Horoscope Today: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಇಂದಿನ ಭವಿಷ್ಯ ಹೀಗಿದೆ

2023 ಏಪ್ರಿಲ್​ 3 ಸೋಮವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

Horoscope Today: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಇಂದಿನ ಭವಿಷ್ಯ ಹೀಗಿದೆ
ಪ್ರಾತಿನಿಧಿಕ ಚಿತ್ರImage Credit source: abplive.com
Follow us
ಗಂಗಾಧರ​ ಬ. ಸಾಬೋಜಿ
|

Updated on: Apr 03, 2023 | 5:30 AM

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಏಪ್ರಿಲ್​ 3 ಸೋಮವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ : ಅಶ್ವಿನೀ, ಮಾಸ : ಚೈತ್ರ, ಪಕ್ಷ : ಶುಕ್ಲ, ವಾರ : ಸೋಮ, ತಿಥಿ : ತ್ರಯೋದಶೀ, ನಿತ್ಯನಕ್ಷತ್ರ : ಮಘಾ, ಯೋಗ : ಗಂಡ, ಕರಣ : ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 28 ನಿಮಿಷಕ್ಕೆ, ಸೂರ್ಯಾಸ್ತ 06 ಗಂಟೆ 43 ನಿಮಿಷಕ್ಕೆ. ರಾಹು ಕಾಲ 07:59 ರಿಂದ 09:32ರ ವರೆಗೆ, ಯಮಘಂಡ ಕಾಲ 11:04 ರಿಂದ 12:36ರ ವರೆಗೆ, ಗುಳಿಕ ಕಾಲ 02:08ರಿಂದ 03:40ರ ವರೆಗೆ.

ಮೇಷ: ಆಲೋಚಿಸದೇ ಎಂತಹ ಮಾತುಗಳನ್ನೂ ಆಡಬೇಡಿ. ಸಮಯವನ್ನು ವ್ಯರ್ಥ ಮಾಡದೆ ನಿಮ್ಮ ಕಾರ್ಯ ಸಾಧನೆ ಮಾಡುವುದು ಒಳ್ಳೆಯದು. ಅನಿರೀಕ್ಷಿತವಾಗಿ ಸ್ನೇಹಿತರ ಭೇಟಿ ಇಂದು ನಿಮಗೆ ಆಗಲಿದೆ. ಅನ್ಯರ ಮಾತಿಗೆ ಬಲಿಯಾಗಬೇಡಿ. ಉದ್ಯೋಗಸ್ಥ ಮಹಿಳೆಯರಿಗೆ ವರ್ಗಾವಣೆಯಾಗಲಿದೆ. ಪ್ರೇಮಾಂಕುರವಾಗಲಿದೆ‌. ನಿಮ್ಮ ಪ್ರೇಮ ದೀರ್ಘವಾಗಿ ಇರುವಂತೆ ನೋಡಿಕೊಳ್ಳಿ. ಮನಸ್ಸಿಗೆ ನೋವನ್ನು ಕೊಡಬೇಡಿ. ದೀರ್ಘಕಾಲ ಸ್ನೇಹವು ಸಂಬಂಧವಾಗುವ ಸಾಧ್ಯತೆ ಇದೆ.

ವೃಷಭ: ಕೈಗೊಂಡ ಕಾರ್ಯಗಳು ಸಫಲವಾಗಲಿವೆ. ಎಂದೋ ಆದ ಕಾರ್ಯವನ್ನು ನೆನೆಸಿಕೊಂಡು ಸಂಕಟಪಡುವಿರಿ. ಸಂಗಾತಿಗಳ ನಡುವೆ ಕಲಹವು ಹೆಚ್ಚಾಗುವುದು. ಇಬ್ಬರೂ ಸ್ವಂತಿಕೆಯನ್ನು ಬಿಟ್ಟಕೊಡಲು ಮನಸ್ಸು ಮಾಡದೇ ಒಣಜಂಭವನ್ನೇ ಮುಂದುವರಿಸುವಿರಿ. ಓಡಾಟದಿಂದ ಆಯಾಸವಾಗಲಿದೆ. ಮಕ್ಕಳ ಜೊತೆ ಕಾಲ ಕಳೆಯುವ ಮನಸ್ಸಿದ್ದರೂ ಸಮಯವಾಗದು. ನಿಮ್ಮ ನಂಬಿಕೆಗೆ ಘಾಸಿಯಾಗುವ ಸಾಧ್ಯತೆ ಇದೆ. ನಿಮ್ಮ ಪೌರುಷವನ್ನು ತೋರಿಸಲು ಹೋಗಬೇಡಿ.

ಮಿಥುನ: ಇಂದು ಹೇಳಿಕೊಳ್ಳಲಾಗದ, ಅನುಭವಿಸಲೂ ಆಗದ ಆಪತ್ತಗಳು ಬರಲಿವೆ. ವಿದ್ಯಾರ್ಥಿಗಳು ಪರೀಕ್ಷೆಯನ್ನು ನಿರಾತಂಕವಾಗಿ ಎದುರಿಸುವ ಧೈರ್ಯವನ್ನು ಮಾಡುವರು. ಕೋಪದಿಂದ ಯಾವ ಕಾರ್ಯ ಸಾಧನೆಗಳು ನಿಮ್ಮಿಂದ ಆಗದು. ತಾಳ್ಮೆಯನ್ನು ಬೆಳೆಸಿಕೊಳ್ಳಬೇಕಿದೆ. ಸ್ವತಂತ್ರವಾಗಿ ಆಲೋಚಿಸಿ ಕಾರ್ಯವನ್ನು ಮಾಡಿ. ಕಛೇರಿಯಲ್ಲಿ ನಿಮಗೆ ಪ್ರಶಂಸೆಯು ಸಿಗಲಿದೆ. ಸ್ನೇಹಿತರಿಂದ ಉಪಕಾರವನ್ನು ಬಯಸಲಿದ್ದೀರಿ. ದೈವಭಕ್ತಿಯು ಹೆಚ್ಚಾಗಲಿದೆ.

ಕರ್ಕ: ಪತಿಯ ನಡವಳಿಯಿಂದ ನಿಮಗೆ ಬೇಸರವಾಗಲಿದೆ. ಯಾರ ಬಳಿಯೂ ಹೇಳದೇ ಸುಮ್ಮನಾಗುವಿರಿ. ವೃತ್ತಿಯಲ್ಲಿ ಆದ ಬದಲಾವಣೆಯಿಂದ ನಿಮ್ಮನ್ನು ಕೈಬಿಡಬಹುದು. ಆರ್ಥಿಕವಾಗಿ ದುರ್ಬಲಾಗಿದ್ದ ನಿಮಗೆ ಇದು ಗಾಯದ ಮೇಲೆ ಬರೆ ಎಳೆದಂತೆ ಆಗಲಿದೆ. ಮಕ್ಕಳು ಕೆಟ್ಟ ಮಾರ್ಗವನ್ನು ಅನುಸರಿಸುವುದನ್ನು ಕಂಡರೂ ಏನನ್ನೂ ಹೇಳಲಾಗದ ಸ್ಥಿತಿಯು ಇರಲಿದೆ. ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಫೈಲ್ ಆಗುವ ಭೀತಿ ಇರಲಿದೆ‌. ಮನೆಯಲ್ಲಿ ಧೈರ್ಯವನ್ನು ತುಂಬುವ ಕೆಲಸವಾಗಬೇಕಿದೆ.