ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವುದು ಕೆಲವರಿಗೆ ಅಭ್ಯಾಸ. ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2023 ಜುಲೈ 25) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಭವಿಷ್ಯ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ: ಪುಷ್ಯಾ, ಮಾಸ: ಅಧಿಕ ಶ್ರಾವಣ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ಅಷ್ಟಮೀ, ನಿತ್ಯನಕ್ಷತ್ರ: ಸ್ವಾತೀ, ಯೋಗ: ಸಿದ್ಧಿ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 15 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 02 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:51 ರಿಂದ 05:27ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:27 ರಿಂದ 11:03ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:39 ರಿಂದ 02:15ರ ವರೆಗೆ.
ಮೇಷ: ಅನಿವಾರ್ಯ ಕಾರಣದಿಂದ ನಿಮ್ಮ ಇಂದಿನ ಯೋಜನೆಯನ್ನು ಬದಲಿಸಬೇಕಾಗುವುದು. ಸಿಟ್ಟುಗೊಳ್ಳುವ ಸಂದರ್ಭದಲ್ಲಿ ನಿಮ್ಮ ನಿಯಂತ್ರಣವನ್ನು ಕಳೆದುಕೊಳ್ಳುವುದು ಬೇಡ. ಸಂಗಾತಿಯನ್ನು ನೀವು ಬೇಸರಿಸಿ ಸಮಾಧಾನ ಮಾಡುವಿರಿ. ನಿದ್ರೆಯನ್ನು ಅಧಿಕವಾಗಿ ಮಾಡಲಿದ್ದೀರಿ. ಸಹೋದರರ ಭೇಟಿಯು ಸಂತಸವನ್ನು ನೀಡುವುದು. ನೌಕರರಿಂದ ನಿಮ್ಮ ಕೆಲಸವು ಸುಲಭವಾಗುವುದು. ಮನೆಯಲ್ಲಿ ನೆಮ್ಮದಿಯ ಕೊರತೆ ಇದ್ದ ಕಾರಣ ವಾಯುವಿಹಾರವನ್ನು ಸ್ನೇಹಿತರ ಜೊತೆ ಮಾಡುವಿರಿ. ಒತ್ತಡವನ್ನು ಉಪಾಯದಿಂದ ಕಡಿಮೆ ಮಾಡಿಕೊಳ್ಳುವಿರಿ.
ವೃಷಭ: ನ್ಯಾಯಾಲಯದ ವಿಚಾರದಲ್ಲಿ ನಿಮಗೆ ಜಯವು ಸಿಗಲಿದೆ. ಹಳೆಯ ಖಾಯಿಲೆಯು ಮರುಕಳಿಸಿದ್ದರಿಂದ ಸಂಕಟಪಡುವಿರಿ. ಗೆಳೆಯರ ಸಹವಾಸವನ್ನು ಕಡಿಮೆ ಮಾಡುವ ಸಾಧ್ಯತೆ ಇದೆ. ಮುಖಂಡರಾಗಿ ಪಕ್ಷಪಾತವನ್ನು ಮಾಡುವುದು ಯೋಗ್ಯವಾಗದು. ನಿಮಗೆ ಹೆಚ್ಚು ವಿದ್ಯಾಭ್ಯಾಸವನ್ನು ಮಾಡಬೇಕು ಎಂದನಿಸಬಹುದು. ಮನೆಯಿಂದ ದೂರವಿರಲು ಇಷ್ಟಪಡುವಿರಿ. ಬರುವ ಹಣದ ನಿರೀಕ್ಷೆಯಲ್ಲಿ ಇರುವಿರಿ. ಸಾಹಸಕ್ಕೆ ಹೋಗುವುದು ಬೇಡ. ಇರುವ ಉದ್ಯೋಗವನ್ನು ಸರಿಯಾಗಿ ಮಾಡಲು ಪ್ರತ್ನಿಸುವುದು ಉತ್ತಮ.
