AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nithya Bhavishya: ಇಂದಿನ ಧನು, ಮಕರ, ಕುಂಭ, ಮೀನ ರಾಶಿಗಳ ಏನು ಹೇಳುತ್ತವೆ? ತಿಳಿದುಕೊಳ್ಳಿ

2023 ಮಾರ್ಚ್ 13ರ ಧನು, ಮಕರ, ಕುಂಭ, ಮೀನ ರಾಶಿಗಳ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿ ತಿಳಿದುಕೊಳ್ಳಿ

Nithya Bhavishya: ಇಂದಿನ ಧನು, ಮಕರ, ಕುಂಭ, ಮೀನ ರಾಶಿಗಳ ಏನು ಹೇಳುತ್ತವೆ? ತಿಳಿದುಕೊಳ್ಳಿ
ನಿತ್ಯಭವಿಷ್ಯ
ವಿವೇಕ ಬಿರಾದಾರ
|

Updated on: Mar 13, 2023 | 7:22 AM

Share

ಶುಭೋದಯ ಓದುಗರೇ, ಈ ದಿನದ ಸಮಯ ಎಲ್ಲರಿಗೂ ಒಂದೇ ಆದ್ರೂ ಜೀವನದಲ್ಲಿ ನಡೆಯುವ ಘಟನೆಗಳು ವಿಭಿನ್ನ. ಇದಕ್ಕೆ ಕಾರಣ ನಮ್ಮ ಜನ್ಮ ರಾಶಿಗಳಲ್ಲಾಗುವ ಬದಲಾವಣೆ. ನಮ್ಮ ಆರೋಗ್ಯ, ಯಶಸ್ಸು, ಸಂತೋಷ, ನೆಮ್ಮದಿ ಎಲ್ಲವೂ ನಮ್ಮ ರಾಶಿಗಳ ಮೇಲೆ ಅವಲಂಬಿತವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಕೆಲವರು ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ(2023 ಮಾರ್ಚ್ 13) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ: ಪೂರ್ವಾಭಾದ್ರ, ಮಾಸ: ಫಾಲ್ಗುಣ, ಪಕ್ಷ: ಕೃಷ್ಣ, ವಾರ: ಸೋಮವಾರ , ತಿಥಿ: ಷಷ್ಠಿ, ನಿತ್ಯನಕ್ಷತ್ರ: ವಿಶಾಖಾ, ಯೋಗ: ಹರ್ಷಣ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 45 ನಿಮಿಷಕ್ಕೆ, ಸೂರ್ಯಾಸ್ತ 06 ಗಂಟೆ 40 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 08: 13 ರಿಂದ 09:43ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 11: 13 ರಿಂದ 12:42ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ: 01:42 ರಿಂದ 03:42 ವರೆಗೆ.

ಧನು: ಸಂಗಾತಿಯ ನಡುವೆ ಕಲಹವು ಇರಲಿದೆ. ನಿಮ್ಮ ಮೇಲೆ ಉಂಟಾದ ಅಪನಂಬಿಕೆಯನ್ನ ದೂರಮಾಡಿಕೊಳ್ಳಲು ಪ್ರಯತ್ನಿಸುವಿರಿ. ಮಕ್ಕಳಿಂದ ಸಂತೋಷವಾಗಲಿದೆ. ಸರ್ಕಾರಿ ಉದ್ಯೋಗಿಗಳು ಶುಭವಾರ್ತೆ ನಿರೀಕ್ಷೆಯಲ್ಲಿ ಇರಬಹುದು. ಮಾಧ್ಯಮದಲ್ಲಿ ಇರುವವರು ತಮ್ಮ ಕಾರ್ಯದಿಂದ ಪ್ರಶಂಸೆಯನ್ನು ಪಡೆಯುವರು.‌ ಕಲಾವಿದರು ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವರು. ಸ್ತ್ರೀಗೆ ಸಂಬಂಧಿಸಿದ ಅಪವಾದಗಳು ಬರಬಹುದು. ಧಾರ್ಮಿಕವೃತ್ತಿಯವರಿಗೆ ಇಂದು ಒತ್ತಡದ ದಿನವಾಗಲಿದೆ.

