Horoscope Today: ಈ ರಾಶಿಯವರು ಇಂದು ತಮ್ಮ ಕೆಲಸಕ್ಕೆ ಚಕ್ಕರ್ ಹೊಡೆದು ಸಮಾರಂಭಕ್ಕೆ ಹಾಜರಾಗಲಿದ್ದಾರೆ

|

Updated on: Apr 24, 2023 | 6:18 AM

ನೀವು ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಏಪ್ರಿಲ್​ 24) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope Today: ಈ ರಾಶಿಯವರು ಇಂದು ತಮ್ಮ ಕೆಲಸಕ್ಕೆ ಚಕ್ಕರ್ ಹೊಡೆದು ಸಮಾರಂಭಕ್ಕೆ ಹಾಜರಾಗಲಿದ್ದಾರೆ
ಇಂದಿನ ರಾಶಿ ಭವಿಷ್ಯ
Follow us on

ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಏಪ್ರಿಲ್ ​24) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ : ಅಶ್ವಿನೀ, ಮಾಸ : ವೈಶಾಖ, ಪಕ್ಷ : ಶುಕ್ಲ, ವಾರ: ಸೋಮ, ತಿಥಿ : ಚತುರ್ಥೀ, ನಿತ್ಯನಕ್ಷತ್ರ : ಮೃಗಶಿರಾ, ಯೋಗ : ಶೋಭನ, ಕರಣ : ಭದ್ರ, ಸೂರ್ಯೋದಯ ಬೆಳಗ್ಗೆ 06 ರಿಂದ 14 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 46 ನಿಮಿಷಕ್ಕೆ, ರಾಹು ಕಾಲ 07:49 ರಿಂದ 09:23ರ ವರೆಗೆ, ಯಮಘಂಡ ಕಾಲ  10:57 ರಿಂದ 12:31ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:05 ರಿಂದ 03:38ರ ವರೆಗೆ.

ಧನುಸ್ಸು: ಇಂದು ಪತಿಯ ವರ್ತನೆಯು ಬದಲಾದಂತೆ ತೋರುವುದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಓದಲು ಸಮಯವಿಲ್ಲದೇ, ಅನ್ಯಮನಸ್ಕರಾದಕಾರಣ ಹಿನ್ನಡೆಯು ಆಗಬಹುದು. ತೈಲದ ವ್ಯಾಪಾರದಲ್ಲಿ ಅಭಿವೃದ್ಧಿಯು ಕುಂಠಿತವಾಗಿರುತ್ತದೆ. ಸ್ಥಿರಾಸ್ತಿಯನ್ನು ಅಗ್ಗದ ಬೆಲೆಗೆ ಮಾರಾಟಕ್ಕೆ ಇಟ್ಟರೂ ಖರೀದಿಯಾಗದೇ ಇರುವುದು ಆತಂಕವನ್ನು ತರಿಸುವುದು. ಸರ್ಕಾರಿ ಅಧಿಕಾರಿಗಳು ಕೇಳಿದ ದಾಖಲೆಗಳನ್ನು ವಿವಾದವಿಲ್ಲದೇ ಕೊಟ್ಟು ಬಿಡಿ. ಗೃಹ ಉತ್ಪನ್ನಗಳನ್ನು ಮಾರಾಟ ಮಾಡಿ ಸಂಪಾದನೆ ಮಾಡುವಿರಿ. ಕಂಡಿದ್ದನ್ನು ಕಂಡಂತೆ ಹೇಳುವುದು ಸರಿಯೇ. ಆದರೆ ಸಮಯ, ಸಂದರ್ಭ, ಸಮಾಧಾನದಿಂದ ಹೇಳಿ.

ಮಕರ: ಕೋಪದಿಂದ ಏನನ್ನಾದರೂ ಮಾತನಾಡಬೇಡಿ. ವಿವೇಚನೆಯನ್ನು ಇಟ್ಟುಕೊಳ್ಳಿ. ಹೋಟೆಲ್ ಉದ್ಯಮದವರು ನಷ್ಟವನ್ನು ಕಾಣಬೇಕಾಗಿದೆ. ನಿಶ್ಚಿತ ಆದಾಯವು ನಂಬಿ ಸಾಲವನ್ನು ಪಡೆಯುವಿರಿ.‌ ಇಂದಿನ‌ ಪ್ರಯಾಣದ‌ ಪ್ರಯಾಸವನ್ನು ನೂತನ ವಾಹನವನ್ನು ಖರೀದಿಸುವ ಯೋಚನೆ ಮಾಡುವಿರಿ. ನಿಮ್ಮ ಇಂದಿನ ಮಾತು ಕೇಳಿ ನೀವೊಬ್ಬ ವಾಚಾಳಿ ಎಂಬ ಬಿರುದನ್ನು ಪಡೆಯುವಿರಿ. ಸರ್ಕಾರದಿಂದ‌ ಬರುವ ಹಣವು ವಿಳಂಬವಾಗಿ ಬರಲಿದೆ. ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸುವ ಸ್ಥಿತಿ‌‌ವಬಂದಾಗ ಒಮ್ಮೆ‌ ಪರಿಶೀಲಿಸಿ ವಸ್ತುಗಳನ್ನು ತರುವಿರಿ.

