Horoscope 24 Feb: ಈ ರಾಶಿಯವರಿಗೆ ಸಂಕಷ್ಟದ ಸಮಯದಲ್ಲಿ ಆಪ್ತರ ಸಹಾಯ ಸಿಗಲಿದೆ

| Updated By: ಆಯೇಷಾ ಬಾನು

Updated on: Feb 24, 2024 | 6:44 AM

Nitya Bhavishya: 2024 ಫೆಬ್ರವರಿ 24ರ ಶನಿವಾರದಂದು 12 ರಾಶಿಗಳ ರಾಶಿಫಲ ಹೇಗಿದೆ ಎನ್ನುವುದು ತಿಳಿದುಕೊಳ್ಳಿ. ಈ ದಿನ ಯಾರಿಗೆ ಯೋಗ, ಶುಭ ಸಂಯೋಗ, ಗ್ರಹಗಳ ಸ್ಥಾನ ಬದಲಾವಣೆಗಳಿಂದ ಮೇಷದಿಂದ ಮೀನ ರಾಶಿವರೆಗಿನ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಇಂದಿನ ಶುಭಕಾಲ ಹೇಗಿದೆ? ಯಾವ ರಾಶಿಯವರಿಗೆ ಅದೃಷ್ಟ ಕಾದಿದೆ. ಯಾವ ರಾಶಿಯವರು ಇಂದು ಜಾಗೃಕರಾಗಿರಬೇಕು ಎಂದು ನಿತ್ಯ ಭವಿಷ್ಯದಿಂದ ತಿಳಿಯಿರಿ.

Horoscope 24 Feb: ಈ ರಾಶಿಯವರಿಗೆ ಸಂಕಷ್ಟದ ಸಮಯದಲ್ಲಿ ಆಪ್ತರ ಸಹಾಯ ಸಿಗಲಿದೆ
ಪ್ರಾತಿನಿಧಿಕ ಚಿತ್ರ
Follow us on

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಫೆಬ್ರವರಿ​​​​ 24) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಭವಿಷ್ಯ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ : ಶತಭಿಷಾ, ಮಾಸ : ಮಾಘ, ಪಕ್ಷ : ಶುಕ್ಲ, ವಾರ : ಶನಿ, ತಿಥಿ : ಪೂರ್ಣಿಮಾ, ನಿತ್ಯನಕ್ಷತ್ರ : ಮಘಾ, ಯೋಗ : ಅತಿಗಂಡ, ಕರಣ : ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 53 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 38 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:50 ರಿಂದ 11:18ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:14 ರಿಂದ 03:42ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:54 ರಿಂದ 08:22ರ ವರೆಗೆ.

ಮೇಷ ರಾಶಿ: ನಿಮ್ಮ ಅನವರತ ಪ್ರಯತ್ನದ ಹಾಗೂ ಕುಟುಂಬದ ಸದಸ್ಯರ ಸಮಯೋಚಿತ ಬೆಂಬಲದ ಫಲವಾಗಿ ನಿಮಗಮ ಆಸೆಯನ್ನು ಈಡೇರಿಸಿಕೊಳ್ಳುವಿರಿ. ನೀವು ಪ್ರವಾಸ ಮಾಡುತ್ತಿದ್ದರೆ ನಿಮ್ಮ ಅಮೂಲ್ಯ ಸಂಪತ್ತುಗಳ ಬಗ್ಗೆ ವಿಶೇಷ ಎಚ್ಚರಿಕೆ ಇರಲಿ. ನಿಮ್ಮ ಮನೆಯ ಸ್ವಚ್ಛತೆಯ ಬಗ್ಗೆ ಗಮನಹರಿಸಿ. ನಿಮ್ಮ ವಿಚಾರಕ್ಕೆ ಕೋಪಗೊಂಡಿದ್ದರೆ, ಅವರನ್ನು ಶಾಂತಗೊಳಿಸಲು ಪ್ರಯತ್ನಿಸಿ. ವಿವಿಧ ವೃತ್ತಿಗಳು ನಿಮ್ಮನ್ನು ಕರೆಯಬಹುದು. ಪಾಲುದಾರಿಕೆಯು ನಿಮಗೆ ಮೋಸದಂತೆ ಕಾಣುವುದು. ಶತ್ರುಗಳ ಬಗ್ಗೆ ಯಾರಾದರೂ ಕಿವಿಚುಚ್ಚುವರು. ನೀರಿನ ಸ್ಥಳದಲ್ಲಿ ಎಚ್ಚರಿಕೆಯಿಂದ ಇರಿ. ಆಪಾಯದ ಸೂಚನೆಯನ್ನು ಗಮನಿಸಿಕೊಳ್ಳಿ. ವ್ಯಾಪಾರವನ್ನು ಅಚ್ಚುಕಟ್ಟಾಗಿ ಮುಗಿಸುವ ಕೌಶಲವು ನಿಮ್ಮಲ್ಲಿರುವುದು. ಹೂಡಿಕೆಯ ವಿಚಾರದಲ್ಲಿ ಯಾರಾದರೂ ದಾರಿಯನ್ನು ತಪ್ಪಿಸಿಯಾರು. ಉದ್ಯಮಿಗಳ ಭೇಟಿ ಮಾಡುವಿರಿ. ಭೂಮಿಯ ಖರೀದಿಗೆ ಸೂಕ್ತ ಸಮಯವಿದ್ದು ಇಷ್ಟಪಟ್ಟ ಭೂಮಿಯು ಸಿಗುವುದು.

