ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಏಪ್ರಿಲ್ 6) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ : ಅಶ್ವಿನೀ, ಮಾಸ : ಚೈತ್ರ, ಪಕ್ಷ : ಕೃಷ್ಣ, ವಾರ : ಗುರು, ತಿಥಿ : ಪ್ರತಿಪತ್, ನಿತ್ಯನಕ್ಷತ್ರ : ಹಸ್ತಾ, ಯೋಗ : ವ್ಯಾಘಾತ, ಕರಣ : ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 26 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 43 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02:07 ರಿಂದ ಮಧ್ಯಾಹ್ನ 03:39ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:26 ರಿಂದ 07:58ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:30 ರಿಂದ 11:03ರ ವರೆಗೆ.
ಮೇಷ: ಆಕಸ್ಮಿಕ ಧಲಾಭದಿಂದ ಒಂದುಷ್ಟು ಒತ್ತಡಗಳು ನಿವಾರಣೆಯಾಗಲಿದೆ. ಕಾರ್ಯದ ಒತ್ತಡದಿಂದ ಸಮಾಧಾನ ಸಿಗಲಿದೆ. ಸಣ್ಣ ವಿಚಾರಕ್ಕೆ ಕಲಹವನ್ನು ಮಾಡಿಕೊಳ್ಳುವುದು ಬೇಡ. ನಿಮ್ಮ ಅನಿವಾರ್ಯತೆಯನ್ನು ಅರಿತು ನಿಮ್ಮವರು ನಿಮಗೆ ಧನಸಹಾಯವನ್ನು ಮಾಡಲಿದ್ದಾರೆ. ಪ್ರೇಮಿಯ ಜೊತೆ ಸಂತೋಷದಿಂದ ಕಾಲವನ್ನು ಕಳೆಯುವಿರಿ. ನಿಮಗೆ ಉತ್ತರ ಸಿಗದ ಸಮಸ್ಯೆಗಳು ಇರಬಹುದು. ಅತಿಯಾದ ಕುತೂಹಲದಿಂದ ನೀವು ನಿರಂತರ ಅನ್ವೇಷಣೆಯಲ್ಲಿ ಹೊಸತನವನ್ನು ಹುಡುಕುವುದರಲ್ಲಿ ತೊಡಗುವಿರಿ.
ವೃಷಭ: ಹಣಕಾಸಿನ ವಿಚಾರದಲ್ಲಿ ಮೋಸಹೋಗಲಿದ್ದೀರಿ. ದೇಹಾಲಸ್ಯದಿಂದ ಹೊರಬಂದು ಸಾಧಿಸುವ ಛಲವನ್ನು ಬೆಳೆಸಿಕೊಳ್ಳುವಿರಿ. ಸಮಯಕ್ಕೆ ಸರಿಯಾದ ಕೆಲಸಗಳನ್ನು ಮಾಡಿ ಮುಗಿಸಿ. ಮನಸ್ಸು ಇಂದು ಚಂಚಲವಾಗಲಿದೆ. ಉದ್ವೇಗಕ್ಕೆ ಒಳಗಾಗದೇ ತಾಳ್ಮೆಯಿಂದ ಎಲ್ಲವನ್ನೂ ಪಡೆಯಲು ಪ್ರಯತ್ನಿಸಿ. ಧನಾತ್ಮಕವಾದ ಚಿಂತನೆಗಳು ನಿಮಗೆ ಉತ್ತಮವಾದ ಮಾರ್ಗವನ್ನು ತೋರಿಸಬಹುದು. ವಿದ್ಯಾರ್ಥಿಗಳಿಗೆ ಭವಿಷ್ಯಕ್ಕೆ ಬಗ್ಗೆ ಗೊಂದಲಗಳು ಇರಲಿವೆ. ಅನುಭವಿಗಳ ಸಂಪರ್ಕ ಮಾಡಿ ಪರಿಹರಿಸಿಕೊಳ್ಳಿ.
ಮಿಥುನ: ಮನಸ್ಸಿನ ಯಾತನೆಯನ್ನು ಸಿಟ್ಟಿನ ಮುಖಾಂತರ ಪ್ರಕಟಪಡಿಸುವಿರಿ. ಆರೋಗ್ಯವು ಸರಿಯಾಗುತ್ತಾ ಇರುವ ಸೂಚನೆ ನಿಮಗೆ ಸಿಗಲಿದೆ. ಉತ್ಸಾಹದಿಂದ, ಬಹಳ ಲವಲವಿಕೆಯಿಂದ ತುಂಬಿರುವಿರಿ. ಸಹೋದರಿಯ ನಡುವೆ ಆತ್ಮೀಯತೆ ಬೆಳೆಯಲಿದೆ. ಯಂತ್ರೋಪಕರಣಗಳಿಂದ ಖರ್ಚುಗಳು ಆಗಲಿವೆ. ಬಂಧುಗಳ ನಡೆವೆ ಕಲಹಾದಿಗಳು ಆಗಬಹುದು. ಸ್ನೇಹಿತರ ಜೊತೆ ಹೆಚ್ಚು ಕಾಲವನ್ನು ಕಳೆಯುವಿರಿ. ಅಲ್ಪ ಶ್ರಮದಿಂದ ಹೆಚ್ಚಿನದನ್ನು ಪಡೆಯುವ ಅವಕಾಶವಿದೆ.
