AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಫುಟ್‌ಪಾತ್ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆಟೋ ಡ್ರೈವರ್‌ಗೆ ನೀರು ಹಾಕಿ ತೊಳೆಯಿಸಿದ ವ್ಯಕ್ತಿ

ಬೆಂಗಳೂರಿನ ಜಾಗೃತ ನಾಗರಿಕರೊಬ್ಬರು ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡಿದ ಆಟೋ ಚಾಲಕನಿಗೆ ಸ್ಥಳದಲ್ಲೇ ಪಾಠ ಕಲಿಸಿದ್ದಾರೆ. ಸ್ವಚ್ಛಗೊಳಿಸಲಾದ ಫುಟ್‌ಪಾತ್ ಬಳಿ ತಪ್ಪು ಮಾಡುತ್ತಿದ್ದ ಚಾಲಕನನ್ನು ಹಿಡಿದು, ಆತನೇ ನೀರು ಹಾಕಿ ಸ್ಥಳವನ್ನು ಸ್ವಚ್ಛಗೊಳಿಸುವಂತೆ ತಾಕೀತು ಮಾಡಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನಾಗರಿಕನ ಸಮಯಪ್ರಜ್ಞೆ ಮತ್ತು ಧೈರ್ಯಕ್ಕೆ ಭಾರಿ ಶ್ಲಾಘನೆ ವ್ಯಕ್ತವಾಗಿದೆ. ಸಾರ್ವಜನಿಕ ನೈರ್ಮಲ್ಯ ಮತ್ತು ಹೊಣೆಗಾರಿಕೆಯ ಮಹತ್ವವನ್ನು ಇದು ಎತ್ತಿ ಹಿಡಿದಿದೆ.

ಬೆಂಗಳೂರಿನಲ್ಲಿ ಫುಟ್‌ಪಾತ್ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆಟೋ ಡ್ರೈವರ್‌ಗೆ ನೀರು ಹಾಕಿ ತೊಳೆಯಿಸಿದ ವ್ಯಕ್ತಿ
ವೈರಲ್​ ವಿಡಿಯೋ
ಅಕ್ಷಯ್​ ಪಲ್ಲಮಜಲು​​
|

Updated on:Jul 11, 2026 | 6:40 PM

Share

ಬೆಂಗಳೂರು, ಜು.11: ಭಾರತದಲ್ಲಿ ಸಾರ್ವಜನಿಕ ವರ್ತನೆಗೆ ಸಂಬಂಧಿಸಿದಂತೆ ಹೊಣೆಗಾರಿಕೆ ಮತ್ತು ಜವಾಬ್ದಾರಿ ಎನ್ನುವುದು ಅನೇಕರಲ್ಲಿ ಕಾಣ ಸಿಗುವುದಿಲ್ಲ. ಇತ್ತೀಚಿನ ದಿನಗಳಲ್ಲಂತೂ ಸಾರ್ವಜನಿಕ ಸ್ಥಳಗಳಲ್ಲಿ ತಪ್ಪು ಮಾಡುವವರನ್ನು ತಿದ್ದಲು ಹೋದರೆ ಪ್ರಾಣಕ್ಕೇ ಕಂಟಕ ಬಂದೊದಗಿರುವ ಹಲವು ಘಟನೆಗಳು ಬೆಳಕಿಗೆ ಬಂದಿವೆ. ಆದರೆ, ಇಂತಹ ಭಯದ ವಾತಾವರಣದ ಮಧ್ಯೆಯೂ ಬೆಂಗಳೂರಿನ ಜಾಗೃತ ನಾಗರಿಕರೊಬ್ಬರು ಸಾರ್ವಜನಿಕವಾಗಿ ತಪ್ಪು ಮಾಡಿದ ಆಟೋ ಚಾಲಕನಿಗೆ ಸ್ಥಳದಲ್ಲೇ ಪಾಠ ಕಲಿಸುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಭಾರಿ ಶ್ಲಾಘನೆಗೆ ಪಾತ್ರನಾಗಿದ್ದಾರೆ.

