬಂಧುಗಳಿಂದ‌ ಹೆಚ್ಚಿನ ಗೌರವ ದೊರೆಯುವ ಸಾಧ್ಯತೆ ಇದೆ. ರಾಜಕೀಯ ವ್ಯಕ್ತಿಗಳ ಸಹವಾಸ ಮಾಡುವಿರಿ. ಗಳಿಸುವುದನ್ನು ಪ್ರಾಮಾಣಿಕವಾಗಿ ಗಳಿಸಿ.

ಕುಂಭ: ಎಂದಿಗಿಂತ ಇಂದು ವ್ಯಾಪಾರದಲ್ಲಿ ವೃದ್ಧಿ ಇರಲಿದೆ. ಉದ್ಯೋಗದ ಸ್ಥಾನದಲ್ಲಿ ಒತ್ತಡವು ಹೆಚ್ಚಾಗಲಿ. ಮಾಧ್ಯಮಗಳಲ್ಲಿ ಕೆಲಸ ಮಾಡುವವರು ಬಹಳ ಒತ್ತಡದಲ್ಲಿ ಇರುವರು. ರಾಜಕೀಯ ವ್ಯಕ್ತಿಗಳಿಗೆ ಸ್ವಲ್ಪ ಮಟ್ಟಿನ ಕಿರಿಕಿರಿಯು ಉಂಟಾಗಬಹುದು. ಉದರಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳಬಹುದು. ಹಣದ ಹರಿವು ನಿಮ್ಮ ಅಪೇಕ್ಷೆಯಂತೆ ಇರುತ್ತದೆ. ಪಿತ್ರಾರ್ಜಿತ ಸ್ವತ್ತುಗಳು ಸಿಗುವ ಸಾಧ್ಯತೆಯಿದೆ. ಸರ್ಕಾರಿ ಉದ್ಯೋಗದಲ್ಲಿರುವವರಿಗೆ ಮುನ್ನಡೆ ಇರುತ್ತದೆ. ಪತ್ನಿಯ ಜೊತೆ ವಾಗ್ವಾದ ಬೇಡ. ಏನೇ ಹೇಳಿದರೂ ಕೇಳಿಸಿಕೊಂಡು ಬನ್ನಿ.

ಮೀನ: ಇಂದು ನಿಮಗೆ ಹಣದ ಅಗತ್ಯತೆ ತುಂಬ ಇದ್ದು ಇದಕ್ಕೆ ತಾಯಿಯಿಂದ ಸಹಾಯ ಸಿಗಬಹುದು.
ನೀವು ಆಯ್ಕೆ ಮಾಡಿಕೊಂಡ ವೃತ್ತಿಯ ಬಗ್ಗೆ ಸಂತೋಷವಿರುತ್ತದೆ. ವಾಹನ ಖರೀದಿಗೆ ನೀವು ಮನಸ್ಸು ಮಾಡುವಿರಿ. ನಿಮ್ಮ ಸ್ವಂತ ವಿವೇಚನೆಯಿಂದ ಕೆಲವೊಂದು ಕಲಹಗಳನ್ನು ನಿವಾರಣೆ ಮಾಡಿಕೊಳ್ಳುವಿರಿ. ಭೂ ವ್ಯವಹಾರದಲ್ಲಿ ಹೆಚ್ಚಿನ ಲಾಭವಿರುತ್ತದೆ. ಸಂಗಾತಿಯು ನಿಮಗೆ ಅನುಕೂಲಳಾಗಿರುವಳು. ನಿಮ್ಮ ಮೇಲೆ ವಿಶ್ವಾಸವಿಟ್ಟವರಿಗೆ ಧನಸಹಾಯ ಮಾಡಬೇಕಾಗಿಬರಬಹುದು. ಗುಪ್ತಚರ ಇಲಾಖೆಯಲ್ಲಿ ಕೆಲಸ ಮಾಡುವವು ಇಂದು ಸಿಹಿ ಸುದ್ದಿಯನ್ನು ಕೊಡುವರು.

ಲೋಹಿತಶರ್ಮಾ 8762924271 (what’s app only)