ಕರ್ಕಾಟಕ: ನೀವು ಇಂದು ವಿನಾಕಾರಣ ಸಿಟ್ಟಾಗುವಿರಿ. ಸಣ್ಣ ವಿಚಾರಗಳೂ ನಿಮಗೆ ಕಿರಿಕಿರಿಯನ್ನು ತರಬಹುದು. ಒಬ್ಬೊಂಟಿಯಾಗಿ ನಿಮಗೆ ಇರಲಾಗದೇ ಒದ್ದಾಡುವಿರಿ. ಎಲ್ಲವನ್ನೂ ನಿಮ್ಮ ಮೂಗಿನ ನೇರಕ್ಕೇ ಇರಬೇಕು ಎನ್ನುವವುದು ಸರಿಯಲ್ಲ ಹಾಗೂ ಅದು ಅಸಾಧ್ಯ ಕೂಡ. ಇಂದು ನಿಮಗೆ ಜಗತ್ತಿನ ವೈಚಿತ್ರ್ಯಗಳು ಅರ್ಥವಾಗಬಹುದು. ಆರಬ್ಧ ಕಾರ್ಯವನ್ನು ಸ್ಥಗಿತಗೊಳಿಸಬೇಕಾದೀತಿ. ಹಿರಿಯರ ಬಗ್ಗೆ ಅಲಕ್ಷ್ಯ ಬೇಡ. ನಿಮ್ಮ ನಿರ್ದಿಷ್ಟ ಗುರಿಯ ಕಡೆ ನಿಶ್ಲವಾದ ಗಮನವಿರಲಿ. ತಪ್ಪಿನ ಅರಿವಾಗಿ ಇಂದು ಪಶ್ಚಾತ್ತಾಪಪಡಬೇಕಾದೀತು.
ಸಿಂಹ: ನಿಮ್ಮ ಬಗ್ಗೆ ನೀವೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ನಿಮಗೆ ತೊಂದರೆಯಾದರೆ ಅನ್ಯರಿಗೂ ತೊಂದರೆ ಎಂಬ ಭಾವವಿರಲಿ. ಅಕಾರಣವಾಗಿ ಯಾರ ಮೇಲೂ ಸಂದೇಹಗಳು ಬೇಡ. ಕಛೇರಿಯಲ್ಲಿ ಕಾರ್ಯದ ಒತ್ತಡವಿರಲಿದೆ. ಕಳೆದುದುದರ ಬಗ್ಗೆ ನಿಮಗೆ ದುಃಖ ಬೇಡ. ಉದ್ಯೋಗದ ಸ್ಥಳದಿಂದ ನೀವು ಹೊರಗುಳಿಯುವ ಸಾಧ್ಯತೆ ಇದೆ. ಆರೋಗ್ಯದ ಚಿಂತೆಯೊಂದು ನಿಮ್ಮನ್ನು ಕಾಡಬಹುದು. ಖರ್ಚನ್ನು ಕಡಿಮೆ ಮಾಡುವ ಬಗ್ಗೆ ಆಲೋಚನೆ ಅತ್ಯಗತ್ಯ.
ಕನ್ಯಾ: ದುಬಾರಿ ವಸ್ತುಗಳನ್ನು ಖರೀದಿಸುವ ಬಯಕೆ ನಿಮ್ಮಲ್ಲಿ ಉಂಟಾಗಲಿದೆ. ನಿಮ್ಮ ಶಿಸ್ತಿನ ಜೀವನವು ಇತರರಿಗೆ ಮಾದರಿಯಾಗಲಿದೆ. ಮೂರ್ಖರ ಸಹವಾಸದಿಂದ ನಿಮಗೆ ಅವಮಾನವಾದೀತು. ಅಪರಿಚಿತರ ದೂರವಾಣಿ ಕರೆಯಿಂದ ಚಿಂತೆ ಆರಂಭವಾಗಬಹುದು. ಸಂಗಾತಿಯ ನಡುವೆ ಮನಸ್ತಾಪಗಳು ದೂರವಾಗಿ ಸಂತೋಷದಿಂದ ಇರುವಿರಿ. ಮಕ್ಕಳ ವಿಚಾರದಲ್ಲಿ ಸ್ವಲ್ಪ ಅಸಮಾಧಾನವಿರಲಿದೆ. ಆರೋಗ್ಯದ ಬಗ್ಗೆ ಸ್ವಲ್ಪ ಗಮನಹರಿಸಿ. ಉಚಿತವಾದುದನ್ನು ಪಡೆಯಬೇಡಿ.
