AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾರ್ಕಿಂಗ್​ ನೀತಿ ಜಾರಿಗೆ ಮುಂದಾದ ಜಿಬಿಎ: ಖಾಸಗಿ ಪ್ರದೇಶವನ್ನ ಪಾರ್ಕಿಂಗ್ ತಾಣವಾಗಿಸುವ ಚಿಂತನೆ

Bengaluru Parking Policy 2026: ಬೆಂಗಳೂರಿನಲ್ಲಿ ನೋ ಪಾರ್ಕಿಂಗ್‌ನಲ್ಲೇ ವರ್ಷಗಳಿಂದಲೇ ನಿಂತಿರುವ ವಾಹನಗಳ ವಿರುದ್ಧ ಆಪರೇಷನ್ ಶುರುವಾಗಿದೆ. ನೋಟಿಸ್ ಅಂಟಿಸಲಾಗುತ್ತಿದೆ. ಹೀಗಿರುವಾಗ ಇದೀಗ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮತ್ತೊಂದು ಮಹತ್ವದ ಕೆಲಸಕ್ಕೆ ಕೈ ಹಾಕಿದೆ. ಪಾರ್ಕಿಂಗ್ ನೀತಿ-2026 ಜಾರಿಗೆ ಜಿಬಿಎ ಮುಂದಾಗಿದೆ. ಹಾಗಾದರೆ ಪಾರ್ಕಿಂಗ್ ನೀತಿ-2026 ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಪಾರ್ಕಿಂಗ್​ ನೀತಿ ಜಾರಿಗೆ ಮುಂದಾದ ಜಿಬಿಎ: ಖಾಸಗಿ ಪ್ರದೇಶವನ್ನ ಪಾರ್ಕಿಂಗ್ ತಾಣವಾಗಿಸುವ ಚಿಂತನೆ
ಪಾರ್ಕಿಂಗ್​ ನೀತಿImage Credit source: tv9 kannada
ಲಕ್ಷ್ಮಿ ನರಸಿಂಹ ಸ್ವಾಮಿ ಎಲ್.
| Edited By: |

Updated on: Jul 11, 2026 | 6:26 PM

Share

ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ಪಾರ್ಕಿಂಗ್ ಸಮಸ್ಯೆಗೆ ಹೊಸ ಮದ್ದು
  • ಖಾಸಗಿ ಪ್ರದೇಶವನ್ನ ಪಾರ್ಕಿಂಗ್ ತಾಣವಾಗಿಸುವ ಚಿಂತನೆ
  • ಪಾರ್ಕಿಂಗ್​ ನೀತಿ ಜಾರಿಗೆ ಮುಂದಾದ ಜಿಬಿಎ

ಬೆಂಗಳೂರು, ಜುಲೈ 11: ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ವಾಹನಗಳ ಸಂಖ್ಯೆಯಿಂದಾಗಿ ರಾಜಧಾನಿ ಬೆಂಗಳೂರಿನಲ್ಲಿ (bangaluru) ಪಾರ್ಕಿಂಗ್ ಜಾಗ ಹುಡುಕುವುದು ವಾಹನ ಸವಾರರಿಗೆ ಮಾತ್ರವಲ್ಲ, ಸರ್ಕಾರಕ್ಕೂ ದೊಡ್ಡ ತಲೆನೋವಾಗಿದೆ. ಹೀಗಾಗಿಯೇ ಪಾರ್ಕಿಂಗ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪಾರ್ಕಿಂಗ್ ನೀತಿ -2026ರ (Parking Policy 2026) ಜಾರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮುಂದಾಗಿದೆ. ಆ ಮೂಲಕ ಖಾಸಗಿ ಪ್ರದೇಶಗಳನ್ನ ಪಾರ್ಕಿಂಗ್ ತಾಣವಾಗಿಸುವ ಹೊಸ ಯೋಜನೆಗೆ ಕೈಹಾಕಿದೆ.

ಪಾರ್ಕಿಂಗ್ ನೀತಿ-2026 ಜಾರಿಗೆ ಮುಂದಾದ ಜಿಬಿಎ

ಬೆಂಗಳೂರಿನಲ್ಲಿ ಟ್ರಾಫಿಕ್ ಕಿರಿಕಿರಿ ಎಷ್ಟಿದಿಯೋ, ಪಾರ್ಕಿಂಗ್ ಸಮಸ್ಯೆ ಕೂಡ ಅಷ್ಟೇ ಇದೆ. ವಾಹನಗಳಿಗೆ ಪಾರ್ಕಿಂಗ್ ಸೌಲಭ್ಯ ಕೊಡುವುದು ಅಸಾಧ್ಯವಾಗುತ್ತಿದೆ. ಹೀಗಾಗಿ ಪಾರ್ಕಿಂಗ್ ನೀತಿ-2026 ಜಾರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮುಂದಾಗಿದ್ದು, ಕರಡು ಅಧಿಸೂಚನೆ ಪ್ರಕಟಿಸಿದೆ. ಪ್ರಮುಖವಾಗಿ ವಾಣಿಜ್ಯ ವಲಯಗಳಲ್ಲಿರುವ ಖಾಸಗಿ ಖಾಲಿ ನಿವೇಶನಗಳನ್ನ ಮಾಲೀಕರ ಒಪ್ಪಿಗೆ ಅನ್ವಯ ಪಾರ್ಕಿಂಗ್ ತಾಣವಾಗಿಸುವ ಬಗ್ಗೆ ಹೊಸ ನೀತಿಯಲ್ಲಿ ಉಲ್ಲೇಖಿಸಿದೆ.