ವೃಷಭ ರಾಶಿ: ನೀವು ಶಾರೀರಿಕವಾದ ಸೌಂದರ್ಯದ ಕಡೆ ಗಮನ ಅತಿಯಾಗುವುದು. ಸಹೋದರ ಪ್ರೀತಿಯಿಂದ ನಿಮಗೆ ಖಷಿಯಾಗಲಿದೆ. ಎಲ್ಲರಿಂದ ನಿರ್ಮಲ ಪ್ರೀತಿಯನ್ನು ಅನುಭವಿಸಿ. ನೀವು ಕೆಲಸದಲ್ಲಿ ಇಂದು ನಿಜವಾಗಿಯೂ ಯಾವುದಾದರೂ ಅದ್ಭುತವಾದದ್ದನ್ನು ಸಾಧಿಸಬಹುದು. ಈ ದಿನ ಶ್ರೇಷ್ಠವಾಗಿದೆ, ಇತರರೊಂದಿಗೆ ನೀವು ನಿಮಗಾಗಿ ಸಹ ಸಮಯವನ್ನು ಕಳೆಯುವಿರಿ. ನಿಮ್ಮ ಸಂಗತಿ ಇಂದು ಸ್ವರ್ಗದ ಮೇಲೆ ಇದೆ, ಇಂದು ಅದು ನಿಮಗೆ ಅರ್ಥವಾಗುತ್ತದೆ. ನಿಮ್ಮ ಪ್ರಯತ್ನಕ್ಕೆ ಸರಿಯಾದ ಫಲವು ಸಿಗುವುದು. ಆದಾಯವನ್ನು ನಿರೀಕ್ಷಿತ ಖರ್ಚಿನ ಬಗ್ಗೆ ನಿಯಂತ್ರಣ ಬೇಕು. ನಿಮ್ಮ ಗುರಿಯನ್ನು ಬದಲಾಯಿಸುವುದು ಬೇಡ. ಇಂದು ಖರ್ಚಿನ ಬಗ್ಗೆ ಊಹೆಗೂ ಸಿಗದು. ಹೇಳಬೇಕಾದ‌ ವಿಷಯದಲ್ಲಿ ಮುಚ್ಚು ಮರೆ ಇಲ್ಲದೇ ಸರಿಯಾಗಿ ಹೇಳಿ.‌ ಆದುದರ ಬಗ್ಗೆ ನಿಮಗೆ ಯಾವುದೇ ಬೇಸರವನ್ನು ಮಾಡಿಕೊಳ್ಳುವುದಿಲ್ಲ. ಬೇರೆಯವರನ್ನು ಗೊಂದಲಕ್ಕೆ ಸಿಕ್ಕಿ ಹಾಕಿಸುವುದು ಬೇಡ. ನಿಮ್ಮ ಕಾರ್ಯದಲ್ಲಿನ ಶಿಸ್ತು ಉಳಿದವರಿಗೆ ಕಷ್ಟವಾದೀತು. ಮಿತಿಮೀರಿದ ಆಸೆಗೆ ಕಡಿವಾಣದ ಅಗತ್ಯವಿದೆ.