ತುಲಾ: ಹೂಡಿಕೆಯ ಹಣವು ನಿಮಗೆ ಸಿಗದೇ ಅನ್ಯರ ಪಾಲಾಗುವುದು. ಸಂಬಂಧಗಳನ್ನು ಚೆನ್ನಾಗಿಟ್ಟುಕೊಳ್ಳಿ. ಅಜ್ಞಾತವಾದ ಸ್ಥಳದಲ್ಲಿ ವಾಸ, ಅಪರಿಚಿತ ಭೇಟಿಯು ನಿಮ್ಮಲ್ಲಿ ತಳಮಳವನ್ನು ಉಂಟುಮಾಡುವುದು. ಸಂಗಾತಿಯ ಒತ್ತಾಯಕ್ಕೆ ಮಣಿದು ನೀವಿಂದು ವಾಹನವನ್ನು ಖರೀದಿಸುವಿರಿ. ನೂತನವಾದ ಸಂಬಂಧಗಳು ಆಗಲಿವೆ. ಕಛೇರಿಯಲ್ಲಿ ನೆಮ್ಮದಿಯೂ ಇರಲಿದೆ. ಪ್ರಮೋಷನ್ ಬಯಸಿದ್ದರೆ ಸಿಗುವ ಸಾಧ್ಯತೆ ಇದೆ. ಮಕ್ಕಳ ಜೊತೆ ಕಾಲವನ್ನು ಕಳೆಯುವಿರಿ.
ವೃಶ್ಚಿಕ: ಅನಾರೋಗ್ಯ ಕಾರಣ ಇಂದು ವಿಶ್ರಾಂತಿಯಲ್ಲಿ ಇರುವಿರಿ. ಹಿತಮಿತವಾದ ಆಹಾರವನ್ನು ಸೇವಿಸಿ. ಅಕಾಲಕ್ಕೆ ಭೋಜನ ಮಾಡಿ ಆರೋಗ್ಯವನ್ನು ಕೆಡಿಸಿಕೊಳ್ಳುವಿರಿ. ಅಪರಿಚಿರ ಮಾತನ್ನು ನಂಬಿ ಸ್ನೇಹವನ್ನು ಕಳೆಸುಕೊಳ್ಳಬೇಡಿ. ಆರ್ಥಿಕಸ್ಥಿತಿಯು ಸುಧಾರಿಸುತ್ತಿದೆ. ವ್ಯಕ್ತಿಗಳ ಅನುಕರಣ ಒಳ್ಳೆಯದಲದಲ. ಯುಕ್ತಿಯಿಂದ ಆಗುವ ಕೆಲಸಕ್ಕೆ ಶಕ್ತಿಯ ಬಳಕೆಮಾಡುವಿರಿ. ಆಕಸ್ಮಿಕವಾಗಿ ಭೂಮಿ ಸಿಗುವ ಸಾಧ್ಯತೆ ಇದೆ.
ಧನುಸ್ಸು: ಮಕ್ಕಳು ನಿಮ್ಮಬಗ್ಗೆ ಊಹಾಪೋಹದ ಮಾತುಗಳನ್ನು ಆಡಲಿದ್ದಾರೆ. ವ್ಯವಹಾರದಲ್ಲಿ ಮೋಸವಾಗಬಹುದು. ಅನಾರೋಗ್ಯವನ್ನು ಅಲಕ್ಷಿಸಬೇಡಿ. ನೀವು ಮಾಡುವ ತಮಾಷೆಯು ಕೆಲವರಿಗೆ ನೋವಾಗಬಹುದು. ಸತ್ಯವನ್ನೇ ತಿಳಿಸುವುದಾದರೂ ಸರಿಯಾದ ಮಾರ್ಗದಲ್ಲಿ ತಿಳಿಸಿ. ತಿಳಿಸುವ ರೀತಿಯಲ್ಲಿ ತಿಳಿಸಿ. ಯಾರದೋ ಮಾತು ನಿಮಗೆ ಬೇಸರವನ್ನು ತರಿಸಬಹುದು. ಒಂದೇ ವಿಷಯವನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಲು ಹೋಗಿ ಮನಸ್ಸನ್ನು ಗಾಯ ಮಾಡಿಕೊಳ್ಳಬೇಡಿ. ಉದ್ಯೋಗದಲ್ಲಿ ನಿಮ್ಮದೇ ಆಲೋಚನೆಗಳು ಇರಲಿ, ಇನ್ಮೊಬ್ಬರ ಯೋಜನೆಗಳಿಗೂ ಸಕಾರಾತ್ಮಕ ಧೋರಣೆಯಿರಲಿ.
