Daily Horoscope: ಧನು, ಮಕರ, ಕುಂಭ, ಮೀನ ರಾಶಿಯವರ ಏಪ್ರಿಲ್​ 16ರ ಭವಿಷ್ಯ ಹೀಗಿದೆ

ನೀವು ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಏಪ್ರಿಲ್​ 16) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Daily Horoscope: ಧನು, ಮಕರ, ಕುಂಭ, ಮೀನ ರಾಶಿಯವರ ಏಪ್ರಿಲ್​ 16ರ ಭವಿಷ್ಯ ಹೀಗಿದೆ
ನಿತ್ಯಭವಿಷ್ಯ
Follow us
ಕಿರಣ್ ಹನುಮಂತ್​ ಮಾದಾರ್
|

Updated on:Apr 16, 2023 | 6:22 AM

ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಏಪ್ರಿಲ್​ 16) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಅಶ್ವನೀ ಮಾಸ: ಚೈತ್ರ, ಪಕ್ಷ: ಕೃಷ್ಣ, ವಾರ: ರವಿ, ತಿಥಿ: ಏಕಾದಶೀ, ನಿತ್ಯನಕ್ಷತ್ರ : ಶ್ರವಣಾ, ಯೋಗ: ಶುಭ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06-20 ಕ್ಕೆ, ಸೂರ್ಯಾಸ್ತ ಸಂಜೆ 06-44 ಕ್ಕೆ, ರಾಹು ಕಾಲ 04:12-05:45ರ ವರೆಗೆ, ಯಮಘಂಡ ಕಾಲ 12:06-02:05ರ ವರೆಗೆ, ಗುಳಿಕ ಕಾಲ 03:39 04:12 ರವರೆಗೆ.

ಧನುಸ್ಸು: ನಿಮ್ಮ‌ಇಂದಿನ ಸಹಾನುಭೂತಿ ಮತ್ತು ತಿಳುವಳಿಕೆಗೆ ಪ್ರತಿಫಲ ದೊರಕುವುದು. ನಿಮಗೆ ಆರ್ಥಿಕ ಸಮಸ್ಯೆಗಳು ಮತ್ತು ತೊಂದರೆಗಳು ಉಂಟಾಗಲಿದ್ದು ಚಿಂತಾಕ್ರಾಂತರಾಗುವಿರಿ. ಆದಾಯವು ಸ್ಥಿರವಾಗಿದ್ದರೂ ಖರ್ಚುಗಳು ತುಂಬಾ ಅಧಿಕವಾಗಲಿದೆ. ವ್ಯಾಪಾರದಲ್ಲಿ ಲಾಭವಾಗಲು ಹೆಚ್ಚು ಪ್ರಯತ್ನವನ್ನು ಮಾಡಲೇಬೇಕಾಗಿದೆ. ತೃತೀಯದ ಶನಿಯಿಂದ ನಿಮ್ಮ ಸಾಮರ್ಥ್ಯವು ನಿಧಾನವಾಗಿ ಬೆಳಕಿಗೆ ಬರುವುದು‌. ಆತುರದ ತೀರ್ಮಾನ ಒತ್ತಡ ಉಂಟುಮಾಡಬಹುದಾದ್ದರಿಂದ ಎಚ್ಚರಿಕೆಯಿಂದ ತೀರ್ಮಾನ ಮಾಡಿ. ವಿಭಿನ್ನ ರೀತಿಯಲ್ಲಿ ಪ್ರೇಮವನ್ನು ಅನುಭವಿಸುವಿರಿ‌

ಮಕರ: ಇಂದು ಉದ್ಯೋಗದಲ್ಲಿ ಬಡ್ತಿ ಮತ್ತು ಹೆಚ್ಚಳವಾಗಬಹುದು. ಆರ್ಥಿಕಲಾಭ, ಸಾಲದಿಂದ ಮುಕ್ತರಾಗಿ ನಿಮಗೆ ನೆಮ್ಮಸಿಯು ಸಿಗಲಿದೆ. ಆದಾಯ ಬರುವ ಕೆಲವು ಬಾಕಿ ಕೆಲಸಗಳನ್ನು ಪೂರ್ಣಮಾಡಿಕೊಳ್ಳುವಿರಿ. ದ್ವಿತೀಯದ ಶನಿಯ ಕಾರಣ ಎಲ್ಲ ಕೆಲಸಕ್ಕೂ ಪರಿಶ್ರಮದ ಅಗತ್ಯವಿದೆ. ಇಂದು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿಯನ್ನು ಮಾಡಲೇಬೇಕು. ಕಛೇರಿಯಲ್ಲಿ ಒತ್ತಡ ಹೆಚ್ಚಾಗುವುದು.‌ ಕಾರ್ಯದಲ್ಲಿ ನಿರಂತರತೆ ಇರಲಿ. ತಿಳಿವಳಿಕೆ ಇಲ್ಲದ ಕಾರ್ಯವನ್ನು ಮಾಡಿ ಕೈ ಸುಟ್ಟುಕೊಳ್ಳಬೇಡಿ. ದೂರದ ಪ್ರಯಾಣಕ್ಕೆ ನೀವು ಮೊದಲು ಮಾನಸಿಕ ಸಿದ್ಧತೆಯನ್ನು ಮಾಡಿಕೊಳ್ಳುವಿರಿ.

