Daily Horoscope: ಈ ರಾಶಿಯವರು ವಿದೇಶದಲ್ಲಿರುವ ತಮ್ಮ ಮಕ್ಕಳಿಂದ ಬೇಸರದ ಸಂಗತಿಯನ್ನು ಕೇಳಲಿದ್ದಾರೆ

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಏಪ್ರಿಲ್​ 24) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Daily Horoscope: ಈ ರಾಶಿಯವರು ವಿದೇಶದಲ್ಲಿರುವ ತಮ್ಮ ಮಕ್ಕಳಿಂದ ಬೇಸರದ ಸಂಗತಿಯನ್ನು ಕೇಳಲಿದ್ದಾರೆ
ಇಂದಿನ ರಾಶಿಭವಿಷ್ಯ
Follow us
Rakesh Nayak Manchi
|

Updated on: Apr 24, 2023 | 6:00 AM

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಏಪ್ರಿಲ್​ 24 ಸೋಮವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ : ಅಶ್ವಿನೀ, ಮಾಸ : ವೈಶಾಖ, ಪಕ್ಷ : ಶುಕ್ಲ, ವಾರ: ಸೋಮ, ತಿಥಿ : ಚತುರ್ಥೀ, ನಿತ್ಯನಕ್ಷತ್ರ : ಮೃಗಶಿರಾ, ಯೋಗ : ಶೋಭನ, ಕರಣ : ಭದ್ರ, ಸೂರ್ಯೋದಯ ಬೆಳಗ್ಗೆ 06 ರಿಂದ 14 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 46 ನಿಮಿಷಕ್ಕೆ, ರಾಹು ಕಾಲ 07:49 ರಿಂದ 09:23ರ ವರೆಗೆ, ಯಮಘಂಡ ಕಾಲ  10:57 ರಿಂದ 12:31ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:05 ರಿಂದ 03:38ರ ವರೆಗೆ.

ಸಿಂಹ: ಇಂದು ರಾಜಕೀಯ ವ್ಯಕ್ತಿಗಳು ಹೆಚ್ಚು ಉತ್ಸಾಹದಿಂದ ತಮ್ಮ ಕಾರ್ಯದಲ್ಲಿ ತೊಡಗಿರುವರು. ವಿದೇಶದಲ್ಲಿರುವ ಮಕ್ಕಳಿಂದ ಬೇಸರದ ಸಂಗತಿಯನ್ನು ಕೇಳುವಿರಿ. ವಿದೇಶಕ್ಕೆ ಕೆಲಸಕ್ಕೆ ಹೋಗಿದ್ದರೆ ಇಂದು ಮನೆಗೆ ಬರಬಹುದು. ನಿಮ್ಮ ಕೆಲಸದ ವಿಧಾನವನ್ನು ನೀವು ಬದಲಿಸಿಕೊಳ್ಳದೇ ಇದ್ದರೆ ಇನ್ನಷ್ಟು ಸಂಕಷ್ಟವಾದೀತು. ವ್ಯವಹಾರದಲ್ಲಿ ನಿಮ್ಮ ಉನ್ನತಗುಣಮಟ್ಟ ಸೇವೆಯನ್ನು ಮಾಡುವಿರಿ. ಕುಟುಂಬದಲ್ಲಿ ಸಮೃದ್ಧಿ ಬೇಕಾದರೆ ಒಬ್ಬರೇ ತೀರ್ಮಾನಕ್ಕೆ ಬರಬೇಕು. ಎಲ್ಲರನ್ನೂ ಅನುಸರಿಸಿದರೆ ಕೆಲಸ ಕೆಡುವುದು. ಆಸ್ತಿಯ ಖರೀದಿಯ ವಿಚಾರಗಳನ್ನು ಆದಷ್ಟು ವೇಗವಾಗಿ ತೀರ್ಮಾನ ಮಾಡಿ ಮುಗಿಸಿಕೊಳ್ಳಿ.

