Nithya Bhavishya: ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಸೋಮವಾರದ ದಿನ ಭವಿಷ್ಯ

| Updated By: ರಮೇಶ್ ಬಿ. ಜವಳಗೇರಾ

Updated on: Mar 13, 2023 | 7:11 AM

ಇಂದು( ಮಾ.13) ರಂದು ಸಿಂಹ, ಕನ್ಯಾ ತುಲಾ ಮತ್ತು ವೃಶ್ಚಿಕ ರಾಶಿಚಕ್ರಗಳ ದಿನಭವಿಷ್ಯ ವಿವರ ಇಲ್ಲಿದೆ. ಆಯಾ ರಾಶಿಚಕ್ರಗಳು ವ್ಯಕ್ತಿಗಳ ವ್ಯಕ್ತಿತ್ವವನ್ನು ಬಿಂಬಿಸುವಂಥದ್ದು. ಹಾಗಾಗಿ ದಿನಚರಿ ಆರಂಭಿಸುವ ಈ ರಾಶಿಗಳ ಫಲಾಫಲ ಹೇಗಿದೆ ಎಂದು ಮೊದಲು ತಿಳಿದುಕೊಳ್ಳಿ .

Nithya Bhavishya: ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಸೋಮವಾರದ ದಿನ ಭವಿಷ್ಯ
ಪ್ರಾತಿನಿಧಿಕ ಚಿತ್ರ
Image Credit source: cntraveller.in
Follow us on

ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಕೆಲವರು ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಇಂದು( ಮಾ.13) ರಂದು ಸಿಂಹ, ಕನ್ಯಾ ತುಲಾ ಮತ್ತು ವೃಶ್ಚಿಕ ರಾಶಿಚಕ್ರಗಳ ದಿನಭವಿಷ್ಯ ವಿವರ ಇಲ್ಲಿದೆ. ಆಯಾ ರಾಶಿಚಕ್ರಗಳು ವ್ಯಕ್ತಿಗಳ ವ್ಯಕ್ತಿತ್ವವನ್ನು ಬಿಂಬಿಸುವಂಥದ್ದು. ಹಾಗಾಗಿ ದಿನಚರಿ ಆರಂಭಿಸುವ ಈ ರಾಶಿಗಳ ಫಲಾಫಲ ಹೇಗಿದೆ ಎಂದು ಮೊದಲು ತಿಳಿದುಕೊಳ್ಳಿ .

ಇದನ್ನೂ ಓದಿ: Nithya Bhavishya: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಸೋಮವಾರದ  ಭವಿಷ್ಯ ಹೀಗಿದೆ

ನಿತ್ಯಪಂಚಾಂಗ: ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ: ಪೂರ್ವಾಭಾದ್ರ, ಮಾಸ: ಫಾಲ್ಗುಣ, ಪಕ್ಷ: ಕೃಷ್ಣ, ವಾರ: ಸೋಮವಾರ , ತಿಥಿ: ಷಷ್ಠಿ, ನಿತ್ಯನಕ್ಷತ್ರ: ವಿಶಾಖಾ, ಯೋಗ: ಹರ್ಷಣ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 45 ನಿಮಿಷಕ್ಕೆ, ಸೂರ್ಯಾಸ್ತ 06 ಗಂಟೆ 40 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 08: 13 ರಿಂದ 09:43ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 11: 13 ರಿಂದ 12:42ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ: 01:42 ರಿಂದ 03:42 ವರೆಗೆ.

ಸಿಂಹ: ಮನಸ್ಸಿನಲ್ಲಿಯೇ ಸಂಕಟವನ್ನು ಅನುಭವಿಸುತ್ತ ಕುಳಿತುಕೊಳ್ಳಬೇಡಿ. ನೂತನ ವಸ್ತುಗಳನ್ನು ಖರೀದಿ ಮಾಡಲಿದ್ದೀರಿ. ಯಂತ್ರಗಳಿಂದ ನೋವನ್ನು ಅನುಭವಿಸುವಿರಿ. ದೂರದ ಪ್ರದೇಶಗಳಿಗೆ ಹೋಗಿ ನಿರಾಸೆಯಾಗಲಿದೆ. ಮಿತ್ರರ ಜೊತೆ ಕಲಹವನ್ನು ಮಾಡಿಕೊಳ್ಳಲಿದ್ದೀರಿ. ಉಗುರಿನಿಂದ ಹೋಗುವುದಕ್ಕೆ ಕೊಡಲಿಯನ್ನು ತೆಗೆದುಕೊಳ್ಳಲು ಹೋಗಬೇಡಿ. ಉದ್ಯೋಗದಲ್ಲಿ ಹೆಚ್ಚಿನ ಸ್ಥಾನವನ್ನು ಪಡೆಯಲು ಅವಕಾಶವಿದೆ. ನಿಮ್ಮ ಸಂಗಾತಿಯ ಮೇಲೆ ಕಛೇರಿಯಲ್ಲಿ ಆದ ವೈಮನಸ್ಯದಿಂದ ಮುನಿಸಿಕೊಳ್ಳಬಹುದು. ನೀವು ಉದ್ಯೋಗಕ್ಷೇತ್ರವನ್ನು ಆರಿಸಿಕೊಳ್ಳಬಹುದಾಗಿದೆ. ಹೂಡಿಕೆಯ ವಿಚಾರದಲ್ಲಿ ನಿಮಗೆ ಬೇಕಾದ ಮಾಹಿತಿಯನ್ನು ಪಡೆದುಕೊಳ್ಳಿ. ಬೆಳಗ್ಗೆ ಕೆಲಸಕ್ಕೆ ಹೊರಡುವಾಗ ಕುಲದೇವರನ್ನು ಸ್ಮರಿಸಿ.

