ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಫೆಬ್ರವರಿ 11) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಮಕರ ಮಾಸ, ಮಹಾನಕ್ಷತ್ರ: ಶ್ರವಣಾ, ಮಾಸ: ಪೌಷ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ಪೂರ್ವಾಭಾದ್ರಾ, ಯೋಗ: ಪರಿಘ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 59 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 34 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 05:08 ರಿಂದ 06:34ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:47 ರಿಂದ 02:14 ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:41 ರಿಂದ 05:08ರ ವರೆಗೆ.
ಮೇಷ ರಾಶಿ: ಇಂದು ಪಾಲುದಾರಿಕೆಯಲ್ಲಿ ಇರುವವರು ಒಂದೆಡೆ ಕುಳಿತು ಉದ್ಯೋಗದ ಮಾರ್ಪಾಡುಗಳನ್ನು ಚಿಂತಿಸುವಿರಿ. ಆತುರದಲ್ಲಿ ಏನನ್ನಾದರೂ ಮಾಡಿಕೊಳ್ಳುವಿರಿ. ನಿಮ್ಮ ಮಾತಿನಲ್ಲಿ ತಾರ್ಕಿಕತೆ ಹೆಚ್ಚು ಕಾಣುವುದು. ಸಮಯೋಚಿತ ಮಾತುಗಳಿಂದ ಪ್ರಶಂಸೆಯು ಸಿಗಬಹುದು. ಅಗ್ನಿಯ ಸ್ಥಳದ ಎಚ್ಚರಿಕೆಯಿಂದ ಕೆಲಸವನ್ನು ಮಾಡಿ. ಇಂದಿನ ನಿಮ್ಮ ಸಮಯದ ವ್ಯತ್ಯಾಸದಿಂದ ಕೆಲವು ಕಾರ್ಯಗಳು ಬದಲಾವಣೆ ಆಗಬಹುದು. ಸಂಗಾತಿಯು ನಿಮ್ಮ ಗುಟ್ಟನ್ನು ಹೊರಹಾಕಬಹುಉ. ರಾಜಕೀಯದಲ್ಲಿ ಭಾಗವಹಿಸಲು ನಿಮಗೆ ಪೂರ್ಣವಾದ ಮನಸ್ಸು ಇರದು. ಬಹಳ ದಿನಗಳಿಂದ ಕಾರ್ಮಿಕರ ವಿಚಾರದಲ್ಲಿ ನಿಮಗೆ ಅಸಮಾಧಾನವಿದ್ದು ಅದನ್ನು ತೋರ್ಪಡಿಸುವಿರಿ. ಎಲ್ಲವನ್ನೂ ನೀವೇ ಹೇಳಿ ಬಾಯಿ ನೋವು ಮಾಡಿಕೊಳ್ಳಬೇಕಿಲ್ಲ. ನಡೆಯಿಂದಲೂ ತಿಳಿಸಬಹುದು.
ವೃಷಭ ರಾಶಿ: ಇಂದು ನಿಮಗೆ ಪುಣ್ಯಸ್ಥಳಕ್ಕೆ ಹೋಗುವ ಆಸೆ ಇದ್ದರೂ ಅದನ್ನು ಪೂರೈಸಿಕೊಳ್ಳಲಾಗದು. ವಾಹನವನ್ನು ಚಲಾಯಿಸುವಾಗ ಸಾವಧಾನತೆ ಇರಲಿ. ಇನ್ನೊಬ್ಬರ ಬಗ್ಗೆ ಮಾಡುವ ತಮಾಷೆಯು ನಿಮ್ಮ ತಲೆನೋವಾದೀತು. ಸಮಯದ ಹೊಂದಾಣಿಕೆಯಲ್ಲಿ ನೀವು ಸೋಲಬಹುದು. ಸಭ್ಯರಂತೆ ಇಂದು ನೀವು ತೋರುವಿರಿ. ಕೆಲಸವನ್ನು ಶಿಸ್ತಿನಿಂದ ಮಾಡಬೇಕಾದ ಅನಿವಾರ್ಯತೆ ಇರುವುದರಿಂದ ನಿಧಾನವಾಗುದು. ನೀವು ಮೊದಲೇ ನಿರ್ಧರಿಸಿರುವ ಕೆಲಸಗಳನ್ನು ಪೂರ್ಣ ಮಾಡಲು ಸಮಯವು ಸಿಗದೇ ಹೋದೀತು. ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಹೆಚ್ಚು ಚಿಂತೆ ಮಾಡುವ ಅವಶ್ಯಕತೆ ಇದೆ. ನಿಮ್ಮ ವಿವಾಹದ ಮಾತುಕತೆಗಳು ನಿಮಗೆ ಖುಷಿ ಕೊಡಬಹುದು. ಆಯುಧದಿಂದ ಗಾಯವನ್ನು ಮಾಡಿಕೊಳ್ಳುವ ಸಾಧ್ಯತೆ ಇದೆ. ನಿರುದ್ಯೋಗದಲ್ಲಿ ಇರುವವರಿಗೆ ಉದ್ಯೋಗಕ್ಕೆ ಹೋಗುವುದು ಕಷ್ಟವಾಗುವುದು.