ಮಿಥುನ ರಾಶಿ: ಇಂದು ಯಾರನ್ನಾದರೂ ಸೆಳೆಯುವ ಪ್ರಯತ್ನ ಮಾಡುವಿರಿ. ನೀವು ನಿಮ್ಮ ಯೋಜನೆಗಳನ್ನು ಜಾರಿಗೊಳಿಸಿದರೆ, ಇಂದು ಕೊಂಚ ಹೆಚ್ಚಿನ ಹಣವನ್ನು ಗಳಿಸುವಿರಿ. ದೂರವಾದ ಸಂಬಂಧಿಯೊಬ್ಬರಿಂದ ಬರುವ ಅನಿರೀಕ್ಷಿತ ಸಂದೇಶವು ಸಂಪೂರ್ಣ ಕುಟುಂಬಕ್ಕೆ ಉಲ್ಲಾಸ ಬರುವುದು. ನೀವು ಯಾವುದೇ ಹೊಸ ಉದ್ಯಮವನ್ನು ಆರಂಭಿಸುವ ಮುನ್ನ ಎರಡು ಸಲ ಚಿಂತಿಸಿ. ಖಾಲಿ ಸಮಯದ ಸದುಪಯೋಗವನ್ನು ನೀವು ಕಲಿತುಕೊಳ್ಳಬೇಕು. ಇಲ್ಲವಾದರೆ, ಜೀವನದಲ್ಲಿ ಅನೇಕರಿಂದ ನೀವು ಹಿಂದೆ ಬೀಳುತ್ತೀರಿ. ಇದು ನಿಮ್ಮ ಜೀವನಸಂಗಾತಿಯೊಂದಿಗಿನ ಅದ್ಭುತ ದಿನವಾಗಿದೆ. ನಿಮ್ಮ ಕಾಳಜಿಯು ಇತರರಿಗೆ ಮುಜುಗರವನ್ನು ತಂದೀತು. ಕಟ್ಟಡ ನಿರ್ಮಾಣದವರಿಗೆ ಹೆಚ್ಚು ಲಾಭವಾಗಲಿದೆ. ಹೊಸ ಯೋಜನೆಗಳೂ ಅವರಿಗೆ ಸಿಗಲಿದೆ. ನಿಮ್ಮ ಕಾರ್ಯಕ್ಷೇತ್ರದಲ್ಲಿ ಉತ್ತಮ ಪ್ರಗತಿ ಇರಲಿದೆ. ನಿಮ್ಮ ದಕ್ಷ ಕಾರ್ಯವು ಎಲ್ಲರಿಗೂ ಮಾದರಿಯಾದೀತು. ಅನಗತ್ಯ ಅಲೆದಾಟವನ್ನು ನಿಲ್ಲಿಸಿ ಕಾರ್ಯದಲ್ಲಿ ಮಗ್ನರಾಗಿ. ನಿಮ್ಮ ಸುಳ್ಳು ಮಾತುಗಳನ್ನು ಯಾರೂ ಕೇಳಲು ಇಷ್ಟ ಪಡರು.‌

ಕಟಕ ರಾಶಿ: ಇಂದು ನಿಮ್ಮ ಕಚೇರಿಯ ಸಹಪಾಠಿ ನಿಮ್ಮ ಮೌಲ್ಯವಾದ ಸಂಪತ್ತನ್ನು ಅಡಗಿಸಬಹುದು. ನೀವು ಹೆಚ್ಚು ಪ್ರಯತ್ನಿಸಿದರೂ ಮಕ್ಕಳ ಜೊತೆಯಲ್ಲಿ ನಿಮ್ಮ ವಿಶ್ರಾಂತಿಯ ಕಾಲವನ್ನು ಕಳೆಯಲು ಪ್ರಯತ್ನಿಸಬೇಕು. ಏಕಾಂತದಲ್ಲಿ ಸಮಯ ಕಳೆಯುವುದು ಒಳ್ಳೆಯದು. ಆದರೆ ನಿಮ್ಮ ಬುದ್ಧಿಗೆ ಏನಾದರೂ ಕೆಲಸವನ್ನು ಕೊಡಿ. ಜನರಿಂದ ದೂರವಾಗುವುದಕ್ಕಿಂತ ಅನುಭವಿಯಾದ ವ್ಯಕ್ತಿಯೊಂದಿಗೆ ನಿಮ್ಮ ಸಮಸ್ಯೆಗಳ ಬಗ್ಗೆ ಮಾತನಾಡುವುದು ಮೇಲು ಎಂದು ನಿಮಗೆ ನಮ್ಮ ಸೂಚನೆ ನೀಡಲಾಗಿದೆ. ಕೃಷಿಯ ಉತ್ಪನ್ನದಿಂದ ಅಧಿಕ‌ಲಾಭವಿರಲಿದೆ. ನಿಮ್ಮನ್ನು ವಿರೋಧಿಸುವವರು ಹೆಚ್ಚಾದಾರು. ವಿರೋಧಿಗಳನ್ನು ಲೆಕ್ಕಿಸದೇ ನಿಮ್ಮಷ್ಟಕ್ಕೆ ಇರುವಿರಿ. ನಿಂತ ಕಾರ್ಯಕ್ಕೆ ಚಾಲನೆ ನೀಡುವಿರಿ. ನಿದ್ರೆ ಇಲ್ಲದೇ ಮಾನಸಿಕ‌ವಾಗಿ ಕುಗ್ಗುವಿರಿ. ಸ್ಪರ್ಧೆಗಾಗಿ ನಡೆಸಿದ ನಿಮ್ಮ ಶ್ರಮವು ವ್ಯರ್ಥವಾದೀತು. ನಿಮ್ಮ‌ ಮೇಲಿರುವ ಭಾವನೆಯು ದೂರಾಗಬಹುದು. ಅಮೂಲ್ಯ ಸಮಯವನ್ನು ಆಲಸ್ಯದಿಂದ ಕಳೆಯುವಿರಿ. ಆಸ್ತಿಯ ವಿಚಾರಕ್ಕೆ ನೆರಮನೆಯವರ ಜೊತೆ ಕಲಹವಾಗಲಿದೆ.