ಮಿಥುನ: ನಿಮ್ಮವರೇ ಆದರೂ ನೀವು ನಂಬಿಕೆಯನ್ನು ಇಡಲಾರಿರಿ. ಹೊಸತನ್ನು ಕಲಿಯುವ ಹಂಬಲವು ಕಡಿಮೆಯಾಗಬಹುದು. ನಿಮ್ಮದೇ ರೀತಿಯ ಮಾರ್ಗದಲ್ಲಿ ನೀವು ಮುಂದುವರಿಯುವಿರಿ. ಯಾರ ಮಾತನ್ನೂ ಕೇಳುವ ತಾಳ್ಮೆ ಕಡಿಮೆ ಆಗಬಹುದು. ಕಛೇರಿಯಲ್ಲಿ ನಿಮ್ಮ ಬೆಂಬಲಕ್ಕೆ ಯಾರೂ ಬರದಿರುವುದು ಬೇಸರವನ್ನು ತರಿಸುವುದು. ಇಂದಿನ ಕೆಲಸವು ಸಮಯದ ಅಭಾವದಿಂದ ಪೂರ್ಣವಾಗದು. ಮನಸ್ಸಿನ ಸ್ಥಿರತೆಯನ್ನು ತಂದುಕೊಳ್ಳುವುದು ಕಷ್ಟವಾದೀತು. ಪರನಿಂದನೆಯಿಂದ ಆಚೆ ಬರುವುದು ಉತ್ತಮ.
ಕಟಕ: ದಾನದಲ್ಲಿ ನೀವು ಬಹಳ ಹಿಂಗೈಯುಳ್ಳವರಾಗುವಿರಿ. ಬಿಚ್ಚು ಮನಸ್ಸಿನಿಂದ ನೀವು ಮಾತನಾಡುವುದು ಕಷ್ಟವಾದೀತು. ಕಛೇರಿಯಲ್ಲಿ ನಿಮ್ಮ ಬಗ್ಗೆ ನಕಾರಾತ್ಮಕ ಅಭಿಪ್ರಾಯಗಳು ಕೇಳಿ ಬಂದರೂ ನಿಮ್ಮ ಮೌನವು ಮಾತಾಗಿ ಬಾರದು. ಸಂಗಾತಿಯನ್ನು ಪಡೆಯಲು ನೀವು ಬಹಳ ಶ್ರಮವಹಿಸುವಿರಿ. ಕೃಷಿಕರು ತಮ್ಮ ಕಾರ್ಯದಲ್ಲಿ ಮಗ್ನರಾಗುವರು. ಆಹಾರದ ವಿಚಾರದಲ್ಲಿ ನೀವು ಆಯ್ಕೆಯನ್ನು ಇಟ್ಟುಕೊಳ್ಳುವಿರಿ. ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನವು ಬಹಳ ಉತ್ಸಾಹದಿಂದ ಸಾಗುವುದು. ಮಕ್ಕಳಿಗೆ ಪ್ರೀತಿಯನ್ನು ತೋರಿಸಲು ಸಮಯದ ಅಭಾವ ಆಗಬಹುದು.
ಸಿಂಹ: ವಿಶ್ವಾಸವನ್ನು ಗಳಿಸುವ ಪ್ರಯತ್ನವು ಸ್ವಲ್ಪಮಟ್ಟಿಗೆ ಸಾಧ್ಯವಾಗುವುದು. ಕೆಲವು ವಿಚಾರಗಳು ನಿಮ್ಮ ಮನಸ್ಸಿಗೆ ಕಿರಿಕಿರಿಯನ್ನು ತರಬಹುದು. ಅದನ್ನು ದೂರವಿರಿಸಲು ಪ್ರಯತ್ನಿಸಿ. ಅಸಹಜ ವರ್ತನೆಯಿಂದ ನಿಮ್ಮವರಿಗೆ ಸಿಟ್ಟು ಬರಬಹುದು. ನಿಮ್ಮ ಪ್ರೀತಿಯನ್ನು ಹಂಚಿಕೊಳ್ಳಲು ಸಮಯವನ್ನು ನೀವು ನಿರೀಕ್ಷಿಸುವಿರಿ. ನಿಮ್ಮ ಬಗ್ಗೆ ನಿಮಗೆ ಗೊತ್ತಿಲ್ಲದ ಕೆಲವು ವಿಚಾರಗಳನ್ನು ನೀವು ಇನ್ನೊಬ್ಬರಿಂದ ಕೇಳುವಿರಿ. ಮನೋರಂಜನೆ ಕಾರ್ಯದಲ್ಲಿ ನೀವು ಮಗ್ನರಾಗುವಿರಿ. ಕೆಲವು ವಿಚಾರಗಳನ್ನು ನಿರ್ಲಕ್ಷ್ಯ ಮಾಡಿ ಅವಕಾಶದಿಂದ ವಂಚಿತರಾಗುವಿರಿ. ನಿಮ್ಮ ರಹಸ್ಯ ಪ್ರೇಮವು ಬಯಲಾದೀತು.