ಮಿಥುನ ರಾಶಿ: ಇಂದು ನಿಮಗೆ ಸೌಂದರ್ಯದ ಬಗ್ಗೆ ಹೆಚ್ಚು ಆಸಕ್ತಿ ಇರಲಿದ್ದು ಅದಕ್ಕೆ ಸಮಯವು ಹೆಚ್ಚು ಹೋಗುವುದು. ಅಪರಿಚಿತರ ಭಯವು ಇದ್ದಕ್ಕಿದ್ದಂತೆ ಕಾಡಬಹುದು. ನಿಮ್ಮ ಏಕಾಗ್ರತೆಯ ಕಾರ್ಯಕ್ಕೆ ಭಂಗವಾಗುವ ಸಾಧ್ಯತೆ ಇದೆ. ಸುಮ್ಮನೇ ಎಲ್ಲಗಾದರೂ ಹೋಗಬೇಕು ಎಂದು ಅನ್ನಿಸುವುದು. ಜವಾಬ್ದಾರಿಯಿಂದ ತಲೆ ಭಾರವಾಗುವುದು. ಸಂಗಾತಿಯ ಪ್ರೀತಿಯು ನಿಮಗೆ ಬೇಸರವನ್ನು ಕೊಡಬಹುದು. ಅನವಶ್ಯಕ ಹರಟೆಯಿಂದ ಅಧಿಕಾರಿಗಳು ನಿಮ್ಮ ಮೇಲೆ ಸಿಟ್ಟಾಗಬಹುದು. ಬೆನ್ನು ನೋವಿನ ಸಮಸ್ಯೆಗೆ ಸೂಕ್ತ ಪರಿಹಾರವು ಸಿಕ್ಕೀತು. ಪ್ರೇಮದ ಕಾರಣಕ್ಕೆ ವಿವಾಹವನ್ನು ಮಾಡಿಕೊಳ್ಳಲು ಒತ್ತಡ ಬರಬಹುದು. ನಿಮ್ಮ ಬಹ್ಗೆ ಬಂಧುಗಳಿಗೆ ಅಸಮಾಧಾನ ಇರುವುದು.
ಕಟಕ ರಾಶಿ: ನಿಮ್ಮ ವಿವಾಹದ ವಿಚಾರದಲ್ಲಿ ಯಾರಾದರೂ ಅಪಸ್ವರ ತರಬಹುದು. ಕಳೆದುಕೊಂಡದ್ದನ್ನು ಪಡೆಯಬೇಕು ಎಂಬ ಛಲವು ನಿಮ್ಮಲ್ಲಿ ಇರುವುದು. ಮನಸ್ತಾಪವನ್ನು ಮನಸ್ಸಿನೊಳಗೇ ಇಟ್ಟುಕೊಳ್ಳುವಿರಿ. ಸಮಯಪ್ರಜ್ಞೆಯು ಇಂದು ಕೆಲಸ ಮಾಡದು. ಆಸ್ತಿಯ ವಿಚಾರಕ್ಕೆ ನೆರೆಹೊರೆಯ ನಡುವೆ ಕಲಹವಾದೀತು. ಮನೆಯಿಂದಲೇ ಕೆಲಸ ಮಾಡುವವರಿಗೆ ಒಂದಿಷ್ಟು ಕೆಲಸಗಳು ಬರಬಹುದು ಮತ್ತು ಮೀಟಿಂಗ್ ಗಳನ್ನು ಅಟೆಂಡ್ ಮಾಡಬೇಕಾಗಬಹುದು. ಹಾಗಾಗಿ ನಿಮ್ಮ ಆರಾಮದ ದಿನಚರಿಯಲ್ಲಿಯೂ ನಿಮಗೆ ಕಿರಿಕಿರಿ ಆಗುವುದು. ಇನ್ನೊಬ್ಬರ ಮಾತುಗಳನ್ನು ಕೇಳುವ ಸಹನೆಯು ಬೇಕು. ಕುಟುಂಬದ ಕಾರಣಕ್ಕೆ ನೀವು ಅನಾದರಕ್ಕೆ ಒಳಗಾಗುವಿರಿ. ಮಕ್ಕಳ ವಿಚಾರದಿಂದ ನಿಮಗೆ ಸಂತೋಷವು ಇರಲಿದೆ.
