ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವುದು ಕೆಲವರಿಗೆ ಅಭ್ಯಾಸ. ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2023 ಜುಲೈ 31) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ,ಪ ಮಹಾನಕ್ಷತ್ರ: ಪುಷ್ಯಾ, ಮಾಸ: ಅಧಿಕ ಶ್ರಾವಣ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ತ್ರಯೋದಶೀ, ನಿತ್ಯನಕ್ಷತ್ರ: ಉತ್ತರಾಷಾಢ, ಯೋಗ: ವೈಧೃತಿ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 16 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆಗೆ, ರಾಹು ಕಾಲ ಬೆಳಗ್ಗೆ 07:52 ರಿಂದ 09:28ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 11:03 ರಿಂದ ಮಧ್ಯಾಹ್ನ 12:39ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:14 ರಿಂದ 03:50ರ ವರೆಗೆ.
ಮೇಷ ರಾಶಿ: ನಿಮ್ಮ ಮಾತುಗಳಿಗೆ ಮೌಲ್ಯವು ಕಡಿಮೆ ಆಗಲಿದೆ. ಆಸ್ತಿಯ ಪಾಲಿನಲ್ಲಿ ನಿಮಗೆ ಬಹಳ ಮುಖ್ಯಭಾಗವು ಬರಬಹುದು. ದೂರದ ಸಂಬಂಧಿಕರ ಪರಿಚಯ ಆಗಲಿದೆ. ಮನೆಯ ನಿರ್ಮಾಣದಲ್ಲಿ ಸರಿಯಾದ ಕ್ರಮವನ್ನು ರೂಢಿಸಿ. ಒಂದೇ ರೀತಿಯ ಜೀವನವು ನಿಮಗೆ ಬೇಸರವನ್ನು ತಂದೀತು. ನಿಮ್ಮ ಜವಾಬ್ದಾರಿಯ ಕೆಲಸವನ್ನು ನೀವು ಬಹಳ ಆನಂದದಿಂದ ಮಾಡುವಿರಿ. ಅಲ್ಪ ಲಾಭವನ್ನು ಸ್ವೀಕರಿಸಿ ಸಂತೋಷಪಡುವಿರಿ. ನೀರಿನಿಂದ ಆದಷ್ಟು ದೂರವಿರಿ. ನಿಮ್ಮ ಸಹವಾಸದಿಂದ ಇತರರೂ ನಿಮ್ಮ ಸ್ವಭಾವವನ್ನು ಕಲಿಯುವರು. ವ್ಯವಹಾರವನ್ನು ಮನ ಬಂದಂತೆ ಮಾಡುವುದು ಬೇಡ.
ವೃಷಭ ರಾಶಿ: ಕೆಲಸದಲ್ಲಿ ಅಧಿಕ ಒತ್ತಡ ಇರಲಿದೆ. ನಿಮ್ಮ ಸಹನೆಯ ಪರೀಕ್ಷೆಯು ಆಗಲಿದೆ. ಸುಖದ ಕಾಲವನ್ನು ನಿರೀಕ್ಷಿಸುವಿರಿ. ಆರ್ಥಿಕ ಸ್ಥಿತಿಯಲ್ಲಿ ಬದಲಾವಣೆ ಇರಲಿದೆ. ನಿಮಗೆ ಇಷ್ಟವಾದ ವಸ್ತುಗಳನ್ನು ನೀವು ಖರೀದಿಸುವಿರಿ. ಸಮಯದ ಮಿತಿಯಲ್ಲಿ ನೀವು ಎಲ್ಲ ಕೆಲಸಗಳನ್ನು ಮಾಡುವ ಸಾಹಸಕ್ಕೆ ಹೋಗುವುದು ಬೇಡ. ನಿಮ್ಮ ಸಹಾಯವನ್ನು ಕೇಳಿ ಬಂದವರಿಗೆ ಸಹಾಯ ಮಾಡಿ. ಉಚಿತವಾಗಿ ಬಂದಿದ್ದನ್ನು ನೀವು ನಿರಾಕರಿಸುವಿರಿ. ಉದರಬಾಧೆಯು ಕಾಡಬಹುದು. ಸಮಯಕ್ಕೆ ಸರಿಯಾಗಿ ಭೋಜನ ಮಾಡಿ.