ಈ ಪಾರ್ಕಿಂಗ್ ನೀತಿಗೆ ಮಿಶ್ರ ಪ್ರತಿಕ್ರಿಯೆ

ಸರ್ಕಾರಿ ಜಾಗಗಳ ಕೊರತೆಯಿಂದಾಗಿ ಖಾಸಗಿ ನಿವೇಶನಗಳಲ್ಲಿ ಪಾರ್ಕಿಂಗ್ ಸೌಲಭ್ಯ ಕಲ್ಪಿಸುವುದು ಜಿಬಿಎ ಮುಖ್ಯ ಉದ್ದೇಶವಾಗಿದೆ. ಇನ್ನು ಖಾಲಿ ನಿವೇಶನ ನೀಡುವ ಮಾಲೀಕರಿಗೆ 15 ರಿಂದ 35 ವರ್ಷಗಳವರೆಗೆ ತೆರಿಗೆ ವಿನಾಯಿತಿ ನೀಡಲು ಜಿಬಿಎ ಚಿಂತಿಸಿದೆ. ಆದರೆ ಈ ನೀತಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಪಾರ್ಕಿಂಗ್ ನೀತಿ-2026ರಲ್ಲಿ ಏನಿದೆ?

  • ಖಾಸಗಿ ಖಾಲಿ ನಿವೇಶನಗಳಲ್ಲಿ ಬಹುಮಹಡಿ ಪಾರ್ಕಿಂಗ್ ಸೌಲಭ್ಯಕ್ಕೆ ಆದ್ಯತೆ
  • ನಿವೇಶನ ನೀಡುವ ಮಾಲೀಕರಿಗೆ 15 ರಿಂದ 35 ವರ್ಷಗಳ ತೆರಿಗೆ ವಿನಾಯಿತಿ
  • ನಿವೇಶನ ಅಳತೆಗನುಸಾರವಾಗಿ ತೆರಿಗೆ ವಿನಾಯಿತಿ ನೀಡಲು ನಿರ್ಧಾರ
  • ನಿವೇಶನದ ಮಾಲೀಕರಿಗೆ ಪೇ ಆ್ಯಂಡ್ ಪಾರ್ಕಿಂಗ್​ನ ಆದಾಯ ಹಂಚಿಕೆ
  • ಪ್ರಮುಖ ರಸ್ತೆಗಳಲ್ಲಿ ಮತ್ತು ಸಿಗ್ನಲ್ ಸಮೀಪ ಪಾರ್ಕಿಂಗ್ ನಿಷೇಧ

