
ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಏಪ್ರಿಲ್ 05) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮೀನ ಮಾಸ, ಮಹಾನಕ್ಷತ್ರ: ರೇವತೀ, ಮಾಸ: ಫಾಲ್ಗುಣ, ಪಕ್ಷ: ಕೃಷ್ಣ, ವಾರ: ಶುಕ್ರ, ತಿಥಿ: ಏಕಾದಶೀ, ನಿತ್ಯನಕ್ಷತ್ರ: ಧನಿಷ್ಠಾ, ಯೋಗ: ಸಾಧ್ಯ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 24 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 44 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 11:03ರಿಂದ ಮಧ್ಯಾಹ್ನ 12:35ರ ವರೆಗೆ, ಯಮಘಂಡ ಕಾಲ 15:40 ರಿಂದ 17:12 ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 07:59 ರಿಂದ ಬೆಳಗ್ಗೆ 09:31ರ ವರೆಗೆ.
ಮೇಷ ರಾಶಿ: ಇಂದು ನಿಮ್ಮ ಹಿಂದಿನ ಶ್ರಮಕ್ಕೆ ಫಲವು ಪ್ರಾಪ್ತವಾಗಿ ಖುಷಿ ಎನಿಸುವುದು. ಜೀವನದಲ್ಲಿ ನಮಗಾಗಿ ನಾವು ಬದುಕಬೇಕೆ ಹೊರತು ಬೇರೆಯವರಿಗೋಸ್ಕರವಲ್ಲ ಎಂಬ ಯೋಚನೆ ಬರುವುದು. ಜೀವನದಲ್ಲಿ ಮನುಷ್ಯ ಎಷ್ಟು ನೋವು ಅವಮಾನ ಪಡುತ್ತಾನೋ, ಅಷ್ಟೇ ಚೆನ್ನಾಗಿ ಬದುಕುತ್ತಾನೇ. ಬದಲಾವಣೆಯೆ ಶಾಶ್ವತ ಎನ್ನುವ ವಾಕ್ಯವನ್ನು ಸ್ಮರಿಸುತ್ತ ಮುಂದಡಿಯಿಡಿ. ನೆಮ್ಮದಿ ನಿಮ್ಮೆದುರು ನಿಲ್ಲುವುದು. ಇಂದು ಸಂಗಾತಿಗೆ ನಿಮ್ಮ ಮೇಲೆ ಅಭಿಮಾನ ಬರಬಹುದು. ಅವಿವಾಹಿತರು ವಿವಾಹದ ಬಗ್ಗೆ ಬಂಧುಗಳ ಜೊತೆ ಚರ್ಚಿಸುವಿರಿ. ಮನಸ್ಸಿನ ನಿಯಂತ್ರಣವು ಲಯವನ್ನು ತಪ್ಪಬಹುದು. ನೀವು ಇಂದು ವೃತ್ತಿಪರ ರಂಗದಲ್ಲಿ ನಿಮಗೆ ಪ್ರಶಂಸೆ ಸಿಗುವ ಸಾಧ್ಯತೆ ಇದೆ. ಆಸ್ತಿ ಸಮಸ್ಯೆ ಸೌಹಾರ್ದಯುತವಾಗಿ ಬಗೆಹರಿಯುವುದು. ಹೊಸತನ್ನು ಕಲಿಯುವ ಉತ್ಸಾಹದಲ್ಲಿ ಇರುವಿರಿ. ಧೈರ್ಯದಿಂದ ಹೊಸ ಸವಾಲುಗಳನ್ನು ಎದುರಿಸುವಿರಿ. ಭೂಮಿ ಮತ್ತು ಆಸ್ತಿಗೆ ಸಂಬಂಧಿಸಿದ ಕೆಲಸಗಳು ಇರುತ್ತವೆ.
