ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಮಾರ್ಚ್ 14 ಮಂಗಳವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ: ಪೂರ್ವಾಭಾದ್ರ, ಮಾಸ: ಫಾಲ್ಗುಣ, ಪಕ್ಷ: ಕೃಷ್ಣ, ವಾರ: ಮಂಗಳವಾರ, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ಅನುರಾಧಾ, ಯೋಗ: ವಜ್ರ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 42 ನಿಮಿಷಕ್ಕೆ, ಸೂರ್ಯಾಸ್ತ ಸಾಯಂಕಾಲ 06 ಗಂಟೆ 41 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03: 42ರಿಂದ 05:12ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:42 ರಿಂದ ಬೆಳಗ್ಗೆ 11:12ರ ವರೆಗೆ, ಗುಳಿಕ ಕಾಲ ಬೆಳಗ್ಗೆ 12:42 ರಿಂದ 02:12ರ ವರೆಗೆ.
ಸಿಂಹ: ನೀವು ಇಂದು ರಾಜಕೀಯ ಜನರನ್ನು ಭೇಟಿಯಾಗಲಿದ್ದೀರಿ. ನಿಮಗೆ ಉದ್ಯೋಗಕ್ಕೆ ಬೇಕಾದ ಉಪಯುಕ್ತ ಮಾಹಿತಿಯನ್ನು ಪಡೆಯುವಿರಿ. ಈ ದಿನ ನೀವು ಎಂದಿನಂತೆ ಇರದೇ ಶಾಂತಿಯುತವಾಗಿ ನಡೆದುಕೊಳ್ಳುವಿರಿ. ತಮ್ಮ ಜೀವನದಲ್ಲಿ ಬಹಳಷ್ಟು ಸಾಧಿಸಿದ ಜನರನ್ನು ಕಂಡು ನೀವು ಅಸೂಯೆ ಪಡಬಹುದು. ನೀವು ಗುರಿಯ ಸಾಧನೆಗೆ ಬೇಕಾದ ಮಾರ್ಗವನ್ನು ಅನುಸರಿಸಿ. ಏಕಾಗ್ರವಾಗಿ ನಿಮ್ಮ ಕಾರ್ಯಗಳು ಮುಂದುವರಿಯಲಿ. ಅನಿರೀಕ್ಷತ ಅನಾರೋಗ್ಯದಿಂದ ಹಣವು ಖರ್ಚಾಗಬಹುದು. ಮಕ್ಕಳ ಆರೋಗ್ಯದ ಹೆಚ್ಚಿನ ಕಾಳಜಿ ಅಗತ್ಯ. ಸೂರ್ಯೋಪಾಸನೆಯನ್ನು ಮಾಡಿ.
ಕನ್ಯಾ: ನೀವು ನಿರೀಕ್ಷಿಸುತ್ತಿರುವ ನಿಮಗೆ ಸಿಗಲಿದೆ. ಇಂದು ನಿಮಗೆ ಆಶ್ಚರ್ಯಗಳಿಂದ ಕೂಡಿದ ಸಂಗತಿಗಳು ಸಿಗಬಹುದು. ನಿಮ್ಮನ್ನು ಭೇಟಿ ಮಾಡಲು ಆಪ್ತರು ಬರಬಹುದು. ಕೆಲಸದ ಕ್ಷೇತ್ರದಲ್ಲಿ ನೀವಂದುಕೊಂಡಂತೆ ಆಗಲಿದೆ. ಈ ಮೊದಲೇ ನಿರ್ಧರಿಸಿದ ಗುರಿಯನ್ನು ತಲುಪುವಿರಿ. ಗುಡ್ಡ ಬೆಟ್ಟಗಳನ್ಬು ಏರುವ ಸಾಹಸವನ್ನು ಮಾಡಲಿದ್ದೀರಿ. ಕೃಷಿಕರು ಉತ್ತಮ ಲಾಭವನ್ನು ಪಡೆಯಲಿದ್ದಾರೆ. ಯಾರ ಮೇಲು ಆಪಾದನೆಯನ್ನು ಮಾಡಬೇಡಿ. ನಿಮ್ಮ ಮನಸ್ಸು ನಿಮ್ಮದೇ ನಿಯಂತ್ರದಲ್ಲಿರಲಿ.
ತುಲಾ: ತುಂಬಾ ದಿನದಿಂದ ಮಾಡುತ್ತಿದ್ದ ಕಾರ್ಯ ಯೋಜನೆಗಳು ಇಂದು ಪೂರ್ಣಗೊಳ್ಳುತ್ತವೆ. ಆರ್ಥಿಕಯಲ್ಲಿ ಸ್ಪಷ್ಟತೆ ದೊರೆಯಲಿದೆ. ನಿಮ್ಮ ಪ್ರಯತ್ನದ ಫಲವಾಗಿ ಇತರರು ನಿಮ್ಮನ್ನು ಗೌರವಿಸುತ್ತಾರೆ. ಅಸ್ಥಿರ ಮನಸ್ಸು ನಿಮ್ಮ ಸಂಬಂಧಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದರಿಂದ ನಿಮ್ಮ ಪ್ರೇಮ ಸಂಬಂಧಕ್ಕೆ ಸ್ವಲ್ಪ ತೊಂದರೆಯಾಗಲಿದೆ. ನಿಮ್ಮ ಸಂಗಾತಿಯ ಅನುಮಾನಗಳನ್ನು ಪರಿಹರಿಸುವಿರಿ. ಅಗತ್ಯವಿರುವುದರಿಂದ ನೀವು ಅವರಿಗೆ ಹೆಚ್ಚು ಭರವಸೆ ನೀಡಬೇಕು. ನಿಮ್ಮ ಆರೋಗ್ಯವು ನಿಮ್ಮ ದೇಹದ ದೃಷ್ಟಿಯಿಂದ ಉತ್ತಮವಾಗಿರುತ್ತದೆ.
ವೃಶ್ಚಿಕ: ನಿಮಗೆ ಪ್ರಮುಖ ಕೆಲಸವನ್ನು ನಿಭಾಯಿಸುವ ಜವಾಬ್ದಾರಿಯನ್ನು ಕೊಡಬಹುದು. ಇಂತಹ ವಿಷಯಗಳನ್ನು ನಿಭಾಯಿಸುವಲ್ಲಿ ನೀವು ನಿಜವಾಗಿಯೂ ಪ್ರವೀಣರಾಗಿರುತ್ತೀರಿ. ನಿಮ್ಮ ಸಂಗಾತಿಯು ನಿಮ್ಮ ಕೆಲವು ಅಭ್ಯಾಸಗಳನ್ನು ಬದಲಾಯಿಸಲು ಪ್ರಯತ್ನಿಸುತ್ತಾರೆ. ಇದು ನಿಮಗೆ ಸ್ವಲ್ಪ ಕಿರಿಕಿರಿಯನ್ನೂ ಉಂಟುಮಾಡುತ್ತದೆ. ಆದರೆ ಅವರ ಸಲಹೆಯನ್ನು ಅನುಸರಿಸುವುದು ನಿಮಗೆ ಬಹಳಷ್ಟು ಪ್ರಯೋಜನವನ್ನು ನೀಡುತ್ತದೆ. ಕೆಲವು ಸಮಯ ಏಕಾಂತವನ್ನು ಬಯಸಿ ಒಂಟಿಯಾಗಿ ಕುಳಿತುಕೊಳ್ಳುವಿರಿ.
ಲೋಹಿತಶರ್ಮಾ ಇಡುವಾಣಿ
Published On - 6:15 am, Tue, 14 March 23