Daily Horoscope: ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಇಂದಿನ ರಾಶಿ ಭವಿಷ್ಯ

|

Updated on: Apr 16, 2023 | 6:16 AM

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಏಪ್ರಿಲ್​ 16) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Daily Horoscope: ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಇಂದಿನ ರಾಶಿ ಭವಿಷ್ಯ
ರಾಶಿಭವಿಷ್ಯ
Follow us on

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಏಪ್ರಿಲ್​ 16 ಭಾನುವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಅಶ್ವನೀ ಮಾಸ: ಚೈತ್ರ, ಪಕ್ಷ: ಕೃಷ್ಣ, ವಾರ: ರವಿ, ತಿಥಿ: ಏಕಾದಶೀ, ನಿತ್ಯನಕ್ಷತ್ರ : ಶ್ರವಣಾ, ಯೋಗ: ಶುಭ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06-20 ಕ್ಕೆ, ಸೂರ್ಯಾಸ್ತ ಸಂಜೆ 06-44 ಕ್ಕೆ, ರಾಹು ಕಾಲ 04:12-05:45ರ ವರೆಗೆ, ಯಮಘಂಡ ಕಾಲ 12:06-02:05ರ ವರೆಗೆ, ಗುಳಿಕ ಕಾಲ 03:39 04:12 ರವರೆಗೆ.

ಸಿಂಹ: ಉದ್ಯೋಗಗಳನ್ನು ಬದಲಾಯಿಸುವ ಬಗ್ಗೆ ಯೋಚಿಸಬೇಡಿ. ಇಂದು ಅಸಾಧ್ಯವಾಗಬಹುದು. ಕಛೇರಿಯಲ್ಲಿ ಹೆಚ್ಚುವರಿ ಜವಾಬ್ದಾರಿಗಳು ನಿಮಗೆ ಬರಲಿದೆ. ಹಣಕಾಸಿನ ಪರಿಸ್ಥಿತಿ ಸ್ಥಿರವಾಗಿರುತ್ತದೆ. ಬಂಧುಗಳ ಜೊತೆ ಭಿನ್ನಾಭಿಪ್ರಾಯಗಳು ಉದ್ಭವಿಸುವ ಸಾಧ್ಯತೆ ಇದೆ. ಇಂದು ಸಹ ನಿಮ್ಮ ಮನಃಸ್ಥಿತಿ ಹಾಗೆಯೇ ಉಳಿದಿರಬಹುದು. ನಿಮ್ಮ ಸುತ್ತಲಿರುವ ಜನರು ಏನಾದರೂ ಮಾಡಿ ನಿಮ್ಮ ಜೀವನವು ಸಂಗಾತಿ ಮತ್ತೆ ನಿಮ್ಮ ಜೊತೆ ಪ್ರೇಮದಲ್ಲಿ ಬೀಳುವಂತೆ ಮಾಡಬಹುದು. ಇಂದು ನಿಮ್ಮ ಬಾಳಸಂಗಾತಿಯಾಗುವವನು ನಿಮ್ಮ ಬಗ್ಗೆ ಅತಿಯಾದ ಕಾಳಜಿ ಉಳ್ಳವನು. ನಿಮ್ಮ ವಿಷಯಕ್ಕೆ ಸ್ನೇಹಿತರು ನಗುವರು‌.

ಕನ್ಯಾ: ಇಂದು ನೀವು ಹಣಕಾಸಿನ ಸಮಸ್ಯೆಗಳಿಂದ ಹೊರಬರಲು ಅವಕಾಶವಿದೆ. ಮೇಲಧಿಕಾರಿಗಳಿಂದ ಮೆಚ್ಚುಗೆ ಮತ್ತು ಪ್ರೋತ್ಸಾಹಗಳು ಉದ್ಯೋಗದಲ್ಲಿ ಸಿಗಲಿದೆ. ಪ್ರತಿಯೊಂದು ಕೆಲಸವೂ ನಿಧಾನವಾಗುವುದಿದ್ದರೂ ಪರಿಶ್ರಮದಿಂದ ಕೆಲವು ಕೆಲಸಗಳು ಪೂರ್ಣಗೊಳ್ಳುತ್ತದೆ. ಗುಂಪಿನಲ್ಲಿದ್ದಾಗ ನೀವೇನು ಹೇಳುತ್ತೀರೆಂದು ಎಚ್ಚರ ವಹಿಸಿ. ನಿಮ್ಮ ಟೀಕೆಗಳಿಗೆ ನೀವು ತೀವ್ರವಾಗಿ ಎದುರುತ್ತರ ಕೊಡುವಿರಿ. ನಿಮ್ಮ ಶಕ್ತಿ ಮತ್ತು ಉತ್ಸಾಹವನ್ನು ಮರಳಿ ಪಡೆಯುವ ಒಂದು ಆನಂದಮಯ ಪ್ರವಾಸಕ್ಕೆ ಹೋಗುವ ಸಾಧ್ಯತೆ ಇದೆ. ಸಂತೋಷಕೂಟದಲ್ಲಿ ಭಾಗಿಯಾಗುವಿರಿ.