ಕುಂಭ: ಮನೆ ಅಥವಾ ಜಮೀನು ಖರೀದಿಸಲು ಹಿಂದೆ ನಿಮ್ಮಿಂದ ಸಾಲ ಪಡೆದವರು ಇಂದು ಮರಳಿ ನೀಡುತ್ತಾರೆ. ಗೊತ್ತಿಲ್ಲದ ಕೆಲಸವನ್ನು ಮಾಡಲು ಸ್ವಲ್ಪ ಒತ್ತಡ ಇರುತ್ತದೆ. ಉದ್ಯೋಗದಲ್ಲಿ ನಿಮ್ಮ ಮೇಲೆ ಒತ್ತಡವನ್ನು ತರುವ ವ್ಯವಸ್ಥೆಯು ತಯಾರಾಗಿದೆ. ಕೆಲಸದಲ್ಲಿ ದಕ್ಷತೆ ಕಡಿಮೆಯಾಗಲಿದೆ. ಆದಾಯ ಮತ್ತು ಆರೋಗ್ಯದಲ್ಲಿ ಕೊರತೆ ಇರುವುದಿಲ್ಲ. ಆದರೆ ವೆಚ್ಚಗಳು ತೀವ್ರವಾಗಿ ಹೆಚ್ಚಾಗುತ್ತವೆ. ಬಾಕಿ ಉಳಿದಿರುವ ಬಹುತೇಕ ಕಾಮಗಾರಿಗಳು ಪೂರ್ಣಮಾಡಿಕೊಳ್ಳಿ. ಸಣ್ಣ ವ್ಯಾಪಾರಿಗಳಿಗೆ ಲಾಭ ಸಿಗುತ್ತದೆ. ಯಾರೊಂದಿಗೂ ವಾದಕ್ಕೆ ಇಳಿಯಬೇಡಿ. ಸಹೋದರರ ನಡುವೆ ಕಲಹಗಳು ಆಗುವ ಸಾಧ್ಯತೆ ಇದೆ, ಎಚ್ಚರ.

ಮೀನ: ವಹಿವಾಟು ಅಧಿಕವಾಗಿದ್ದರೂ ಸಹ, ಪ್ರಮುಖ ಕಾರ್ಯಗಳನ್ನು ಹೆಚ್ಚಿನ ಪರಿಶ್ರಮದಿಂದ ಪೂರ್ಣಗೊಳಿಸಲಾಗುತ್ತದೆ. ಉದ್ಯೋಗದ ವಿಷಯದಲ್ಲಿ ಇಲ್ಲಿಯವರೆಗೆ ಎದುರಿಸಿದ ಕೆಲವು ಸಮಸ್ಯೆಗಳಿಂದ ಮುಕ್ತಿ ಸಿಗುವ ಸಮಯ. ಕೆಲಸದಲ್ಲಿ ಯಾವುದೇ ಸಮಸ್ಯೆ ಬರುವುದಿಲ್ಲ. ಉದ್ಯೋಗವನ್ನು ಬದಲಾಯಿಸಲು ಬಯಸುವವರು ಮತ್ತು ಉದ್ಯೋಗವನ್ನು ಹುಡುಕಲು ಪ್ರಯತ್ನಿಸುತ್ತಿರುವ ನಿರುದ್ಯೋಗಿಗಳು ಲಾಭವನ್ನು ಪಡೆಯುವರು. ಇಂದು ತಕ್ಕಮಟ್ಟಿನ ನೆಮ್ಮದಿ ಇರುತ್ತದೆ. ಆರೋಗ್ಯ ಮತ್ತು ಆದಾಯದ ವಿಚಾರದಲ್ಲಿ ಕೊರತೆಯಿಲ್ಲ.

ಲೋಹಿತಶರ್ಮಾ ಇಡುವಾಣಿ – 8762924271

Published On - 6:22 am, Sun, 16 April 23

ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