ಸಿಂಹ ರಾಶಿ: ನೀವು ಬಹಳ ವರ್ಷಗಳಿಂದ ಕಾಯುತ್ತಿದ್ದ ಜೀವನಕ್ಕೆ ಹೊಂದಿಕೊಂಡು ಖುಷಿಯಗಿರುವಿರಿ. ಸಂಕಷ್ಟವನ್ನು ದೂರ ಮಾಡಿಕೊಳ್ಳಲು ನೀವು ಮಾನಸಿಕವಾಗಿ ದೃಢರಾಗಬೇಕು. ಸಂಬಂಧಿಗಳಿಂದ ಹಣ ಸಾಲ ಪಡೆದವರು ಯಾವ ಸನ್ನಿವೇಶದಲ್ಲಾದರೂ ಸಾಲವನ್ನು ಮರುಪಾವತಿಸಬೇಕಾಬಹುದು. ನಿಮ್ಮ ಅನಿರೀಕ್ಷಿತ ನಡವಳಿಕೆಯಿಂದ ಸಂಗಾತಿಗಳು ನಿರಾಶರಾಗಬಹುದು. ಪ್ರೇಮದಲ್ಲಿ ನಿರಾಶೆಯನ್ನು ಇಟ್ಟಕೊಳ್ಳುವುದು ಬೇಡ. ಸಮಯದ ಚಕ್ರವು ವೇಗವಾಗಿ ಸುತ್ತಿದಂತೆ ಕಾಣಿಸುವುದು. ಇಂದು ಹಲವು ಕಾರ್ಯಗಳನ್ನು ಒಂದೇ ಸಲ ಮಾಡಬೇಕಾಗಬಹುದು. ಎಲ್ಲವೂ ಆಗಿಹೋದಂತೆ ನಿಮಗೆ ಅನ್ನಿಸಬಹುದು. ನಿಮ್ಮವರನ್ನು ಬಿಟ್ಟು ಹೋದವರ ಬಗ್ಗೆ ಆಲೋಚನೆ ಬೇಡ. ವಸತಿಯಲ್ಲಿ ತೊಂದರೆ ಬಂದ ಕಾರಣ ಬದಲಾಯಿಸುವ ಸಂದರ್ಭವೂ ಬರಬಹುದು. ಸಂತಾನದ ವಿಚಾರದಲ್ಲಿ ಅಶಾಂತಿ ಮೂಡಬಹುದು. ನಿಮ್ಮವರೆಂದುಕೊಂಡವರು ನಿಮ್ಮವರಾಗದೇ ಇರಬಹುದು. ಅನಾರೋಗ್ಯವನ್ನೂ ನೀವು ಲೆಕ್ಕಿಸದೇ ಕಾರ್ಯದಲ್ಲಿ ಪ್ರವೃತ್ತರಾಗುವಿರಿ.