ಮಿಥುನ ರಾಶಿ: ಹಳೆಯ ಖಾಯಿಲೆಯಿಂದ ಬಳಲುವ ಸಾಧ್ಯತೆ ಇದೆ. ನಿಮ್ಮ ವಸ್ತುಗಳನ್ನು ಕಳೆದುಕೊಂಡು ದುಃಖಿಸುವಿರಿ. ಸಂಕಷ್ಟದ ನಿವಾರಣೆಗೆ ದೇವರಲ್ಲಿ ಪ್ರಾರ್ಥಿಸುವಿರಿ. ಕೋಪವನ್ನು ಕಡಿಮೆಮಾಡಿಕೊಂಡು ಕೆಲಸ ಮಾಡುವಿರಿ. ನಿಮಗೆ ಸಂಬಂಧಿಸಿದ ಕೆಲಸವನ್ನು ಇನ್ನೊಬ್ಬರ ಸಹಾಯದ ಜೊತೆ ಮುಗಿಸುವಿರಿ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯವಾಗಲಿದೆ. ನಿಮ್ಮದೇ ಹಣವನ್ನು ಪಡೆಯಲು ಕಷ್ಟಪಡಬೇಕಾದೀತು. ದೈವಾನುಕೂಲದಿಂದ ನಿಮಗೆ ಸಹಾಯವಾಗುವುದು. ಕೆಟ್ಟ ಕನಸು ಬೀಳುವುದು. ಸಂಗಾತಿಯಿಂದ ಧನಸಹಾಯವು ಸಿಗಲಿದೆ.
ಕಟಕ ರಾಶಿ: ನಿಮ್ಮ ಬಗ್ಗೆ ಸಲ್ಲದ ಮಾತುಗಳು ಕೇಳಿಬರಬಹುದು. ಸ್ವಂತ ಉದ್ಯೋಗಕ್ಕೆ ನಿಮ್ಮ ಒಲವು ಅಧಿಕವಾಗಿರುವುದು. ಬಯಸಿದ್ದನ್ನು ಪಡೆದುಕೊಳ್ಳಲು ಶ್ರಮಿಸುವಿರಿ. ಕಛೇರಿಯ ಒತ್ತಡವು ನಿಮ್ಮ ಮೇಲೆ ಇರಲಿದೆ. ನಿಮಗೆ ಹಣದ ಕೊರತೆ ಆಗಿದ್ದು ಸ್ನೇಹಿತ ಸಹಾಯವನ್ನು ಪಡೆಯುವಿರಿ. ವೃತ್ತಿಯಲ್ಲಿ ನಿಮಗೆ ಅಸಮಾಧ ಆಗಬಹುದು. ವ್ಯಾಪಾರದಲ್ಲಿ ಅಧಿಕ ಲಾಭವನ್ನು ಪಡೆಯಲು ಇಚ್ಛಿಸುವಿರಿ. ಧಾರ್ಮಿಕ ಕಾರ್ಯಗಳನ್ನು ಮಾಡಲು ಮನಸ್ಸಾದೀತು. ಸರಳವಾದ ಕೆಲಸವನ್ನು ಸಂಕೀರ್ಣ ಮಾಡಿಕೊಳ್ಳುವುದು ಬೇಡ. ಮನೆಯಲ್ಲಿ ಅಪಮಾನವಾಗಬಹುದು.
ಸಿಂಹ ರಾಶಿ: ಸಂಪತ್ತಿಗಾಗಿ ಅನೇಕ ವೃತ್ತಿಗಳನ್ನು ಆಶ್ರಯಿಸುವಿರಿ. ದುರಭ್ಯಾಸವನ್ನು ಬಿಡುವ ಮನಸ್ಸಿದ್ದರೂ ಬಿಡುವುದು ಕಷ್ಟವಾದೀತು. ಬದುಕಿಗೆ ಅನಿರೀಕ್ಷಿತ ತಿರುವುಗಳು ಬರಬಹುದು. ಕೆಲಸವು ಮುಂದೆ ಸಾಗದೇ ಇರುವುದು ನಿಮಗೆ ಕಿರಿಕಿರಿ ಎನಿಸೀತು. ಸಿಕ್ಕ ಸಂಪತ್ತಿನಿಂದ ಖುಷಿಯಾಗಿರಿ. ನಿಮ್ಮ ವಸ್ತುವನ್ನು ಇನ್ನೊಬ್ಬರಿಗೆ ಕೊಡಲು ಕಷ್ಟವಾದೀತು. ನಿಮಗಾಗಿ ನೀವು ಸಮಯವನ್ನು ಮಾಡಿಕೊಳ್ಳುವಿರಿ. ಸಂಗಾತಿಯ ಮಾತುಗಳು ನಿಮಗೆ ಹಿತವೆನಿಸೀತು. ಪ್ರಯಾಣದಿಂದ ಆಯಾಸವಾಗಲಿದೆ. ಸಮಾರಂಭಕ್ಕೆ ತೆರಳುವ ಸಾಧ್ಯತೆ ಇದೆ.