ಇದನ್ನೂ ಓದಿ: ರಸ್ತೆ ಬದಿಯಲ್ಲಿ ಬಿಡಾಡಿ ವಾಹನಗಳ ತೆರವು ಮಧ್ಯೆ ಪೊಲೀಸರಿಂದಲೇ ನಿಯಮ ಉಲ್ಲಂಘನೆ

ಇನ್ನು ಖಾಸಗಿ ವಾಣಿಜ್ಯ ನಿವೇಶನಗಳನ್ನ ಪಾರ್ಕಿಂಗ್ ತಾಣವಾಗಿಸಲು ಆಸಕ್ತಿ ತೋರಿರುವ ಜಿಬಿಎ ಚಿಂತನೆಗೆ ಪರ, ವಿರೋಧ ವ್ಯಕ್ತವಾಗಿದೆ. ಮಾಲೀಕರು ಮುಂದಿನ ದಿನಗಳಲ್ಲಿ ತಮ್ಮ ಆಸ್ತಿಯ ಹಕ್ಕನ್ನು ಕಳೆದುಕೊಳ್ಳಬಹುದು ಎಂಬ ಗುಸುಗುಸು ಶುರುವಾಗಿದೆ. ವಾಣಿಜ್ಯ ನಿವೇಶನಗಳನ್ನ ಜಿಬಿಎ ಪಾರ್ಕಿಂಗ್ ಉದ್ದೇಶಕ್ಕೆ ಬಿಟ್ಟುಕೊಡಲು ಆಸಕ್ತಿ ತೋರುವುದು ಕಷ್ಟ. ಆದರೆ ತೆರಿಗೆ ವಿನಾಯಿತಿ ಹಾಗೂ ಆದಾಯ ಹಂಚಿಕೆ ಗಮನಿಸಿ ಯೋಜನೆಗೆ ಯಾರು ಮನಸ್ಸು ಮಾಡುತ್ತಾರೆ ಅಂತಾ ಅಂತಿಮ ಅಧಿಸೂಚನೆ ಹೊರಬಿದ್ದ ಬಳಿಕ ಗೊತ್ತಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಲಾಲ್ ಬಾಗ್ ಫ್ಲವರ್ ಶೋನಲ್ಲಿ ಬಿಗ್ ಬಾಸ್ ಸೆಲ್ಫಿ ಝೋನ್; ಏನಿದರ ವಿಶೇಷ?
ಲಾಲ್ ಬಾಗ್ ಫ್ಲವರ್ ಶೋನಲ್ಲಿ ಬಿಗ್ ಬಾಸ್ ಸೆಲ್ಫಿ ಝೋನ್; ಏನಿದರ ವಿಶೇಷ?
ಅಮಿತ್ ಶಾ ಅವರನ್ನು ಸದನಕ್ಕೆ ಕರೆಸಿ; ಸರ್ಕಾರಕ್ಕೆ ರಾಜ್ಯಸಭಾ ಸಭಾಪತಿ ಸೂಚನೆ
ಅಮಿತ್ ಶಾ ಅವರನ್ನು ಸದನಕ್ಕೆ ಕರೆಸಿ; ಸರ್ಕಾರಕ್ಕೆ ರಾಜ್ಯಸಭಾ ಸಭಾಪತಿ ಸೂಚನೆ
ಮೀಸಲಾತಿ ವ್ಯವಸ್ಥೆ ಬಗ್ಗೆ RSS​ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದೇನು?
ಮೀಸಲಾತಿ ವ್ಯವಸ್ಥೆ ಬಗ್ಗೆ RSS​ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದೇನು?
‘ಸಿಟಿ ಲೈಟ್ಸ್’ ಸಿನಿಮಾದಲ್ಲಿ ಅನಾವರಣ ಆಗಲಿದೆ ಬೆಂಗಳೂರಿನ ಮೆಜೆಸ್ಟಿಕ್ ಲೋಕ
‘ಸಿಟಿ ಲೈಟ್ಸ್’ ಸಿನಿಮಾದಲ್ಲಿ ಅನಾವರಣ ಆಗಲಿದೆ ಬೆಂಗಳೂರಿನ ಮೆಜೆಸ್ಟಿಕ್ ಲೋಕ
‘ಸಿಟಿ ಲೈಟ್ಸ್’ ಸಿನಿಮಾ ಚಿತ್ರೀಕರಣದ ಅನುಭವ ಹಂಚಿಕೊಂಡ ಮೋನಿಷಾ: ವಿಡಿಯೋ
‘ಸಿಟಿ ಲೈಟ್ಸ್’ ಸಿನಿಮಾ ಚಿತ್ರೀಕರಣದ ಅನುಭವ ಹಂಚಿಕೊಂಡ ಮೋನಿಷಾ: ವಿಡಿಯೋ
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಭೀಮಾ: ನದಿ ತೀರಕ್ಕೆ ತೆರಳದಂತೆ ಕಟ್ಟೆಚ್ಚರ
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಭೀಮಾ: ನದಿ ತೀರಕ್ಕೆ ತೆರಳದಂತೆ ಕಟ್ಟೆಚ್ಚರ
ಭೈರತಿ ಸುರೇಶ್ ವಿರುದ್ಧ ಅವಹೇಳನಕಾರಿ ಕಮೆಂಟ್: ಸಿದ್ದರಾಮಯ್ಯ ಅಭಿಮಾನಿ ಬಂಧನ
ಭೈರತಿ ಸುರೇಶ್ ವಿರುದ್ಧ ಅವಹೇಳನಕಾರಿ ಕಮೆಂಟ್: ಸಿದ್ದರಾಮಯ್ಯ ಅಭಿಮಾನಿ ಬಂಧನ
ಕಂಚಿನ ಪದಕ ವಿಜೇತೆ ಕನ್ನಡತಿ ಶಿಲ್ಪಾಗೆ ಅದ್ಧೂರಿ ಸ್ವಾಗತ
ಕಂಚಿನ ಪದಕ ವಿಜೇತೆ ಕನ್ನಡತಿ ಶಿಲ್ಪಾಗೆ ಅದ್ಧೂರಿ ಸ್ವಾಗತ
‘ಬಾಸ್’ ಸಿನಿಮಾ ನೋಡಿದ ದರ್ಶನ್ ವಕೀಲರು ಹೇಳಿದ್ದೇನು? ವಿಡಿಯೋ
‘ಬಾಸ್’ ಸಿನಿಮಾ ನೋಡಿದ ದರ್ಶನ್ ವಕೀಲರು ಹೇಳಿದ್ದೇನು? ವಿಡಿಯೋ
ನೂತನ 19 ಸಚಿವರಿಗೆ ಇಂದೇ ಖಾತೆ ಹಂಚಿಕೆ?
ನೂತನ 19 ಸಚಿವರಿಗೆ ಇಂದೇ ಖಾತೆ ಹಂಚಿಕೆ?