AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2026: ಐಪಿಎಲ್ ಆರಂಭಕ್ಕೂ ಮುನ್ನ ಲಕ್ನೋ ತಂಡದ ಹೊಸ ಲೋಗೋ ಅನಾವರಣ

IPL 2026: ಐಪಿಎಲ್ ಆರಂಭಕ್ಕೂ ಮುನ್ನ ಲಕ್ನೋ ತಂಡದ ಹೊಸ ಲೋಗೋ ಅನಾವರಣ

ಪೃಥ್ವಿಶಂಕರ
|

Updated on: Feb 24, 2026 | 7:29 PM

Share

Lucknow Super Giants Logo Change: ಐಪಿಎಲ್ 2026ಕ್ಕೂ ಮುನ್ನ ಲಕ್ನೋ ಸೂಪರ್ ಜೈಂಟ್ಸ್ ತನ್ನ ಲೋಗೋವನ್ನು ಬದಲಾಯಿಸಿದೆ. ಹೊಸ ಲೋಗೋ ಲಕ್ನೋ ಮತ್ತು ಉತ್ತರ ಪ್ರದೇಶದ ಸಂಸ್ಕೃತಿಯನ್ನು ಬಿಂಬಿಸುತ್ತದೆ, ಗರುಡ, ಕಿರೀಟ ಮತ್ತು ಆನೆಯ ಚಿಹ್ನೆಗಳನ್ನು ಒಳಗೊಂಡಿದೆ. ಇದು ತಂಡಕ್ಕೆ ಹೊಸ ಶಕ್ತಿ, ನಿರ್ಣಯ ಮತ್ತು ಅದೃಷ್ಟ ತರಲಿದೆ ಎಂಬ ನಿರೀಕ್ಷೆಯಿದೆ.LSG ಈ ಬಾರಿ ಪ್ರಶಸ್ತಿ ಗೆಲ್ಲುತ್ತದೆಯೇ ಎಂದು ಕಾದುನೋಡಬೇಕಿದೆ.

2026 ರ ಟಿ20 ವಿಶ್ವಕಪ್ ಮುಗಿದ ಬಳಿಕ ಕೆಲವೇ ಕೆಲವು ದಿನಗಳಲ್ಲಿ ಐಪಿಎಲ್ ಸೀಸನ್ ಆರಂಭವಾಗಲಿದೆ. ವೇಳಾಪಟ್ಟಿ ಕೂಡ ಇಷ್ಟರಲ್ಲೇ ಪ್ರಕಟವಾಗಲಿದೆ. ಸಧ್ಯದ ಮಾಹಿತಿ ಪ್ರಕಾರ ಮಾರ್ಚ್​ ಕೊನೆಯ ವಾರದಿಂದ ಐಪಿಎಲ್ ಆರಂಭವಾಗಬಹುದು. ಆದರೆ ಅದಕ್ಕೂ ಮುನ್ನ, ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ತನ್ನ ಲೋಗೋವನ್ನು ಬದಲಾಯಿಸಿದೆ. ಅದಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಲಕ್ನೋ ತಂಡದ ಹಿಂದಿನ ಲೋಗೋದಲ್ಲಿ ರೆಕ್ಕೆಗಳ ನಡುವೆ ಬ್ಯಾಟ್ ಮತ್ತು ಚೆಂಡನ್ನು ಒಳಗೊಂಡಿತ್ತು. ಇದೀಗ ಹೊಸ ಲೋಗೋ ಲಕ್ನೋ ಮತ್ತು ಉತ್ತರ ಪ್ರದೇಶದ ಸಂಸ್ಕೃತಿಯನ್ನು ಸಾಕಾರಗೊಳಿಸುವ ಮೂರು ಚಿಹ್ನೆಗಳನ್ನು ಒಳಗೊಂಡಿದೆ. ಎಡ ಮತ್ತು ಬಲಭಾಗದಲ್ಲಿರುವ ರೆಕ್ಕೆಗಳು ಗರುಡನನ್ನು ಪ್ರತಿನಿಧಿಸುತ್ತವೆ, ಮಧ್ಯದಲ್ಲಿ ರಾಜತ್ವ ಮತ್ತು ಶಕ್ತಿಯನ್ನು ಸಂಕೇತಿಸುವ ಕಿರೀಟ ಮತ್ತು ಮಧ್ಯದಲ್ಲಿ ಆನೆ, LSG ತಂಡದೊಂದಿಗೆ ಗಣೇಶನ ಉಪಸ್ಥಿತಿಯನ್ನು ಸಂಕೇತಿಸುತ್ತದೆ.

ಆರ್‌ಪಿಎಸ್‌ಜಿ ಗ್ರೂಪ್‌ನ ಉಪಾಧ್ಯಕ್ಷ ಶಾಶ್ವತ್ ಗೋಯೆಂಕಾ, ಹೊಸ ಲೋಗೋ ಇಡೀ ಎಲ್‌ಎಸ್‌ಜಿ ತಂಡದ ಚೈತನ್ಯವನ್ನು ಸಾಕಾರಗೊಳಿಸುತ್ತದೆ ಎಂದಿದ್ದಾರೆ. ‘ಲೋಗೋದಲ್ಲಿರುವ ಹದ್ದು, ತಂಡವು ಹೊಸ ಎತ್ತರವನ್ನು ತಲುಪಲು ಸ್ಫೂರ್ತಿ ನೀಡುತ್ತದೆ, ಮಧ್ಯದಲ್ಲಿರುವ ಕಿರೀಟವು ತಂಡದ ದೃಢನಿಶ್ಚಯ ಮತ್ತು ಹೆಮ್ಮೆಯನ್ನು ಸಂಕೇತಿಸುತ್ತದೆ ಮತ್ತು ಆನೆ ಈ ಪ್ರದೇಶದ ಶಕ್ತಿಯನ್ನು ಪ್ರತಿನಿಧಿಸುತ್ತದೆ ಎಂದು ಅವರು ವಿವರಿಸಿದ್ದಾರೆ.

2022 ರಲ್ಲಿ ಐಪಿಎಲ್​ಗೆ ಪಾದಾರ್ಪಣೆ ಮಾಡಿದ ಲಕ್ನೋ ತಂಡವು ಇನ್ನೂ ಒಂದೇ ಒಂದು ಸೀಸನ್ ಗೆದ್ದಿಲ್ಲ. 2022 ಮತ್ತು 2023 ರಲ್ಲಿ ಪ್ಲೇಆಫ್ ತಲುಪಿತ್ತಾದರೂ ಪ್ರಶಸ್ತಿಯನ್ನು ಗೆಲ್ಲುವಲ್ಲಿ ವಿಫಲವಾಗಿತ್ತು. ಆ ನಂತರ 2024 ಮತ್ತು 2025 ರ ಐಪಿಎಲ್ ಸೀಸನ್‌ಗಳಲ್ಲಿ, ಲಕ್ನೋ ಸೂಪರ್ ಜೈಂಟ್ಸ್ 7 ನೇ ಸ್ಥಾನದಲ್ಲಿ ಮುಗಿಸಿತ್ತು. ಪ್ರಸ್ತುತ, 10 ಐಪಿಎಲ್ ತಂಡಗಳಲ್ಲಿ, ಫೈನಲ್ ತಲುಪದ ಏಕೈಕ ತಂಡ ಲಕ್ನೋ. ಹೊಸ ಲೋಗೋ ಅವರ ಅದೃಷ್ಟವನ್ನು ಬದಲಾಯಿಸುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us