ಮಂಗಳವಾರ ದೇವಿ ವಾರವಾಗಿದೆ. ಇಂದು ದೇವಿಯ ಆರಾಧನೆಗೆ ಬಹಳ ಶ್ರೇಷ್ಠವಾದ ದಿನ. ಪ್ರತಿ ದಿನ ಸೂರ್ಯ, ಚಂದ್ರ ಹುಟ್ಟುತ್ತಾರೆ. ಭೂಮಿ ತಿರುಗುತ್ತಿರುತ್ತೆ. ಪ್ರತಿಯೊಬ್ಬರ ಜೀವನವು ನಡೆಯುತ್ತಲೇ ಇರುತ್ತೆ. ದಿನ, ಸಮಯ ಎಲ್ಲರಿಗೂ ಒಂದೇ ಆದ್ರೂ ಜೀವನದಲ್ಲಿ ನಡೆಯುವ ಘಟನೆಗಳು ವಿಭಿನ್ನ. ಇದಕ್ಕೆ ಕಾರಣ ನಮ್ಮ ಜನ್ಮ ರಾಶಿಗಳಲ್ಲಾಗುವ ಬದಲಾವಣೆ. ನಮ್ಮ ಆರೋಗ್ಯ, ಯಶಸ್ಸು, ಸಂತೋಷ, ನೆಮ್ಮದಿ ಎಲ್ಲವೂ ನಮ್ಮ ರಾಶಿಗಳ ಮೇಲೆ ಅವಲಂಬಿತವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಕೆಲವರು ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗಾದರೆ ಇಂದಿನ (2023 ಮಾರ್ಚ್ 28) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭ ಎಂದು ತಿಳಿದುಕೊಳ್ಳಿ.
ಧನು: ಇಂದು ದೂರದ ಪ್ರಯಾಣವನ್ನು ಮಾಡಲು ಇಚ್ಛಿಸಿ ಸ್ನೇಹತರ ಜೊತೆ ಹೊರಡಲಿದ್ದೀರಿ. ಮಾತನ್ನು ಆಡುವಾಗ ಪದಗಳ ಮೇಲೆ ಗಮನವಿರಲಿ. ಕೆಲವು ಪದಗಳೂ ನಿಮ್ಮ ಜೊತೆ ವೈಮನಸ್ಯವನ್ನು ತರುವುದು. ಅಪರಿಚಿತ ಸ್ಥಳದಲ್ಲಿ ಅಪರಿಚಿತ ವ್ಯಕ್ತಿಗಳ ಜೊತೆ ಕಲಹವಾಗಲಿದೆ. ಭವಿಷ್ಯದ ಕುರಿತು ಆಲೋಚನೆಯಲ್ಲಿ ಮಗ್ನರಾಗುವಿರಿ. ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಬಂಧಪಟ್ಟಂತೆ ನಿಮ್ಮಲ್ಲಿ ಒಂದಿಷ್ಟು ಗೊಂದಲಗಳು ಇರಬಹುದು. ಹಿರಿಯರು ನಿಮಗೆ ಜೀವನದ ಬಗ್ಗೆ ಉಪದೇಶವನ್ನು ಮಾಡಲಿದ್ದಾರೆ. ಇದು ನಿಮಗೆ ಉಪಯೋಗವಾಗಲಿದೆ.
ಮಕರ: ನಿಮಗೆ ಇಂದು ಉಡುಗೊರೆಯು ಅನಿರೀಕ್ಷಿತವಾಗಿ ಬರಲಿದೆ. ಆರೋಗ್ಯವನ್ನು ಸುಧಾರಿಸಿಕೊಳ್ಳಲು ಕೆಲವು ಕ್ರಮಗಳನ್ನು ಕೈಗೊಳ್ಳುವಿರಿ. ಹದಗೆಟ್ಟ ಆರೋಗ್ಯದಲ್ಲಿ ಅಲ್ಪ ಮಟ್ಟಿನ ಚೇತರಿಗೆ ಇರಲಿದೆ. ಮಾತುಗಾರರಾಗಿದ್ದರೆ ಒಳ್ಳೆಯ ಅವಕಾಶಗಳು ಸಿಗಲಿವೆ. ಮೋಸದಿಂದ ನಿಮ್ಮ ಹಣವು ಕಳೆದುಹೋಗುವುದು. ನಿಮಗೆ ಆಸುರಕ್ಷತೆಯ ಭಯವು ಉಂಟಾಗಬಹುದು. ಕಛೇರಿಯಲ್ಲಿ ನಿಮ್ಮ ಯೋಜನೆಗಳನ್ನು ಮೆಚ್ಚಕೊಂಡು ಅದನ್ನು ಕಾರ್ಯರೂಪಕ್ಕೆ ತರಲಿದ್ದಾರೆ. ನೀವು ಸಮಯಕ್ಕೆ ಮಹತ್ತ್ವವನ್ನು ಕೊಡುವುದು ಬಹಳ ಇಷ್ಟದ ಸಂಗತಿಯಾಗಿದೆ. ಶನೈಶ್ಚರನ ಸ್ತೋತ್ರದಿಂದ ನೆಮ್ಮದಿಯು ಸಿಗಲಿದೆ.
