AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope Today: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಫಲ, ಭವಿಷ್ಯ ಹೀಗಿದೆ

ಇಂದಿನ(2023 ಮಾರ್ಚ್ 14) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿ ತಿಳಿದುಕೊಳ್ಳಿ.

Horoscope Today: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಫಲ, ಭವಿಷ್ಯ ಹೀಗಿದೆ
ಪ್ರಾತಿನಿಧಿಕ ಚಿತ್ರImage Credit source: naidunia.com
ಗಂಗಾಧರ​ ಬ. ಸಾಬೋಜಿ
| Updated By: ಕಿರಣ್ ಹನುಮಂತ್​ ಮಾದಾರ್|

Updated on:Mar 14, 2023 | 6:39 AM

Share

ಶುಭೋದಯ ಓದುಗರೇ ಪ್ರತಿ ದಿನ ಸೂರ್ಯ, ಚಂದ್ರ ಹುಟ್ಟುತ್ತಾರೆ. ಭೂಮಿ ತಿರುಗುತ್ತಿರುತ್ತೆ. ಪ್ರತಿಯೊಬ್ಬರ ಜೀವನವು ನಡೆಯುತ್ತಲೇ ಇರುತ್ತೆ. ದಿನ, ಸಮಯ ಎಲ್ಲರಿಗೂ ಒಂದೇ ಆದ್ರೂ ಜೀವನದಲ್ಲಿ ನಡೆಯುವ ಘಟನೆಗಳು ವಿಭಿನ್ನ. ಇದಕ್ಕೆ ಕಾರಣ ನಮ್ಮ ಜನ್ಮ ರಾಶಿಗಳಲ್ಲಾಗುವ ಬದಲಾವಣೆ. ನಮ್ಮ ಆರೋಗ್ಯ, ಯಶಸ್ಸು, ಸಂತೋಷ, ನೆಮ್ಮದಿ ಎಲ್ಲವೂ ನಮ್ಮ ರಾಶಿಗಳ ಮೇಲೆ ಅವಲಂಬಿತವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಕೆಲವರು ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ(2023 ಮಾರ್ಚ್ 14) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ: ಪೂರ್ವಾಭಾದ್ರ, ಮಾಸ: ಫಾಲ್ಗುಣ, ಪಕ್ಷ: ಕೃಷ್ಣ, ವಾರ: ಮಂಗಳವಾರ, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ಅನುರಾಧಾ, ಯೋಗ: ವಜ್ರ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 42 ನಿಮಿಷಕ್ಕೆ, ಸೂರ್ಯಾಸ್ತ ಸಾಯಂಕಾಲ 06 ಗಂಟೆ 41 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03: 42ರಿಂದ 05:12ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:42 ರಿಂದ ಬೆಳಗ್ಗೆ 11:12ರ ವರೆಗೆ, ಗುಳಿಕ ಕಾಲ ಬೆಳಗ್ಗೆ 12:42 ರಿಂದ 02:12ರ ವರೆಗೆ.

ಮೇಷ: ನಿಮ್ಮ ಸ್ನೇಹಿತರೊಂದಿಗೆ ಇಂದು ಹೆಚ್ಚು ಸಮಯವನ್ನು ಕಳೆಯುವಿರಿ. ಯಾವುದೇ ಮಹತ್ವದ ಹಣಕಾಸಿನ ವಹಿವಾಟುಗಳಿಗೆ ಸಹಿ ಹಾಕುವ ಸಾಧ್ಯತೆ ಇದೆ. ನೀವು ಸಣ್ಣ ವಿಷಯಗಳ ಬಗ್ಗೆಯೂ ಗಾಢವಾಗಿ ಇಂದು ಚಿಂತಿಸುವಿರಿ. ಅಂತಹವುಗಳನ್ನು ಮರೆತು ಮುನ್ನಡೆಯಿರಿ. ಮನಸ್ಸ ಯಾವ ಸಂದರ್ಭದಲ್ಲಿಯೂ ಉದ್ವೇಗಕ್ಕೆ ಒಳಗಾಗದಂತೆ ನೋಡಿಕೊಳ್ಳಿ. ದೊಡ್ಡ ನಿರ್ಧಾರಗಳನ್ನು ನೀವೊಬ್ಬರೇ ತೆಗೆದುಕೊಳ್ಳಬೇಡಿ. ಸಣ್ಣ ಅನಾರೋಗ್ಯ ಸಮಸ್ಯೆಯು ಇಂದು ಬಗೆಹರಿಯುತ್ತವೆ. ಧನ್ವಂತರಿಯ ಜಪ ಮಾಡಿ.