ಕನ್ಯಾ: ಇನ್ನೊಬ್ಬರ ಆಲೋಚನೆಯನ್ನು ಗೌರವಿಸಿ ಅವರ ಪಾಲಿಗೆ ದೊಡ್ಡವರಾಗುವಿರಿ. ನಿಮಗೆ ಇರುವ ಕಾರ್ಯಕುಶಲತೆಯನ್ನು ಮುಚ್ಚಿಕೊಳ್ಳುವರು. ಇನ್ನೊಬ್ಬರಿಗೆ ನೋವನ್ನು ಕೊಟ್ಟು ಅನಂತರ ಪಶ್ಚಾತ್ತಾಪಪಡುವಿರಿ. ಮನೆಯ ಕೆಲಸಕ್ಕೆ ಹಣವನ್ನು ಖರ್ಚು ಮಾಡಬೇಕಾದೀತು. ಸಂಗಾತಿಗೆ ಅಪರೂಪದ ಉಡುಗೊರೆಯನ್ನು ಕೊಡುವಿರಿ. ಒಳ್ಳೆಯ ಸಮಯದ ನಿರೀಕ್ಷೆಯಲ್ಲಿ ನೀವು ಇರುವಿರಿ. ಹೆಚ್ಚಿನ ಆದಾಯದ ಉದ್ಯೋಗವನ್ನು ಹುಡುಕುತ್ತಿರುವಿರಿ. ನಿಮ್ಮ ಸರಳತೆಯು ಇತರರಿಗೆ ಪ್ರೇರಣೆಯಾದೀತು. ಪುತ್ರೋತ್ಸವದಲ್ಲಿ ನೀವು ಪಾಲ್ಗೊಳ್ಳುವಿರಿ.
ತುಲಾ: ಸಕಾಲಕ್ಕೆ ನಿಮಗೆ ಹಣವು ಸಿಗದೇ ವ್ಯವಹಾರದಲ್ಲಿ ಗೊಂದಲವಾದೀತು. ನೀವು ಅಂದುಕೊಂಡಂತೆ ನಿಮ್ಮ ಬದುಕು ಸಾಗುತ್ತಿದೆಯೇ ಎಂದು ಪರೀಕ್ಷಿಸಿಕೊಳ್ಳುವುದು ಅವಶ್ಯಕ. ಹಿರಿಯರಿಂದ ನಿಮ್ಮ ಕೆಲಸಕ್ಕೆ ಕೆಲವು ಬೈಗುಳಗಳು ಸಿಗಬಹುದು. ಬಾಲಿಶ ಮಾತುಗಳನ್ನು ಕಡಿಮೆ ಮಾಡಿ. ಇಲ್ಲವಾದರೆ ಗೌರವವು ಕಡಿಮೆ ಆದೀತು. ಧಾರ್ಮಕಕಾರ್ಯದಲ್ಲಿ ಆಸಕ್ತಿಯು ಹೆಚ್ಚಾಗಬಹುದು. ನೀವು ಕೊಟ್ಟ ವಸ್ತುವನ್ನು ಮರೆತಿದ್ದು ಇಂದು ನೆನಪಾಗಿ ಅದನ್ನು ಹಿಂಪಡೆಯಲು ಪ್ರಯತ್ನಿಸುವಿರಿ. ನಿತ್ಯದ ಕಲಸವನ್ನೇ ಹೊಸ ರೀತಿಯಲ್ಲಿ ಮಾಡಲು ಇಚ್ಛಿಸುವಿರಿ.
