ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಏಪ್ರಿಲ್ 4) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ : ಅಶ್ವಿನೀ, ಮಾಸ : ಚೈತ್ರ, ಪಕ್ಷ : ಶುಕ್ಲ, ವಾರ : ಮಂಗಳ, ತಿಥಿ : ಚತುರ್ದಶೀ, ನಿತ್ಯನಕ್ಷತ್ರ : ಪೂರ್ವಾಫಲ್ಗುಣೀ, ಯೋಗ: ವೃದ್ಧಿ, ಕರಣ : ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 27 ನಿಮಿಷಕ್ಕೆ, ಸೂರ್ಯಾಸ್ತ 06 ಗಂಟೆ 43 ನಿಮಿಷಕ್ಕೆ. ರಾಹು ಕಾಲ 03:40 ರಿಂದ 05:12ರ ವರೆಗೆ, ಯಮಘಂಡ ಕಾಲ 09:31 ರಿಂದ 11:03ರ ವರೆಗೆ, ಗುಳಿಕ ಕಾಲ 12:35ರಿಂದ 02:07ರ ವರೆಗೆ.
ಮೇಷ: ವ್ಯಾಪಾರಿಗಳಾಗಿದ್ದದರೆ ಇಂದು ಲಾಭವಾಗಿ ತೃಪ್ತಿಯನ್ನು ಕಾಣುವಿರಿ. ಹೊಸ ಗ್ರಾಹಕರೊಂದಿಗೆ ಮಾತುಕತೆ ನಡೆಸಿ ವ್ಯಾಪಾರವನ್ನು ಹೆಚ್ಚು ಮಾಡಿಸಿಕೊಳ್ಳುವಿರಿ. ಉದಾರಿಗಳಾಗಿ ನೀವು ಇರುವುದು ಬೇಡ. ನಿಮ್ಮಲ್ಲಿ ಏನೂ ಉಳಿಯದಂತೆ ಆಗುವುದು. ದೈವಭಕ್ತಿಯು ಅಧಿಕವಾಗಿರಲಿದೆ. ನ್ಯಾಯಾಲಯದ ವಿಚಾರದಲ್ಲಿ ಹಿನ್ನಡೆಯಾಗಲಿದೆ. ಬೆಳಗ್ಗೆ ಬಹಳ ಜಾಡ್ಯವಿದ್ದು ಅನಂತರ ಅದು ಸರಿಯಾಗಲಿದೆ. ಹೊಸತನ್ನು ಕಲಿಯುವ ತವಕದಲ್ಲಿ ಇರುವಿರಿ. ದುಃಸ್ವಪ್ನ ಚಿಂತೆಗೆ ಒಳಗಾಗಬಹುದು.
ವೃಷಭ: ನಿಮ್ಮಲ್ಲಿ ನಾಯಕತ್ವದ ಗುಣವಿರುವುದು ಇತರಿಗೆ ಅನುಭವಕ್ಕೆ ಬರಲಿದೆ. ಕಾರ್ಯನಿರತ ದಿನಚರಿಯ ಹೊರೆತಾಗಿಯೂ ನೀವು ನಿಮಗಾಗಿ ಸಮಯವನ್ನು ತೆಗೆಯಲು ಸಾಧ್ಯವಾಗುತ್ತದೆ. ವ್ಯವಹಾರದ ವಿಚಾರದಲ್ಲಿ ಆಪ್ತರ ಸಲಹೆಯನ್ನು ಪಡೆಯುವುದು ಉತ್ತಮ. ಬಿಡುವಿನ ವೇಳೆಯಲ್ಲಿ ನೀವು ಇಂದು ಸೃಜನಾತ್ಮಕವಾಗಿ ಏನಾದರೂ ಮಾಡಬಹುದು. ನಿಮ್ಮ ಸಹಾಯಕ್ಕೆ ಯಾರದರೂ ಬರಬಹುದು. ಸ್ವತಂತ್ರವಾಗಿ ನಿಮ್ಮ ಕೆಲಸದಲ್ಲಿ ತೊಡಗಿ. ಪ್ರಾಮಾಣಿಕ ಗುಣವು ಎಲ್ಲರಿಗೂ ಇಷ್ಟವಾಗುವುದು.