ಇತ್ತೀಚೆಗಷ್ಟೇ ಸ್ವಚ್ಛಗೊಳಿಸಲಾಗಿದ್ದ ಫುಟ್‌ಪಾತ್ ಪಕ್ಕದ ಮರವೊಂದರ ಬಳಿ ಆಟೋ ಚಾಲಕನೊಬ್ಬ ಮೂತ್ರ ವಿಸರ್ಜನೆ ಮಾಡುತ್ತಿದ್ದಾಗ ಈ ವ್ಯಕ್ತಿ ಆತನನ್ನು ರೆಡ್-ಹ್ಯಾಂಡ್ ಆಗಿ ಹಿಡಿದಿದ್ದಾರೆ. ಆಟೋ ಚಾಲಕ ತಪ್ಪು ಮಾಡುತ್ತಿರುವುದನ್ನು ಗಮನಿಸಿದ ತಕ್ಷಣವೇ ಕಾರ್ಯಪ್ರವೃತ್ತರಾದ ಬೆಂಗಳೂರಿನ ನಾಗರಿಕ, ಆಟೋ ಚಾಲಕನನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಅಷ್ಟಕ್ಕೇ ನಿಲ್ಲದೆ, ಆ ಜಾಗಕ್ಕೆ ನೀರು ಹಾಕಿ ತಾನೇ ಸ್ವತಃ ತೊಳೆಯುವಂತೆ ಆಟೋ ಚಾಲಕನಿಗೆ ಕಟ್ಟುನಿಟ್ಟಿನ ತಾಕೀತು ಮಾಡಿದ್ದಾರೆ. ಅದರಂತೆ ಆಟೋ ಚಾಲಕ ತಾನು ಗಲೀಜು ಮಾಡಿದ ಜಾಗವನ್ನು ನೀರಿನಿಂದ ತೊಳೆದು ಸ್ವಚ್ಛಗೊಳಿಸಿದ್ದಾನೆ. ಈ ಇಡೀ ಘಟನೆಯ ದೃಶ್ಯವನ್ನು ವಿಡಿಯೋ ಮಾಡಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ.

ಎಕ್ಸ್​​ನಲ್ಲಿ ವೈರಲ್​​ ಆಗಿರುವ ವಿಡಿಯೋ ಇಲ್ಲಿದೆ ನೋಡಿ:

ಈ ವಿಡಿಯೋವನ್ನು @gharkekalesh ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಪೋಸ್ಟ್ ಆದ ಕೆಲವೇ ಗಂಟೆಗಳಲ್ಲಿ 27 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು (Views) ಪಡೆದು ಭಾರಿ ವೈರಲ್ ಆಗಿದೆ. ನೆಟ್ಟಿಗರು ಈ ಬೆಂಗಳೂರಿನ ವ್ಯಕ್ತಿಯ ಧೈರ್ಯ ಮತ್ತು ಸಮಯಪ್ರಜ್ಞೆಯನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ. ಭಾರತದಲ್ಲಿ ಇಂತಹ ಸಾರ್ವಜನಿಕ ಕಿಡಿಗೇಡಿಗಳಿಗೆ ‘ಸಾರ್ವಜನಿಕ ಅವಮಾನ’ ಮತ್ತು ಸ್ಥಳದಲ್ಲೇ ಶಿಕ್ಷೆ ನೀಡುವುದು ಒಂದೇ ಸೂಕ್ತ ಪರಿಹಾರ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಪಾರ್ಕಿಂಗ್​ ನೀತಿ ಜಾರಿಗೆ ಮುಂದಾದ ಜಿಬಿಎ: ಖಾಸಗಿ ಪ್ರದೇಶವನ್ನ ಪಾರ್ಕಿಂಗ್ ತಾಣವಾಗಿಸುವ ಚಿಂತನೆ

ನಮ್ಮ ರಸ್ತೆಗಳು ಉಚಿತ ವಾಶ್ ಪಡೆದಾಗ, ಚಾಲಕನಿಗೆ ಮೊಪ್ ಸಿಕ್ಕಿತು. ಕರ್ಮ ಇವತ್ತು ಹೊಸ ಸ್ವಚ್ಛತಾ ಸಿಬ್ಬಂದಿಯನ್ನು ನೇಮಿಸಿಕೊಂಡಿದೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಈ ವ್ಯಕ್ತಿ ಮಾಡಿದ್ದು ನೂರಕ್ಕೆ ನೂರು ಸರಿ. ಇಂತಹ ಜನರಿಗೆ ಇಂತಹ ಪಾಠಗಳೇ ಅಗತ್ಯ ಎಂದು ಮತ್ತೊಬ್ಬರು ಹೇಳಿದ್ದಾರೆ. ಸ್ವಚ್ಛ ಭಾರತದ ಕುರಿತು ಅಂತ್ಯವಿಲ್ಲದ ಭಾಷಣಗಳನ್ನು ಕೇಳುವುದಕ್ಕಿಂತ ಸಾರ್ವಜನಿಕ ಅವಮಾನ + ತಕ್ಷಣದ ಶಿಕ್ಷೆ ಹೆಚ್ಚು ಪರಿಣಾಮಕಾರಿ ಎಂದು ಮತ್ತೊಬ್ಬರು ಹೇಳಿದ್ದಾರೆ. ಇದು ಸ್ವಲ್ಪ ಕಠಿಣವಾಗಿ ಕಂಡರೂ ಅತ್ಯಗತ್ಯವಾಗಿತ್ತು. ನಗರದ ಮೇಲಿನ ಗೌರವವು ನಮ್ಮ ರಸ್ತೆಗಳು ಮತ್ತು ಮರಗಳನ್ನು ಗೌರವಿಸುವುದರಿಂದಲೇ ಆರಂಭವಾಗುತ್ತದೆ ಎಂದು ಮತ್ತೊಬ್ಬರು ಹೇಳಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:36 pm, Sat, 11 July 26