ವೃಶ್ಚಿಕ: ನೂತನ ವಸ್ತುವಿನ ಖರೀದಿಯಿಂದ ಮೋಸಹೋಗಬಹುದು. ಅನಗತ್ಯ ವಸ್ತುಗಳನ್ನು ಖರೀದಿಸಿ ಬಂದ ಹಣವನ್ನು ಕಳೆದುಕೊಳ್ಳುವಿರಿ. ಮಕ್ಕಳಿಗೆ ಬೇಕಾದುದನ್ನು ಕೊಡಿಸುವಿರಿ. ಸ್ನೇಹಿತ ಜೊತೆ
ಪ್ರವಾಸವನ್ನು ಯೋಜಿಸುವಿರಿ. ಮನೆಯ ವಾತಾವರಣದ ಕಾರಣ ಕಛೇರಿಯಲ್ಲಿ ಕೆಲಸದ ಮಾನಸಿಕತೆ ಇರದು. ಇಂದು ಉದ್ಯಮದ ಉದ್ಯೋಗಿಗಳನ್ನು ಕರೆದು ಹೊಸ ಯೋಜನೆಗಳನ್ನು ಪರಿಚಯಿಸುವಿರಿ. ಉದ್ಯೋಗಿಗಳಿಗೆ ಖುಷಿ ಆಗಿವಂತೆ ಮಾಡುವಿರಿ. ವಿವಾಹಕ್ಕೆ ನಿಮಗೆ ಮನಸ್ಸು ಇರದು. ಸ್ವತಂತ್ರವಾಗಿ ಇರಲು ನೀವು ಬಯಸಬಹುದು.
ಧನು: ನೀವು ಇಂದು ಅಸರಂಭಿಸಿದ ಕಾರ್ಯವನ್ನು ಪೂರ್ಣ ಆಗುವವರೆಗೂ ಬಿಡುವವರಲ್ಲ. ಸಂಗಾತಿಯ ಜೊತೆ ಸಮಯ ಕಳೆಯುವ ಮನಸ್ಸಾಗುವುದು. ವಿದೇಶದ ಸ್ನೇಹಿತನ ಪರಿಚಯವಾಗುವುದು. ಉದ್ಯೋಗದಲ್ಲಿ ಉನ್ನತ ಸ್ಥಾನವನ್ನು ನೀವೇ ಹೇಳಿ ಪಡೆದುಕೊಳ್ಳುವಿರಿ. ಯಾರ ಮೇಲೂ ದೋಷಾರೋಪವನ್ನು ಮಾಡುವುದು ಒಳ್ಳೆಯದಲ್ಲ. ನೀವು ಇಂದು ಕೆಲವರಿಗೆ ಅಪ್ರಾಮಾಣಿಕರಂತೆ ತೋರಬಹುದು. ನಿಮ್ಮ ಗೆಳೆತನವು ಸಂಗಾತಿಗೆ ಅಸೂಯೆಯನ್ನು ಉಂಟುಮಾಡಬಹುದು. ಉಸಿರಾಟದ ತೊಂದರೆ ಬರುವ ಸಾಧ್ಯ ಇದೆ. ಪ್ರಾಣಾಯಾಮವನ್ನು ಅಭ್ಯಾಸ ಮಾಡಿ.
ಮಕರ: ನಿಮ್ಮ ವೈಯಕ್ತಿಕ ಕೆಲಸಗಳಿಗೆ ಸಮಯವು ಕಡಿಮೆ ಸಿಗಲಿದೆ. ಯಾರದೋ ಒತ್ತಾಯಕ್ಕೆ ನಿಮ್ಮ ಸಮಯವನ್ನು ವ್ಯರ್ಥಮಾಡಿಕೊಂಡು ಭಾಗವಹಿಸುವಿರಿ. ಆರ್ಥಿಕ ನಷ್ಟದ ಹಾಗೂ ಸಮಯದ ನಷ್ಟವಾಗಿ ಬೇಸರಿಸುವಿರಿ. ಆಪ್ತರು ನೀಡುವ ಹಣಕ್ಕಾಗಿ ನೀವು ಇಂದು ಕಾಯುವಿರಿ. ವಾಹನದ ನಷ್ಟವು ನಿಮಗೆ ನಿಮಗೆ ಹೊರೆಯಾದೀತು. ಇನ್ನೊಬ್ಬರ ವಸ್ತುವನ್ನು ಮರಳಿಕೊಡಲು ನೀವು ಮರೆತಿದ್ದು ಇಂದು ಹಿಂದಿರುಗಿಸುವಿರಿ. ಸಮಾಜಿಕ ಗೌರವವನ್ನು ನೀವಿಂದು ಒಡೆಯುವಿರಿ. ಉತ್ತಮ ಆಹಾರವನ್ನು ಸೇವಿಸುವಿರಿ. ವಾಹನ ಸಂಚಾರವನ್ನು ಆದಷ್ಟು ಕಡಿಮೆ ಮಾಡುವುದು ಒಳ್ಳೆಯದು.