ಸಿಂಹ ರಾಶಿ: ಇಂದು ಮನೋರಂಜನೆಗಾಗಿಯೇ ಸಮಯವನ್ನು ಮೀಸಲಿಟ್ಟರೂ ಅದನ್ನು ಯಾರಾದರೂ ಹಾಳುಮಾಡಿಯಾರು. ಆರೋಗ್ಯದ ವ್ಯತ್ಯಾಸವನ್ನು ನೀವು ನಿರ್ಲಕ್ಷಿಸಿ ಬೇರೆ ಏನನ್ನಾದರೂ ತಂದುಕೊಳ್ಳುವಿರಿ. ಇಂದು ಅತಿಯಾದ ಜಾಡ್ಯವು ಬರಲಿದ್ದು, ಯಾರ ಮಾತನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ನಿಮ್ಮಷ್ಟಕ್ಕೆ ಇರುವಿರಿ. ದೈಹಿಕ ಶ್ರಮವು ಇಂದು ಹೆಚ್ಚಿರುವುದು. ನಿಮ್ಮ ಶಿಷ್ಯರಿಂದ ನಿಮಗೆ ಉಡುಗೊರೆ ಸಿಗುವ ಸಾಧ್ಯತೆ ಇದೆ. ಭೂಮಿಯನ್ನು ಮಾರಾಟಮಾಡುವ ಸ್ಥಿತಿಯು ಬರಬಹುದು. ಉತ್ಸಾಹದಿಂದ ನೀವು ಇಂದಿನ ಕಾರ್ಯವನ್ನು ಮಾಡುತ್ತಿದ್ದರೂ ದಿನದ ಕೊನೆಗೆ ಸಲ್ಲದ ಮಾತುಗಳನ್ನು ನೀವು ಕೇಳಬೇಕಾದೀತು. ಎಂದಿನಂತೆ ಇರುವ ಹಠದ ಸ್ವಭಾವಕ್ಕೆ ನಿಮ್ಮನ್ನು ನಿರ್ಲಕ್ಷಿಸಬಹುದು. ಭವಿಷ್ಯದ ಬಗ್ಗೆ ಅತಿಯಾದ ಕಲ್ಪನೆ ಬೇಡ.