ಕನ್ಯಾ ರಾಶಿ: ಮನೆಯವರು ನಿಮ್ಮ ಬಗ್ಗೆ ಆಡಿಕೊಳ್ಳಬಹುದು. ಇತರರ ಬಗ್ಗೆ ನಿಮ್ಮ ಬಳಿ ದೂರನ್ನು ಹೇಳಬಹುದು. ದಂಪತಿಗಳ ನಡುವೆ ಬರುವ ಸಣ್ಣ ಕಲಹವೂ ದೊಡ್ಡದಾಗಬಹುದು. ಸುಮ್ಮನಿರುವುದು ಒಳ್ಳೆಯದು. ನಂಬಿಕೆಯನ್ನು ಉಳಿಸಿಕೊಳ್ಳಲು ಬಹಳ ಪ್ರಯತ್ನವನ್ನು ಮಾಡುವಿರಿ. ಆಲಸ್ಯದಿಂದ ಕೆಲಸಕ್ಕೆ ವಿರಾಮವನ್ನು ಮಾಡುವಿರಿ. ಕಾನೂನಿಗೆ ವಿರುದ್ಧವಾದ ತಂತ್ರವನ್ನು ಮಾಡುವುದು ಬೇಡ. ವಾಹನದಿಂದ ನಿಮಗೆ ತೊಂದರೆಯಾಗಬಹುದು. ಖರೀದಿಸುವಾಗ ನಿಮಗೆ ವಂಚನೆಯಾಗಿದೆ. ಪಕ್ಷಪಾತದ ಧೋರಣೆಯನ್ನು ಮಾಡುವುದು ಬೇಡ.
ತುಲಾ ರಾಶಿ: ಮಕ್ಕಳಿಗೆ ವಿವಾಹವನ್ನು ಮಾಡಲು ಪ್ರಯಾಸಪಡುವಿರಿ. ಒಂದರ ಮೇಲೆ ಒಂದರಂತೆ ಖರ್ಚುಗಳು ಕಾಣಿಸಿಕೊಳ್ಳುವುದು. ಆದಾಯವು ನಿರೀಕ್ಷಿತ ಹಂತಕ್ಕೆ ಹೋದರೂ ಖರ್ಚನ್ನು ಕಡಿಮೆ ಮಾಡಿಕೊಳ್ಳಲು ಕಷ್ಟಪಡುವಿರಿ. ಅಧಿಕಾರದ ಮಾತಿನಿಂದ ಏನನ್ನೂ ಸಾಧಿಸಲಾಗದು. ಮಾತು ಮೃದುವಾಗಿ ಇರಲಿ. ವಿದೇಶ ಹೋಗಲು ಕೆಲವು ತೊಂದರೆಗಳು ಬರಬಹುದು. ಕಚೇರಿಯಲ್ಲಿ ಯಾರದೋ ತಪ್ಪಿಗೆ ನೀವು ತಲೆಯನ್ನು ತಗ್ಗಿಸಬೇಕಾದೀತು. ಸುಖದ ದಾರಿಗಳನ್ನು ನೀವು ಹುಡುಕುವಿರಿ. ಸ್ನೇಹಿತರು ನಿಮ್ಮ ದಾರಿಯನ್ನು ತಪ್ಪಿಸಲು ಪ್ರಯತ್ನಿಸುವರು. ನಿಮ್ಮ ನಿರ್ಧಾರವು ಗಟ್ಟಿಯಾಗಿರಲಿ.