ಮಿಥುನ: ಇಂದು ನೀವು ಕಷ್ಟವನ್ನು ಅನುಭವಿಸಿತ್ತಿದ್ದರೆ ಮುಂದೆ ಶುಭದಿನವು ಬರುವುದೆಂಬ ಆಲೋಚನೆ ಮಾಡಬಹುದು. ಎಲ್ಲ ವಿಷಯದಲ್ಲಿಯೂ ನಿಮ್ಮದೇ ಮುಂದಿರಬೇಕು ಎನ್ನುವುದು ಸರಿಯಲ್ಲ. ಬೇರೆಯವರ ವ್ಯಕ್ತಿತ್ವವನ್ನೂ ಗೌರವಿಸಿ. ಸ್ತ್ರೀರೋಗ ತಜ್ಞರಿಗೆ ಬೇಡಿಕೆ ಹೆಚ್ಚಾಗಿ ಧನಸಂಪಾದನೆಯು ಹೆಚ್ಚಾಗಬಹುದು. ಹಿರಿಯರ ಆರೋಗ್ಯದಲ್ಲಿ ಸ್ವಲ್ಪಮಟ್ಟಿನ ವ್ಯತ್ಯಾಸಗಳಾಗಬಹುದು. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಕಡಿಮೆಯಾಗುತ್ತದೆ. ಮಿತ್ರರನ್ನು ಮನೆಗೆ ಕರೆದು ಉಪಚರಿಸುವಿರಿ.
ಕರ್ಕ: ಇಂದು ನಿಮ್ಮ ಕುರಿತು ಆಡಿದ ಮಾತುಗಳು ತಲೆಯಲ್ಲಿ ಸುತ್ತುತ್ತಿದ್ದು ನಿದ್ರೆಯನ್ನೂ ಅದು ದೂರ ಮಾಡುವುದು. ಮಾರ್ಗದರ್ಶಕರ ಸಲಹೆಯಂತೆ ನಿಮ್ಮ ಗುರಿಮುಟ್ಟುವ ಹಾದಿಯನ್ನು ಬದಲಿಸಿಕೊಂಡಲ್ಲಿ ಯಶಸ್ಸು ನಿಮ್ಮದಾಗುತ್ತದೆ. ದಾಂಪತ್ಯದಲ್ಲಿ ಸಣ್ಣಮಟ್ಟಿನ ವಿರಸವು ಉಂಟಾಗಲಿದೆ. ಕೆಲವು ರಾಜಕೀಯ ವ್ಯಕ್ತಿಗಳಿಗೆ ಸಂಘ ಸಂಸ್ಥೆಗಳಲ್ಲಿ ಉತ್ತಮ ಹುದ್ದೆ ದೊರೆಯುತ್ತದೆ. ಸರ್ಕಾರಿ ಕಾನೂನು ತೊಡಕುಗಳು ಈಗ ನಿವಾರಣೆಯಾಗುತ್ತವೆ. ದೈವಭಕ್ತಿಯಿಂದ ನಿಮಗೆ ಅನುಕೂಲವಿದೆ.
ಸಿಂಹ: ತಾಯಿಯ ಮಾತನ್ನು ನೀವು ನಡೆಸಿಕೊಡಲಿದ್ದೀರಿ. ವಾಹನ ಖರೀದಿಯನ್ನು ಮಾಡಲಿದ್ದೀರಿ. ಆರಂಭಿಸಿದ ಕಾರ್ಯದಲ್ಲಿ ಜಯ ಸಿಗಲಿದೆ. ದಿನಗೂಲಿ ನೌಕರರಿಗೆ ಹೆಚ್ಚು ಕೆಲಸ ದೊರೆತು ಆದಾಯ ಹೆಚ್ಚುವ ಸಾಧ್ಯತೆ ಇದೆ. ಸರ್ಕಾರಿ ಕಚೇರಿಯ ಕೆಲಸ ಕಾರ್ಯಗಳು ಸರಾಗವಾಗಿ ಆಗುತ್ತದೆ. ಮೂತ್ರ ಸಂಬಂಧಿ ಕಾಯಿಲೆಗಳಿದ್ದಲ್ಲಿ ಚಿಕಿತ್ಸೆಗೆ ಹೋಗುವುದು ಒಳ್ಳೆಯದು. ಪ್ರಯಾಣದಲ್ಲಿ ಅನುಕೂಲವಿದೆ. ಹಣದ ಒಳಹರಿವು ಮಂದಗತಿಯಲ್ಲಿರುತ್ತದೆ. ಕೃಷಿಕರಿಗೆ ಸೂಕ್ತ ಸೌಲಭ್ಯ ದೊರೆಯಲಿದೆ.