ಕನ್ಯಾ ರಾಶಿ: ಇಂದು ಬಿಟ್ಟು ಹೋದ ಆಪ್ತರ ಬಗ್ಗೆ ಹೆಚ್ಚು ಆಲೋಚಿಸುವಿರಿ. ಸಣ್ಣ ವ್ಯವಹಾರ ಮತ್ತು ಕೆಲಸವನ್ನು ಮಾಡುವವರಿಗೆ ಶ್ರಮವು ಅಧಿಕವಿರುವುದು. ಬರುವ ಒತ್ತಡವನ್ನು ನೀವು ಯಾವುದಾದರೂ ವಿಧಾನದ ಮೂಲಕ ಸರಿ ಮಾಡಿಕೊಳ್ಳುವಿರಿ. ಧ್ಯಾನ ಮತ್ತು ಯೋಗವು ನಿಮ್ಮ ಹಲವು ಮಾನಸಿಕ ಸಮಸ್ಯೆಗಳಿಗೆ ಉತ್ತರವಾಗುವುದು. ಇಂದಿನ ಕಾರ್ಯವು ನಿಮಗೆ ಸಮಾಧಾನ ಕೊಡದೇ ಇರಬಹುದು. ಭೋಗವಸ್ತುಗಳನ್ನು ಅನವಶ್ಯಕವಾಗಿ ಖರೀದಿಸುವಿರಿ. ನಿಮ್ಮ ಇಷ್ಟದವರು ನಿಮ್ಮ ಭೇಟಿಯಾಗಬಹುದು. ಸಣ್ಣ ಉಳಿತಾಯಕ್ಕೆ ಇಂದು ಬೆಲೆಯು ಬಂದಂತಾಗುವುದು. ಜೀವನದ ಲಕ್ಷ್ಯವು ಬೇರೆ ಕಡೆಗೆ ಯಾರಾದರೂ ಬದಲಿಸಬಹುದು. ಏನಾದರೂ ಮಾಡುತ್ತ ನಿಮ್ಮ ಮನಸ್ಸಿಗೆ ಕೆಲಸವನ್ನು ಕೊಡುವಿರಿ. ಜಾಣ್ಮೆಯಿಂದ ಇಂದು ನೀವು ಪ್ರಶಂಸೆಯನ್ನು ಪಡೆಯುವಿರಿ. ನಿಮಗೆ ಕೊಟ್ಟಿದ್ದನ್ನು ಮರಳಿಕೊಡುವ ಸ್ವಭಾವವು ಇರಲಿ.
ತುಲಾ ರಾಶಿ: ಇಂದು ನಿಮ್ಮ ಸಂಗಾತಿಯ ಮನೋಭಾವವನ್ನು ಅರ್ಥಮಾಡಿಕೊಳ್ಳದೇ ಅವರೊಡನೆ ಜಗಳವಾಡುವಿರಿ.ಆದಾಯದ ಗುಟ್ಟನ್ನು ಎಷ್ಟೇ ಒತ್ತಾಯ ಮಾಡಿದರೂ ಹೇಳಲಾರಿರಿ. ಇಂದಿನ ಎಲ್ಲ ಕಾರ್ಯದಲ್ಲಿಯೂ ಜಯವನ್ನು ಪಡೆದ ಸಂತೋಷವಿದ್ದರೂ ಅದನ್ನು ಅನುಭವಿಸುವ ಸಾಮರ್ಥ್ಯವು ಕಡಿಮೆ ಇರುವುದು. ಆರ್ಥಿಕಸ್ಥಿತಿಯು ಸುಧಾರಿಸಿದ್ದು ನಿಮಗೆ ಸ್ವಲ್ಪ ನೆಮ್ಮದಿ ಇರುವುದು. ಹಿರಿಯರಲ್ಲಿ ಭಕ್ತಿಯನ್ನು ತೋರಿಸುವಿರಿ. ಸಮಸ್ಯೆಯನ್ನು ಬರುವ ಮೊದಲೇ ಯೋಚಿಸಿ ಅದಕ್ಕೆ ಬೇಕಾದ ಸಿದ್ಧತೆಯಲ್ಲಿ ಇರಿ. ನಿರೋದ್ಯೋಗ ಸಮಸ್ಯೆಯಿಂದ ಮಾನಸಿಕ ಹಿಂಸೆಯನ್ನು ಅನುಭವಿಸುವಿರಿ. ಸಹೋದರರ ಸಂಪತ್ತನ್ನು ಕಂಡು ನೀವು ಹೊಟ್ಟೆಕಿಚ್ಚು ಪಡುವಿರಿ. ನೆಚ್ಚಿನ ತಾಣವು ನಿಮಗೆ ಹೊಸ ಉತ್ಸಾಹವನ್ನು ನೀಡುವುದು. ಸಿಕ್ಕ ಸಣ್ಣ ಅವಕಾಶಗಳನ್ನು ಸದುಪಯೋಗಿಸಿಕೊಳ್ಳಿ.