ಕನ್ಯಾ: ಕೋಪವನ್ನು ಕಡಿಮೆಮಾಡಿಕೊಂಡಷ್ಟು ಒಳ್ಳೆಯದು. ಪಾಲುದಾರಿಕೆಯಲ್ಲಿ ಕಲಹವು ಆರಂಭವಾಗಲಿದೆ. ಕೃಷಿಕರು ಲಾಭವನ್ನು ಗಳಿಸಲಿದ್ದಾರೆ. ಯಾರನ್ನೋ ಮೆಚ್ಚಿಸಲು ಹೋಗಿ ಸಿಕ್ಕಿಹಾಕಿಕೊಳ್ಳಬಹುದು. ತಂದೆಯಿಂದ ನಿಮಗೆ ಧನಸಹಾಯವಾಗಲಿದೆ. ಉನ್ನತಸ್ಥಾನಕ್ಕೆ ಹೋಗಲು ನಿಮ್ಮ ಹೆಸರನ್ನು ಆಯ್ಕೆ ಮಾಡಬಹುದು. ಸಾಮಾಜಿಕ ಸಮ್ಮಾನಗಳು ಸಿಗಲಿವೆ. ಮಾತುಗಳನ್ನು ಅಳೆದು ತೂಗಿ ಆಡುವುದು ಒಳ್ಳೆಯದು. ಸಂತರ ಸಹವಾಸ ಸಿಗಲಿದೆ.

ತುಲಾ: ಭೂಮಿಯ ಗರ್ಭದಲ್ಲಿ ಕಾರ್ಯಮಾಡುವವರಿಗೆ ಹೆಚ್ಚು ಅನುಕೂಲವಾಗಲಿದೆ. ಆರೋಗ್ಯದ ಬಗ್ಗೆ ಕಾಳಜಿ ಅತ್ಯವಶ್ಯಕ. ವಿದ್ಯಾರ್ಥಿಗಳಿಗೆ ಗೊಂದಲವಿರಲಿದೆ. ಹೊಸ ಉದ್ಯೋಗಕ್ಕೆ ಸೇರುವವರಿಗೆ ಅವಕಾಶಗಳು ಸಿಗಲಿವೆ. ಬಂಧುಗಳು ನಿಮ್ಮನ್ನು ಬೇಸರಿಸುವರು. ಧಾರ್ಮಿಕ ಕಾರ್ಯಗಳನ್ನು ಮಾಡುವಿರಿ. ನಿಮ್ಮ ಯೋಜನೆಯಿಂದ ಪ್ರಶಂಸೆಯು ಬರಲಿದೆ. ಭೂಮಿಯ ವ್ಯವಹಾರದಿಂದ ನಿಮಗೆ ನಷ್ಟವಾಗಲಿದೆ. ಸಹೋದರರ ನಡುವೆ ಆಸ್ತಿಯ ವಿಚಾರದಲ್ಲಿ ಕಲಹವಾಗಬಹುದು.

ವೃಶ್ಚಿಕ: ವಿದ್ಯಾರ್ಥಿಗಳು ಕ್ರಮಬದ್ಧವಾದ ಯೋಜನೆಯಿಂದ ಅಭ್ಯಾಸವನ್ನು ಆರಂಭಿಸಿ. ಸಾಹಸಪ್ರವೃತ್ತಿಯುಳ್ಳವರಿಗೆ ಚಾರಣವನ್ನು ಕಾಡುಗಳನ್ನು ಸುತ್ತುವ ಆಸೆಯಾಗಲಿದೆ. ಆಪ್ತರಿಂದ ವಂಚನೆಗೆ ಒಳಗಗಾಗಬಹುದು. ನರಕ್ಕೆ ಸಂಬಂಧಿಸಿದ ಖಾಯಿಲೆಗಳು ಬರಬಹುದು. ನಿದ್ರಾಹೀನತೆಯಿಂದ ಆಲಸ್ಯ ಉಂಟಾಗಬಹುದು. ದಿನದ ಆರಂಭದಲ್ಲಿರುವ ಅನಾರೋಗ್ಯವು ದಿನಾಂತ್ಯದಲ್ಲಿ ಕಡಿಮೆಯಾಗಲಿದೆ. ತಂದೆಯಿಂದ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದೆ ಲಾಭವಾಗಲಿದೆ.

ಲೇಖನ: -ಲೋಹಿತಶರ್ಮಾ ಇಡುವಾಣಿ

Published On - 7:08 am, Mon, 13 March 23