Horoscope Today: ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಇಂದಿನ ರಾಶಿ ಭವಿಷ್ಯ
ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಏಪ್ರಿಲ್ 04) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ದಿನ, ಸಮಯ ಎಲ್ಲರಿಗೂ ಒಂದೇ ಆದ್ರೂ ಜೀವನದಲ್ಲಿ ನಡೆಯುವ ಘಟನೆಗಳು ವಿಭಿನ್ನ. ಇದಕ್ಕೆ ಕಾರಣ ನಮ್ಮ ಜನ್ಮ ರಾಶಿಗಳಲ್ಲಾಗುವ ಬದಲಾವಣೆ. ನಮ್ಮ ಆರೋಗ್ಯ, ಯಶಸ್ಸು, ಸಂತೋಷ, ನೆಮ್ಮದಿ ಎಲ್ಲವೂ ನಮ್ಮ ರಾಶಿಗಳ ಮೇಲೆ ಅವಲಂಬಿತವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಕೆಲವರು ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗಾದರೆ ಇಂದಿನ (2023 ಏಪ್ರಿಲ್ 04) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭ ಎಂದು ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ : ಅಶ್ವಿನೀ, ಮಾಸ : ಚೈತ್ರ, ಪಕ್ಷ : ಶುಕ್ಲ, ವಾರ : ಮಂಗಳ, ತಿಥಿ : ಚತುರ್ದಶೀ, ನಿತ್ಯನಕ್ಷತ್ರ : ಪೂರ್ವಾಫಲ್ಗುಣೀ, ಯೋಗ : ವೃದ್ಧಿ, ಕರಣ : ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 27 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 43 ನಿಮಿಷಕ್ಕೆ. ರಾಹು ಕಾಲ ಮಧ್ಯಾಹ್ನ 03:40 ರಿಂದ 05:12ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:31 ರಿಂದ 11:03ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:35 ರಿಂದ 02:07ರ ವರೆಗೆ.
ಸಿಂಹ: ತಾಯಿಯ ಮಾತನ್ನು ನೀವು ನಡೆಸಿಕೊಡಲಿದ್ದೀರಿ. ವಾಹನ ಖರೀದಿಯನ್ನು ಮಾಡಲಿದ್ದೀರಿ. ಆರಂಭಿಸಿದ ಕಾರ್ಯದಲ್ಲಿ ಜಯ ಸಿಗಲಿದೆ. ದಿನಗೂಲಿ ನೌಕರರಿಗೆ ಹೆಚ್ಚು ಕೆಲಸ ದೊರೆತು ಆದಾಯ ಹೆಚ್ಚುವ ಸಾಧ್ಯತೆ ಇದೆ. ಸರ್ಕಾರಿ ಕಚೇರಿಯ ಕೆಲಸ ಕಾರ್ಯಗಳು ಸರಾಗವಾಗಿ ಆಗುತ್ತದೆ. ಮೂತ್ರ ಸಂಬಂಧಿ ಕಾಯಿಲೆಗಳಿದ್ದಲ್ಲಿ ಚಿಕಿತ್ಸೆಗೆ ಹೋಗುವುದು ಒಳ್ಳೆಯದು. ಪ್ರಯಾಣದಲ್ಲಿ ಅನುಕೂಲವಿದೆ. ಹಣದ ಒಳಹರಿವು ಮಂದಗತಿಯಲ್ಲಿರುತ್ತದೆ. ಕೃಷಿಕರಿಗೆ ಸೂಕ್ತ ಸೌಲಭ್ಯ ದೊರೆಯಲಿದೆ.