ಕುಂಭ: ಸಹೋದರರ ನಡುವೆ ವಾಗ್ವಾದ ನಡೆಯಲಿದೆ. ಇಂದು ಯಾವುದೇ ಪ್ಲಾನ್ಇಲ್ಲದೇ ಮಾಡಿದ ವ್ಯವಹಾರಗಳಲ್ಲಿ ಲಾಭವು ಅಧಿಕವಿಲ್ಲ. ಓದಿನಲ್ಲಿ ಆಸಕ್ತಿ ಕಡಿಮೆ‌ ಇರುವುದು ಸ್ಪಷ್ಟವಾಗಿ ಕಾಣುವುದು. ದೈಹಿಕ ಶ್ರಮದಿಂದ ಕೆಲಸ ಮಾಡುವರವರು ಸ್ವಲ್ಪ ವಿಶ್ರಾಂತಿ ಪಡೆಯುವಿರಿ. ರಾಜಕೀಯ ವ್ಯಕ್ತಿಗಳು ಎಂದಿಗಿಂತಲೂ ಹೆಚ್ಚು ವಾಗ್ವಾದವನ್ನು ಮಾಡುವರು. ಬೇಕೆಂದೇ ಸಮಸ್ಯೆಗಳನ್ನು ನಿಮ್ಮ ಬುಡಕ್ಕೆ ಎಳೆದುಕೊಳ್ಳಬೇಡಿ. ಸುಳ್ಳು ಹೇಳಿದ ಮೇಲೆ‌ ಪಶ್ಚಾತ್ತಾಪವು ಮೂಡುವುದು. ಮಾನಸಿಕಗೊಳ್ಳದೇ ಮುಂದಿನ‌ಕಾರ್ಯಕ್ಕೆ ಅಣಿಯಾಗಿ.

ಮೀನ: ನೀವೇ ಆಯ್ಕೆ‌ ಮಾಡಿಕೊಂಡ ಉದ್ಯೋಗದ ಸ್ಥಳದಿಂದ ನಿಮಗೆ ತೊಂದರೆಯಾಗಿ ಕೆಲಸವನ್ನು ಬಿಡಲಿದಗದೀರಿ. ನಿಮ್ಮನ್ನು ನೆರೆಹೊರೆಯವರು ಆಡಿಕೊಂಡಾರು. ಅದರ ಬಗ್ಗೆ ಚಿಂತೆ‌ ಬೇಡ.‌ ಅದು ಕಷ್ಟವಾದರೆ ಎಲ್ಲಿಗಾದರೂ ಹೋಗಿಬನ್ನಿ. ಭೂಮಿಯ ವ್ಯವಹಾರದಲ್ಲಿ ಹೆಚ್ಚಿನ ಲಾಭವಿದ್ದರೂ ಇನ್ನೊಬ್ಬರಿಗೆ ಕೊಟ್ಟೇ ಖಾಲಿಯಾಗುವುದು. ಆಪ್ತರೆನಿಸಿಕೊಂಡವರೆ ವಿಶ್ವಾಸವಿಲ್ಲದೇ ಇದ್ದಿದ್ದು, ಇನ್ಮು ನಂಬಿಕೆ‌‌ ಬರಲಿದೆ. ಸಿಟ್ಟಗೊಂಡು ಮಾತನಾಡಬೇಕಾದ ಅವಶ್ಯಕತೆ ಇಲ್ಲ. ಸಮಾಧಾನಚಿತ್ತರಾಗಿ ಮಾತನಾಡಿ. ಕೆಲಸಕ್ಕೆ ರಜ‌ಹಾಕಿ ಸಮಾರಂಭಕ್ಕೆ ಹೋಗುವಿರಿ.

-ಲೋಹಿತಶರ್ಮಾ ಇಡುವಾಣಿ