Horoscope Today: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಇಂದಿನ ಭವಿಷ್ಯ ಹೀಗಿದೆ
2023 ಏಪ್ರಿಲ್ 4 ಮಂಗಳವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಏಪ್ರಿಲ್ 4 ಮಂಗಳವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ : ಅಶ್ವಿನೀ, ಮಾಸ : ಚೈತ್ರ, ಪಕ್ಷ : ಶುಕ್ಲ, ವಾರ : ಮಂಗಳ, ತಿಥಿ : ಚತುರ್ದಶೀ, ನಿತ್ಯನಕ್ಷತ್ರ : ಪೂರ್ವಾಫಲ್ಗುಣೀ, ಯೋಗ: ವೃದ್ಧಿ, ಕರಣ : ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 27 ನಿಮಿಷಕ್ಕೆ, ಸೂರ್ಯಾಸ್ತ 06 ಗಂಟೆ 43 ನಿಮಿಷಕ್ಕೆ. ರಾಹು ಕಾಲ 03:40 ರಿಂದ 05:12ರ ವರೆಗೆ, ಯಮಘಂಡ ಕಾಲ 09:31 ರಿಂದ 11:03ರ ವರೆಗೆ, ಗುಳಿಕ ಕಾಲ 12:35ರಿಂದ 02:07ರ ವರೆಗೆ.
ಮೇಷ: ವ್ಯಾಪಾರಿಗಳಾಗಿದ್ದದರೆ ಇಂದು ಲಾಭವಾಗಿ ತೃಪ್ತಿಯನ್ನು ಕಾಣುವಿರಿ. ಹೊಸ ಗ್ರಾಹಕರೊಂದಿಗೆ ಮಾತುಕತೆ ನಡೆಸಿ ವ್ಯಾಪಾರವನ್ನು ಹೆಚ್ಚು ಮಾಡಿಸಿಕೊಳ್ಳುವಿರಿ. ಉದಾರಿಗಳಾಗಿ ನೀವು ಇರುವುದು ಬೇಡ. ನಿಮ್ಮಲ್ಲಿ ಏನೂ ಉಳಿಯದಂತೆ ಆಗುವುದು. ದೈವಭಕ್ತಿಯು ಅಧಿಕವಾಗಿರಲಿದೆ. ನ್ಯಾಯಾಲಯದ ವಿಚಾರದಲ್ಲಿ ಹಿನ್ನಡೆಯಾಗಲಿದೆ. ಬೆಳಗ್ಗೆ ಬಹಳ ಜಾಡ್ಯವಿದ್ದು ಅನಂತರ ಅದು ಸರಿಯಾಗಲಿದೆ. ಹೊಸತನ್ನು ಕಲಿಯುವ ತವಕದಲ್ಲಿ ಇರುವಿರಿ. ದುಃಸ್ವಪ್ನ ಚಿಂತೆಗೆ ಒಳಗಾಗಬಹುದು.
ವೃಷಭ: ನಿಮ್ಮಲ್ಲಿ ನಾಯಕತ್ವದ ಗುಣವಿರುವುದು ಇತರಿಗೆ ಅನುಭವಕ್ಕೆ ಬರಲಿದೆ. ಕಾರ್ಯನಿರತ ದಿನಚರಿಯ ಹೊರೆತಾಗಿಯೂ ನೀವು ನಿಮಗಾಗಿ ಸಮಯವನ್ನು ತೆಗೆಯಲು ಸಾಧ್ಯವಾಗುತ್ತದೆ. ವ್ಯವಹಾರದ ವಿಚಾರದಲ್ಲಿ ಆಪ್ತರ ಸಲಹೆಯನ್ನು ಪಡೆಯುವುದು ಉತ್ತಮ. ಬಿಡುವಿನ ವೇಳೆಯಲ್ಲಿ ನೀವು ಇಂದು ಸೃಜನಾತ್ಮಕವಾಗಿ ಏನಾದರೂ ಮಾಡಬಹುದು. ನಿಮ್ಮ ಸಹಾಯಕ್ಕೆ ಯಾರದರೂ ಬರಬಹುದು. ಸ್ವತಂತ್ರವಾಗಿ ನಿಮ್ಮ ಕೆಲಸದಲ್ಲಿ ತೊಡಗಿ. ಪ್ರಾಮಾಣಿಕ ಗುಣವು ಎಲ್ಲರಿಗೂ ಇಷ್ಟವಾಗುವುದು.
ಮಿಥುನ: ಇಂದು ನೀವು ಕಷ್ಟವನ್ನು ಅನುಭವಿಸಿತ್ತಿದ್ದರೆ ಮುಂದೆ ಶುಭದಿನವು ಬರುವುದೆಂಬ ಆಲೋಚನೆ ಮಾಡಬಹುದು. ಎಲ್ಲ ವಿಷಯದಲ್ಲಿಯೂ ನಿಮ್ಮದೇ ಮುಂದಿರಬೇಕು ಎನ್ನುವುದು ಸರಿಯಲ್ಲ. ಬೇರೆಯವರ ವ್ಯಕ್ತಿತ್ವವನ್ನೂ ಗೌರವಿಸಿ. ಸ್ತ್ರೀರೋಗ ತಜ್ಞರಿಗೆ ಬೇಡಿಕೆ ಹೆಚ್ಚಾಗಿ ಧನಸಂಪಾದನೆಯು ಹೆಚ್ಚಾಗಬಹುದು. ಹಿರಿಯರ ಆರೋಗ್ಯದಲ್ಲಿ ಸ್ವಲ್ಪಮಟ್ಟಿನ ವ್ಯತ್ಯಾಸಗಳಾಗಬಹುದು. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಕಡಿಮೆಯಾಗುತ್ತದೆ. ಮಿತ್ರರನ್ನು ಮನೆಗೆ ಕರೆದು ಉಪಚರಿಸುವಿರಿ.
ಕರ್ಕ: ಇಂದು ನಿಮ್ಮ ಕುರಿತು ಆಡಿದ ಮಾತುಗಳು ತಲೆಯಲ್ಲಿ ಸುತ್ತುತ್ತಿದ್ದು ನಿದ್ರೆಯನ್ನೂ ಅದು ದೂರ ಮಾಡುವುದು. ಮಾರ್ಗದರ್ಶಕರ ಸಲಹೆಯಂತೆ ನಿಮ್ಮ ಗುರಿಮುಟ್ಟುವ ಹಾದಿಯನ್ನು ಬದಲಿಸಿಕೊಂಡಲ್ಲಿ ಯಶಸ್ಸು ನಿಮ್ಮದಾಗುತ್ತದೆ. ದಾಂಪತ್ಯದಲ್ಲಿ ಸಣ್ಣಮಟ್ಟಿನ ವಿರಸವು ಉಂಟಾಗಲಿದೆ. ಕೆಲವು ರಾಜಕೀಯ ವ್ಯಕ್ತಿಗಳಿಗೆ ಸಂಘ ಸಂಸ್ಥೆಗಳಲ್ಲಿ ಉತ್ತಮ ಹುದ್ದೆ ದೊರೆಯುತ್ತದೆ. ಸರ್ಕಾರಿ ಕಾನೂನು ತೊಡಕುಗಳು ಈಗ ನಿವಾರಣೆಯಾಗುತ್ತವೆ. ದೈವಭಕ್ತಿಯಿಂದ ನಿಮಗೆ ಅನುಕೂಲವಿದೆ.