ಕುಂಭ: ಏನೂ ಕೆಲಸವಿಲ್ಲದೇ ಸಮಯವನ್ನು ಕಳೆಯುವುದು ನಿಮಗೆ ಸಾಹಸದ ಕೆಲಸವಾಗಿರಲಿದೆ. ಆದಕಾರಣ ಹತ್ತಾರು ವಿಚಾರಗಳು ನಿಮ್ಮ ತಲೆಯಲ್ಲಿ ಓಡುತ್ತಿರಬಹುದು. ಮಹಿಳೆಯರಿಂದ ನಿಮಗೆ ವಿರೋಧವು ಬರಬಹುದು. ನಿಮಗೆ ಸಮಯವನ್ನು ಕೊಟ್ಟವರನ್ನು ಅಗೌರವದಿಂದ ಕಾಣುವುದು ಸರಿಯಲ್ಲ. ಭೋಜನಪ್ರಿಯರಿಗೆ ಒಳ್ಳೆಯ ಭೋಜನ ಸಿಗಲಿದೆ. ಸಂಪನ್ಮೂಲಗಳನ್ನು ರಕ್ಷಿಸಿಕೊಳ್ಳುವ ಪ್ರಯತ್ನ ಮಾಡುವಿರಿ. ತಂತ್ರಜ್ಞರು ಉತ್ತಮವಾದ ಕೆಲಸವನ್ನು ಹುಡುಕುವ ಪ್ರಯತ್ನ ಮಾಡಲಿದ್ದಾರೆ. ನಿಧಾನವಾಗಿ ಸಿಗಲಿದೆ. ತಾಳ್ಮೆಯನ್ನು ಇಟ್ಟುಕೊಳ್ಳಿ.
ಮೀನ: ನಿಮ್ಮ ಸ್ನೇಹಿತರನ್ನು ನಂಬಿ ಯಾರಿಗೋ ಹಣವನ್ನು ಕೊಡುವಿರಿ. ಬಟ್ಟೆಯ ವ್ಯಾಪಾರಿಗಳು ಲಾಭವನ್ನು ಗಳಿಸಲಿದ್ದಾರೆ. ವಿವಾಹಸಮಾರಂಭದಲ್ಲಿ ನಿಮ್ಮ ಉಪಸ್ಥಿತಿಯು ಇರಲಿದೆ. ನಿಮ್ಮ ಆಶೀರ್ವಾದವನ್ನು ಪಡೆಯಲು ಮೊಮ್ಮಕ್ಕಳು ಬರಬಹುದು. ಮಕ್ಕಳಿಂದ ಪ್ರಶಂಸೆಯು ಸಿಗಲಿದೆ. ವ್ಯಾಪಾರದಲ್ಲಿ ಉಂಟಾಗುವ ಕ್ಲೇಶಗಳನ್ನು ಕಂಡು ವ್ಯಾಪಾರವನ್ನು ಬಿಡುವ ಯೋಚನೆ ಮಾಡುವಿರಿ. ಆದಾಯ ಮೂಲವಿಲ್ಲದೇ ಮತ್ತದೆರಲ್ಲಿಯೇ ಮುಂದುವರಿಯುವ ಸ್ಥಿತಿಯೂ ಬರಲಿದೆ. ಹನುಮಾನ್ ಚಾಲೀಸ್ ಪಠಣವನ್ನು ಪ್ರಾತಃಕಾಲದಲ್ಲಿ ಶುದ್ಧಮನಸ್ಸಿನಿಂದ, ಸ್ನಾನವನ್ನು ಮಾಡಿ.
-ಲೋಹಿತಶರ್ಮಾ ಇಡುವಾಣಿ