Daily Horoscope: ಧನು, ಮಕರ, ಕುಂಭ, ಮೀನ ರಾಶಿಯವರ ಏಪ್ರಿಲ್​ 12ರ ಭವಿಷ್ಯ ಹೀಗಿದೆ

|

Updated on: Apr 12, 2023 | 6:10 AM

ನೀವು ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಏಪ್ರಿಲ್​ 12) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Daily Horoscope: ಧನು, ಮಕರ, ಕುಂಭ, ಮೀನ ರಾಶಿಯವರ ಏಪ್ರಿಲ್​ 12ರ ಭವಿಷ್ಯ ಹೀಗಿದೆ
ಇಂದಿನ ರಾಶಿ ಭವಿಷ್ಯ
Image Credit source: Hindirush.Com
Follow us on

ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಏಪ್ರಿಲ್​ 12) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ : ರೇವತೀ, ಮಾಸ : ಚೈತ್ರ, ಪಕ್ಷ : ಕೃಷ್ಣ, ವಾರ : ಬುಧ, ತಿಥಿ : ಸಪ್ತಮೀ, ನಿತ್ಯನಕ್ಷತ್ರ : ಮೂಲ, ಯೋಗ : ಪರಿಘ, ಕರಣ : ಭದ್ರ, ಸೂರ್ಯೋದಯ ಬೆಳಗ್ಗೆ 06-22 ಕ್ಕೆ, ಸೂರ್ಯಾಸ್ತ ಸಂಜೆ 06-44 ಕ್ಕೆ, ರಾಹು ಕಾಲ ಮಧ್ಯಾಹ್ನ 12:33 – 02:06ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 07:55 – 09:28ರ ವರೆಗೆ, ಗುಳಿಕ ಕಾಲ ಬೆಳಗ್ಗೆ 11:00 – ಮಧ್ಯಾಹ್ನ 12:33ರ ವರೆಗೆ.

ಧನುಸ್ಸು: ನಿಮಗೆ ಗೌರವ ಸಿಗದ ಜಾಗದಲ್ಲಿ ಹೆಚ್ಚು ಕಾಲ ಇರಲಾರಿರಿ. ಎತ್ತರದ ಯಾವುದಾರೂ ಪ್ರದೇಶಕ್ಕೆ ಹೋಗಬೇಕು ಎಂದು ಅನ್ನಿಸಬಹುದು. ಉದ್ಯೋಗದ ಸ್ಥಳದಲ್ಲಿ ಶಿಸ್ತಿನ ಕೆಲಸಕ್ಕೆ ಪ್ರಶಂಸೆ ಸಿಗಲಿದೆ. ಪ್ರಭಾವೀ ನಾಯಕರ ಭೇಟಿಯಿಂದ ನಿಮ್ಮ‌ ಮುಂದಿನ ಯೋಜನೆಗೆ ಸಹಕರಿಯಾಗಬಹುದು. ಮಕ್ಕಳ ನಡತೆಯಿಂದ ನಿಮ್ಮ ಮೇಲೆ ಆಪಾದನೆಗಳು ಬರಬಹುದು. ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಬಯಸುವಿರಿ. ನಿಮಗೆ ಹಿತವಚನವು ಮನಸ್ಸಿಗೆ ಬೇಸರವನ್ನೇ ತರಿಸುವುದು. ಅಪಕ್ವಮನುಷ್ಯರ ಜೊತೆ ಮಾತುಕತೆಗಳು ಬೇಡ. ಅಪಮಾನವಾದೀತು.

ಮಕರ: ನ್ಯಾಯಸಮ್ಮತವಲ್ಲದ ಕೆಲಸದಲ್ಲಿ ತೊಡಗುವಿರಿ. ನಿಮಗೆ ಅದನ್ನು ಹಿತಶತ್ರುಗಳೇ ಮಾಡುವಂತೆ ಮಾಡುತ್ತಾರೆ. ನಿಮ್ಮ ವಿದ್ಯಾಭ್ಯಾಸದ ಬಗ್ಗೆ ಕೀಳರಿಮೆ ಬರಬಹುದು. ಉತ್ತಮವಾದ ವಿದ್ಯಾಭ್ಯಾಸವನ್ನು ಮಾಡಲು ಮನಸ್ಸು ಮಾಡುವಿರಿ. ಸ್ನೇಹಿತರ ವರ್ತನೆಯು ನಿಮಗೆ ವಿಚಿತ್ರವೆನಿಸಬಹುದು. ದುರ್ಮಾರ್ಗಕ್ಕೆ ನಿಮ್ಮನ್ನು ಪ್ರೇರೇಪಿಸಬಹುದು. ಒಂಟಿಯಾಗಿ ದೂರದ ಪ್ರಯಾಣವನ್ನು ಮಾಡಲು ಇಚ್ಛಿಸುವಿರಿ. ನಟರಿಗೆ ಉತ್ತಮವಾದ ಅವಕಾಶಗಳು ಬರಲಿವೆ. ಹೊಸದಾದ ವಾಹನವನ್ನು ಖರೀದಿಸುವಿರಿ. ಪ್ರಭಾವೀವ್ಯಕ್ತಿಗಳು ನಿಮ್ಮನ್ನು ಭೇಟಿಯಾಗಲು ಬರಬಹುದು.