ವೃಷಭ: ಪೋಷಕರಿಂದ ನಿಮ್ಮ ಕಾರ್ಯಕ್ಕೆ ಬೆಂಬಲ ಸಿಗಲಿದೆ. ಕಾರ್ಯದ ಸ್ಥಳದಲ್ಲಿ ಒಳ್ಳೆಯ ಸುದ್ದಿಗಳು ಬರಲಿವೆ. ಇಂದು ಭೂಮಿಗೆ ಸಂಬಂಧಿಸಿದಂತೆ ಲಾಭ ಪಡೆಯುವಿರಿ. ವಿದ್ಯಾರ್ಥಿಗಳು ಸಾಧನೆಗಳನ್ನು ಮಾಡಲು ಇಚ್ಛಿಸುವರು. ಸಂಗಾತಿಯ ಜೊತೆ ನೀವು ಪ್ರವಾಸಕ್ಕೆ ತೆರಳಲು ಯೋಚಿಸುವಿರಿ. ದೂರದ ಸ್ಥಳಗಳಿಗೆ ಹೋಗುವು ಬೇಡ. ನಿಮ್ಮ ಪ್ರೀತಿಯನ್ನು ಯಾರೊಂದಿಗೂ ಹಂಚಿಕೋಳ್ಳಲಾರಿರಿ. ನಿಮ್ಮ ಕೆಲಸಕ್ಕೆ ಪ್ರಶಂಸೆ ಸಿಗಲಿದೆ. ಹಣದ ವ್ಯವಹಾರವನ್ನು ಸಂಬಂಧದವರಲ್ಲಿ ಮಾಡಿ ಸಂಬಂಧವು ಕೆಡಬಹುದು. ಐಕಮತ್ಯ ಮಂತ್ರವನ್ನು ಪಠಿಸಿ.

ಮಿಥುನ: ಹೊಸತನ್ನು ಕಲಿಯಲು ಸಿದ್ಧರಾಗುವಿರಿ. ನಿಮ್ಮ ಕಡೆಯಿಂದ ಸ್ವಲ್ಪ ಕೆಲಸದಿಂದ ನೀವು ಗಣನೀಯ ಪ್ರಮಾಣದ ಹಣ ಪಡೆಯಬಹುದು. ನೀವು ಯುವಕರೊಂದಿಗೆ ಸಮಯ ಕಳೆಯುವಿರಿ. ನಿಮಗೆ ವಹಿಸಿದಷ್ಟು ಕೆಲಸವನ್ನು ಏಕಾಗ್ರತೆಯಿಂದ ಮಾಡಿ. ನೀವು ಸಾಲವನ್ನು ಪಡೆಯಲು ಆರ್ಥಿಕಸಂಸ್ಥೆಗಳಿಂದ ಆಹ್ವಾನ ಬರಬಹುದು. ದಾಂಪತ್ಯದಲ್ಲಿ ಮನಸ್ತಾಪಗಳು ಎದ್ದು ಶಾಂತವಾಗುವುದು. ನಿಮ್ಮ ಆರೋಗ್ಯವು ಇಂದು ಚೆನ್ನಾಗಿರಲಿದೆ. ಪ್ರಯಾಣವನ್ನು ಮಾಡಬೇಡಿ. ವಿಷ್ಣುಸಹಸ್ರನಾಮದ ಶ್ರವಣ ಮಾಡಿ, ಇಲ್ಲವೇ ಪಠಿಸಿ.

ಕಟಕ: ಇಂದು ನೀವು ಸಂತೋಷಕೂಟದಲ್ಲಿ ಭಾಗವಹಿಸುವಿರಿ. ಮನೆಯಲ್ಲಿಯೇ ಇದ್ದು ಮನೆಯಲ್ಲಿಯೇ ಆನಂದವನ್ನು ಪಡೆಯುವಿರಿ. ನಿಮ್ಮ ಹಣದ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವಿರಿ. ಸ್ನೇಹಿತರು ನಿಮಗೆ ಸಹಾಯ ಮಾಡಲಿದ್ದಾರೆ. ಕೆಲವು ಮಾತುಗಳಿಂದ ನೀವು ಚಂಚಲರಾಗುತ್ತೀರಿ. ಮಾತನಾಡಲು ಯಾರಿಲ್ಲದೇ ನಿಮ್ಮ ಸ್ನೇಹಿತರೊಂದಿಗೆ ಸಮಯ ಕಳೆಯಿರಿ. ನಿಮ್ಮನ್ನು ಸಂತೋಷದಿಂದ ಇಟ್ಟುಕೊಳ್ಳಲು ಬೇಕಾದ ಮಾರ್ಗವನ್ನು ಕಂಡುಕೊಳ್ಳಿ. ನಿಮ್ಮ ಪೋಷಕರ ಸಲಹೆಯನ್ನು ಅನುಸರಿಸಿ, ನಿಮ್ಮ ಸಂಬಂಧವನ್ನು ಉತ್ತಮವಾಗಿಸಿಕೊಳ್ಳಿ. ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳಿ.

-ಲೋಹಿತಶರ್ಮಾ, ಇಡುವಾಣಿ

Published On - 6:00 am, Tue, 14 March 23