ಕನ್ಯಾ ರಾಶಿ: ನಿಮ್ಮ ನಂಬಿಕೆಯನ್ನು ಉಳಿಸಿಕೊಳ್ಳಲು ನೀವು ಪ್ರಯತ್ನಿಸಬೇಕಾಗಿದೆ. ವಿಶ್ರಾಂತಿಯ ಸಮಯವನ್ನು ನೀವು ಬದಲಿಸಿಕೊಳ್ಳುವಿರಿ. ಮನೆಯ ಚಿಕ್ಕ ಕೆಲಸಗಳಿಗೆ ನಿಮ್ಮ ಹಣ ವ್ಯರ್ಥವಾಗಬಹುದು. ಮಕ್ಕಳು ತಮ್ಮ ಸಾಧನೆಗಳಿಂದ ಗರ್ವಪಡಯವರು. ಪ್ರೇಮಿಗಳ‌ ನಡುವೆ ವಾಗ್ವಾದವು ನಡೆಯಬಹುದು. ಇಂದು ತಜ್ಞರ ಜೊತೆ ನಿಮ್ಮ ಅನುಭವವನ್ನು ಹಂಚಿಕೊಳ್ಳುವಿರಿ. ನಿಮ್ಮ ಹಿಂಜರಿಕೆಗೆ ಕಹಿ ಅನುಭವಗಳು ಕಾರಣವಾಗಬಹುದು. ಇಂದು ಹಿರಿಯರಿಂದ ಕೆಲವು ಹಿತೋಪದೇಶವನ್ನು ಕೇಳಬೇಕಾದೀತು. ವ್ಯಾಪಾರದ ಸ್ಥಳದಲ್ಲಿ ಇಕ್ಕಟ್ಟು ಉಂಟಾಗಬಹುದು. ತಾಳ್ಮೆಯನ್ನು ಕಳೆದುಕೊಳ್ಳುವುದು ಬೇಡ. ಅನಾರೋಗ್ಯದ ಕಾರಣ ಉತ್ಸಾಹದ ಯಾವ ಕಾರ್ಯವನ್ನೂ ಮಾಡಲಾಗದು. ದಿನದ ಕೆಲಸವನ್ನು ಮಾಡುವಷ್ಟರಲ್ಲಿ ನಿಮ್ಮ ಸಮಯವು ಕಳೆದುಹೋಗುವುದು. ರಾಜಕೀಯ ಏರಿಳಿತವನ್ನು ನೀವು ಊಹಿಸುವುದು ಕಷ್ಟವಾದೀತು.

ತುಲಾ ರಾಶಿ: ಇಂದು ನಿಮ್ಮ ಅನುಭವಗಳು ಪ್ರಯೋಜನಕ್ಕೆ ಬರಬಹುದು. ಅತಿಯಾದ ಚಿಂತೆಯನ್ನು ಮಾಡಿ, ಇರುವ ಕಾರ್ಯವನ್ನು ನೀವು ಕೆಡಿಸಿಕೊಳ್ಳುವಿರಿ. ನಿಮ್ಮ ನಿರಾಶೆಯನ್ನು ಮೀರಿಸಿ ಸಂತೋಷವು ಬರಬಹುದು. ಕುಟುಂಬದ ಒಳಿತಿಗಾಗಿ ಸಹೋದರರ ನಡುವೆ ಸಂಘರ್ಷಗಳು ಉಂಟಾಗಬಹುದು. ಕುಟುಂಬದ ಹೊಣೆಗಾರಿಕೆಗಳಲ್ಲಿ ನಿಮ್ಮ ಉದಾಸೀನತೆಗೆ ಕೋಪಿಸಿಕೊಳ್ಳುವಿರಿ. ನ್ಯಾಯಸಮ್ಮತವಾದ ಮತ್ತು ಉದಾರವಾದ ಪ್ರೀತಿಯಿಂದ ಪ್ರಶಂಸೆ ಸಾಧ್ಯ. ನಿಮ್ಮ ಸಾಮರ್ಥ್ಯವನ್ನು ವರ್ಧಿಸಲು ಕೌಶಲವೂ ಇರಲಿ. ಸ್ತ್ರೀಯರು ತಮ್ಮ ಕೌಶಲವನ್ನು ತೋರಿಸುವರು. ಪಾಲುದಾರಿಕೆಯ ಭೂ ಸಂಬಂಧದ ಕಾರ್ಯದಿಂದ ಲಾಭವಾಗಲಿದೆ. ದಾಂಪತ್ಯವು ಪರಸ್ಪರ ಸೌಹಾರ್ದದ ಮಾತುಗಳಿಂದ ನೆಮ್ಮದಿ ಸಿಗುವುದು.‌ ಮಕ್ಕಳ‌ ವಿಚಾರವಾಗಿ ಅನವಶ್ಯಕ ಖರ್ಚು ಮಾಡುವುದು ಬೇಡ. ಅವಶ್ಯಕತೆಯನ್ನು ನೋಡಿ. ಯಾರಸದರೂ ಅಸತ್ಯವನ್ನು ಆಡಿದರೆ ಅದನ್ನು ಸರಳವಾಗಿ ಕಂಡು ಹಿಡಿಯುವಿರಿ.‌ ನೀವು ಮೌನದಿಂದ ಇದ್ದರೆ ಒಪ್ಪಿಗೆ ಕೊಟ್ಟಿದ್ದೀರಿ ಎಂದಾಗುವುದು.