ವೃಶ್ಚಿಕ ರಾಶಿ: ಇಂದು ನಿಮಗೆ ಸಹಾಯ ಮಾಡುವ ಸ್ವಭಾವವು ಇರುವುದು. ಉದ್ಯಮದ ಕಾರ್ಯಕ್ಕೆ ನೀವು ಪ್ರಯಾಣ ಮಾಡುವ ಸಾಧ್ಯತೆ ಇದೆ. ಮಕ್ಕಳಿಂದ ನಿಮಗೆ ಸಂತೋಷವು ಸಿಗಲಿದೆ. ಕುಟುಂಬದ ಹಿರಿಯರ ಬಗ್ಗೆ ಇರುವ ನಿಮ್ಮ ಕಲ್ಪನೆಯು ಬದಲಾಗುವುದು. ಇಂದು ಕಛೇರಿಯನ್ನು ಮಹಿಳೆಯರು ನಿರ್ವಹಿಸಬೇಕಾಗುವುದು. ನೂತನ ವಸ್ತುಗಳನ್ನು ಖರೀದಿಸಲಿದ್ಸೀರಿ. ಮಾಡದ ಕಾರ್ಯಕ್ಕೆ ಅಪವಾದ ಬರುವುದು. ನಿರಂತರ ಕೆಲಸವು ನಿಮಗೆ ಬೇಸರ ತಂದೀತು. ಯಾರಿಗಾದರೂ ಧನಸಹಾಯವನ್ನು ಮಾಡಬೇಕು ಎಂದು ಅನ್ನಿಸಬಹುದು. ಇಂದು ವೃತ್ತಿಯಲ್ಲಿ ಆತಂಕವು ಬರಬಹುದು. ಪ್ರಾಣಿಗಳಿಂದ ಭೀತರಾಗುವ ಸಾಧ್ಯತೆ ಇದೆ. ನಿಮ್ಮ ಇಷ್ಟದವರ ಭೇಟಿಯಾಗುವಿರಿ. ಎದುರಿನವರ ಇಂಗಿತವನ್ನು ತಿಳಿದುಕೊಳ್ಳಲು ಕಷ್ಟವಾದೀತು. ನಿಮ್ಮ ಅನಾರೋಗ್ಯವನ್ನು ಯಾರ ಬಳಿಯೂ ಹೇಳಿಕೊಳ್ಳಲಾರಿರಿ. ನಿಮ್ಮ ಸಾಮರ್ಥ್ಯಕ್ಕೆ ಯೋಗ್ಯವಾದ ಕೆಲಸವನ್ನು ಮಾಡಿ.
ಧನು ರಾಶಿ: ಇಂದು ನಿಮಗೆ ಅನಗತ್ಯ ಎನಿಸದರೂ ಕೆಲವು ಖರ್ಚನ್ನು ನಿಮ್ಮ ಸಂತೋಷ, ಪ್ರತಿಷ್ಠೆಗಾಗಿ ಮಾಡುವಿರಿ. ಸುಲಭ ಸಾಧ್ಯವಾಗುವ ಕಾರ್ಯಗಳನ್ನು ಹೆಚ್ಚು ಮಾಡಿ. ಯಾವುದೋ ಆಲೋಚನೆಯಲ್ಲಿ ನೀವು ಮಗ್ನರಾದಂತೆ ತೋರುತ್ತದೆ. ಯಾರಾದರೂ ನಿಮ್ಮನ್ನು ಚೇಡಿಸಬಹುದು. ವಾಹನ ಖರೀದಿಗೆ ಗೊಂದಲದ ಮನಸ್ಸು ಬೇಡ. ವೃತ್ತಿಯನ್ನೇ ಬದಲಾಯಿಸುವ ಆಸೆ ಬರಬಹುದು. ಸ್ನೇಹಿತರಿಗೆ ನಿಮ್ಮದಾದ ಕೆಲವು ಆಯ್ಕೆಗಳನ್ನು ಹೇಳಿ. ಧಾರ್ಮಿಕ ಆಚರಣೆಯು ನಿಮ್ಮ ಮನಸ್ಸಿಗೆ ಹಿತವೆನಿಸುವುದು. ಉದ್ಯೋಗದಲ್ಲಿ ಒತ್ತಡವು ಅಧಿಕವಾಗಿ ಇರಲಿದೆ. ಅದು ದಾಂಪತ್ಯದಲ್ಲಿ ಮೇಲೂ ಪರಿಣಾಮವನ್ನು ಬೀರುವುದು. ಹೂಡಿಕೆಯ ವಿಚಾರವನ್ನು ಸ್ನೇಹಿತರ ಮೂಲಕ ಗೊತ್ತುಮಾಡಿಕೊಳ್ಳುವಿರಿ. ಇನ್ನೊಬ್ಬರ ಸಣ್ಣ ತಪ್ಪುಗಳೂ ನಿಮಗೆ ದೊಡ್ಡದಾಗಿ ಕಾಣಿಸುವುದು.