Follow Us
ಕಾರ್ಕಳದಲ್ಲಿ ವಯನಾಡು ಮಾದರಿ ದುರಂತದ ಭೀತಿ: ಗುಡ್ಡಕುಸಿತದ ಆತಂಕದಲ್ಲಿ ಜನರು
ಕಾರ್ಕಳದಲ್ಲಿ ವಯನಾಡು ಮಾದರಿ ದುರಂತದ ಭೀತಿ: ಗುಡ್ಡಕುಸಿತದ ಆತಂಕದಲ್ಲಿ ಜನರು
ಬಸವರಾಜ ಹೊರಟ್ಟಿ ರಾಜೀನಾಮೆ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಹೇಳಿದ್ದೇನು?
ಬಸವರಾಜ ಹೊರಟ್ಟಿ ರಾಜೀನಾಮೆ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಹೇಳಿದ್ದೇನು?
ಪರಿಷತ್ ಸದಸ್ಯೆಯಾಗಿ ಗಾಯತ್ರಿ ಶಾಂತೇಗೌಡ ಪ್ರಮಾಣವಚನ ಸ್ವೀಕಾರ
ಪರಿಷತ್ ಸದಸ್ಯೆಯಾಗಿ ಗಾಯತ್ರಿ ಶಾಂತೇಗೌಡ ಪ್ರಮಾಣವಚನ ಸ್ವೀಕಾರ
ಹೈಕಮಾಂಡ್​​ ಹೇಳಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ: ಪ್ರಿಯಾಂಕ್​​ ಖರ್ಗೆ
ಹೈಕಮಾಂಡ್​​ ಹೇಳಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ: ಪ್ರಿಯಾಂಕ್​​ ಖರ್ಗೆ
ಕೆಆರ್ ಮಾರುಕಟ್ಟೆ ಫ್ಲೈಓವರ್ ಮೂಲಕ ಚಾಮರಾಜಪೇಟೆಗೆ ಹೋಗುವ ಲೂಪ್ ರಸ್ತೆ ಬಂದ್
ಕೆಆರ್ ಮಾರುಕಟ್ಟೆ ಫ್ಲೈಓವರ್ ಮೂಲಕ ಚಾಮರಾಜಪೇಟೆಗೆ ಹೋಗುವ ಲೂಪ್ ರಸ್ತೆ ಬಂದ್
ಕೊನೆಯ ಆಷಾಢ ಶುಕ್ರವಾರ; ಚಾಮುಂಡಿ ದರ್ಶನ ಪಡೆದ ತೆಲುಗು ನಟ ಸುನಿಲ್
ಕೊನೆಯ ಆಷಾಢ ಶುಕ್ರವಾರ; ಚಾಮುಂಡಿ ದರ್ಶನ ಪಡೆದ ತೆಲುಗು ನಟ ಸುನಿಲ್
ಸುರಂಗ ರಸ್ತೆ ಯೋಜನೆ ಪ್ರಶ್ನಿಸಿ ಪಿಐಎಲ್: ಹೈಕೋರ್ಟ್​​ನಿಂದ ನೋಟಿಸ್​​
ಸುರಂಗ ರಸ್ತೆ ಯೋಜನೆ ಪ್ರಶ್ನಿಸಿ ಪಿಐಎಲ್: ಹೈಕೋರ್ಟ್​​ನಿಂದ ನೋಟಿಸ್​​
ಡಾರ್ಕ್ ಪ್ಯಾಟರ್ನ್ ಬಳಸಿದ 9 ಡಿಜಿಟಲ್ ಕಂಪನಿಗಳಿಗೆ 20 ಲಕ್ಷ ರೂ. ದಂಡ!
ಡಾರ್ಕ್ ಪ್ಯಾಟರ್ನ್ ಬಳಸಿದ 9 ಡಿಜಿಟಲ್ ಕಂಪನಿಗಳಿಗೆ 20 ಲಕ್ಷ ರೂ. ದಂಡ!
ಇಂದು ಕೊನೆಯ ಆಷಾಢ ಶುಕ್ರವಾರ: ನಾಡ ದೇವಿ ಚಾಮುಂಡಿ ಬೆಟ್ಟದಲ್ಲಿ ಭಕ್ತ ಸಾಗರ
ಇಂದು ಕೊನೆಯ ಆಷಾಢ ಶುಕ್ರವಾರ: ನಾಡ ದೇವಿ ಚಾಮುಂಡಿ ಬೆಟ್ಟದಲ್ಲಿ ಭಕ್ತ ಸಾಗರ
'ಎತ್ತರಕ್ಕೆ ಬೆಳೆದರೆ ಅವರನ್ನು ಮುಗಿಸಲು ಪಿತೂರಿ ಮಾಡ್ತಾರೆ': ಸಚಿವ ಜಮೀರ್​​
'ಎತ್ತರಕ್ಕೆ ಬೆಳೆದರೆ ಅವರನ್ನು ಮುಗಿಸಲು ಪಿತೂರಿ ಮಾಡ್ತಾರೆ': ಸಚಿವ ಜಮೀರ್​​