ವೃಶ್ಚಿಕ ರಾಶಿ: ನೀವು ಮಾನಸಿಕ ದೌರ್ಬಲ್ಯಕ್ಕೆ ಬೇಕಾದುದನ್ನು ಮಾಡಿಕೊಳ್ಳುವಿರಿ. ಇಂದು ನಿಮಗೆ ಹೂಡಿಕೆ ಮಾಡುವುದು ಸಾಕೆನಿಸಬಹುದು. ಪಿರ್ತ್ರಾರ್ಜಿತ ಆಸ್ತಿಯ ಬಗ್ಗೆ ಆಸೆ ಬರಬಹುದು. ನಿಮ್ಮ ಯೋಜನೆಗಳು ಅಂತಿಮ ಸ್ವರೂಪವನ್ನು ಪಡೆಯಲಿವೆ. ಮನೆಯ ಸದಸ್ಯರೊಂದಿಗೆ ವಾದ ಮಾಡುವ ವೇಳೆಯಲ್ಲಿ ಕೋಪಗೊಳ್ಳುವ ಸಂಭವವಿದೆ. ಇದಾದ ನಂತರ ಮನೆಯ ಸದಸ್ಯರನ್ನು ಮನವೊಲಿಸಲು ನಿಮ್ಮ ಹೆಚ್ಚಿನ ಸಮಯ ವ್ಯಯವಾಗಬಹುದು. ನಿಮ್ಮನ್ನು ಖುಷಿಪಡಿಸಲು ನಿಮ್ಮ ಜೀವನ ಸಂಗಾತಿ ಇಂದು ಅನೇಕ ಪ್ರಯತ್ನಗಳನ್ನು ಮಾಡುತ್ತಾರೆ. ನಿಮ್ಮ ಕೆಲವು ವರ್ತನೆಯನ್ನು ಮಿತ್ರರು ವಿರೋಧಿಸುವರು. ಅಮೂಲ್ಯ ವಸ್ತುಗಳನ್ನು ಖರೀದಿಸುವುದು ಕಷ್ಟವಾದರೂ ಮಾಡುವಿರಿ. ನಿಮ್ಮ‌ ಸಾಮರ್ಥ್ಯಕ್ಕೆ ಕೊಟ್ಟ ಜವಾಬ್ದಾರಿಯು ಸಣ್ಣದಾಗಿರುವುದು. ನಿಮ್ಮ ಬಂಧುಗಳ ಸಹಾಯದಿಂದ ವಿವಾಹದ ಮಾತುಕತೆಯು ಘಟಿಸುವುದು. ಪರಿಶ್ರಮಕ್ಕೆ ತಕ್ಕ ಫಲವನ್ನೂ ನೀವು ಅಪೇಕ್ಷಿಸಿ ಪಡೆದುಕೊಳ್ಳುವಿರಿ.

ಧನು ರಾಶಿ: ನಿಮ್ಮ ಚಿಂತನೆಯು ಸಕಾರಾತ್ಮಕವಾಗಿರಲಿ. ಅವಶ್ಯಕತೆ ಇರುವ ವಸ್ತುಗಳನ್ನೇ ಇಂದು ಖರೀದಿಸಲು ಯೋಚಿಸಿ. ನಿಗದಿತ ಪ್ರವಾಸದ ಯೋಜನೆಗಳು ವ್ಯತ್ಯಾಸವಾಗಬಹುದು. ನೀವು ಇಂದು ಕೆಲಸದಲ್ಲಿ ಅಸಾಧಾರಣ ಪ್ರತಿಭೆಯನ್ನು ಪ್ರದರ್ಶಿಸುವಿರಿ. ನಿಮ್ಮ ಬಿಡುವಿನ ಸಮಯವನ್ನು ಉತ್ತಮವಾಗಿ ಬಳಸಿಕೊಳ್ಳುವಿರಿ. ನಿಮ್ಮ ದಾಂಪತ್ಯ ಜೀವನ ಇಂದು ಅತ್ಯಂತ ಸುಂದರವಾಗಿ ಅನಿಸುವುದು. ಮಕ್ಕಳ ವಿದ್ಯಾಭ್ಯಾಸದ ಖರ್ಚನ್ನು ನೋಡಿಕೊಳ್ಳಲು ಹೋಗಿ ನಿಮ್ಮ ಆರ್ಥಿಕತೆಯು ಹಿಂದಡಿ ಇಡಬಹುದು. ಸಮಾರಂಭದಲ್ಲಿ ಹಳೆಯ ಸ್ನೇಹಿತರ ಭೇಟಿಯಾಗುವುದು. ಆಕಸ್ಮಿಕ ಧನಪ್ರಾಪ್ತಿಯಿಂದ ಹರ್ಷಗೊಳ್ಳುವಿರಿ. ಶ್ರೇಷ್ಠ ವ್ಯಕ್ತಿಗಳ ಸಹವಾಸವು ನಿಮಗೆ ಸಿಗಲಿದೆ. ವಿದ್ಯಾರ್ಥಿಗಳು ಯಾರ ಬೆಂಬಲಕ್ಕೂ ಕಾಯದೇ ನಿಮ್ಮ ಪ್ರತಿಭೆಯ ಪ್ರದರ್ಶನಕ್ಕೆ ಮುನ್ನುಗ್ಗುವುದು ಸೂಕ್ತ. ನಿಮ್ಮ ಮನಸ್ಸಿಗೆ ಪೂರ್ಣವಾಗಿ ಒಪ್ಪಿಗೆ ಆದರೆ ಮಾತ್ರ ಯಾವ ಕೆಲಸಕ್ಕಾದರೂ ಮುಂದುವರಿಯಿರಿ.

