Nithya Bhavishya: ಇಂದಿನ ರಾಶಿ ಭವಿಷ್ಯ, ಈ ರಾಶಿಯವರು ಸಂಗಾತಿ ಜೊತೆ ಬಿಸಿ ಬಿಸಿ ಮಾತುಕತೆ ನಡೆಸಲಿದ್ದಾರೆ

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಮೇ 16) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Nithya Bhavishya: ಇಂದಿನ ರಾಶಿ ಭವಿಷ್ಯ, ಈ ರಾಶಿಯವರು ಸಂಗಾತಿ ಜೊತೆ ಬಿಸಿ ಬಿಸಿ ಮಾತುಕತೆ ನಡೆಸಲಿದ್ದಾರೆ
ಇಂದಿನ ರಾಶಿ ಭವಿಷ್ಯImage Credit source: istock
Follow us
Rakesh Nayak Manchi
|

Updated on: May 16, 2023 | 6:01 AM

ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದರೆ ಇಂದಿನ (2023 ಮೇ​ 16) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ವೈಶಾಖ, ಪಕ್ಷ: ಕೃಷ್ಣ, ವಾರ: ಮಂಗಳ, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ಉತ್ತರಾಭಾದ್ರ, ಯೋಗ: ವಿಷ್ಕಂಭ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ರಿಂದ 05 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ರಿಂದ 51 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:40 ರಿಂದ 05:16ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:17 ರಿಂದ 10:53ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:29 ರಿಂದ 02:04ರ ವರೆಗೆ.

ಸಿಂಹ: ನೀವು ಅನಾರೋಗ್ಯದ ಕಾರಣ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಬೇಕಾದೀತು. ಒತ್ತಡದ ತರುವ ಕೆಲಸದಿಂದ ವಿರಾಮವನ್ನು ಪಡೆಯಬೇಕಾದೀತು. ಇತ್ತೀಚಿನ ಹೂಡಿಕೆಯ ಜೊತೆ ಹಳೆಯ ಹೂಡಿಕೆಯ ಲಾಭವನ್ನು ಪಡೆಯುವಿರಿ. ವಿದೇಶಿ ಉದ್ಯಮಗಳು ಕಷ್ಟವೆನಿಸಬಹುದು. ಹೊಸದಾಗಿ ಕೆಲಸಕ್ಕೆ ಸೇರಿದವರು ಉತ್ತಮವಾಗಿ ಕಾರ್ಯನಿರ್ವಹಿಸಲು ಒತ್ತಡವನ್ನು ಅನುಭವಿಸಬೇಕಾದೀತು. ನಿಮ್ಮ ಕೆಲಸದ ಹೊರೆ, ಒತ್ತಡವು ನಿಮ್ಮನ್ನು ಬಹಳಷ್ಟು ಹಿಂಸೆ ಮಾಡಬಹುದು. ನಿಮ್ಮ ವೃತ್ತಿಪರ ಜೀವನದಲ್ಲಿ ಅದೃಷ್ಟವು ನಿಮ್ಮ ಪರವಾಗಿರಬಹುದು.

ಕನ್ಯಾ: ಇಂದು ವ್ಯಾಪಾರಸ್ಥರಿಗೆ ಸ್ವಲ್ಪ ನಷ್ಟವಾಗುವ ಸಾಧ್ಯತೆ ಇದೆ. ನಿಮ್ಮ ಸುಧಾರಿತ ಆರ್ಥಿಕ ಸ್ಥಿತಿಯು ನಿಮಗೆ ಹೆಚ್ಚು ಸುಖವನ್ನು ಉಂಟುಮಾಡುತ್ತದೆ. ನಿಮ್ಮ ಪ್ರೀತಿಯ ಜೀವನಕ್ಕೆ ಸಂಬಂಧಿಸಿದಂತೆ ದಿನದ ಆರಂಭದಲ್ಲಿ ನೀವು ಸ್ವಲ್ಪ ಖಿನ್ನತೆಗೆ ಒಳಗಾಗುವ ಸಾಧ್ಯತೆಗಳು ಇರುತ್ತವೆ. ಇಂದು ನೀವು ಹೆಚ್ಚು ವಿಶ್ರಾಂತಿ ಅನುಭವಿಸಲು ಇಚ್ಛಿಸುವಿರಿ. ಸರಳವಾಗಿ ಪ್ರೀತಿ, ಯಶಸ್ಸಿನ ಹೊರತಾಗಿ ನಿಮ್ಮ ಜೀವನದ ಎಲ್ಲ ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರಯತ್ನವನ್ನು ಮಾಡಲು ಸಿದ್ಧರಿರುವಿರಿ. ಇದು ನಿಮ್ಮನ್ನು ನಕಾರಾತ್ಮಕ ಭಾವನೆಗಳಿಂದ ಹೊರಬರಲು ಸಹಾಯ ಮಾಡುತ್ತದೆ.