ವೃಷಭ ರಾಶಿ: ನಿಮ್ಮ ಸ್ವಭಾವಕ್ಕೆ ಜನರು ಸಕ್ಕರೆಯನ್ನು ಇರುವೆಗಳು ಮುತ್ತಿದಂತೆ ಜನರು ಮುತ್ತುವರು. ಸಾಲದ ವಿಚಾರ ಬಂದರೆ ಮೌನವಹಿಸಿ, ಎದ್ದು ಹೋಗಿ ಅಥವಾ ವಿಷಯಾಂತರಿಸಿ. ಪಿತ್ರಾರ್ಜಿತ ಸಂಪತ್ತು ನಿಮಗೆ ಉಪಯೋಗವಾಗಬಹುದು. ಸಂಗಾತಿಯೊಡನೆ ಸಲ್ಲಾಪ ಮಾಡುವಿರಿ. ಸಂಪತ್ತು ನಿಮ್ಮ ಶ್ರಮಕ್ಕನುಸಾರ ಸಿಗಲಿದೆ. ನಿಮ್ಮ ಬರೆವಣಿಗೆಯಿಂದ, ಮಾತಿನಿಂದ ನಿಮಗೆ ಕೀರ್ತಿಯು ಲಭ್ಯ. ಇಂದು ನೀವು ಯಾರದೋ ವಿರುದ್ಧವಾಗಿ ಹೋಗುವುದು ಬೇಡ. ಲೆಕ್ಕಪತ್ರವನ್ನು ಸರಿಯಾಗಿ ಇಟ್ಟುಕೊಳ್ಳಿ. ಕ್ರಿಯಾಶೀಲತೆಗೆ ನಿಮಗೆ ಯಾವುದೇ ಪ್ರಶಂಸೆ ಸಿಗದಿರುವುದು ನಿಮಗೆ ಕಷ್ಟವಾದೀತು. ಹಣಕಾಸಿನ ವಿಷಯದಲ್ಲಿ ಕೆಲವು ಲಾಭಗಳನ್ನು ನಿರೀಕ್ಷಿಸುವಿರಿ. ಕಚೇರಿಯಲ್ಲಿ ಕೆಲಸದ ಹೊರೆ ನಿಮ್ಮ ಸ್ವಂತ ಕೆಲಸವನ್ನು ಮಾಡಲು ಸ್ವಲ್ಪ ಸಮಯವನ್ನು ನೀಡುತ್ತದೆ. ನಿಮ್ಮ ವ್ಯಾಯಾಮದಲ್ಲಿ ಮಿತಿ ಇರಲಿ. ಇಲ್ಲವಾದರೆ ದೇಹಾರೋಗ್ಯ ಕೆಡಬಹುದು. ಉತ್ತಮ ಆರೋಗ್ಯದಿಂದ ಆನಂದಿಸುವಿರಿ. ನಿಮ್ಮವರ ಬಗ್ಗೆ ಸರಿಯಾದ ಭಾವನೆಯು ಇಲ್ಲದೇ ಇರಬಹುದು.
ಮಿಥುನ ರಾಶಿ: ಇಂದು ದಾಂಪತ್ಯಜೀವನದಲ್ಲಿ ಬಹಳ ಗೊಂದಲವಾಗಬಹುದು. ಇನ್ಮೊಂದು ಜೀವವನ್ನು ಗರ್ಭದಲ್ಲಿ ಹೊತ್ತಿರುವವರು ನಡಿಗೆಯಲ್ಲೂ ಮನಸ್ಸಿನಲ್ಲೂ ಮಾತಿನಲ್ಲೂ ಎಚ್ಚರ, ಸಾವಧಾನತೆಯಿರಲಿ. ಸ್ನೇಹಿತರ ಜೊತೆ ಸೇರಿ ಹಣವನ್ನು ಖರ್ಚು ಮಾಡಲು ಮುಂದಾಗುತ್ತೀರಿ. ನಿಮ್ಮ ನ್ಯೂನತೆಗಳು ಇನ್ನೊಬ್ಬರ ಬಾಯಿಗೆ ಸಿಕ್ಕ ರಸಗವಳದಂತೆ ಚಪ್ಪರಿಸಿ ಸೇವಿಸುತ್ತಿರುತ್ತಾರೆ. ಇಂದು ನಿಮ್ಮ ಪೂರ್ವಜರ, ಹಿರಿಯರ ಕಾರ್ಯಗಳು ನೆನಪಾಗುವುದು. ಸಂಗಾತಿಯ ಜೊತೆ ಸಂತೋಷದಿಂದ ಸಮಯವನ್ನು ಕಳೆಯುವಿರಿ. ಗೊತ್ತಿಲ್ಲದೇ ಯಾರ ಬಗ್ಗೆಯೂ ನಿಮ್ಮ ಮಾತುಗಳನ್ನು ಹರಿ ಬಿಡುವುದು ಬೇಡ. ಅದೇ ನಿಮ್ಮ ತಲೆಯನ್ನು ದಿನವಿಡೀ ಕೊರೆಯಬಹುದು. ಈ ದಿನ ಕೆಲಸದಲ್ಲಿ, ನಿಮ್ಮ ದಕ್ಷತೆಯಿಂದ ಮುಖ್ಯವಾದವರನ್ನು ನೀವು ಮೆಚ್ಚಿಸಲು ಸಾಧ್ಯವಾಗುತ್ತದೆ. ಆರೋಗ್ಯದ ಆರೈಕೆಯ ಬಗ್ಗೆ ಗಮನವಿರಲಿ. ಆಸ್ತಿ ವ್ಯವಹಾರವು ನಿಮಗೆ ಅನುಕೂಲವಾಗುವ ಸಾಧ್ಯತೆಯಿದೆ.
ಕಟಕ ರಾಶಿ: ಇಂದು ನೀವು ಒಪ್ಪಿಕೊಂಡ ಕಾರ್ಯವನ್ನು ಬಿಡದೆ ಮುನ್ನಡೆಸು ಛಾತಿ ನಿಮ್ಮ ಯಶಸ್ಸಿನ ಗುಟ್ಟುಗಳಲ್ಲೊಂದು. ಗೊತ್ತಿದ್ದೂ ಉದ್ವೇಗಕ್ಕೆ ಒಳಗಾಗಬೇಡಿ. ಎದೆ ನೋವು ಕಾಣಿಸಿಕೊಂಡೀತು. ಶಸ್ತ್ರಚಿಕಿತ್ಸೆಯವರೆಗೂ ಒಯ್ಯಬಹುದು. ನಾಗರಾಜನಿಗೆ ಸುತ್ತು ಬನ್ನಿ. ಇಂದು ಹುಟ್ಟಿದ ಪ್ರೇಮವು ಕೆಲವೇ ದಿನದಲ್ಲಿ ಸಾಯುತ್ತದೆ. ಕಛೇರಿಯಲ್ಲಿ ಎಲ್ಲರ ಜೊತೆ ಸೌಹಾರ್ದದಿಂದ ಇರುವಿರಿ. ಅಧ್ಯಾತ್ಮದ ಚಿಂತನೆಯಿಂದ ನಿಮ್ಮ ಬದುಕಿನ ದಿಕ್ಕು ಬದಲಾಗುವ ಸಾಧ್ಯತೆ ಇದೆ. ಯಾರನ್ನೂ ನೀವು ಪೂರ್ಣವಾಗಿ ನಂಬಲಾರಿರಿ. ಸಂಗಾತಿಯ ಬಗ್ಗೆ ಕುತೂಹಲವಿರಬಹುದು. ಅತಿಯಾಗುವುದು ಬೇಡ. ಆದರೆ ಅತಿರೇಕಕ್ಕೆ ಹೋಗುವ ಸಾಧ್ಯತೆ ಇದೆ. ದೈಹಿಕ ದಾರ್ಢ್ಯವನ್ನು ನೀವು ಚೆನ್ನಾಗಿರಿಸಿಕೊಳ್ಳುವಿರಿ. ಸುಲಭವಾಗಿ ಸಿಕ್ಕುವುದನ್ನು ಬಿಟ್ಟಕೊಳ್ಳುವಿರಿ. ನಿಮ್ಮ ಬೆರೆಯುವಿಕೆಯು ಕಡಿಮೆ ಆಗಬಹುದು. ನಿಮ್ಮ ತಿಳುವಳಿಕೆ ಮತ್ತು ಸಭ್ಯತೆಯಿಂದ ಎಲ್ಲರೂ ಬಹಳ ಪ್ರಭಾವಿತರಾಗಬಹುದು.