ವೃಶ್ಚಿಕ ರಾಶಿ: ಕೆಲಸಕ್ಕೆ ಸಮಯದ ಕೊರತೆ ಕಾಣಿಸಬಹುದು. ಉದ್ಯೋಗದ ವಿಚಾರದಲ್ಲಿ ನೀವು ವಂಚನೆಗೆ ಸಿಕ್ಕಿಕೊಳ್ಳುವ ಸಾಧ್ಯತೆ ಇದೆ. ಸಂಗಾತಿಯನ್ನು ಮೆಚ್ಚಿಸಲು ನಮ್ಮ ತಂತ್ರವು ವಿಫಲವಾದೀತು. ಉತ್ತಮ ವಸ್ತುಗಳನ್ನು ಮನೆಗೆ ತರುವಿರಿ. ಮಕ್ಕಳಿಗೆ ನಿಮ್ಮಂದ ಉಡುಗೊರೆ ಸಿಗಲಿದೆ. ನಿಮ್ಮ ಸಣ್ಣ ತಪ್ಪು ದೊಡ್ಡ ಅನಾಹುತಕ್ಕೆ ಕಾರಣವಾಗಬಹುದು. ಸತ್ಯವನ್ನೇ ಹೇಳುವುದಿದ್ದರೂ ಸರಿಯಾಗಿ ಹೇಳುವುದನ್ನು ರೂಢಿಸಿಕೊಳ್ಳಿ. ನೀವಿಂದು ಆಕರ್ಷಕವಾಗಿ ಕಾಣಿಸುವಿರಿ. ಸ್ನೇಹಿತರ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ಕೆಲಸವನ್ನು ನಿಷ್ಠೆಯಿಂದ ಮಾಡುವಿರಿ. ಪ್ರಾಮಾಣಿಕ ಪ್ರಯತ್ನವು ಫಲಿಸಬಹುದು.
ಧನಸ್ಸು ರಾಶಿ: ಸರ್ಕಾರಿ ಉದ್ಯೋಗಿಗಳಿಗೆ ಇಷ್ಟದ ಸ್ಥಳಕ್ಕೆ ವರ್ಗಾವಣೆ ಆಗಲಿದೆ. ಪ್ರಭಾವೀ ವ್ಯಕ್ತಿಗಳಿಂದ ನಿಮ್ಮ ಕೆಲಸವನ್ನು ಮಾಡಿಸಿಕೊಳ್ಳುವಿರಿ. ವಿದ್ಯಾಭ್ಯಾಸಕ್ಕೆ ಹೊರ ನಡೆಯುವ ಮನಸ್ಸನ್ನು ಮಾಡುವಿರಿ. ಸಾಹಸದ ಕೆಲಸಕ್ಕೆ ಉತ್ಸಾಹವು ಇರಲಿದೆ. ಭೂಮಿಯನ್ನು ಮಾರಾಟ ಮಾಡುವ ಯೋಚನೆಯು ನಿಮಗೆ ಬರಲಿದೆ. ಕುಟುಂಬವನ್ನು ನೋಡಿಕೊಳ್ಳುವ ಜವಾಬ್ದಾರಿಯು ಬರಬಹುದು. ನಿಮಗೆ ನಿಶ್ಚಯವಾದ ಮನಸ್ಸನ್ನು ತಂದುಕೊಳ್ಳುವುದು ಕಷ್ಟವಾದೀತು. ಸ್ತ್ರೀಯ ಕಡೆಯಿಂದ ನಿಮಗೆ ಅಧಿಕಾರವು ಪ್ರಾಪ್ತವಾಗುವುದು. ಕಾರ್ಯಗಳನ್ನು ಗುರುತಿಸಿ ನಿಮ್ಮನ್ನು ಗೌರವಿಸುವ ಸಾಧ್ಯತೆ ಇದೆ.
ಮಕರ ರಾಶಿ: ಕಾರ್ಯದ ನಿಮಿತ್ತ ದೂರದ ಊರಿಗೆ ಪ್ರಯಾಣವನ್ನು ಮಾಡಬೇಕಾದೀತು. ಕೆಲಸವು ಪೂರ್ಣವಾಗದೇ ಹಿಂದಿರುಗುವಿರಿ. ನಿಮಗೆ ಮೇಲಧಿಕಾರಿಗಳಿಂದ ಸೂಚನೆ ಸಿಗಲಿದ್ದು ಅದರಂತೆ ಕೆಲಸವನ್ನು ನೀವು ಮಾಡುವಿರಿ. ನಿಮಗೆ ಆಗದ ವಿಚಾರಕ್ಕೆ ವಿರೋಧವನ್ನು ವ್ಯಕ್ತಪಡಿಸುವಿರಿ. ಭೂಮಿಯ ಮೇಲೆ ನಿಮ್ಮ ಹೂಡಿಕೆ ಮಾಡಲು ಬಯಸುವಿರಿ. ದಂಪತಿಗಳು ವೈಮನಸ್ಯವನ್ನು ದೂರಮಾಡಿಕೊಳ್ಳಲು ಎಲ್ಲಿಗಾದರೂ ಹೋಗಬಹುದು. ಆರ್ಥಿಕತೆಯ ಅಭಿವೃದ್ಧಿಗೆ ನಿಮ್ಮ ಯೋಜನೆಗಳು ರೂಪುಗೊಳ್ಳುವುದು. ನಿಮ್ಮ ಕೆಲಸವನ್ನು ಸ್ನೇಹಿತರ ಮೂಲಕ ಮಾಡಿಕೊಳ್ಳುವಿರಿ.
ಕುಂಭ ರಾಶಿ: ವ್ಯಾಪಾರವಹಿವಾಟುಗಳಲ್ಲಿ ನಷ್ಟವಾಗಬಹುದು. ಅನಿರೀಕ್ಷಿತ ವಾರ್ತೆಯಿಂದ ಕಷ್ಡವಾದೀತು. ನಿಮ್ಮ ಮೆಚ್ಚಿನವರನ್ನು ಭೇಟಿಯಾಗುವಿರಿ. ವಾಹನ ಚಾಲನೆಯನ್ನು ಮಾಡುವ ಜಾಗರೂಕತೆಯ ಅವಶ್ಯಕತೆ ಇರಲಿದೆ. ಸಹೋದರಿಗೆ ನಿಮ್ಮಿಂದ ಸಹಕಾರವು ಸಿಗಲಿದೆ. ಸ್ವಂತ ಭೂಮಿಯನ್ನು ಕೃಷಿಗೆ ಬಳಸಿಕೊಳ್ಳುವ ಆಲೋಚನೆ ಇರಲಿದೆ. ಸಂಗಾತಿಯನ್ನು ಮನವೊಲಿಸಲು ಬಹಳ ಕಷ್ಟವಾದೀತು. ಬಂಧುಗಳಿಂದ ನಿಮಗೆ ಅಪಮಾನವಾದೀತು. ಆರೋಗ್ಯವು ಸುರಕ್ಷಿತವಾಗಿ ಇರುವಂತೆ ನೋಡಿಕೊಳ್ಳಿ. ಹೆಚ್ಚು ಮಾತನಾಡುವಿರಿ. ಶಿಸ್ತಿನಿಂದ ಇರುವುದು ನಿಮಗೆ ಇಷ್ಡವಾದೀತು.
ಮೀನ ರಾಶಿ: ದೌರ್ಭಾಗ್ಯವನ್ನು ನೆನೆಯುತ್ತ ಇರುವುದಕ್ಕಿಂತ ಬೇರೆಯದಾದ ಉತ್ತಮ ದಾರಿಯನ್ನು ಹುಡುಕುವುದು ಶ್ರೇಯಸ್ಕರ. ವೇತನವು ಅಧಿಕವಾಗಿ ಸಂತೋಷವಾಗುವುದು. ಆಸ್ತಿಯ ವಿಚಾರವನ್ನು ಮಾತನಾಡುವುದು ಬೇಡ. ಕಲಹವಾದೀತು. ನಿಮ್ಮ ಸಂಸ್ಥೆಯ ಮುಖ್ಯಸ್ಥರನ್ನಾಗಿ ಮಾಡುವ ಮಾತುಕತೆಗಳು ನಡೆಯಬಹುದು. ನಿಮಗೆ ಬೆಲೆ ಕಡಿಮೆಯಾಗಿರುವುದು, ಗೌರವವನ್ನು ಕೊಡದೇ ಇರುವುದು ಬೇಸರವಾದೀತು. ನಿಮ್ಮ ಕೆಲಸದ ಪ್ರಗತಿಯಿಂದ ನಿಮಗೆ ಖುಷಿಯಾಗಲಿದೆ. ನೆಮ್ಮದಿಯನ್ನು ಕೊಡುವ ಸಂಗತಿಯನ್ನು ನೀವು ಆಯ್ಕೆ ಮಾಡಿಕೊಳ್ಳುವಿರಿ.
ಲೋಹಿತಶರ್ಮಾ – 8762924271 (what’s app only)