ಮಕರ ರಾಶಿ: ಇಂದು ನಿಮ್ಮ ಉದ್ಯೋಗದ ಬದಲಾವಣೆಗೆ ಸಂಗಾತಿಯಿಂದ ಒತ್ತಡ ಬರಬಹುದು. ವೈದ್ಯಕೀಯ ಕ್ಷೇತ್ರದಲ್ಲಿ ಒತ್ತಡವು ಅಧಿಕಾಗಿರುವುದು. ನಿಮ್ಮ ಸ್ವಭಾವವನ್ನು ತಿದ್ದಿಕೊಳ್ಳಬೇಕಾಗುವುದು. ದುಸ್ಸ್ವಭಾವವನ್ನು ಹೆಚ್ಚಿಸಿಕೊಳ್ಳುವಿರಿ. ಹೊಸ ಉದ್ಯೋಗಕ್ಕೆ ನಿಮ್ಮ ಮನಸ್ಸು ತೆರದುಕೊಳ್ಳುವುದು. ಹಿತಶತ್ರುಗಳು ಲಾಭವನ್ನು ತಪ್ಪಿಸುವರು. ಸತ್ಯದ ಮಾತಿನಿಂದ ನಿಮಗೇ ಸಂಕಷ್ಟವು ಬರಬಹುದು. ಯಾರದ್ದಾದರೂ ಜೊತೆ ನೀವು ನಿಮ್ಮನ್ನು ಹೋಲಿಸಿಕೊಳ್ಳುವಿರಿ. ಸಮಾಜದಿಂದ ಸಿಗುವ ಗೌರವವು ನಿಮಗೆ ಬಂಧನದಂತೆ ಅನ್ನಿಸಬಹುದು. ಬಂಧುಗಳು ನಿಮ್ಮ ಸಹಾಯವನ್ನು ಕೇಳಬಹುದು. ಇಂದು ನಿಮ್ಮಿಂದ ಕುಟುಂಬವು ಸಂತೋಷಗೊಳ್ಳುವುದು. ನಿದ್ರೆಯಲ್ಲಿ ಕೆಟ್ಟ ಕನಸುಗಳನ್ನು ಕಂಡು ಚಿಂತೆಗೊಳ್ಳುವಿರಿ. ಉತ್ತಮ ಕಾಲದ ನಿರೀಕ್ಷೆಯಲ್ಲಿ ನೀವು ಇರುವಿರಿ. ಇಂದು ನೀವು ವಿಚಿತ್ರವಾದ ಮಾನಸಿಕ ಸ್ಥಿತಿಯನ್ನು ಹೊಂದಿರುವಿರಿ.