ಮಕರ: ಅನುಭವಿಸುತ್ತಿರುವ ಕಷ್ಟಗಳು ಇಂದಿಗೆ ನಿವಾರಣೆಯಾಗಿ ನಿರಾಳವೆನಿಸಬಹುದು. ಅನಿರೀಕ್ಷಿತವಾಗಿ ಅಮೂಲ್ಯವಾದ ವಸ್ತುವೊಂದು ಸಿಗಲಿದೆ. ನಿಮ್ಮ ಸಹಾಯಕ್ಕೆ ಮಿತ್ರರು ಬರಲಿದ್ದಾರೆ. ಮನೆಗೆ ಸಂಬಂಧಿಸಿದ ಅಲಂಕಾರಿಕ ವಸ್ತುಗಳ ಖರೀದಿಯನ್ನು ಮಾಡಲಿದ್ದೀರಿ. ಜಾಡ್ಯವಿಂದು ನಿಮ್ಮ ಕೆಲಸಗಳನ್ನು ನಿಧಾನ ಮಾಡಬಹುದು. ಪುತ್ರೋತ್ಸವದ ಸಂತೋಷದಲ್ಲಿ ಇರುವಿರಿ. ಪ್ರಯಾಣ ಮಾಡುವ ಸಂದರ್ಭವಿದ್ದರೆ ಜಾಗರೂಕರಾಗಿ. ವಸ್ಯುಗಳು ಕಳ್ಳತನವಾಗುವಬಹುದು.

ಕುಂಭ: ಸಂಗಾತಿಯ ಮಾತಿನ ಕಾರಣ ಕುಟುಂಬದಿಂದ ದೂರವಿರಲು ಬಯಸುವಿರಿ. ಕಛೇರಿಯಲ್ಲಿ ಒತ್ತಡವು ಇರುವುದರಿಂದ ಉದ್ಯೋಗವನ್ನು ಬದಲಾಯಿಸುವ‌ ಮನಸ್ಸು ಮಾಡುವಿರಿ. ನಿಮ್ಮ ಬೆಳವಣಿಗೆಯನ್ನು ಕಂಡು ಅಸೂಯೆ ಪಡಬಹುದು. ನಿಮಗೆ ಕಳಂಕವನ್ನು ತರಬಹುದು. ಉದ್ವೇಗಕ್ಕೆ ಒಳಗಾಗದೇ ಕಾರ್ಯಗಳನ್ನು ನಿರ್ವಹಿಸಿ. ಆರೋಗ್ಯವನ್ನು ಹಾಳು ಮಾಡಿಕೊಳ್ಳುವ ಕೆಲಸವನ್ನು ಮಾಡಬೇಡಿ. ಪರಿಚಿತರಂತೆ ಬಂದು ಮೋಸ‌ಮಾಡಬಹುದು.

ಮೀನ: ಹೊಸ ವಾಹನವನ್ನು ಖರೀದಿಸಲಿದ್ದೀರಿ. ಮುಂಜಾಗರೂಕರಾಗಿ ಸಂಪತ್ತನ್ನು ಉಳಿತಾಯ ಮಾಡುವಿರಿ. ಕೃಷಿಯಲ್ಲಿ ಆಸಕ್ತಿ ಇರುವವರು ಹೊಸ ಬೆಳೆಗಳ ಅನ್ವೇಷಣೆಯಲ್ಲಿ ನಿರತರಾಗುವಿರಿ. ಉದ್ಯೋಗದ ನಿಮಿತ್ತ ದೇಶಾಂತರ ಹೋಗಬೇಕಾಗಿ ಬರಬಹುದು. ಸ್ವಾವಲಂಬಿಯಾಗಿ ಜೀವಿಸುವ ಆಸೆ ನಿಮ್ಮದಾಗಿರುತ್ತದೆ. ಸುಖವನ್ನೂ ಕಷ್ಟವನ್ನೂ ಸಮಾನವಾಗಿ ಸ್ವೀಕರಿಸುವ ಸ್ವಭಾವವನ್ನು ಬೆಳೆಸಿಕೊಳ್ಳುವುದು ಉತ್ತಮ. ನಿಮ್ಮ ನೆಮ್ಮದಿಗೆ ನೀವೇ ಬುನಾದಿ.

-ಲೋಹಿತಶರ್ಮಾ, ಇಡುವಾಣಿ