ಕನ್ಯಾ: ಇಷ್ಟು ದಿನ ಹಿಡಿದಿಟ್ಟುಕೊಂಡ ಕೋಪವು ಸ್ಫೋಟವಾಗಿ ಮನೆಯು ರಣಾಂಗದಂತೆ ಕಾಣಬಹುದು. ನೀವು ಸಮಯವನ್ನು ಸದುಪಯೋಗ ಮಾಡಿಕೊಳ್ಳುವ ಬಗ್ಗೆ ಚಿಂತಿಸಿ. ನಿಮ್ಮ ಪ್ರೀತಿಪಾತ್ರರು ನಿಮ್ಮಿಂದ ದೂರವಾಗುವರು. ಕಾರಣ ಕೇಳಿದರೂ ಪ್ರಯೋಜನವಾಗದು. ನಿಮ್ಮ ಪ್ರೀತಿಯ ಸಂಗಾತಿಯ ಜೊತೆ ಹೆಚ್ಚು ಸಮಯವನ್ನು ಕಳೆಯಬೇಕಾದ ಸ್ಥಿತಿ ಬರಲಿದೆ‌. ಹೂಡಿಕೆಯನ್ನು ಮಾಡಲು ಸಮಯವನ್ನು ನಿರೀಕ್ಷಿಅಉವಿರಿ. ನಿಮ್ಮ ಖ್ಯಾತಿ ಮತ್ತು ಸ್ಥಾನಮಾನಗಳು ಹೆಚ್ಚಾಗಬಹುದು. ನೀವು ಬದಲಾಗಬೇಕು ಎಂದುಕೊಂಡರೂ ಸ್ನೇಹಿತರ ಬಳಗ ನಿಮ್ಮನ್ನು ಸುಮ್ಮನೆ ಬಿಡದು.‌ ತಂದೆ-ತಾಯಿಗಳು ಮಕ್ಕಳ‌ ಮೇಲೆ ಕಣ್ಣಿಡುವುದು ಒಳ್ಳೆಯದು.

ತುಲಾ: ವಿದೇಶದಿಂದ ಹಣದ ವ್ಯವಹಾರವನ್ನು ಇಟ್ಟುಕೊಂಡರೆ ಕಷ್ಟವಾದೀತು. ನಿಮ್ಮ ಸ್ನೇಹಿತರ ನಡುವೆ ಬಾಂಧವದಲ್ಯವು ಬಲವಾಗಲಿದೆ. ಪರೀಕ್ಷೆಯನ್ನು ಎದುರಿಸಲು ಸಕಲರೀತಿಯಲ್ಲಿಯೂ ಸಜ್ಜಾಗಲಿದ್ದೀರಿ. ನೀವು ಮಾಡುವ ಕಾರ್ಯದಲ್ಲಿ ಪ್ರಯತ್ನವು ಪೂರ್ಣವಿರಲಿ. ಫಲದ ಅಪೇಕ್ಷೆಯನ್ನು ಬಿಡುವುದು ಉತ್ತಮ. ಮಹಿಳಾ ಸ್ನೇಹಿತರು ನಿಮಗೆ ಕೆಲಸವನ್ನು ಮಾಡಿಕೊಡುವರು. ಸರ್ಕಾರಿ ನೌಕರರು ಕೆಲಸಕ್ಕೆ ಸಂಬಂಧಿಸಿದ ಒತ್ತಡದಿಂದ ಬಿಡುಗಡೆಯಾಗುವರು. ವ್ಯಾಪಾರದಲ್ಲಿ ಉತ್ತಮ ಪ್ರಗತಿ ಇರಲಿದೆ. ಕುಟುಂಬದಿಂದ‌ ನಿಮಗೆ ಬೇಕಾದ ಸಹಕಾರ ಸಿಗಲಿದೆ. ಮಕ್ಕಳು ನಿಮ್ಮನ್ನು ಪ್ರೀತಿಸುವರು.

ವೃಶ್ಚಿಕ: ನೀವು ದೊಡ್ಡ ವ್ಯಕ್ತಿಗಳ ಸಹವಾಸವನ್ನು ಮಾಡಿ ಬ್ಯುಸಿನೆಸ್ ಮಾಡಲು ಅವರ ಜೊತೆ ಚರ್ಚಿಸುವಿರಿ. ನಿಮ್ಮ ನಡೆ ಅನುಮಾನವನ್ನು ತರಿಸಬಹುದು. ಕಛೇರಿಯ ವ್ಯವಹಾರವು ಸಾಕೆನಿಸುವಷ್ಟು ಒತ್ತಡ ಬರಬಹುದು. ಮಂಗಲ ಕಾರ್ಯಕ್ಕೆ ಮನೆಯಲ್ಲಿ ಸಿದ್ಧತೆ ನಡೆಯಲಿದೆ. ಇಷ್ಟು ದಿನ ಸಂಗಾತಿಯ ಬಗ್ಗೆ ಇದ್ದ ಭಾವವು ಸಂಪೂರ್ಣ ಬದಲಾಗಬಹುದು. ಸಾಲ ಮಾಡುವ ಸಂದರ್ಭವು ಬಂದರೆ ನಿಮಗೆ ಬೇಕಾದಷ್ಟು ಮಾತ್ರ ಪಡೆಸುಕೊಂಡು ತೀರಿಸಲು ಯತ್ನಿಸಿ. ಸಿಗುವಷ್ಟನ್ನೂ ಆಸೆಯಿಂದ ತೆಗೆದುಕೊಳ್ಳಬೇಡಿ. ಭವಿಷ್ಯತ್ತಿನಲ್ಲಿ ತೊಂದರೆಯಾದೀತು. ಆಹಾರದ ಬಗ್ಗೆ ಎಚ್ಚರಿಕೆ ಇರಲಿ.

-ಲೋಹಿತಶರ್ಮಾ ಇಡುವಾಣಿ

ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