ಮಕರ ರಾಶಿ: ಎಂತಹ ಸಂದರ್ಭದಲ್ಲಿಯೂ ನೀವು ಧೈರ್ಯ ಕಳೆದುಕೊಳ್ಳದೆ ಪ್ರಯತ್ನಿಸಿ. ಬಯಸಿದ ಫಲವನ್ನು ಪಡೆಯಲು ಶ್ರಮಿಸುವಿರಿ. ಸಂಕಷ್ಟದ ಸಮಯದಲ್ಲಿ ನಿಮ್ಮ ಆಪ್ತರು ಸಹಾಯ ಮಾಡುವರು. ಇಂದು ಹಣಕಾಸಿನ ನಷ್ಟ ಸಂಭವಿಸಬಹುದು. ವ್ಯವಹಾರಗಳಲ್ಲಿ ನೀವು ಎಚ್ಚರಿಕೆಯಿಂದಿರಿ. ನಿಮಗೆ ಅನುಕೂಲಕರವಾಗಿರುತ್ತದೆ. ಕುಟುಂಬದ ಸ್ಥಿತಿಗತಿಗಳು ಇಂದು ನೀವು ಊಹಿಸಿದಂತೆ ಇರದು. ಕೆಲವು ಸನ್ನಿವೇಶಗಳಲ್ಲಿ ನಿಯಂತ್ರಣ ಅವಶ್ಯಕ. ಇಂದು ನೀವು ಇತರರಿಗೆ ಹೇಳುವ ಉತ್ಸಾಹವನ್ನು ಮಾಡುವುದಿಲ್ಲ. ನಿಮ್ಮ ಜೀವನಸಂಗಾತಿ ಇಂದು ನಿಮಗೆ ಪೂರ್ಣ ಬಲ ಮತ್ತು ಪ್ರೀತಿಯನ್ನು ನೀಡುವರು. ಎಲ್ಲರ ಜೊತೆಗಿದ್ದರೂ ಒಂಟಿಯಂತೆ ಅನ್ನಿಸುವುದು.‌ ಇಂದು ಸ್ತ್ರೀಯರಿಗೆ ಮಾನಿಸಿಕವಾದ ಕಿರಿಕಿರಿ ಇರಲಿದ್ದು ತೊಂದರೆಯಾಗಬಹುದು. ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆಯನ್ನು ಪಡೆಯುವಿರಿ. ನಿಮ್ಮ‌ ವಸ್ತುಗಳ ಮೇಲೆ ಅತಿಯಾದ ಮೋಹವು ಇರುವುದು.