ತುಲಾ: ದಿನದ ಆರಂಭದಲ್ಲಿ ಗಮನಾರ್ಹ ಹಣಕಾಸಿನ ಸಮಸ್ಯೆಗಳಿಂದ ನೀವು ತೊಂದರೆಗೊಳಗಾಗಬಹುದು. ನಿಮ್ಮ ವೃತ್ತಿಜೀವನವು ಉತ್ತಮವಾದ ಆರಂಭವನ್ನು ಪಡೆಯಬಹುದು. ಹೊಸ ಕೆಲಸ, ಕಾರ್ಯಗಳಲ್ಲಿ ಉತ್ಸಾಹವಿರಲಿದೆ. ಇಂದು ಇರುವ ಲವಲವಿಕೆಯು ಮತ್ತು ಶಕ್ತಿಯುತವಾಗಿ ಇರಬಹುದು. ನಿಮ್ಮ ಶೈಕ್ಷಣಿಕ ಪ್ರಗತಿಯು ಹೆಚ್ವಲಿದೆ. ಕಾರ್ಯಯೋಜನೆಗಳನ್ನು ಸಮಯಕ್ಕೆ ಸರಿಯಾಗಿ ಪ್ರಸ್ತುತಿ ಪಡಿಸಿ. ಇದರಿಂದ ಯೋಜನೆ ಪೂರ್ಣಗೊಳಿಸಲು ನಿಮಗೆ ಸಾಧ್ಯವಾಗುವುದು.‌

ವೃಶ್ಚಿಕ: ಇಂದು ನೀವು ಉತ್ತಮ ಆರ್ಥಿಕ ಪ್ರಗತಿಯನ್ನು ಹೊಂದಿದ್ದು ನೀವು ಹೇಳಿದ ರೀತಿಯಲ್ಲಿಯೇ ಎಲ್ಲವೂ ನಡೆಯುವುದು. ನಿಮ್ಮ ಪ್ರಯತ್ನಗಳು ನಿಮ್ಮ ಆತ್ಮ ವಿಶ್ವಾಸವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ. ಹೆಚ್ಚು ಸಾಧಿಸಲು ನಿಮಗೆ ಸಹಾಯ ಮಾಡಿಕೊಡುತ್ತವೆ. ಕುಟುಂಬದ ವಿಷಯಗಳ ಪರಿಣಾಮವಾಗಿ ನೀವು ಗಂಭೀರವಾದ ವಿವಾದಗಳನ್ನು ಅನುಭವಿಸುವಿರಿ. ನೀವು ಮತ್ತು ಸಂಗಾತಿ ಜೊತೆ ಬಹಣದ ಬಗ್ಗೆ ಬಿಸಿ ಬಿಸಿ ಮಾತುಕತೆಗಳು ನಡೆಯಬಹುದು. ಸಂಯಮವನ್ನು ಕಾಪಾಡಿಕೊಳ್ಳಿ. ಒತ್ತಡವಿಲ್ಲದೆ, ನಿಮ್ಮ ಜೀವನವನ್ನು ಆನಂದಿಸಲು ಪ್ರಯತ್ನಿಸಿ. ನಿಮ್ಮ ಆರೋಗ್ಯದ ವಿಷಯದಲ್ಲಿ ಅನುಕೂಲಕರವಾಗಿ ಇರಲಿದೆ. ವೇಗವಾಗಿ ಹಣವನ್ನು ಗಳಿಸುವ ವಿಧಾನವನ್ನು ನೀವು ಕಂಡುಕೊಳ್ಳಬೇಕಾದ ಅನಿವಾರ್ಯತೆ ಇದೆ.

-ಲೋಹಿತಶರ್ಮಾ ಇಡುವಾಣಿ

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್