ಕುಂಭ ರಾಶಿ: ಈ ದಿನ ನೀವು ಅಂದುಕೊಂಡಂತೆ ಆಗುತ್ತಿಲ್ಲ ಎಂಬ ಮನವರಿಕೆ ಆಗಲಿದೆ. ನಿಮ್ಮ ಮಾತಿನಿಂದ ಹಲವರು ಸಂಭ್ರಮಿಸುವರು. ದೌರ್ಬಲ್ಯಗಳನ್ನು ಗೊತ್ತು ಮಾಡುವಂತೆ ಇಂದಿನ ವರ್ತನೆ ಇರಬಹುದು. ಸ್ತ್ರೀಯರಿಗೆ ಹೊಸತನ್ನು ಏನಾದರೂ ಮಾಡುವ ಬಗ್ಗೆ ಆಸಕ್ತಿ ಬರಬಹುದು. ಸಂಗಾತಿಯ ಮನೋಭಾವವನ್ನು ಅರಿತುಕೊಳ್ಳಲು ಕಷ್ಟವಾದೀತು. ದೂರದ ಸ್ಥಳಕ್ಕೆ ಪ್ರವಾಸ ಹೋಗುವ ಸಂದರ್ಭವು ಬರಬಹುದು. ಆಪ್ತರೇ ನಿಮ್ಮ ಬಗ್ಗೆ ಹಗುರಾಗಿ ಮಾತನಾಡಬಹುದು. ಧನಲಾಭವಾದರೂ ಮನಸ್ಸಿನಲ್ಲಿ ನೆಮ್ಮದಿ ಕೊರತೆ ಕಾಣುವುದು. ಭೂಮಿಯ ವ್ಯವಹಾರವನ್ನು ಮಾಡಲು ನಿಮಗೆ ಒತ್ತಡ ಬರಬಹುದು. ಇಂದಿನ ಆದಾಯದಿಂದ ನಿಮ್ಮ ಆಸೆಗಳನ್ನು ತೀರಿಸಿಕೊಳ್ಳುವಿರಿ. ನೀವು ಪರಿಚಿತರಿಂದ ಸಹಾಯವನ್ನು ಅಪೇಕ್ಷಿಸುವಿರಿ. ಸಮಾನಮನಸ್ಕರ ಜೊತೆ ಇಂದು ಕುಳಿತು ಕಾಲ ಕಳೆಯುವಿರಿ.
ಮೀನ ರಾಶಿ: ಇಂದು ನಿಮಗೆ ಯಾವುದೋ ಘಟನೆಯ ಕಾರಣಕ್ಕೆ ಬಂಧುಗಳ ಮೇಲೆ ಸಿಟ್ಟಾಗುವಿರಿ. ಎಲ್ಲಿಗಾದರೂ ದೂರ ಪ್ರಯಾಣವನ್ನು ಮಾಡಬೇಕು ಎಂದು ಅನ್ನಿಸುವುದು. ಏಕಾಂತವನ್ನು ಹೆಚ್ಚು ಇಷ್ಟಪಡುವಿರಿ. ನಿಮ್ಮದಾದ ಸ್ವತಂತ್ರ ಆದಾಯವನ್ನು ಬೆಳೆಸಿಕೊಳ್ಳುವ ಬಗ್ಗೆ ಸೂಕ್ತ ನಿರ್ಧಾರವನ್ನು ಮಾಡುವಿರಿ. ಯಾರದೋ ಕೆಲಸವು ನಿಮಗೆ ಸುತ್ತಿಕೊಳ್ಳಬಹುದು. ಶತ್ರುಗಳು ನಿಮಗೆ ಹೆಚ್ಚು ತೊಂದರೆಯನ್ನು ಕೊಡಬಹುದು. ಬಂಧುಗಳ ಜೊತೆ ವಿವಾದವು ಏರ್ಪಡಲಿದ್ದು ನಿಮ್ಮ ಬಗ್ಗೆ ನಕಾರಾತ್ಮಕ ಅಭಿಪ್ರಾಯವೂ ಬರಬಹುದು. ವಿದ್ಯಾರ್ಥಿಗಳು ತಮ್ಮ ಕ್ಷೇತ್ರದಲ್ಲಿ ಯಶಸ್ಸನ್ನು ಗಳಿಸಲು ಬಹಳ ಪ್ರಯತ್ನಶೀಲರಾಗುವರು. ಸಮಾರಂಭಗಳು ನಿಮಗೆ ಬೇಸರವನ್ನು ತರಿಸಬಹುದು. ನಿಮಗೆ ತಾಳ್ಮೆಯೂ ಬಹಳ ಮುಖ್ಯವಾಗುವುದು. ಅಧ್ಯಾತ್ಮದಲ್ಲಿ ಹೆಚ್ಚು ಮನಸ್ಸು ಇರುವುದು. ವ್ಯಾಪಾರದಲ್ಲಿ ನಿಮ್ಮ ಮೇಲುಗೈ ಇರಲಿದೆ.
-ಲೋಹಿತ ಹೆಬ್ಬಾರ್ – 8762924271 (what’s app only)