ಕುಂಭ: ವೃತ್ತಿಯಲ್ಲಿ ಇನ್ನೊಬ್ಬರ ಮಾತಿಗೆ ಕಿವಿಗೊಟ್ಟು ಒಳ್ಳೆಯ ವೃತ್ತಿಜೀವನವನ್ನು ಹಾಳು ಮಾಡಿಕೊಳ್ಳಲಿದ್ದೀರಿ. ಸ್ತ್ರೀಯರಿಂದ ಸಹಾಯವು ನಿಮಗೆ ಸಿಗಲಿದೆ. ಒತ್ತಡದ ನಿವಾರಣೆ ಸುತ್ತಾಡಿ ಬರುವ ಮನಸ್ಸಾದೀತು. ನಿಮ್ಮನಷ್ಟದ ಉದ್ಯೋಗಕ್ಕೆ ಆಪ್ತರ ಸಲಹೆಯು ಉಪಯೋಗಕ್ಕೆ ಬರಬಹುದು. ತಂದೆ ಹಾಗೂ ಮಕ್ಕಳ ಮಧ್ಯ ಕೆಲವು ವಿಚಾರಗಳಿವೆ ಭಿನ್ನಾಭಿಪ್ರಾಯಗಳು ಬರಬಹುದು. ಉನ್ನತಮಟ್ಟದ ಅಧಿಕಾರಿಗಳ ಸಹಾಯವನ್ನು ನೀವು ಬಯಸುವಿರಿ. ಉದ್ವೇಗಕ್ಕೆ ಒಳಗಾಗಿ ನಿಮ್ಮನ್ನೇ ನೀವು ಮರೆಯಬಹುದು. ಹೊಸಬರ ಗೆಳೆತನವಾಗಲಿದೆ. ಆರೋಗ್ಯವನ್ನು ಗಟ್ಟಿ ಮಾಡಿಕೊಳ್ಳಲು ನೀವು ವ್ಯಾಯಾಮವನ್ನು ಮಾಡುವಿರಿ.
ಮೀನ: ಇಂದು ನಿಮ್ಮ ಅನೇಕ ದಿನಗಳ ಆಸೆಯನ್ನು ಪೂರೈಸಿಕೊಳ್ಳುವಿರಿ. ರಕ್ಷಣಾವ್ಯವಸ್ಥೆಯಲ್ಲಿ ಇರುವವರಿಗೆ ಸ್ಥಾನ ಬದಲಾವಣೆ ಆಗವಹುದು. ವಿದ್ಯಾರ್ಥಿಗಳಿಗೆ ಮನೆಯ ವಾತಾವರಣವು ಓದಿಗೆ ಪೂರಕವಾಗಿ ಇರದು. ಬೇರೆ ಕಡೆಗೆ ಇರಲು ಬಯಸುವಿರಿ. ಆರ್ಥಿಕತೆಯ ಹಿನ್ನಡೆಯಿಂದಾಗಿ ಕಾರ್ಯಗಳು ಸ್ಥಗಿತಗೊಳ್ಳಬಹುದು. ಆಪ್ತರಿಂದ ಸಹಾಯವನ್ನು ಬಯಸುವಿರಿ. ವಿವಾಹಕ್ಕೆ ಪ್ರತಿಬಂಧಕಗಳನ್ನು ತಿಳಿದುಕೊಂಡು ಪರಿಹಾರ ಮಾಡಿಕೊಳ್ಳುವುದು ಉಚಿತ. ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳಗಳ್ಳಿ. ಪ್ರಯಾಣ ಮಾಡುವ ಸ್ಥಿತಿಯು ಬರಬಹುದು.