ತುಲಾ: ಇಂದು ನೀವು ಕಷ್ಟಪಟ್ಟರೂ ಸಿಗದೇ ಇರುವ ಸಂಪತ್ತಿಗೋಸ್ಕರ ವ್ಯಥೆಪಡುವ ಅವಶ್ಯಕತೆಯಿಲ್ಲ. ನೀವು ಉತ್ತಮ ನಿರ್ಧಾರಗಳನ್ನು ತೆಗೆದುಕೊಂಡು ಅವುಗಳನ್ನು ಕಾರ್ಯರೂಪಕ್ಕೆ ತರದೇಹೋದರೆ ಕಷ್ಟವಾದೀತು. ಇದರಿಂದ ಭವಿಷ್ಯದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುವುದು ಅಸಾಧ್ಯವಾಗಲಿದೆ. ದೇವರ ಕಾರ್ಯಗಳು ನಡೆಯಲಿದ್ದು ಉತ್ಸಾಹದಿಂದ ಭಾಗವಹಿಸುವಿರಿ. ನಿಮ್ಮ ಹತ್ತಿರ ಕುಟುಂಬದವರಿಗೆ ಅಥವಾ ನಿಮ್ಮ ಸ್ನೇಹಿತರಿಗೆ ಕೊಡಲು ಸಮಯವಿಲ್ಲ. ಇಂದು ಸಹ ನಿಮ್ಮ ಮನಃಸ್ಥಿತಿಯು ಹಾಗೆಯೇ ಉಳಿದಿರಬಹುದು. ಅದನ್ನು ಬದಲಿಸಿಕೊಂಡು ಮುಂದುವರಿಯಿರಿ.

ವೃಶ್ಚಿಕ: ನೀವು ಮನೆಯ ಯಜಮಾನನಾಗಿದ್ದು ತಾಳ್ಮೆಯನ್ನು ಇಟ್ಟುಕೊಳ್ಳಿ. ಆಗ ನಿಮ್ಮ ಸಮಸ್ಯೆಯು ಕಡಿಮೆಯಾಗಿ ಈ ಎಲ್ಲ ಸಮಸ್ಯೆಗಳಿಂದ ಮುಕ್ತರಾಗುತ್ತೀರಿ. ನೀವು ಹಣಕಾಸಿನ ವ್ಯವಹಾರಗಳಲ್ಲಿ ಎಷ್ಟೇ ಜಾಗರೂಕರಾಗಿದ್ಸರೂ ಪ್ರಯೋಜನವಾಗದು. ರಾಜಕೀಯಕ್ಕೆ ಸಂಬಂಧಿಸಿದ ವ್ಯಕ್ತಿಗಳು ಏನೇ ಇರಲಿ, ಅವರ ಪ್ರಭಾವದ ಕ್ಷೇತ್ರವು ಹೆಚ್ಚುತ್ತಿರುವಂತೆ ತೋರುತ್ತಿದೆ ಮತ್ತು ಅವರ ಕಾರ್ಯಗಳನ್ನು ಸಹ ವಿವರಿಸಲಾಗುವುದು. ನಿಮ್ಮ ತಂದೆಯ ಮಾರ್ಗದರ್ಶನದಲ್ಲಿ ಕುಟುಂಬ ವ್ಯವಹಾರವು ಮತ್ತೆ ಬೆಳೆಯುತ್ತದೆ.