ಮಕರ: ಸಣ್ಣ ಘಟನೆಯನ್ನು ದೊಡ್ಡಮಾಡಿ ಕುಳಿತುಕೊಳ್ಳುವುದು ಬೇಡ. ನಿಮ್ಮ ಮಾತುಗಳು ಇತರರಿಗೆ ಪ್ರಯೋಜನವೆಂದಾದರೆ ಮಾತ್ರ ನೀವು ಮಾತನಾಡಿ. ಸುಮ್ಮನೆ ಕಾಲಹರಣಮಾಡುವ ಅವಶ್ಯಕತೆ ಇರಬಾರದು. ಇಂದು ಸಂಗಾತಿಗೆ ಹೆಚ್ಚು ಸಮಯವನ್ನು ಕೊಡುತ್ತೀರಿ. ದ್ವಿಚಕ್ರ ವಾಹನದಲ್ಲಿ ಹೋಗುವಾಗ ಎಚ್ಚರವಹಿಸಿ. ರಕ್ಷಣೆಯ ಬಗ್ಗೆ ಗಮನವಿರಲಿ. ಸಂಗಾತಿಗೆ ಗೌಪ್ಯವಾದ ಉಡುಗೊರೆಯೊಂದು ಸಿಗಲಿದೆ. ಸಜ್ಜನರ ಸಹವಾಸ ಮಾಡಲಿದ್ದೀರಿ.
ಕುಂಭ: ನಿಮ್ಮನ್ನು ದಾಳವಾಗಿ ಉಪಯೋಗಿಸಿಕೊಳ್ಳುವ ಸಾಧ್ಯತೆ ಇದೆ. ಧಾರ್ಮಿಕ ಆಚರಣೆಗಳು ಮೌಢ್ಯವೆನ್ನಿಸಬಹುದು. ನಿಮ್ಮ ಸಾಮರ್ಥ್ಯ ಹಾಗೂ ಪ್ರಭಾವವು ನಿಮ್ಮವರಿಗೆ ಗೊತ್ತಾಗಲಿದೆ. ಅಲ್ಪಾವಧಿಯ ಪ್ರಯಾಣವನ್ನು ಮಾಡುವುದು ಪ್ರಯೋಜನಕಾರಿಯಾಗಿರುವುದರಿಂದ ಸಲಹೆ ನೀಡಲಾಗುತ್ತದೆ. ನಿಮ್ಮ ಪ್ರಯತ್ನಕ್ಕೆ ದೈವಾನುಕೂಲವು ಇರಲಿದೆ. ನಿಮ್ಮನ್ನು ಪುಣ್ಯಕರ್ಮವೇ ಕಾಪಾಡಿದೆ. ಉದರಕ್ಕೆ ಸಂಬಧಿಸಿದ ನೋವುಗಳು ಅಧಿಕವಾದೀತು. ಮನೆ ಮದ್ದನ್ನೇ ಬಳಸಿ.
ಮೀನ: ಸಿಟ್ಟಿನಿಂದ ಎಲ್ಲವನ್ನೂ ಸರಿ ಮಾಡುತ್ತೇನೆ ಎಂಬ ಹುಮ್ಮಸ್ಸು ಹಾಗೂ ಹುಂಬುತನ ಒಳ್ಳೆಯದಲ್ಲ. ನಿಮಗೆ ಹಿಂದಿನ ಎಲ್ಲ ದಿನಗಳಿಗಿಂತ ಉತ್ತಮವಾಗಿದೆ. ಆದರೂ ನಷ್ಟದ ಸ್ಥಿತಿಯು ಇರಲಿದೆ. ಅದ್ಭುತ ಸಮಯಗಳು ಸಮೀಪಿಸುತ್ತಿದ್ದಂತೆ ನಿಮ್ಮ ಕೆಲಸದ ಹೊರೆ ಏರಲು ಪ್ರಾರಂಭವಾಗುತ್ತದೆ, ಮೋಜಿನ ಚಟುವಟಿಕೆಗಳಿಗೆ ಗಣನೀಯವಾಗಿ ಕಡಿಮೆ ಉಚಿತ ಸಮಯವನ್ನು ನೀಡುತ್ತದೆ. ನೂತನ ಕೆಲಸಕ್ಕೆ ಅರ್ಜಿ ಹಾಕಿದ್ದರೆ ಮುಂದಿನ ಸುತ್ತಿನ ಸಂದರ್ಶನಕ್ಕೂ ಹೋಗಬಹುದು. ಒಂಟಿಯಾಗಿ ಸುತ್ತಾಡುವ ಆಸೆ ನಿಮಗೆ ಇರಲಿದೆ.
-ಲೋಹಿತಶರ್ಮಾ ಇಡುವಾಣಿ