ಕನ್ಯಾ: ಇಂದು ಮಾತಿನ ಬಗ್ಗೆ ಗಮನವಿರಲಿ. ಮಾತನಾಡಿ ಗೌರವವನ್ನು ಕಳೆದುಕೊಳ್ಳಬೇಡಿ. ವೃತ್ತಿಯಲ್ಲಿ ಬರುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಬಹುದು ಹಾಗೂ ಅದರಲ್ಲಿ ಉತ್ತಮ ಫಲಿತಾಂಶ ಬರುವ ಯೋಗವಿದೆ. ಹಂಗಾಮಿ ಕೆಲಸಗಾರರಲ್ಲಿ ಕೆಲವರಿಗೆ ಕಾಯಂ ಆಗುವ ಯೋಗವಿದೆ. ಮಕ್ಕಳಿಗೆ ನಿಮ್ಮ ಬಗ್ಗೆ ಬೇಸರ ಉಂಟಾಗಲಿದೆ. ವಿದೇಶದಲ್ಲಿ ವೃತ್ತಿಯಲ್ಲಿರುವವರಿಗೆ ಮುಂಬಡ್ತಿ ದೊರೆಯಬಹುದು. ಅನಗತ್ಯವಾಗಿ ಹಣವನ್ನು ಖಾಲಿ ಮಾಡಿ ಸಂಕಷ್ಟಕ್ಕೆ ಸಿಲುಕಬೇಡಿ.
ತುಲಾ: ನಿಮಗೆ ನಿಮ್ಮವರ ಸ್ವಭಾವಗಳು ತಿಳಿಯುವುದು. ವಾತರೋಗದಿಂದ ಬಳಲುವ ಸಾಧ್ಯತಯಿದೆ. ದಂಪತಿಗಳ ನಡುವೆ ನಡೆದ ಕಲಹವು ನ್ಯಾಯಾಲಯದ ಮೆಟ್ಟಲನ್ನೂ ಏರಬಹುದು. ನಿಮ್ಮ ಬಗ್ಗೆ ಪಿತೂರಿಗಳು ನಡೆಯಬಹುದು. ಅಪರಿಚಿತರಿಂದ ಅನವಶ್ಯಕ ಸಹಕಾರ ದೊರೆಯುತ್ತದೆ ಮತ್ತು ನಿಮ್ಮ ಸ್ಥಗಿತಗೊಂಡ ಕೆಲಸಗಳೂ ಪೂರ್ಣಗೊಳ್ಳುತ್ತವೆ. ಶಿಸ್ತನ್ನು ಇಷ್ಟ ಪಡುವ ನಿಮಗೆ ಸ್ನೇಹಿತ ಅಶಿಸ್ತು ಕಿರಿಕಿರಿ ತಂದೀತು. ಆಭರಣದ ಖರೀದಿಗೆ ಮನಸ್ಸು ಮಾಡುವಿರಿ.
ವೃಶ್ಚಿಕ: ನಿಮ್ಮನ್ನು ಭೇಟಿ ಮಾಡಲು ಗಣ್ಯರು ಬರಬಹುದು. ದಿವಸ ಚಟುವಟಿಕೆಗಳಿಗಿಂತ ಭಿನ್ನವಾದ ಯಾವುದಾದರೂ ಆಸಕ್ತಿಯಿರುವ ಕೆಲಸಗಳ ಬಗ್ಗೆ ಗಮನಹರಿಸಿ. ಉದ್ಯೋಗದಲ್ಲಿ ಬದಲಾವಣೆಯನ್ನು ತರಬೇಕಾದ ಸ್ಥಿತಿ ಬರಬಹುದು. ನಿಮಗೆ ಕುತಂತ್ರವನ್ನು ಮಾಡುವ ಜನರಿರುತ್ತಾರೆ. ಕೊಟ್ಟ ಸಾಲವು ಮರಳಿ ಬರುತ್ತದೆ ಎಂಬ ನಿರೀಕ್ಷೆ ಬೇಡ. ಬಂದರೂ ಬರಬಹುದು. ಏಕಾಗ್ರತೆಯ ಕೊರತೆಯು ಕಾಣಬಹುದು. ಉನ್ನತಸ್ಥಾನದ ಆಕಾಂಕ್ಷಿಗಳಾಗಿರುವಿರಿ.
ಧನುಸ್ಸು: ಇಂದು ಆರೋಗ್ಯದಲ್ಲಿ ವ್ಯತ್ಯಾಸವು ಕಂಡುಬರಬಹುದು. ಇಂದು ಎಲ್ಲರೊಡನೆ ಸಂತೋಷದಿಂದ ಕಾಲ ಕಳೆಯುವಿರಿ. ಮಗನ ಓದಿಗೆ ಧನಸಹಾಯವನ್ನು ಕೇಳಬೇಕಾಗಿಬರಬಹುದು. ಅನಗತ್ಯವಾಗಿ ಖರ್ಚನ್ನು ತಂದುಕೊಳ್ಳುವಿರಿ. ಕುಟುಂಬದವರ ಅನಾರೋಗ್ಯವು ನಿಮಗೆ ಓಡಾಟವಾಗಲಿದೆ. ಧಾರ್ಮಿಕವಿಚಾರದಲ್ಲಿ ಆಸಕ್ತಿ ಇರಲಿದೆ. ಮನೆಯಿಂದ ದೂರವಿರಬೇಕಾಗಿರಬಹುದು. ಹಸಿದುಕೊಂಡು ಇರಬೇಕಾಗಬಹುದು.