ಕುಂಭ ರಾಶಿ: ನಿಮಗಿರುವ ಭಯವು ಅನೇಕ ವಿಷಯಗಳಿಗೆ ಹಿನ್ನಡೆಯನ್ನು ಉಂಟುಮಾಡುವುದು. ನಿಮ್ಮ ಚಿಂತನೆಗಳು ಮತ್ತು ಕಲ್ಪನೆಗೆ ಉತ್ತಮ ಪ್ರತಿಕ್ರಿಯೆ ಬರಬಹುದು‌. ಅದು ಸಹಜತೆಯನ್ನು ಹಾಳುಮಾಡುವುದು. ನಿಮ್ಮ ಸಾಮರ್ಥ್ಯವು ದುರ್ಬಲಯಾಗಬಹುದು. ಅದು ನಿಮ್ಮನ್ನು ಭೀತಿಗೊಳಿಸುವ ಮೊದಲು ಮೂಲದಲ್ಲೇ ನಿವಾರಿಸುವುದು ಉತ್ತಮ. ನೀವು ಸಾಲ ಪಡೆಯಲು ಯೋಜನೆ ಮಾಡಿದ್ದರೆ ದೀರ್ಘಕಾಲ‌ ಅದನ್ನು ಇಟ್ಟುಕೊಳ್ಳುವುದು ಬೇಡ. ನಿಮ್ಮ ಪ್ರೀತಿಯು ನಿಜವಾಗಿಯೂ ಅದ್ಭುತ ಎನಿಸಬಹುದು. ನಿಮ್ಮ ಅಂದಾಜು ಮೀರಬಹುದು. ಆದಾಯಕ್ಕೆ ನಾನಾ ಮೂಲವನ್ನು ಆಯ್ಕೆ ಮಾಡಿಕೊಳ್ಳುವಿರಿ. ಆಕಸ್ಮಿಕವಾಗಿ ಆರೋಗ್ಯವು ಹದ ತಪ್ಪಬಹುದು. ನಿಮ್ಮನ್ನು ನೀವು ಬದಲಿಸಿಕೊಳ್ಳಬೇಕಾಗುವುದು. ವಿದೇಶದ ವ್ಯವಹಾರದಲ್ಲಿ ಪಾಲುದಾರಿಕೆ ಇರಲಿದೆ. ವೃತ್ತಿಯನ್ನು ಹೊರತುಪಡಿಸಿದ ಅವಕಾಶಗಳು ನಿಮ್ಮನ್ನು ಹುಡುಕಿ ಬರಬಹುದು.

ಮೀನ ರಾಶಿ: ಇಂದು ನೀವು ಬೇರೆಯವರ ಸಹಾಯ ಇಲ್ಲದೇ ಧನಾರ್ಜನೆ ಮಾಡಬಹುದು. ನಿಮ್ಮ‌ ಮೇಲೆ‌ ನಿಮಗೆ ನಂಬಿಕೆ ಇದ್ದರೆ ಸಾಕು. ಆಪ್ತವಾದ ಮಾತು ನಿಮ್ಮ ಸಂಗಾತಿಯ ಜೊತೆಗಿನ ನಂಟನ್ನು ಬಲಪಡಿಸುತ್ತದೆ. ಪ್ರೀತಿಪಾತ್ರರಿಗೆ ಪವಿತ್ರ ಮತ್ತು ನಿಷ್ಕಳಂಕ ಪ್ರೇಮವನ್ನು ತೋರಿಸಿ. ಇಂದು ನೀವು ಕೆಲಸದಿಂದ ಒಂದು ವಿರಾಮ ಪಡೆಯಲು ಯೋಚಿಸಬಹುದು. ನಿಮ್ಮ ಜೀವನ ಸಂಗಾತಿಗೆ ಇಂದು ಶುಭವಾರ್ತೆ ಲಭಿಸಲಿದೆ. ವೈವಾಹಿಕ ಜೀವನವನ್ನು ನಡೆಸುವ ಬಗ್ಗೆ ನಿಮಗೆ ಸಲಹೆಗಳು ಸಿಗುವುದು. ಭೂಮಿಗೆ ಸಂಬಂಧಿಸಿದ ವಿಚಾರಗಳನ್ನು ಇತ್ಯರ್ಥ ಮಾಡಿಕೊಳ್ಳುವುದು ಉಚಿತ. ಉನ್ನತ ವಿದ್ಯಾಭ್ಯಾಸದ ಪ್ರಯುಕ್ತ ಹೊರಗಡೆ ಇರಲಿರುವಿರಿ. ನಿಮ್ಮ ಕಾರ್ಯವು ಆಗಬೇಕಾದರೆ ಓಡಾಟ ಅನಿವಾರ್ಯವಾಗಲಿದೆ. ನಿಮ್ಮ ಕೆಲಸವು ಬದಲಾವಣೆಯಾಗಬಹುದು. ಅನಾರೋಗ್ಯದ ನಡುವೆಯೂ ಉತ್ಸಾಹದಿಂದ ಇರುವಿರಿ.

ಲೋಹಿತ ಹೆಬ್ಬಾರ್ – 8762924271 (what’s app only)