ಕನ್ಯಾ: ಇಂದು ಮಾತಿನ ಬಗ್ಗೆ ಗಮನವಿರಲಿ. ಮಾತನಾಡಿ ಗೌರವವನ್ನು ಕಳೆದುಕೊಳ್ಳಬೇಡಿ. ವೃತ್ತಿಯಲ್ಲಿ ಬರುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಬಹುದು ಹಾಗೂ ಅದರಲ್ಲಿ ಉತ್ತಮ ಫಲಿತಾಂಶ ಬರುವ ಯೋಗವಿದೆ. ಹಂಗಾಮಿ ಕೆಲಸಗಾರರಲ್ಲಿ ಕೆಲವರಿಗೆ ಕಾಯಂ ಆಗುವ ಯೋಗವಿದೆ. ಮಕ್ಕಳಿಗೆ ನಿಮ್ಮ ಬಗ್ಗೆ ಬೇಸರ ಉಂಟಾಗಲಿದೆ. ವಿದೇಶದಲ್ಲಿ ವೃತ್ತಿಯಲ್ಲಿರುವವರಿಗೆ ಮುಂಬಡ್ತಿ ದೊರೆಯಬಹುದು. ಅನಗತ್ಯವಾಗಿ ಹಣವನ್ನು ಖಾಲಿ ಮಾಡಿ ಸಂಕಷ್ಟಕ್ಕೆ ಸಿಲುಕಬೇಡಿ.
ತುಲಾ: ನಿಮಗೆ ನಿಮ್ಮವರ ಸ್ವಭಾವಗಳು ತಿಳಿಯುವುದು. ವಾತರೋಗದಿಂದ ಬಳಲುವ ಸಾಧ್ಯತಯಿದೆ. ದಂಪತಿಗಳ ನಡುವೆ ನಡೆದ ಕಲಹವು ನ್ಯಾಯಾಲಯದ ಮೆಟ್ಟಲನ್ನೂ ಏರಬಹುದು. ನಿಮ್ಮ ಬಗ್ಗೆ ಪಿತೂರಿಗಳು ನಡೆಯಬಹುದು. ಅಪರಿಚಿತರಿಂದ ಅನವಶ್ಯಕ ಸಹಕಾರ ದೊರೆಯುತ್ತದೆ ಮತ್ತು ನಿಮ್ಮ ಸ್ಥಗಿತಗೊಂಡ ಕೆಲಸಗಳೂ ಪೂರ್ಣಗೊಳ್ಳುತ್ತವೆ. ಶಿಸ್ತನ್ನು ಇಷ್ಟ ಪಡುವ ನಿಮಗೆ ಸ್ನೇಹಿತ ಅಶಿಸ್ತು ಕಿರಿಕಿರಿ ತಂದೀತು. ಆಭರಣದ ಖರೀದಿಗೆ ಮನಸ್ಸು ಮಾಡುವಿರಿ.
ವೃಶ್ಚಿಕ: ನಿಮ್ಮನ್ನು ಭೇಟಿ ಮಾಡಲು ಗಣ್ಯರು ಬರಬಹುದು. ದಿವಸ ಚಟುವಟಿಕೆಗಳಿಗಿಂತ ಭಿನ್ನವಾದ ಯಾವುದಾದರೂ ಆಸಕ್ತಿಯಿರುವ ಕೆಲಸಗಳ ಬಗ್ಗೆ ಗಮನಹರಿಸಿ. ಉದ್ಯೋಗದಲ್ಲಿ ಬದಲಾವಣೆಯನ್ನು ತರಬೇಕಾದ ಸ್ಥಿತಿ ಬರಬಹುದು. ನಿಮಗೆ ಕುತಂತ್ರವನ್ನು ಮಾಡುವ ಜನರಿರುತ್ತಾರೆ. ಕೊಟ್ಟ ಸಾಲವು ಮರಳಿ ಬರುತ್ತದೆ ಎಂಬ ನಿರೀಕ್ಷೆ ಬೇಡ. ಬಂದರೂ ಬರಬಹುದು. ಏಕಾಗ್ರತೆಯ ಕೊರತೆಯು ಕಾಣಬಹುದು. ಉನ್ನತಸ್ಥಾನದ ಆಕಾಂಕ್ಷಿಗಳಾಗಿರುವಿರಿ.
-ಲೋಹಿತಶರ್ಮಾ ಇಡುವಾಣಿ