ಮಕರ: ಪ್ರಯಾಣಗಳು ನಿಮಗೆ ಆಹ್ಲಾದಕರವಾಗಿರುತ್ತದೆ. ಸತ್ಯವನ್ನೇ ಹೇಳಿದರೂ ನಂಬದ ಸ್ಥಿತಿ ನಿಮ್ಮದಾಗಿರುತ್ತದೆ. ಸಾಕಷ್ಟು ಹಣವನ್ನು ಆರಾಮದಾಯಕ ವಿಷಯಗಳಿಗೆ ಖರ್ಚು ಮಾಡಬಹುದು. ಇಂದು ನೀವು ಮಕ್ಕಳಿಗೆ ತಿಳಿಹೇಳುವಿರಿ. ಕೆಲಸದ ಸ್ಥಳದಲ್ಲಿ ನಿಮ್ಮ ಸಹೋದ್ಯೋಗಿಗಳಿಗೆ ಕೃತಜ್ಞರಾಗಿರುವಿರಿ. ಇಂದು ನಿಮಗೆ ಸಂಗಾತಿಯ ಬೆಂಬಲ ಸಿಗಲಿದೆ. ಬಹಳ ದಿನಗಳ ಅನಂತರ ಪ್ರೀತಿಪಾತ್ರರನ್ನು ಭೇಟಿಯಾಗುವಿರಿ.
ಕುಂಭ: ದಿನದ ಆರಂಭವು ವ್ಯಥೆಯಿಂದ ಆರಂಭವಾದರೂ ಸಂಜೆ ಮುಕ್ತಾಯವಾಗುವಾಗ ಖುಷಿಯಿಂದ ಇರುವಿರಿ. ಹತ್ತಿರದವರನ್ನು ಕಳೆದುಕೊಳ್ಳುವವರಿದ್ದೀರಿ. ಕೊನೆಯಲ್ಲಿ, ನ್ಯಾಯಾಲಯದ ಪ್ರಕರಣವು ನಿಮ್ಮ ಪರವಾಗಿಬರಬಹುದು. ಅನಂತರ ನೆಮ್ಮದಿಯ ನಿಟ್ಟುಸಿರು ಬಿಡುವಿರಿ. ಇಂದು ನಿಮ್ಮ ಸಂಗಾತಿಯ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಲು. ಕಷ್ಟವೆನಿಸಿದರೆ ಸುಮ್ಮನಾಗಿ. ಅತಿಯಾದ ಸಲಹೆಯಿಂದ ಆತಂಕ ಬಂದೀತು.
ಮೀನ: ಕೆಲಸ ಮಾಡುವುದೊಂದೇ ನಿಮ್ಮ ಗುರಿಯಾಗಿದ್ದು ಬೇರೆ ಗಮನವನ್ನು ಕೊಡಲಾರಿರಿ. ಹಿಂದೆ ಸಿಕ್ಕಿಬಿದ್ದ ಹಣ ಸಿಗಲಿದೆ. ಹೊಸ ಆಸ್ತಿ, ವಾಹನಗಳು ಮತ್ತು ವ್ಯವಹಾರಗಳಲ್ಲಿ ಹೊಸ ಲಾಭದಾಯಕ ವ್ಯವಹಾರಗಳ ಸಾಧ್ಯತೆಗಳಿವೆ. ಓದಿನ ಬಗ್ಗೆ ಅಧಿಕ ವ್ಯಾಮೋಹ ಇರಲಿಲ್ಲ ದೆ. ಈ ಸಮಯದಲ್ಲಿ, ಚಿಲ್ಲರೆ ವ್ಯಾಪಾರ ಮಾಡುವವರಿಗೆ ಲಾಭವಾಗುತ್ತದೆ. ಬಂಧುಗಳು ತಮ್ಮ ಕೈಲಾದ ಸಹಾಯವನ್ನು ಮಾಡುವರು. ದಾಂಪತ್ಯ ಜೀವನದಲ್ಲಿ ಮಧುರತೆ ಇರುತ್ತದೆ. ಖುಷಿಯನ್ನು ಹಂಚಿಕೊಳ್ಳಿ.
ಲೋಹಿತಶರ್ಮಾ ಇಡುವಾಣಿ – 8762924271 (what’s app only)