ಕುಂಭ: ಇಂದು ದುಃಸ್ವಪ್ನವು ನಿಮ್ಮನ್ನು ಚಿಂತಿತರನ್ನಾಗಿ ಮಾಡುವುದು. ನಿಮ್ಮ ಅಂತಶ್ಶಕ್ತಿಯೇ ನಿಮ್ಮ ನಿಜವಾದ ಬಲವಾದುದರಿಂದ ಯಾವ ಸಮಸ್ಯೆಗಳನ್ನೂ ನಿರಾತಂಕವಾಗಿ ಎದುರಿಸುವಿರಿ. ದುರಭ್ಯಾಸಕ್ಕೆ ಖರ್ಚು ಮಾಡುವ ಸಂಭವವಿದೆ. ನಿಮ್ಮದೇ ಆದರೂ ಹಣವನ್ನು ತಿಳಿದು ಬಳಸಿ‌. ಹೊಸತನವನ್ನು ರೂಢಿಸಿಕೊಳ್ಳುವ ನಿಮ್ಮ ಆಸಕ್ತಿಯನ್ನು ಕಂಡ ಜನರಿಂದ ಮೆಚ್ಚುಗೆಯನ್ನು ಗಳಿಸುವಿರಿ. ಸೌಂದರ್ಯಪ್ರಜ್ಞೆಯು ನಿಮಗೆ ವರದಾನವೆಂದೇ ತಿಳಿಯುತ್ತದೆ. ಬೆನ್ನು ನೋವು ನಿಮ್ಮನ್ನು ಕಾಡಬಹುದು. ನಿಮ್ಮ ಬಗ್ಗೆ ನಿಮ್ಮ ಶತ್ರಗಳು ವಿವರವನ್ನು ಕಲೆಹಾಕಬಹುದು. ಅತಿಯಾದ ನಿರ್ಲಕ್ಷ್ಯ ಬೇಡ.

ಮೀನ: ನೀವಿಂದು ಮಂಗಲಕಾರ್ಯಗಳಿಗೆ ಹಣವನ್ನು ನೀಡುವಿರಿ. ದೂರದ ಊರಿಗೆ ಪ್ರಯಾಣಹೊಗುವ ಸಾಧ್ಯತೆ ಇದೆ. ಕೆಲಸವು ಬಹಳ ನಿಧಾನವಾಗುವುದು. ಬೇಸರವೂ ಬರಬಹುದು. ಉದ್ಯೋಗಕ್ಕೆ ಸಂಬಂಧಪಟ್ಟ ನಿರ್ಧಾರವನ್ನು ಒಬ್ಬರೇ ತೆಗೆದುಕೊಳ್ಳಬೇಡಿ. ಕಾರಣಾಂತರಗಳಿಂದ ಮುಂದೆ ಹೋಗುತ್ತಿದ್ದ ವಿವಾಹವು ಇಂದು ನಿಶ್ಚಯವಾಗುವುದು. ಆಪ್ತರ ಭೇಟಿಯಿಂದ ಮನಸ್ಸನ್ನು ಹಗುರಾಗುವುದು. ನಿದ್ರಾಭಂಗವಾಗುವ ಸಾಧ್ಯತೆ ಇದೆ. ಅತಿಯಾದ ಚಿಂತೆ ಬೇಡ. ಆಗುವು ಆಗಿಯೇ ಆಗುವುದು ಎಂಬ ಸತ್ಯ ತಿಲಕಿದರಿಲಿ. ಆರೋಗ್ಯವು ಹಾಳಾಗಬಹುದು. ಸ್ನೇಹಿತರೊಂದಿಗೆ ಪ್ರಯಾಣವನ್ನು ಮಾಡುವಿರಿ. ಸ್ತ್ರೀಯರಿಂದ ಅಪಮಾನವಾಗಬಹುದು.

-ಲೋಹಿತಶರ್ಮಾ ಇಡುವಾಣಿ